Asianet Suvarna News Asianet Suvarna News

ಅಯ್ಯೋ ಏನು ಮಾಡಿದ್ರೂ ನಿದ್ರೆ ಬರೋಲ್ವಾ? ಈ ಟಿಪ್ಸ್ ಫಾಲೋ ಮಾಡಿ

ಉತ್ತಮ ನಿದ್ರೆಯಿಂದ ಸ್ಮರಣೆ ಮತ್ತು ಏಕಾಗ್ರತೆ ಹೊಂದಲು ಸಾಧ್ಯ. ನಿದ್ರೆಯ ಕೊರತೆಯಿಂದ ಅಧಿಕ ರಕ್ತದೊತ್ತಡಂತಹ ಸಮಸ್ಯೆಗಳು ಕಾಡುತ್ತವೆ. ನಿದ್ರಾಹೀನತೆಗೆ ಇಲ್ಲಿವೆ ಕೆಲ ಪರಿಹಾರಗಳು.

How to Relieve Sleep Disorder Problems easy tips
Author
First Published Sep 26, 2022, 10:38 AM IST

ಮನುಷ್ಯನ ಉತ್ತಮ ಆರೋಗ್ಯಕ್ಕೆ ನಿದ್ರೆಯು ತುಂಬಾ ಮುಖ್ಯವಾಗಿದೆ. ಉತ್ತಮವಾದ ನಿದ್ರೆ ನಮಗೆ ಹೊಸತನವನ್ನು ನೀಡುವ ಜೊತೆಗೆ ಆಯಾಸವನ್ನು ದೂರ ಮಾಡುತ್ತದೆ. ಕಡಿಮೆ ನಿದ್ರೆಯು ಮಾನಸಿಕ ಹಾಗೂ ದೈಹಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ನಿದ್ರಾಹೀನತೆಯಿಂದ ಮಾನಸಿಕ ಖಿನ್ನತೆ, ರಕ್ತದೊತ್ತಡ ಹಾಗೂ ಬೊಜ್ಜು ಸೇರಿದಂತೆ ಮತ್ತಿತರ ಸಮಸ್ಯೆಗಳು ಶುರುವಾಗುತ್ತವೆ. ವಯಸ್ಸಾದಂತೆ ಇದರ ಪರಿಸ್ಥಿತಿ ಮತ್ತಷ್ಟು ಹದಗೆಡಬಹುದು. ಪುರುಷರಿಗಿಂತ ಮಹಿಳೆಯರು ಇದಕ್ಕೆ  ಹೆಚ್ಚು ತುತ್ತಾಗುತ್ತಿದ್ದು, ಶೇ. 100 ಕ್ಕೆ 15ರಷ್ಟು ಜನರು ನಿದ್ರಾಹೀನತೆ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಆದ್ದರಿಂದ ನಿದ್ರಾಹೀನತೆ ಉಂಟಾಗದಂತೆ ಜೀವನಶೈಲಿಯನ್ನು ಬದಲಿಸಿಕೊಳ್ಳಬೇಕು. ಹಾಗಿದ್ದರೆ ನಿದ್ರಾಹೀನತೆಗೆ ಏನು ಪರಿಹಾರ ಎಂಬುದಕ್ಕೆ ಇಲ್ಲಿದೆ ಮಾಹಿತಿ...

