Asianet Suvarna News Asianet Suvarna News

Childrens Mental Health : ದೊಡ್ಡ ಧ್ವನಿಯಲ್ಲಿ ಕಥೆ ಹೇಳಿದ್ರೆ ಮಕ್ಕಳ ಒತ್ತಡ ಕಡಿಮೆಯಾಗುತ್ತಂತೆ

ಅಕ್ಕಪಕ್ಕದವರಿಗೆ ಕೇಳುತ್ತೆ ಎನ್ನುವ ಕಾರಣಕ್ಕೆ ಮಕ್ಕಳ (Children) ಜೊತೆ ಗುಸು-ಪಿಸು ಮಾತನಾಡುವ ಪರಿಸ್ಥಿತಿ ಈಗಿದೆ. ಸ್ವಲ್ಪ ದೊಡ್ಡದಾಗಿ ಮಾತನಾಡಿದ್ರೂ ಕಿರುಚಾಡ್ತಾರೆ ಎಂಬ ದೂರು ಅಕ್ಕಪಕ್ಕದವರ ಮನೆಯಿಂದ ಬರುತ್ತೆ. ಆದ್ರೆ ಮಕ್ಕಳ ಮಾನಸಿಕ ಆರೋಗ್ಯ (Mental Health) ಸರಿಯಾಗಿರ್ಬೇಕೆಂದ್ರೆ ನಿಮ್ಮ ಧ್ವನಿ ಏರಿಸ್ಲೇಬೇಕು ಎನ್ನುತ್ತಾರೆ ಸಂಶೋಧಕರು. 

Improve Childrens Mental Health With Story Telling Loudly
Author
Bangalore, First Published Mar 22, 2022, 2:17 PM IST

ಪ್ರತಿ ದಿನ ,ಪ್ರತಿ ಕ್ಷಣ ಮಕ್ಕಳು (Children) ಬೆಳೆಯುತ್ತಿರುತ್ತಾರೆ. ನಿದ್ರೆ (Sleep) ಯಲ್ಲೂ ಮಕ್ಕಳ ಬೆಳವಣಿಗೆಯಾಗುವುದ್ರಿಂದ ಮಕ್ಕಳಿಗೆ ನಿದ್ರೆ ಬಹಳ ಮುಖ್ಯ ಎನ್ನಲಾಗುತ್ತದೆ. ಮಕ್ಕಳ ಬಾಲ್ಯ (Childhood) ಸಂತೋಷ (Happiness)ವಾಗಿರಲೆಂದು ಎಲ್ಲ ಪಾಲಕರು (Parents ) ಬಯಸ್ತಾರೆ. ಮಕ್ಕಳ ಬೆಳವಣಿಗೆಯನ್ನು ಗಮನಿಸುವುದು ಪಾಲಕರ ಜವಾಬ್ದಾರಿಯಾಗಿದೆ. ಆಯಾ ವಯಸ್ಸಿನಲ್ಲಿ ಮಕ್ಕಳ ಕಲಿಕೆ,ತೂಕ,ಆರೋಗ್ಯ ಸೇರಿದಂತೆ ಎಲ್ಲವನ್ನೂ ಪಾಲಕರು ಗಮನಿಸಬೇಕಾಗುತ್ತದೆ. ಸರಿಯಾದ ಸಮಯದಲ್ಲಿ ಮಕ್ಕಳಿಗೆ ಸರಿಯಾದ ವಿದ್ಯಾಭ್ಯಾಸ ಸಿಗದೆ ಹೋದ್ರೆ ಮಕ್ಕಳ ಭವಿಷ್ಯದ ಮೇಲೆ ಇದು ಪರಿಣಾಮ ಬೀರುತ್ತದೆ.

ಮಕ್ಕಳಿಗೆ ದೈಹಿಕ ಆರೋಗ್ಯ ಮಾತ್ರ ಮುಖ್ಯವಲ್ಲ. ಮಾನಸಿಕ ಆರೋಗ್ಯ ಕೂಡ ಬಹಳ ಮಹತ್ವದ್ದಾಗಿದೆ. ಮಕ್ಕಳಲ್ಲಿ ಕಾಣಿಸಿಕೊಳ್ಳು ಮಾನಸಿಕ ಅನಾರೋಗ್ಯ ಅವರ ಒಟ್ಟಾರೆ ಆರೋಗ್ಯ ಮತ್ತು ಯೋಗಕ್ಷೇಮದ ಮೇಲೆ ದೊಡ್ಡ ಪರಿಣಾಮವನ್ನು ಬೀರುತ್ತದೆ. ಇದರಿಂದ ಮಗುವಿನ ಬೆಳವಣಿಗೆ ಕುಂಠಿತವಾಗುತ್ತದೆ. ಮಕ್ಕಳ ಮಾನಸಿಕ ಬೆಳವಣಿಗೆ ಬಗ್ಗೆ ಅನೇಕ ಸಂಶೋಧನೆಗಳು ನಡೆದಿವೆ. ಈಗ ಮತ್ತೊಂದು ಅಧ್ಯಯನ ನಡೆದಿದೆ. ಅದ್ರಲ್ಲಿ ಮಕ್ಕಳ ಮಾನಸಿಕ ಆರೋಗ್ಯವನ್ನು ಹೇಗೆ ಕಾಪಾಡಬಹುದು ಎಂಬುದನ್ನು ಹೇಳಲಾಗಿದೆ.

