ಹೊಟೇಲ್‌ ರೂಮ್‌ನಲ್ಲಿ ಬೆಡ್‌ಬಗ್ಸ್‌ ಇದ್ಯಾ ಚೆಕ್ ಮಾಡೋದು ಹೇಗೆ?

ಸಾಮಾನ್ಯವಾಗಿ ಜನರು ಹೋಟೆಲ್ ಕೊಠಡಿಗಳಲ್ಲಿರುವ ಹಲವು ಸಮಸ್ಯೆಗಳ ಬಗ್ಗೆ ದೂರು ನೀಡುತ್ತಾರೆ. ಬಾತ್‌ರೂಮ್ ಟ್ಯಾಪ್ ಸರಿಯಿಲ್ಲ, ಹಾಸಿಗೆ ಕೊಳಕಾಗಿದೆ ಎಂದೆಲ್ಲಾ ಹೇಳುತ್ತಾರೆ. ಆದ್ರೆ ಹೊಟೇಲ್‌ಗಳಿಗೆ ಹೋಗುವಾಗ ಎಂದಾದರೂ ನೀವು ಅಲ್ಲಿ ಬೆಡ್‌ಬಗ್ಸ್‌ಗಳ ಕಾಟವಿದ್ಯಾ ಎಂದು ಪರಿಶೀಲಿಸಿದ್ದೀರಾ ?

How To Know If There Are Bedbugs In A Hotel Room Vin

ಹೊಟೇಲ್‌ ರೂಮುಗಳು ಎಷ್ಟು ಐಷಾರಾಮಿಯಾಗಿದ್ದರೂ, ಸ್ವಚ್ಛತೆಯಿಂದ ಕೂಡಿದ್ದರೂ ಕಣ್ಣಿಗೆ ಕಾಣದ ಬೆಡ್‌ಬಗ್ಸ್‌ಗಳ ಕಾಟ ಹಲವು ಹೊಟೇಲ್‌ನಲ್ಲಿ ಇರುತ್ತದೆ. ಇದು ಕೆಲವೊಮ್ಮೆ ನಿಮ್ಮ ಬಟ್ಟೆಬರೆಗಳ ಮೂಲಕ ನಿಮ್ಮ ದೇಹ (Body)ವನ್ನು, ಮನೆಯನ್ನು ಸಹ ಸೇರಬಹುದು. ಬೆಡ್‌ಬಗ್ಸ್‌, ಕಂದು ಮಿಶ್ರಿತ ಕೆಂಪು ಬಣ್ಣದ ಸಣ್ಣ ಕೀಟಗಳಾಗಿದ್ದು, ಕೆಲವೊಮ್ಮೆ ಅದರ ಕಡಿತವು ಜನರಿಗೆ ಅಲರ್ಜಿ ಮತ್ತು ತೀವ್ರ ಪ್ರತಿಕ್ರಿಯೆಗಳನ್ನು ಉಂಟುಮಾಡಬಹುದು. ಆದರೂ. ಹೆಚ್ಚಿನ ಜನರು ಹೋಟೆಲ್ ಕೋಣೆ (Hotel room)ಯಲ್ಲಿ ಅವುಗಳನ್ನು ಸುಲಭವಾಗಿ ಗಮನಿಸಲು ಸಾಧ್ಯವಾಗುವುದಿಲ್ಲ, ಆದರೆ ಹೋಟೆಲ್‌ನಲ್ಲಿ ಉಳಿಯುವ ಮೊದಲು ಕೊಠಡಿಗಳಲ್ಲಿನ ಬೆಡ್‌ಬಗ್‌ಗಳನ್ನು ಪರಿಶೀಲಿಸುವುದು ಬಹಳ ಮುಖ್ಯ. ಬೆಡ್‌ಬಗ್‌ಗಳನ್ನು ಪರಿಶೀಲಿಸಲು ಕೆಲವು ಸುಲಭ ಮಾರ್ಗಗಳು ಇಲ್ಲಿವೆ.

