Mental Health: ಮಾನಸಿಕವಾಗಿ ತೊಂದರೆಯಲ್ಲಿರೋರಿಗೆ ನಿಮ್ಮ ಸಹಾಯ ಹೀಗಿರಲಿ

ಮಾನಸಿಕವಾಗಿ ತೊಂದರೆ (Mental Problem)ಯಲ್ಲಿರುವವರಿಗೆ ನೆರವಾಗುವ ಮನಸ್ಸು (Mind) ನಿಮಗಿದೆ ಎಂದಾದರೆ ಈ ಕೆಲವು ಬೆಂಬಲಗಳನ್ನು ಅವರಿಗೆ ನೀಡಬಹುದು. ಇವುಗಳಿಂದ ಅವರು ಸುಧಾರಿಸಿಕೊಳ್ಳಲು ನೆರವಾಗಬಹುದು. ನೆನಪಿಟ್ಟುಕೊಳ್ಳಿ, ಮಾನಸಿಕ ಸಮಸ್ಯೆಗಳು ಎಷ್ಟೋ ಬಾರಿ ಕೇವಲ ಕೇಳಿಸಿಕೊಂಡಾಕ್ಷಣ, ಧೈರ್ಯ ನೀಡಿದಾಕ್ಷಣ ಕಡಿಮೆಯಾಗುವುದಿಲ್ಲ. 
 

How To Support Someone With Mental Health Issues

ನಮಗೆಲ್ಲರಿಗೂ ಒಂದಲ್ಲ ಒಂದು ಸಮಯದಲ್ಲಿ ಆತಂಕ (Anxiety), ಒತ್ತಡ (Tension), ನೋವು, ದುಃಖವಾಗುವುದು ಸಹಜ. ದೈನಂದಿನ ಜೀವನದಲ್ಲಿ ಎಷ್ಟೋ ಬಾರಿ ಆತಂಕ್ಕೀಡಾಗುತ್ತೇವೆ, ಒತ್ತಡ ಮಾಡಿಕೊಳ್ಳುತ್ತೇವೆ, ದುಃಖವಾಗುತ್ತದೆ. ಆದರೆ, ಈ ಭಾವನೆಗಳು ಅತಿಯಾದಾಗ ಸಮಸ್ಯೆಯಾಗುತ್ತದೆ. ಇವು ದೀರ್ಘ ಸಮಯ (Long Time) ಬಾಧಿಸಿದಾಗ ದೈನಂದಿನ ಜೀವನ ಯಾತನಾಮಯವಾಗುತ್ತದೆ. ಆಗ ಯಾರದ್ದಾದರೂ ನೆರವು ಪಡೆದುಕೊಳ್ಳುವುದು ಅನಿವಾರ್ಯ. ಆದರೆ, ಎಷ್ಟೋ ಬಾರಿ ಸೂಕ್ತ ಸಹಾಯ, ಸಹಕಾರ (Support) ಸಿಗದೆ ಸಮಸ್ಯೆ ಇನ್ನಷ್ಟು ಬಿಗಡಾಯಿಸುತ್ತದೆ.

ಮಾನಸಿಕವಾಗಿ ಒಂದು ರೀತಿಯ ಹಿಂಸೆಯಲ್ಲಿರುವವರನ್ನು ನೀವು ನೋಡಿರಬಹುದು. ಅವರ ಸಮಸ್ಯೆ ನಿಮಗೆ ಅರ್ಥವೂ ಆಗುತ್ತಿರಬಹುದು. ಅಂತಹ ಸಮಯದಲ್ಲಿ ನೀವು  ಮಾನಸಿಕ ಆರೋಗ್ಯ (Mental Health) ಸುಧಾರಿಸಿಕೊಳ್ಳಲು ನೆರವಾಗುವ ವಿಧಾನಗಳನ್ನು ಅವರಿಗೆ ತಿಳಿಸಿಕೊಡಬಹುದು. ಬೇರೊಬ್ಬರಿಗೆ ಸಹಾಯಹಸ್ತ (Help) ಚಾಚುವುದು ಇಂದಿನ ದಿನಗಳಲ್ಲಿ ಅತಿ ಅಗತ್ಯವೂ ಆಗಿದೆ. ಹಾಗಿದ್ದರೆ ನೀವು ಹೇಗೆ ಸಹಾಯ ಮಾಡಬಹುದು ನೋಡಿಕೊಳ್ಳಿ.

