Belly Fat: ಹೊಟ್ಟೆ ದಪ್ಪ ಇದೆ, ಆದ್ರೂ ಫಿಟ್ ಆಗಿರೋದು ಹೇಗೆ?
ಸ್ಲಿಮ್ ಆಗಿ ಕಾಣುವುದಕ್ಕಿಂತ ಫಿಟ್ ಆಗಿರುವುದು ಮುಖ್ಯ ಎಂದು ನಾವೆಲ್ಲರೂ ಹಲವು ಬಾರಿ ಕೇಳಿದ್ದೇವೆ. ಅಂದರೆ ಅಧಿಕ ತೂಕ ಇರುವವರೂ ಫಿಟ್ ಆಗಿರಬಹುದೇ? ಇಲ್ಲಿ ತಿಳಿಯಿರಿ.
ನೀವು ಸ್ಲಿಮ್ (Slim) ಆಗಿದ್ದರೆ ನೀವು ಆರೋಗ್ಯವಂತರು ಮತ್ತು ನೀವು ಅಧಿಕ ತೂಕ ಹೊಂದಿದ್ದರೆ ನೀವು ಅನಾರೋಗ್ಯವಂತರು ಎಂಬುದೊಂದು ಹಳೆಯ ಕಲ್ಪನೆ. ಆದರೆ ಅದು ನಿಜವೇ? ನಿಮ್ಮ ತೂಕ ನಿಜವಾಗಿಯೂ ನೀವು ಎಷ್ಟು ಫಿಟ್ (Fit) ಎಂದು ಹೇಳಬಹುದೇ? ಖಂಡಿತವಾಗಿಯೂ ಇಲ್ಲ. ಸ್ವಲ್ಪ ಹೊಟ್ಟೆ ಅಧಿಕ ಇದ್ದರೂ ನೀವು ಫಿಟ್ ಇರಬಹುದು. ಇದನ್ನು ತಿಳಿಯಲು ಮೊದಲು ನಾವು ಬಾಡಿ ಮಾಸ್ ಇಂಡೆಕ್ಸ್ ಅನ್ನು ಅರ್ಥ ಮಾಡಿಕೊಳ್ಳೋಣ.
ಬಾಡಿ ಮಾಸ್ ಇಂಡೆಕ್ಸ್ ಎಂದರೇನು? (Body mass Index)
ಬಾಡಿ ಮಾಸ್ ಇಂಡೆಕ್ಸ್, ಇದನ್ನು BMI ಎಂದೂ ಕರೆಯುತ್ತಾರೆ, ಇದು ಎತ್ತರ (Height) ಮತ್ತು ತೂಕದ (Weight) ಅನುಪಾತ. ಇದು ನೀವು ಆರೋಗ್ಯಕರ ದೇಹದ ತೂಕವನ್ನು ಹೊಂದಿದ್ದೀರಾ ಇಲ್ಲವಾ ಎಂದು ತಿಳಿಸುತ್ತದೆ. ನೀವು ಅಧಿಕ ತೂಕ ಹೊಂದಿದ್ದೀರಾ ಅಥವಾ ಇಲ್ಲವೇ ಎಂಬುದನ್ನು BMI ಹೇಳಬಹುದು. ಆದರೆ ನಿಮ್ಮಲ್ಲಿ ಸ್ನಾಯುಗಳ (Muscle) ಅಂಶ ಹೆಚ್ಚಿದ್ದರೆ, ಅಥವಾ ಚಿಕ್ಕವರಾಗಿದ್ದರೆ ಅಥವಾ ವಯಸ್ಸಾದವರಾಗಿದ್ದರೆ ಅದನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ. BMI ಜೊತೆಗೆ ಸೊಂಟದ ಸುತ್ತಳತೆಯು ಮಧುಮೇಹ,(Diabetes), ಹೃದ್ರೋಗ (Heart problem) ಮತ್ತು ಅಧಿಕ ರಕ್ತದೊತ್ತಡದಂತಹ ಬೊಜ್ಜು-ಸಂಬಂಧಿತ ಕಾಯಿಲೆಗಳ ಅಪಾಯವನ್ನು ಕಂಡುಹಿಡಿಯಲು ನಿಮಗೆ ಸಹಾಯ ಮಾಡುತ್ತದೆ.
Menstrual cup: ಬಳಸಲು ಮುಜುಗರವೇ? ಋತುಸ್ರಾವ ಕಪ್ ಬಗ್ಗೆ ಇರೋ ಮಿಥ್‌ಗಳಿವು
ಅಧಿಕ ತೂಕ ಮತ್ತು ಆರೋಗ್ಯ
1998ರಲ್ಲಿ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್ ಪ್ರಕಟಿಸಿದ ವರದಿಯ ಪ್ರಕಾರ, ಅಧಿಕ ತೂಕ ಹೊಂದಿದ್ದವರೂ, ಅವರ ಸೊಂಟದ (Weist) ಗಾತ್ರವು ಮಹಿಳೆಯರಿಗೆ 35 ಇಂಚುಗಳು ಮತ್ತು ಪುರುಷರಿಗೆ 40 ಇಂಚುಗಳಿಗಿಂತ ಕಡಿಮೆಯಿದ್ದರೆ, ಮತ್ತು ಅವರು ಡಯಾಬಿಟಿಸ್, ಅಧಿಕ ರಕ್ತದೊತ್ತಡ ಮತ್ತು ಅಧಿಕ ಕೊಲೆಸ್ಟ್ರಾಲ್‌ನಂಥ ಸಮಸ್ಯೆಗಳಿಂದ ಬಳಲುತ್ತಾ ಇಲ್ಲದಿದ್ದರೆ ಅವರನ್ನು ಆರೋಗ್ಯವಂತರು ಎಂದು ಪರಿಗಣಿಸಬಹುದು.
