Weight Loss Tips : ತೂಕ ಇಳಿಸೋ ಚಿಂತೆ ಬಿಡಿ, ಕಪ್ಪು ಅರಿಶಿನ ಬಳಸಿ
Weight Loss Tips: ಕಪ್ಪು ಅರಿಶಿನದ (Black Turmeric) ಬಳಕೆ ಬಹಳ ಕಡಿಮೆ. ಅನೇಕರಿಗೆ ಅದ್ರ ಬಗ್ಗೆ ತಿಳಿದೇ ಇಲ್ಲ. ಕಪ್ಪು ಅರಿಶಿನದ ಪ್ರಯೋಜನ ಅಪಾರ. ಅನೇಕ ಖಾಯಿಲೆಗಳಿಗೆ ಇದು ಮದ್ದು. ಕಪ್ಪು ಅರಿಶಿನದಿಂದ ಏನೆಲ್ಲ ಪ್ರಯೋಜನ ಇದೆ ಗೊತ್ತಾ?
ಅರಿಶಿನ (Turmeric) ಅಂದ್ರೆ ಅದು ಹಳದಿ (Yellow) ಬಣ್ಣದಲ್ಲಿರುತ್ತದೆ ಎಂಬುದು ಎಲ್ಲರಿಗೂ ಗೊತ್ತು. ಆದ್ರೆ ಅರಿಶಿನ ಬರೀ ಹಳದಿ ಬಣ್ಣದಲ್ಲಿರುವುದಿಲ್ಲ. ಕಪ್ಪು (Black Turmeric) ಅರಿಶಿನವೂ ಇದೆ ಎಂಬುದು ಅನೇಕರಿಗೆ ತಿಳಿದಿಲ್ಲ. ಕೆಲವರು ಕಪ್ಪು ಅರಿಶಿನವನ್ನು ಬಳಸ್ತಾರೆ. ಮತ್ತೆ ಕೆಲವರಿಗೆ ಅದರ ಬಳಕೆ ಹಾಗೂ ಪ್ರಯೋಜನಗಳ ಬಗ್ಗೆ ತಿಳಿದಿಲ್ಲ. ಕಪ್ಪು ಅರಿಶಿನದಲ್ಲಿ ಸಾಕಷ್ಟು ಔಷಧಿ (Medicine) ಗುಣಗಳಿವೆ. ಕಪ್ಪು ಅರಿಶಿನದ ವೈಜ್ಞಾನಿಕ ಹೆಸರು ಕರ್ಕುಮಾ ಸೀಸಿಯಾ (Curcuma caesia). ಇದನ್ನು ಇಂಗ್ಲಿಷ್‌ನಲ್ಲಿ ಬ್ಲ್ಯಾಕ್ ಕರ್ಕುಮಾ ಎಂದೂ ಕರೆಯುತ್ತಾರೆ. ಈ ಅರಿಶಿನದ ಮೂಲ ಈಶಾನ್ಯ ಮತ್ತು ಮಧ್ಯ ಭಾರತ. ಇದರ ಬಣ್ಣ ಗಾಢ ಕಂದು, ನೀಲಿ ಮಿಶ್ರಿತ ಕಪ್ಪು. ಕಪ್ಪು ಅರಿಶಿನದ ರುಚಿ ಕಹಿಯಾಗಿರುತ್ತದೆ. ಇಂದು ಕಪ್ಪು ಅರಿಶಿನದ ಆರೋಗ್ಯ ಪ್ರಯೋಜನಗಳ ಬಗ್ಗೆ ನಾವು ಹೇಳ್ತೇವೆ.
