Asianet Suvarna News Asianet Suvarna News

ಮೆದುಳಿನ ಆರೋಗ್ಯ ಹದಗೆಡಿಸೋ ಆಲ್ಕೋಹಾಲ್ ಸೇವಿಸೋರಿಗೆ ಕ್ಯಾನ್ಸರ್ ಅಪಾಯವೂ ಹೆಚ್ಚು!

ಆರೋಗ್ಯ ಚೆನ್ನಾಗಿದ್ರೆ ಆಯಸ್ಸು ಗಟ್ಟಿ ಇರುತ್ತೆ. ನಮ್ಮ ದೇಹದ ಪ್ರತಿಯೊಂದು ಅಂಗವೂ ನಮಗೆ ಮುಖ್ಯ. ಆದ್ರೆ ನಾವು ಮಾಡುವ ಕೆಲವೊಂದು ಕೆಲಸ ನಮಗೆ ಅರಿವಿಲ್ಲದೆ ನಮ್ಮ ಅಂಗಾಂಗವನ್ನು ಹಾನಿಗೊಳಿಸುತ್ತೆ.
 

How Overthinking Can Damage Brain Wellness roo
Author
First Published Jun 27, 2024, 2:21 PM IST

ನಮ್ಮ ಇಡೀ ದೇಹವನ್ನು ಕಂಟ್ರೋಲ್ ಮಾಡೋದು ಮೆದುಳು. ಅರೆ ಕ್ಷಣದಲ್ಲಿ ನಮ್ಮ ಕ್ರಿಯೆಗೆ ಅದು ಪ್ರತಿಕ್ರಿಯೆ ನೀಡಿರುತ್ತದೆ. ದೇಹದ ಮೇಲೆ ಸಣ್ಣ, ದೊಡ್ಡ ಗಾಯವಾದ್ರೆ ನಾವದಕ್ಕೆ ತಕ್ಷಣ ಚಿಕಿತ್ಸೆ ಪಡೆದುಕೊಳ್ತೇವೆ. ಆದ್ರೆ ಮೆದುಳಿನ ವಿಷ್ಯ ಬಂದಾಗ ಅದನ್ನು ನಿರ್ಲಕ್ಷ್ಯ ಮಾಡೋರೇ ಹೆಚ್ಚು. ತಲೆ ನೋವಿನಿಂದ ಹಿಡಿದು ಮತ್ತ್ಯಾವುದೇ ಸಮಸ್ಯೆ ಇರಲಿ ಅದು ವಿಪರೀತ ಎನ್ನುವವರೆಗೂ ಜನರು ಆಸ್ಪತ್ರೆಗೆ ಹೋಗೋದಿಲ್ಲ. ಮಾನಸಿಕ ಸಮಸ್ಯೆ ಅಂದಾಗ ಮಾರುದೂರ ಓಡುವವರೇ ಹೆಚ್ಚು. ನಮ್ಮ ಮೆದುಳು ಹಾಳಾಗಲು ದೊಡ್ಡ ಕಾರಣ ಬೇಕಾಗಿಲ್ಲ. ಚಿಕ್ಕಪುಟ್ಟ ವಿಷ್ಯಗಳು ಕೂಡ ಮೆದುಳಿನ ಆರೋಗ್ಯ ಹಾಳು ಮಾಡುತ್ತವೆ. 

ಮೆದುಳು (Brain) ಮತ್ತು ಮನೋತಜ್ಞ ಡಾಕ್ಟರ್ (Doctor) ಡೇನಿಯಲ್ ಜಿ. ಅಮೆನ್ ಮೆದುಳಿಗೆ ಸಂಬಂಧಿಸಿದಂತೆ ಮಹತ್ವದ ಮಾಹಿತಿ ನೀಡಿದ್ದಾರೆ. ಇನ್ಸ್ಟಾಗ್ರಾಮ್ (Instagram) ನಲ್ಲಿ ಅವರು ಆರೋಗ್ಯಕ್ಕೆ ಸಂಬಂಧಿಸಿದ ಅನೇಕ ಸಲಹೆಗಳನ್ನು ಫಾಲೋವರ್ಸ್ (Followers) ಗೆ ನೀಡ್ತಿರುತ್ತಾರೆ. ಈ ಬಾರಿ ಜಿ. ಅಮೆನ್, ಆರೋಗ್ಯಕ್ಕೆ ಸಂಬಂಧಿಸಿದ ಕೆಲ ಅಮೂಲ್ಯ ಸಲಹೆಯನ್ನು ನೀಡಿದ್ದಾರೆ.