ಕೋವಿಡ್ ನಂತರ ಯುವಜನತೆಯಲ್ಲಿ ಹೆಚ್ಚಾಗಿದೆ Depression

•  ಕೇಳಿಸಿಕೊಳ್ಳುವುದು (Listen)
ಮೊಟ್ಟಮೊದಲನೆಯದಾಗಿ, ನೀವು ಒಳ್ಳೆಯ ಕೇಳುಗರಾಗಿ. ಸಾಮಾನ್ಯವಾಗಿ, ದುಃಖದಲ್ಲಿರುವವರ ಮಾತುಗಳನ್ನು ಯಾರೂ ಸಹ ಕೇಳಿಸಿಕೊಳ್ಳುವುದಿಲ್ಲ. ಹೀಗಾಗಿ, ಅವರನ್ನು ಮಾತನಾಡಲು ಬಿಡಿ. ಅವರ ಮಾತುಗಳನ್ನು ತಾಳ್ಮೆಯಿಂದ ಕೇಳಿಸಿಕೊಳ್ಳಿ. ತಾವು ಮಾತನಾಡುವುದು ಹಾಗೂ ನೀವು ಕೇಳಿಸಿಕೊಳ್ಳುವ ಕ್ರಿಯೆ ಅವರಿಗೆ ಭಾರೀ ಸಮಾಧಾನ ನೀಡುತ್ತದೆ. ನಿಮ್ಮ ಸ್ನೇಹಿತರೋ, ನೆರೆಯವರೋ, ಮನೆಯ ಇತರ ಸದಸ್ಯರೋ ಅವರ ಮಾತುಗಳಿಗೆ ಕಿವಿಯಾಗುವುದರಿಂದ ಯಾವ ಸಮಸ್ಯೆಯೂ ಇಲ್ಲ. ಅವರ ಸ್ಥಿತಿ ಅರಿತುಕೊಳ್ಳಿ.

ಅವರು ಇನ್ನಷ್ಟು ಮಾತನಾಡಲು ಸಹಕಾರಿಯಾಗುವ ಪ್ರಶ್ನೆಗಳನ್ನು ಕೇಳಬೇಕೇ ಹೊರತು “ಹೌದು’, ಅಥವಾ “ಇಲ್ಲ’ ಎಂದಷ್ಟೇ ಉತ್ತರ ಬಯಸುವ ಪ್ರಶ್ನೆಗಳನ್ನು ಕೇಳಬೇಡಿ. ಅವರಿಗೆ ಮಾತನಾಡಲು ಉತ್ತೇಜನ ನೀಡಿ. “ಏನಾಯ್ತು, ಎಷ್ಟು ಸಮಯದಿಂದ ಈ ಸಮಸ್ಯೆಯಾಗಿದೆ?, ಹೇಗೆ ನಿಭಾಯಿಸುತ್ತಿರುವಿರಿ?’ ಇಂತಹ ಪ್ರಶ್ನೆಗಳಾದರೆ ಉತ್ತಮ.

•  ಸ್ವಯಂ ಕಾಳಜಿ (Self Care) ಬಗ್ಗೆ ತಿಳಿಸಿ
ಸ್ವಯಂ ಅರಿವು ಎನ್ನುವುದು ವ್ಯಕ್ತಿಗೆ ಅತಿ ಅಗತ್ಯ. ಸ್ವಂತದ ಬಗ್ಗೆ ಕಾಳಜಿ ವಹಿಸಬೇಕು. ಸನ್ನಿವೇಶಗಳು ಎಷ್ಟೇ ಕೆಟ್ಟದ್ದಾಗಿರಲಿ, ನಾವು ನಾಶವಾಗದಂತೆ ನೋಡಿಕೊಳ್ಳಬೇಕು. ಒತ್ತಡ ಕಡಿಮೆ ಮಾಡಿಕೊಳ್ಳಲು ಏನು ಮಾಡಬಹುದು ಎನ್ನುವ ಮಾರ್ಗಗಳನ್ನು ಅವರಿಗೆ ತಿಳಿಸಿ. ಸ್ವಯಂ ಕಾಳಜಿ ತೆಗೆದುಕೊಳ್ಳುವುದು ಎಷ್ಟು ಮುಖ್ಯ ಎಂದು ಹೇಳಿ. ವ್ಯಾಯಾಮ (Exercise) ಮಾಡುವುದು, ಪೌಷ್ಟಿಕ ಆಹಾರ (Nutritional Food) ಸೇವನೆ, ಸುಖವಾದ ನಿದ್ರೆ (Good Sleep) ಮಾಡುವುದು ಮುಖ್ಯ ಎನ್ನುವುದು ತಿಳಿಸಿ.