ಬೆಡ್‌ಬಗ್‌ಗಳು ಹೇಗೆ ಕಾಣುತ್ತವೆ ?
ಬೆಡ್‌ಬಗ್‌ಗಳನ್ನು ಪರೀಕ್ಷಿಸುವ ಮೊದಲು, ಅವು ಹೇಗೆ ಕಾಣುತ್ತವೆ ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯ. ಬೆಡ್‌ಬಗ್‌ಗಳು ಚಿಕ್ಕದಾಗಿರುತ್ತವೆ, ಚಪ್ಪಟೆ ಮತ್ತು ಅಂಡಾಕಾರದಲ್ಲಿರುತ್ತವೆ. ಸಾಮಾನ್ಯವಾಗಿ ಬೆಡ್‌ಬಗ್‌ನ ಗಾತ್ರವು 5 ರಿಂದ 6 ಮಿಮೀ ನಡುವೆ ಇರುತ್ತದೆ. ಹೋಟೆಲ್ ಕೋಣೆಯಲ್ಲಿ ಅಂತಹ ಯಾವುದೇ ಕೀಟಗಳಿವೆಯೇ ಎಂದು ಪರಿಶೀಲಿಸಿ. ಇದರಿಂದ ಅದರ ಕಡಿತ ಮತ್ತು ಮನೆಯಲ್ಲಿ ಬೆಡ್ ಬಗ್ ಸೋಂಕು ಹರಡುವುದನ್ನು ತಪ್ಪಿಸಬಹುದು.

Travel Tips : ಹೊಟೇಲ್ ರೂಮ್ ಚೆಕ್ ಔಟ್ ಮಾಡುವಾಗ ಇವೆಲ್ಲಾ ನೆನಪಲ್ಲಿರಲಿ!

ಹಾಸಿಗೆಗಳು ಮತ್ತು ಹೊದಿಕೆಗಳನ್ನು ನೋಡಿ: ಕೋಣೆಗೆ ಪ್ರವೇಶಿಸಿದ ತಕ್ಷಣ ಬಟ್ಟೆಗಳನ್ನು (Dress) ಹರಡಿ ಬಿಚ್ಚಿಡಬೇಡಿ ಮತ್ತು ಹಾಸಿಗೆಯ ಮೇಲೆ ಕುಳಿತುಕೊಳ್ಳಲು ಅಥವಾ ಮಲಗಲು ನೇರವಾಗಿ ಹೋಗಬೇಡಿ. ಹಾಸಿಗೆಗಳು ಮತ್ತು ಕಂಬಳಿಗಳ ಮೇಲೆ ತಿಗಣೆಗಳಿವೆಯಾ ಎಂದು ಮೊದಲು ಪರಿಶೀಲಿಸಿ. ಸಾಧ್ಯವಾದರೆ, ಹಾಸಿಗೆಗಳನ್ನು ಒಮ್ಮೆ ಎತ್ತಲು ಪ್ರಯತ್ನಿಸಿ. ಏಕೆಂದರೆ ಈ ಕೀಟಗಳು ಪ್ರತಿ ಮೂಲೆಯಲ್ಲಿ ಅಡಗಿಕೊಳ್ಳುತ್ತವೆ, ಅವುಗಳು ಎಲ್ಲಿವೆಯೆಂಬುದು ತಿಳಿದುಕೊಳ್ಳುವುದು ತುಂಬಾ ಕಷ್ಟ.

ಸೋಫಾಗಳು ಮತ್ತು ದಿಂಬುಗಳನ್ನು ನಿಕಟವಾಗಿ ಪರಿಶೀಲಿಸಿ: ಬೆಡ್‌ಬಗ್‌ಗಳು ಕೋಣೆಯ ಸೋಫಾಗಳು, ಕುಶನ್‌ಗಳು ಮತ್ತು ದಿಂಬುಗಳಲ್ಲಿ ಅಡಗಿಕೊಳ್ಳುವ ಸಾಧ್ಯತೆ ಹೆಚ್ಚು. ಆದ್ದರಿಂದ, ಅವುಗಳನ್ನು ಬಳಸುವ ಮೊದಲು, ಸೋಫಾದಿಂದ ಮೆತ್ತೆಗಳನ್ನು ತೆಗೆದುಹಾಕಿ ಮತ್ತು ಅವುಗಳನ್ನು ಅಲ್ಲಾಡಿಸಿ. ಕುಶನ್‌ನಿಂದ ಕವರ್ ಅನ್ನು ತೆಗೆದುಹಾಕುವುದು ಮತ್ತು ಸೋಫಾದ ಮೂಲೆ ಮೂಲೆಗಳಲ್ಲಿ ಪರಿಶೀಲನೆ ನಡೆಸಬೇಕು.