ಕಪ್ಪು ಅರಿಶಿನದ ಪ್ರಯೋಜನಗಳು: ಅನೇಕ ರೋಗ (Disease) ಗಳಿಗೆ ಕಪ್ಪು ಅರಿಶಿನವನ್ನು ಬಳಕೆ ಮಾಡಲಾಗುತ್ತದೆ. ಭಾರತ ಸೇರಿದಂತೆ ಆಗ್ನೇಯ ಏಷ್ಯಾದ ಮಾರುಕಟ್ಟೆಗಳಲ್ಲಿ ಇದನ್ನು ತಾಜಾ ಅಥವಾ ಒಣಗಿಸಿ ಮಾರಾಟ ಮಾಡಲಾಗುತ್ತದೆ. ಇದರಲ್ಲಿ ಅನೇಕ ರೀತಿಯ ಪೋಷಕಾಂಶಗಳಿವೆ. ಜೊತೆಗೆ ಉತ್ಕರ್ಷಣ ನಿರೋಧಕ ಗುಣವನ್ನೂ ಇದು ಹೊಂದಿದೆ.
ಶ್ವಾಸಕೋಶಕ್ಕೆ ಸಂಬಂಧಿಸಿದ ರೋಗಕ್ಕೆ ಉತ್ತಮ: ಶ್ವಾಸಕೋಶ ಸಂಬಂಧಿ ಸಮಸ್ಯೆಯಿರುವವರು ಕಪ್ಪು ಅರಿಶಿನವನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸಬೇಕು. ಆಸ್ತಮಾ, ನ್ಯುಮೋನಿಯಾ ಮುಂತಾದ ಶ್ವಾಸಕೋಶ ಸಂಬಂಧಿ ಕಾಯಿಲೆಗಳ ಚಿಕಿತ್ಸೆಗೆ ಕಪ್ಪು ಅರಿಶಿನವನ್ನು ಹೆಚ್ಚು ಬಳಸಲಾಗುತ್ತದೆ.
ಚರ್ಮದ ಸಮಸ್ಯೆಗೆ ಕಪ್ಪು ಅರಿಶಿನ : ಚರ್ಮದ ಸಮಸ್ಯೆಯಿಂದ ಬಳಲುತ್ತಿರುವವರು ಕೂಡ ಕಪ್ಪು ಅರಿಶಿನದ ಪ್ರಯೋಜನ ಪಡೆಯಬಹುದು. ಕಪ್ಪು ಅರಿಶಿನ ಲ್ಯುಕೋಡರ್ಮಾ ಸಮಸ್ಯೆಯನ್ನು ದೂರ ಮಾಡುತ್ತದೆ. ಈ ಅರಿಶಿನದ ಪೌಡರ್ ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ.
ಅತ್ಯುತ್ತಮ ನೋವು ನಿವಾರಕ : ಕಪ್ಪು ಅರಿಶಿನ ಸೇವನೆಯಿಂದ ದೇಹದಲ್ಲಿನ ಹಲವು ರೀತಿಯ ನೋವುಗಳು ಕಡಿಮೆಯಾಗುತ್ತವೆ. ಹಲ್ಲುನೋವು, ಹೊಟ್ಟೆ ನೋವು, ಅಸ್ಥಿ ಸಂಧಿವಾತದ ಸಮಸ್ಯೆಯನ್ನು ಇದ್ರಿಂದ ಕಡಿಮೆ ಮಾಡಬಹುದು. ಆದ್ರೆ ಇದನ್ನು ಸೀಮಿತ ಪ್ರಮಾಣದಲ್ಲಿ ಸೇವಿಸಬೇಕು. ನೋವು ನಿವಾರಕ ಎಂಬ ಕಾರಣಕ್ಕೆ ಮಿತಿಮೀರಿ ಸೇವನೆ ಒಳ್ಳೆಯದಲ್ಲ. ತಜ್ಞರ ಸಲಹೆ ಮೇರೆಗೆ ಇದರ ಸೇವನೆ ಮಾಡುವುದು ಉತ್ತಮ.