ಮೊಬೈಲ್/ ಲ್ಯಾಪ್ ಟಾಪ್ ಬಳಸಬೇಡಿ
ಬಹುತೇಕರಿಗೆ ಮಲುಗುವಾಗ ಮೊಬೈಲ್ ನೋಡುವ ಅಭ್ಯಾಸ ಇರುತ್ತದೆ. ಮೊಬೈಲ್​ನಲ್ಲಿ (Mobile) ವಿಡಿಯೋಗಳನ್ನು ನೊಡುತ್ತಾ ಮಲಗುವ ಅಭ್ಯಾಸ ಒಳ್ಳೆಯದಲ್ಲ. ಅದರಿಂದ ಕಣ್ಣು ಒಣಗಿದಂತಾಗಿ ನಿದ್ರೆಯೂ ದೂರ ಹೋಗುತ್ತದೆ. ಹೆಚ್ಚಿನ ಸಮಯವನ್ನು ಮೊಬೈಲ್/ ಲ್ಯಾಪ್ ಟಾಪ್ ನಲ್ಲೇ (Laptop) ಕಳೆಯುವುದರಿಂದ ಕಣ್ಣುಗಳಿಗೆ ಹೆಚ್ಚು ಹಾನಿಯಾಗುತ್ತದೆ. ಇದರಿಂದ ನೀವು ಹೆಚ್ಚು ನಿದ್ರಾಹೀನತೆ (Sleeplessness) ಸಮಸ್ಯೆ ಎದುರಿಸಬೇಕಾಗುತ್ತದೆ. ಹಾಗಾಗಿ ಹೆಚ್ಚು ಹೊತ್ತು ಮೊಬೈಲ್/ಲ್ಯಾಪ್ ಟಾಪ್ (LapTop) ಬಳಸದೇ ಅಗತ್ಯಕ್ಕೆ ತಕ್ಕಂತೆ ಬಳಸಿ. ರಾತ್ರಿ ಹಾಸಿಗೆ ಮೇಲೆ ಮಲಗಿ ಗಂಟೆಗಟ್ಟಲೇ ಮೊಬೈಲ್ (Mobile) ನೋಡುವುದು ಇದೀಗ ಸಾಮಾನ್ಯವಾಗಿದೆ. ಇದು ನಿದ್ರೆಯ ಮೇಲೆ ತುಂಬಾ ಪರಿಣಾಮ ಬೀರುತ್ತದೆ. ಆದ್ದರಿಂದ ಮಲಗುವಾಗ ಮೊಬೈಲ್ ಬಳಕೆ ನಿಲ್ಲಿಸಬೇಕು.

ಮಲಗೋ ಮೊದ್ಲು ಈ ಅಭ್ಯಾಸ ರೂಢಿಸಿಕೊಳ್ಳಿ, ಆರೋಗ್ಯ ಸರಿ ಹೋಗೇ ಹೋಗುತ್ತೆ

ಆರೋಗ್ಯ ಶೈಲಿ ಬದಲಿಸಿಕೊಳ್ಳಿ (Healthy Lifestyle)
ನಿದ್ರೆಯ ಸಮಸ್ಯೆಯಿಂದ ಬಳಲುತ್ತಿರುವವರು ತಮ್ಮ ಆರೋಗ್ಯ ಶೈಲಿಯನ್ನು ಬದಲಿಸಿಕೊಳ್ಳಬೇಕು. ರಾತ್ರಿ ಆರಾಮಾಗಿ ಕುಳಿತು ಹೊಟ್ಟೆತುಂಬ ಅಭ್ಯಾಸವನ್ನು ಬಿಟ್ಟುಬಿಡುವುದು ಉತ್ತಮ. ನಮ್ಮ ಆಹಾರ ಪದ್ಧತಿಯು  ನಿದ್ರಾ ಹೀನತೆಯ ಸಮಸ್ಯೆಗೆ ಮುಖ್ಯಕಾರಣವಾಗುತ್ತದೆ. ಅತಿಯಾಗಿ ಜಂಕ್ ಫುಡ್ (Junk food) ತಿನ್ನುವುದರಿಂದ ಜೀರ್ಣಕ್ರಿಯೆ ಸರಿಯಾಗಿ ಆಗದೇ ದೇಹದಲ್ಲಿ ಹಲವಾರು ಸಮಸ್ಯೆಗಳು ಕಾಡುವುದರಿಂದ ನಿದ್ರಾಹೀನತೆ ಹೆಚ್ಚಾಗುತ್ತದೆ. ಹಾಗಾಗಿ ವಿಟಮಿನ್ (Vitamin) ಹಾಗೂ ಪ್ರೋಟಿನ್ ಇರುವ ಹಣ್ಣುಗಳು ಹಾಗೂ ತರಕಾರಿಗಳನ್ನು ಸೇವಿಸುವ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಹಾಗೂ ಧೂಮಪಾನ ಹಾಗೂ ಮದ್ಯಪಾನದಿಂದ ಕೂಡ ನಿದ್ರಾಹೀನತೆ ಉಂಟಾಗುತ್ತದೆ. ಮಲಗುವ 6 ಗಂಟೆ ಮೊದಲು ಧೂಮಪಾನ ಹಾಗೂ ಮದ್ಯಪಾನ (Smoke and Drink) ಮಾಡಬಾರದು.