ತಜ್ಞರ ಪ್ರಕಾರ, ನೀವು ಅಧಿಕ ತೂಕ ಹೊಂದಿದ್ದರೂ ಫಿಟ್ ಆಗಿರಬಹುದು. ಏಕೆಂದರೆ ಬಹಳಷ್ಟು ಜನರು ಕೊಬ್ಬಿನ ಶೇಕಡಾವಾರು ಪ್ರಮಾಣಕ್ಕೆ ಹೋಲಿಸಿದರೆ ಹೆಚ್ಚಿನ ಸ್ನಾಯುವಿನ ದ್ರವ್ಯರಾಶಿಯನ್ನು ಹೊಂದಿರುತ್ತಾರೆ. ಹೀಗಾಗಿ, ಅವರು ಹೆಚ್ಚು ತೂಕವನ್ನು ಹೊಂದಿರುತ್ತಾರೆ. ಮತ್ತು ಬಹಳಷ್ಟು ತೆಳ್ಳಗಿನ ಜನರು ಕಡಿಮೆ ಸ್ನಾಯುವಿನ ದ್ರವ್ಯರಾಶಿ ಮತ್ತು ಹೆಚ್ಚಿನ ಒಳಾಂಗಗಳ ಕೊಬ್ಬನ್ನು ಹೊಂದಿರಬಹುದು. ಇದು ಅತ್ಯಂತ ಅನಾರೋಗ್ಯಕರ ಮತ್ತು ಹೃದ್ರೋಗದ ಅಪಾಯವನ್ನು ಹೆಚ್ಚಿಸುತ್ತದೆ.
ಅ...ಕ್ಷೀ! ಚಳಿಗಾಲ ಶುರುವಾಯ್ತು.. ಕೆಮ್ಮು, ನೆಗಡಿ ಜೋರಾಯ್ತು, ಪಾರಾಗಲು ಬೆಸ್ಟ್ ಟಿಪ್ಸ್ ಇಲ್ಲಿದೆ!
ಫಿಟ್ನೆಸ್ ಮೇಲೆ ಕೇಂದ್ರೀಕರಿಸಿ
ನೀವು ಸ್ಥೂಲಕಾಯದವರಾಗಿದ್ದರೂ, ನೀವು ಎಷ್ಟು ತೂಕ ಹೊಂದಿದ್ದೀರಿ ಎನ್ನುವುದಕ್ಕಿಂತ ನೀವು ಎಷ್ಟು ಫಿಟ್ ಆಗಿದ್ದೀರಿ ಎಂಬುದು ಯಾವಾಗಲೂ ಮುಖ್ಯವಾಗಿದೆ. ಸಾಧ್ಯವಾದಷ್ಟು ಓಡಾಡಬೇಕು, ವ್ಯಾಯಾಮ ಮಾಡಬೇಕು. ಇದು ನಿಮಗೆ ಕ್ಯಾಲೊರಿಗಳನ್ನು ಸುಡಲು ಸಹಾಯ ಮಾಡುತ್ತದೆ. ಹೃದ್ರೋಗ, ಟೈಪ್ 2 ಡಯಾಬಿಟಿಸ್, ಆಸ್ಟಿಯೊಪೊರೋಸಿಸ್ ಮತ್ತು ಇತರ ಅನೇಕ ಆರೋಗ್ಯ ಸಮಸ್ಯೆಗಳನ್ನು ತಡೆಯುತ್ತದೆ.
Weight loss: ಏನೇನೋ ಸರ್ಕಸ್ ಮಾಡೋ ಬದಲು ಚೆನ್ನಾಗಿ ನಿದ್ರಿಸಿ!
ತೂಕವನ್ನು ಕಳೆದುಕೊಳ್ಳಲು ನಿಯಮಿತ ವ್ಯಾಯಾಮದ ಜೊತೆಗೆ ಆರೋಗ್ಯಕರ ಮತ್ತು ಸಮತೋಲಿತ ಆಹಾರವು ಮುಖ್ಯ. BMI ಬದಲಾವಣೆಗಳು ತೀವ್ರವಾಗಿ ಸಂಭವಿಸುವುದಿಲ್ಲ. ಕೇವಲ 5-10 ಪ್ರತಿಶತದಷ್ಟು ದೇಹದ ತೂಕದ ನಷ್ಟವು ಸುಧಾರಿತ ಕೊಲೆಸ್ಟ್ರಾಲ್, ರಕ್ತದಲ್ಲಿನ ಸಕ್ಕರೆ ಮತ್ತು ರಕ್ತದೊತ್ತಡದ ಮಟ್ಟಗಳಿಗೆ ಸಂಬಂಧಿಸಿದೆ ಎಂದು ರಾಷ್ಟ್ರೀಯ ಹೃದಯ, ಶ್ವಾಸಕೋಶ ಮತ್ತು ರಕ್ತ ಸಂಸ್ಥೆಯ ನೇತೃತ್ವದ ಅಧ್ಯಯನವು ಹೇಳುತ್ತದೆ.