ಕಪಾಟುಗಳು ಮತ್ತು ಡ್ರಾಯರ್‌ಗಳನ್ನು ಪರಿಶೀಲಿಸಿ: ಕೇವಲ ಬೆಡ್‌ನಲ್ಲಿ ಮಾತ್ರವಲ್ಲ, ಬೆಡ್‌ಬಗ್‌ಗಳು ಕೋಣೆಯ ಕಪಾಟುಗಳು ಮತ್ತು ಡ್ರಾಯರ್‌ಗಳಲ್ಲಿಯೂ ಅಡಗಿಕೊಳ್ಳಬಹುದು. ಜನರು ಅವುಗಳನ್ನು ಕಡಿಮೆ ಬಳಸುವುದರಿಂದ, ಅವರ ಗಮನವು ಅದರ ಕಡೆಗೆ ಹೋಗುವುದಿಲ್ಲ. ಆದರೆ ಇಂಥವುಗಳಿಂದ ಸುಲಭವಾಗಿ ತಿಗಣೆಗಳು ಸ್ಪ್ರೆಡ್ ಆಗಬಹುದು. ಎಚ್ಚರಿಕೆಯಿಂದ ಇರುವುದು ಒಳಿತು.

Traveling Tips : ಹೋಟೆಲ್‌ನಲ್ಲಿ ತಂಗುವ ಮುನ್ನ ಇದನ್ನು ತಿಳಿದಿರಿ

ಲ್ಯಾಂಪ್‌ಶೇಡ್‌ಗಳು ಮತ್ತು ಫ್ರೇಮ್‌ಗಳನ್ನು ನೋಡಬೇಕು: ಕೋಣೆಯಲ್ಲಿ ಎಲ್ಲೆಡೆ ಚೆನ್ನಾಗಿ ಪರಿಶೀಲಿಸಿದ ನಂತರ, ಲ್ಯಾಂಪ್‌ಶೇಡ್‌ಗಳು, ಚೌಕಟ್ಟುಗಳು ಮತ್ತು ಪರದೆಗಳನ್ನು ಸಹ ನೋಡಿ. ಗಡಿಯಾರ (Clock) ಮತ್ತು ಫೋಟೋ ಚೌಕಟ್ಟಿನ ಸುತ್ತಲೂ ಹತ್ತಿರದಿಂದ ನೋಡಿ. ಇಂಥಾ ಜಾಗಗಳಲ್ಲಿ ಬೆಡ್‌ಬಗ್‌ಗಳು ಹೆಚ್ಚು ಪ್ರಮಾಣದಲ್ಲಿರುತ್ತವೆ. ನೀವು ಕೋಣೆಗೆ (Room) ತಲುಪಿದ ತಕ್ಷಣ ನಿಮ್ಮ ಸಾಮಾನುಗಳನ್ನು ಹಾಸಿಗೆಯ ಮೇಲೆ ಇಡಬೇಡಿ. ಏಕೆಂದರೆ, ಅವರು ನಿಮ್ಮ ಸಾಮಾನು ಸರಂಜಾಮುಗಳಲ್ಲಿ ರಹಸ್ಯವಾಗಿ ಅಡಗಿಕೊಳ್ಳಬಹುದು. ಬೆಡ್‌ಬಗ್‌ಗಳು ಗೋಚರಿಸದಿದ್ದರೆ ಮಾತ್ರ ಕೋಣೆಯಲ್ಲಿ ಉಳಿಯುವುದು ಸುರಕ್ಷಿತವಾಗಿದೆ ಎಂಬುದನ್ನು ನೆನಪಿನಲ್ಲಿಡಿ. ಹೀಗಾಗಿ ಹೊಟೇಲ್‌ ರೂಮ್‌ನಲ್ಲಿ ತಂಗುವ ಮೊದಲು ಬೆಡ್‌ಬಗ್‌ಗಳಿವೆಯೇ ಎಂದು ಕೂಲಂಕುಷವಾಗಿ ಪರಿಶೀಲಿವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು.

Latest Videos
Follow Us:
Download App:
  • android
  • ios