ತೈಲದಿಂದ ತಲೆಗೆ ಮಸಾಜ್ ಮಾಡಿ
ನಿದ್ರಾಹೀನತೆಯಿಂದ ಬಳಲುತ್ತಿರುವವರು ಉತ್ತಮ ತೈಲಗಳಿಂದ ತಲೆಗೆ ಮಸಾಜ್​ (Head Masaj) ಮಾಡಿಕೊಳ್ಳುವುದು ಸೂಕ್ತ. ಕೊಬ್ಬರಿ ಎಣ್ಣೆ (Coconut oil) ಚಂಪಕ್ ಎಣ್ಣೆ ಸೇರಿ ಉತ್ತಮವಾದ ನಿಮಗೆ ಸರಿ ಅನಿಸಿದ ಎಣ್ಣೆಯನ್ನು ಬಳಸಬಹುದು. ಬೆಚ್ಚಗಿನ ನೀರಿನಿಂದ ತಲೆ ತೊಳೆದ ನಂತರ ಎಣ್ಣೆಯಿಂದ ತಲೆ ಮಸಾಜ್ ಮಾಡಬೇಕು. ಇದು ಒತ್ತಡ ಮತ್ತು ಆತಂಕವನ್ನು ನಿವಾರಿಸಿ ಆರೋಗ್ಯಕದ ನಿದ್ರೆಗೆ ಸಹಕಾರಿಯಾಗಿಲಿದೆ.

Home Remedies: ಬೆಳಿಗ್ಗೆ ಕಾಡುವ ತಲೆನೋವನ್ನು ಹೀಗೆ ಗಾಯಬ್ ಮಾಡಿ

ಚಿಂತೆ ಮಾಡದಿರಿ, ಸಂಗೀತ (Music) ಕೇಳಿ
ಬದುಕಿನಲ್ಲಿ ಎದುರಾಗುವ ಸಮಸ್ಯೆಗಳಿಗೆ ಹೆಚ್ಚು ಚಿಂತೆ ಮಾಡಬೇಡಿ, ಇದರಿಂದ ನೀವು ಹೆಚ್ಚು ನಿದ್ರಾಹೀನತೆಯಿಂದ ಬಳಲಬೇಕಾಗುತ್ತದೆ. ಹಾಗಾಗಿ ನೀವು ಎಲ್ಲವನ್ನು ನಿಭಾಯಿಸುತ್ತೇನೆಂಬ ಆತ್ಮವಿಶ್ವಾಸ ಬೆಳೆಸಿಕೊಳ್ಳಿ. ನಿದ್ರೆ ಬಾರದಿದ್ದರೆ ಕೆಟ್ಟ ಯೋಚನೆ ಮಾಡುವ ಬದಲು ಒಳ್ಳೆಯ ಸಂಗೀತ (Music) ಕೇಳುವ ಅಭ್ಯಾಸ ರೂಢಿಸಿಕೊಳ್ಳಿ ಹಾಗೂ ಉತ್ತಮವಾದ ಪುಸ್ತಕಗಳನ್ನು (Books) ಓದುವ ಹವ್ಯಾಸ ಬೆಳೆಸಿಕೊಳ್ಳಿ. ಆಗ ಚೆನ್ನಾಗಿ ನಿದ್ರೆ ಬರುತ್ತದೆ.

ನಿದ್ರಾಹೀನತೆಯಿಂದ ಅನೇಕ ಸಮಸ್ಯೆಗಳು ಶುರುವಾಗುತ್ತವೆ. ಆದ್ದರಿಂದ ಈ ಟಿಪ್ಸ್ ಫಾಲೋ ಮಾಡಿ ನೆಮ್ಮದಿಯ ನಿದ್ದೆ ಮಾಡಬಹುದು.

How to Relieve Sleep Disorder Problems easy tips

Follow Us:
Download App:
  • android
  • ios