ಇದನ್ನೂ ಓದಿ: ನಿಮಗೆ ಗೊತ್ತಿರ್ಲಿ..ಲವಂಗ ಸೇವನೆಯಿಂದ ಆರೋಗ್ಯಕ್ಕೆ ತೊಂದ್ರೆ ಕೂಡಾ ಇದೆ
ಕ್ಯಾನ್ಸರ್ ಅಪಾಯ ಕಡಿಮೆ ಮಾಡುತ್ತದೆ : ಕಪ್ಪು ಅರಿಶಿನದಲ್ಲಿರುವ ಕರ್ಕ್ಯುಮಿನ್ ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ತಡೆಯಲು ಸಹಾಯ ಮಾಡುತ್ತದೆ ಎಂದು ವೈಜ್ಞಾನಿಕವಾಗಿ ಸಾಬೀತಾಗಿದೆ. ಕ್ಯಾನ್ಸರ್ ವಿರೋಧಿ ಚಿಕಿತ್ಸೆಯಲ್ಲಿ ಕಪ್ಪು ಅರಿಶಿನವನ್ನು ಸೇವಿಸುವುದರಿಂದ ಯಾವುದೇ ಅಡ್ಡಪರಿಣಾಮಗಳು ಕಂಡುಬರುವುದಿಲ್ಲ. ಹಾಗಾಗಿ ಕ್ಯಾನ್ಸರ್ ರೋಗಿಗಳು ಇದನ್ನು ಬಳಸಬಹುದು ಎನ್ನುತ್ತಾರೆ ತಜ್ಞರು.
ಕೊಲೈಟಿಸ್ ಗೆ ಕಪ್ಪು ಅರಿಶಿನ ಮದ್ದು : ದೊಡ್ಡ ಕರುಳಿನ ಉರಿಯೂತ ಅಥವಾ ಕೊಲೈಟಿಸ್ ಸಮಸ್ಯೆಯಿಂದ ಬಳಲುತ್ತಿರುವವರು ಕಪ್ಪು ಅರಿಶಿನ ಸೇವನೆ ಮಾಡಬೇಕು. ಇದ್ರಿಂದ ಸಮಸ್ಯೆ ಹೆಚ್ಚಿನ ಪ್ರಮಾಣದಲ್ಲಿ ಕಡಿಮೆಯಾಗುತ್ತದೆ. ಆಹಾರವನ್ನು ಸೇವಿಸಿದ ನಂತರ ನೀವು ದಿನಕ್ಕೆ ಎರಡು ಬಾರಿ ಕಪ್ಪು ಅರಿಶಿವನ್ನು ತೆಗೆದುಕೊಳ್ಳಬಹುದು. ಇದು ಕೊಲೈಟಿಸ್ ಕಡಿಮೆ ಮಾಡಿ ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ.
ಇದನ್ನೂ ಓದಿ: Right Diet For Women: ವಯಸ್ಸಿಗೆ ಅನುಗುಣವಾಗಿ ಆಹಾರ ಸೇವಿಸಿ, ಆರೋಗ್ಯವಾಗಿರಿ
ತೂಕ ನಿಯಂತ್ರಣ : ಸದ್ಯ ಬಹುತೇಕರ ದೊಡ್ಡ ಸಮಸ್ಯೆ ತೂಕ ಇಳಿಕೆ. ಕಪ್ಪು ಅರಿಶಿನವು ದೇಹದಲ್ಲಿನ ಆಹಾರದ ಕೊಬ್ಬನ್ನು ಒಡೆಯಲು ಸಹಾಯ ಮಾಡುತ್ತದೆ. ತೂಕ ಇಳಿಸಿಕೊಳ್ಳಲು ಬಯಸಿದರೆ, ಪ್ರತಿದಿನ ಕಪ್ಪು ಅರಿಶಿನವನ್ನು ಸೀಮಿತ ಪ್ರಮಾಣದಲ್ಲಿ ಸೇವಿಸಿ. ಇದು ಜೀರ್ಣ ಶಕ್ತಿಯನ್ನು ಸುಧಾರಿಸುತ್ತದೆ. ಪಿತ್ತರಸವನ್ನು ಉತ್ಪಾದಿಸುವ ಮೂಲಕ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ ಮತ್ತು ಯಕೃತ್ತಿನ ರೋಗವನ್ನು ತಡೆಯುತ್ತದೆ.