ದಕ್ಷಿಣ ಆಸ್ಟ್ರೇಲಿಯಾ ವಿಶ್ವವಿದ್ಯಾಲಯದ ಸಂಶೋಧಕರು ಹೊಸ ಅಧ್ಯಯನ ನಡೆಸಿದ್ದಾರೆ. ಕಥೆಗಳು ಅಥವಾ ಕವಿತೆಗಳನ್ನು ದೊಡ್ಡ ಧ್ವನಿಯಲ್ಲಿ ಹೇಳುವುದು ಮಕ್ಕಳ ಮನಸ್ಸಿನ ಮೇಲೆ ಹೇಗೆ ಪ್ರಭಾವ ಬೀರುತ್ತದೆ ಎಂಬುದನ್ನು ಸಂಶೋಧಕರು ಹೇಳಿದ್ದಾರೆ. ಅವರ ಪ್ರಕಾರ ದೊಡ್ಡ ಧ್ವನಿಯಲ್ಲಿ ಕಥೆ ಅಥವಾ ಹಾಡುಗಳನ್ನು ಹೇಳಿದ್ರೆ ಅದು ಮಕ್ಕಳ ಮಾನಸಿಕ ಒತ್ತಡ (Mental Pressure)ವನ್ನು ಕಡಿಮೆ ಮಾಡುತ್ತದೆಯಂತೆ. 

ಶಾಲೆಯಲ್ಲಿ ಮಕ್ಕಳಿಗೆ ಕವನಗಳು ಮತ್ತು ಕಥೆಗಳನ್ನು ಜೋರಾಗಿ ಹೇಳುವುದನ್ನು ನಾವು ನೋಡಿರ್ತೇವೆ. ಇದು ಒಳ್ಳೆಯದು ಎನ್ನುತ್ತಾರೆ ಸಂಶೋಧಕರು. ದೊಡ್ಡ ಧ್ವನಿಯಲ್ಲಿ ಕಥೆಗಳನ್ನು ಹೇಳಿದಾಗ ಅದು  ಮಕ್ಕಳ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಅವರು ಹೇಳಿದ್ದಾರೆ. ಬಾಲ್ಯದಲ್ಲಿ ಹೇಳಿದ ಕಥೆಗಳು ಮಕ್ಕಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ತಿಳಿಯಲು ಈ ಅಧ್ಯಯನ ನಡೆದಿತ್ತಂತೆ. ಈ ಅಧ್ಯಯನದ ವರದಿಯನ್ನು ಶೈಕ್ಷಣಿಕ ಜರ್ನಲ್ ಚೈಲ್ಡ್ ಅಬ್ಯೂಸ್ ಮತ್ತು ನೆಗ್ಲೆಕ್ಟ್ ನಲ್ಲಿ (Academic Journal Child Abuse and Neglect) ಪ್ರಕಟಿಸಲಾಗಿದೆ.

ಮಕ್ಕಳ Memory Power ಹೆಚ್ಚಿಸಲು ನೀವು ಮಾಡಬೇಕಾದ್ದಿಷ್ಟು..