Childrens Mental Health : ದೊಡ್ಡ ಧ್ವನಿಯಲ್ಲಿ ಕಥೆ ಹೇಳಿದ್ರೆ ಮಕ್ಕಳ ಒತ್ತಡ ಕಡಿಮೆಯಾಗುತ್ತಂತೆ

•  ಅವರ ಅನುಭವಗಳನ್ನು (Experience) ಇತರರಿಗೆ ಹೋಲಿಕೆ (Compare) ಮಾಡಬೇಡಿ
ಪ್ರತಿಯೊಬ್ಬರೂ ಮಾನಸಿಕ ಏರಿಳಿತಗಳನ್ನು ಅನುಭವಿಸಿರುತ್ತಾರೆ. ಬದುಕಿನ ಒಂದಲ್ಲ ಒಂದು ಹಂತದಲ್ಲಿ ಮಾನಸಿಕವಾಗಿ ತೀವ್ರವಾಗಿ ಬಸವಳಿಯುತ್ತಾರೆ. ಅಂತಹ ಸನ್ನಿವೇಶಗಳಿಗೆ ಇವರ ಸ್ಥಿತಿಯನ್ನೂ ಹೋಲಿಕೆ ಮಾಡಬೇಡಿ. ನಿಮ್ಮ ಯಾರೋ ಪ್ರೀತಿಪಾತ್ರರಿಗೆ ಹೀಗಾಗಿತ್ತು ಎಂದೇನೂ ಹೇಳಬೇಡಿ. ಇಂಥ ಮಾತುಗಳು ಸಾಮಾನ್ಯವಾಗಿ ಬಂದೇ ಬರುತ್ತವೆ. ಅವುಗಳನ್ನು ಪ್ರಯತ್ನಪೂರ್ವಕವಾಗಿ ನಿಯಂತ್ರಿಸಿಕೊಳ್ಳಿ. ಇದರಿಂದ, ಸಮಸ್ಯೆ ತಮಗೊಬ್ಬರಿಗೇ ಅಲ್ಲ ಎನ್ನುವ ಸಮಾಧಾನ ಮೂಡಲು ಸಹಾಯವಾಗಬಹುದಾದರೂ ತಮ್ಮ ಭಾವನೆಗಳಿಗೆ ಧಕ್ಕೆಯಾದ ಭಾವನೆಯೂ ಅವರಿಗೆ ಮೂಡಬಹುದು. ಹಾಗೆಯೇ ಅವುಗಳನ್ನು ಹತ್ತಿಕ್ಕುವ ಪ್ರಯತ್ನ ಆರಂಭಿಸಬಹುದು. ಇದರಿಂದ ಇನ್ನಷ್ಟು ಸಮಸ್ಯೆ ಸೃಷ್ಟಿಯಾಗಬಹುದು. 

•  ನಿಮ್ಮ ಮಿತಿ ಅರಿತುಕೊಳ್ಳಿ (Know Your Limit)
ನಿಮಗೆ ನಿಮ್ಮದೇ ಆದ ಮಿತಿ ಇರುತ್ತದೆ. ಅದನ್ನು ಅರಿತುಕೊಂಡು ಸಹಾಯ ಮಾಡಿ. ಅವರಿಗೆ ಸಹಾಯ ಮಾಡಲು ಹೋಗಿ ನಿಮ್ಮ ಬದುಕನ್ನು ಸುಟ್ಟುಕೊಳ್ಳಬೇಕೆಂದಿಲ್ಲ. ಇಂತಹ ನೆರವಿಗಾಗಿ ನಿಮ್ಮದೇ ಸಮಯದ ಮಿತಿ ಮಾಡಿಕೊಳ್ಳಿ. ಅವರೊಂದಿಗೆ ಮಾತನಾಡಲು ನಿರ್ದಿಷ್ಟ ರೀತಿಯ ಸಂಪರ್ಕ ವ್ಯವಸ್ಥೆಗೆ ಆದ್ಯತೆ ನೀಡಿ. ಅವರು ತೀವ್ರವಾದ ಸಮಸ್ಯೆಯಲ್ಲಿರುವುದು ನಿಮ್ಮ ಅರಿವಿಗೆ ಬಂದರೆ ತಕ್ಷಣ ತಜ್ಞರನ್ನು ನೋಡುವಂತೆ ಕಳುಹಿಸಿ. 

Latest Videos
Follow Us:
Download App:
  • android
  • ios