ಕಥೆ ವೃದ್ಧಿಸುತ್ತೆ ಮಕ್ಕಳ ಮಾನಸಿಕ ಶಕ್ತಿ : ಹಿಂದಿನ ಕಾಲದಲ್ಲಿ ಮಕ್ಕಳಿಗೆ ಕಥೆಗಳನ್ನು ಹೇಳಿ ಮಲಗಿಸುತ್ತಿದ್ದರು. ಈಗ ಸಮಯದ ಅಭಾವದಿಂದಾಗಿ ಮಕ್ಕಳಿಗೆ ಕಥೆಗಳನ್ನು ಹೇಳುವ ಪಾಲಕರ ಸಂಖ್ಯೆ ಕಡಿಮೆಯಾಗಿದೆ. ಮಕ್ಕಳು ಟಿವಿಗೆ ಹೆಚ್ಚು ಅಡಿಕ್ಟ್ ಆಗಿದ್ದಾರೆ. ಆದ್ರೆ ಅಧ್ಯಯನದ ಪ್ರಕಾರ, ಮಕ್ಕಳಿಗೆ ಕಥೆ ಹೇಳುವುದು ಬಹಳ ಒಳ್ಳೆಯ ಅಭ್ಯಾಸವಾಗಿದೆ. ಕಥೆಯನ್ನು ಹೇಳುವುದ್ರಿಂದ ಮತ್ತು ಕೇಳುವುದ್ರಿಂದ ಮಾನಸಿಕ ಒತ್ತಡ ಕಡಿಮೆಯಾಗುತ್ತದೆ. ಇದಲ್ಲದೆ ಮಕ್ಕಳಲ್ಲಿ ಶೋಷಣೆ ಸ್ವಭಾವ ಕಡಿಮೆಯಾಗುತ್ತದೆ. 

ಹೆಚ್ಚಾಗುತ್ತೆ ಸಕಾರಾತ್ಮಕ ಶಕ್ತಿ : ಮಕ್ಕಳಿಗೆ ಕಥೆ ಅಥವಾ ಕವಿತೆಯನ್ನು ಸಣ್ಣ ಧ್ವನಿಯಲ್ಲಿ ಹೇಳಬಾರದು. ದೊಡ್ಡ ಧ್ವನಿಯಲ್ಲಿ ಕಥೆಯನ್ನು ಹೇಳಿದ್ರೆ ಮಕ್ಕಳ ಮನಸ್ಸಿನಲ್ಲಿರುವ ನಕಾರಾತ್ಮಕ ಶಕ್ತಿ ದೂರವಾಗುತ್ತದೆ. ಸಕಾರಾತ್ಮಕ ಶಕ್ತಿ ಹರಿವು ಹೆಚ್ಚಾಗುತ್ತದೆ. ಹಾಗಾಗಿ ಶಾಲೆಗಳಲ್ಲಿಯೂ ಮಕ್ಕಳಿಗೆ ಶಿಕ್ಷಕರು ದೊಡ್ಡದಾದ ಧ್ವನಿಯಲ್ಲಿ ಕಥೆ,ಕವಿತೆಗಳನ್ನು ಹೇಳಬೇಕು ಎನ್ನುತ್ತಾರೆ ಅಧ್ಯಾಪಕಿ ಲಿಯೋನಿ ಸೆಗಲ್.

ಎಚ್ಚರ! online classನಿಂದಾಗಿ ಮಕ್ಕಳಲ್ಲಿ ಹೆಚ್ಚಾಗಿದೆ ಈ ಸಮಸ್ಯೆ

ದಕ್ಷಿಣ ಆಸ್ಟ್ರೇಲಿಯಾ ವಿಶ್ವವಿದ್ಯಾಲಯದ ಸಂಶೋಧಕರು ನಡೆಸಿದ ಅಧ್ಯಯನದಲ್ಲಿ 65 ಸಾವಿರದ 83 ಮಕ್ಕಳ ಆರೋಗ್ಯ ದತ್ತಾಂಶವನ್ನು ವಿಶ್ಲೇಷಿಸಲಾಗಿದೆ. ಪ್ರಾಥಮಿಕ ಶಾಲೆಯಲ್ಲಿ ಪ್ರವೇಶ ಪಡೆದ ಮಕ್ಕಳ ದತ್ತಾಂಶವನ್ನು ಪರೀಕ್ಷಿಸಲಾಗಿದೆ. ಐದರಿಂದ 6 ವರ್ಷದ ಮಕ್ಕಳು ಇದ್ರಲ್ಲಿ ಪಾಲ್ಗೊಂಡಿದ್ದರು. ಅಧ್ಯಯನದಲ್ಲಿ ಪಾಲ್ಗೊಂಡಿದ್ದ ಮಕ್ಕಳ ಪೈಕಿ ಸುಮಾರು 3 ಸಾವಿರದ 414 ಮಕ್ಕಳು ಹೈ ರಿಸ್ಕ್ ಹೊಂದಿದ್ದರು. ಅವರು ಮಿಸ್ ಬಿಹೇವಿಯರ್ ಗೆ ಒಳಗಾಗಿದ್ದರು ಎಂದು ಅಧ್ಯಯನದಲ್ಲಿ ಹೇಳಲಾಗಿದೆ. 

Follow Us:
Download App:
  • android
  • ios