BEAUTY TIPS : ಬಿಳಿ ಕೂದಲು ಮರೆಮಾಚಲು ನೀವು ಹಚ್ಚುವ ಮೆಹಂದಿ ಅಂದ್ಕೊಂಡಷ್ಟು ಒಳ್ಳೆಯದಲ್ಲ…

ಏಳು ಕ್ಯಾನ್ಸರ್ ಗೆ ಕಾರಣವಾಗುತ್ತೆ ಆಲ್ಕೋಹಾಲ್ : ಈಗಿನ ದಿನಗಳಲ್ಲಿ ಕ್ಯಾನ್ಸರ್ ಹೆಚ್ಚಾಗಿದೆ. ಡೇನಿಯಲ್ ಜಿ. ಅಮೆನ್ ಪ್ರಕಾರ, ಆಲ್ಕೋಹಾಲ್ ಏಳು ಕ್ಯಾನ್ಸರ್ ಗೆ ಕಾರಣವಾಗುತ್ತೆ. ಆಲ್ಕೋಹಾಲ್ ಸ್ತನ, ಕೊಲೊರೆಕ್ಟಲ್, ಅನ್ನನಾಳ, ಯಕೃತ್ತು, ಬಾಯಿ, ಗಂಟಲು ಮತ್ತು ಧ್ವನಿಪೆಟ್ಟಿಗೆಯ ಕ್ಯಾನ್ಸರ್‌ಗಳಿಗೆ ಸಂಬಂಧಿಸಿದೆ. ಆಲ್ಕೋಹಾಲ್ ನಿಮ್ಮ ಜೀವಕೋಶಗಳಲ್ಲಿನ ಡಿಎನ್‌ಎಗೆ ಹಾನಿ ಮಾಡುತ್ತದೆ ಮತ್ತು ದೇಹವು ಜೀವಕೋಶಗಳನ್ನು ಸರಿಪಡಿಸದಂತೆ ತಡೆಯುತ್ತದೆ ಎನ್ನುತ್ತಾರೆ. ಆರೋಗ್ಯದಿಂದ ಇರಬೇಕೆಂದ್ರೆ ಆಲ್ಕೋಹಾಲ್ ತ್ಯಜಿಸಬೇಕು.

ತೂಕ ಹೆಚ್ಚಳ : ಆಲ್ಕೋಹಾಲ್ ಹಾಗೂ ನಿಕೊಟಿನ್  ತೂಕ ಏರಿಕೆಗೂ ಕಾರಣವಾಗುತ್ತೆ ಎನ್ನುತ್ತಾರೆ ವೈದ್ಯರು. ತೂಕ ಏರಿಕೆಯಿಂದ ನಾನಾ ಸಮಸ್ಯೆ ನಮ್ಮನ್ನು ಕಾಡುತ್ತದೆ ಎಂದು ಅವರು ಎಚ್ಚರಿಕೆ ನೀಡುತ್ತಾರೆ. 

ಅತಿಯಾದ ಆಲೋಚನೆಯಿಂದ ಹದಗೆಡುವ ಮೆದುಳು : ಡೇನಿಯಲ್ ಜಿ. ಅಮೆನ್ ಪ್ರಕಾರ, ನೀವು ಮೆದುಳಿಗೆ ನೀಡುವ ಸ್ಟ್ರೆಸ್ ನಿಮ್ಮ ಆರೋಗ್ಯವನ್ನು ಹಾಳು ಮಾಡುತ್ತೆ. ನಿತ್ಯದ ಜೀವನದಲ್ಲಿ ನಮ್ಮ ಮೆದುಳು ವಿಶ್ರಾಂತಿ ಇಲ್ಲದೆ ಕೆಲಸ ಮಾಡುತ್ತಿರುತ್ತದೆ. ಪ್ರತಿಯೊಬ್ಬ ವ್ಯಕ್ತಿ ಒಂದಾದ್ಮೇಲೆ ಒಂದನ್ನು ಬಯಸುತ್ತಾನೆ. ದೇಹಕ್ಕೆ ಶಕ್ತಿ ಬೇಕು, ನೆನಪಿನ ಶಕ್ತಿ ಹೆಚ್ಚಾಗಬೇಕು, ಸಂಗಾತಿಯ ಪ್ರೀತಿ ಬೇಕು, ವೃತ್ತಿಯಲ್ಲಿ ಏಳ್ಗೆ ಬೇಕು ಹೀಗೆ ಒಂದಾದ್ಮೇಲೆ ಒಂದರಂತೆ ಎಲ್ಲವನ್ನು ಆಸೆಪಡುವ ಮನುಷ್ಯ, ಅದಕ್ಕಾಗಿ  ಹೆಚ್ಚು ಒತ್ತಡ ಹಾಕಲು ಶುರು ಮಾಡ್ತಾನೆ. ಆತನ ಕೆಲಸ ಮೆದುಳಿನ ಮೇಲೆ ಪರಿಣಾಮ ಬೀರುತ್ತದೆ. ಇದು ಮೆದುಳಿನ ಆರೋಗ್ಯವನ್ನು ಹಾಳು ಮಾಡುತ್ತದೆ ಎನ್ನುತ್ತಾರೆ ಅಮೆನ್. ಇಂಥ ಅತಿಯಾದ ಆಲೋಚನೆ ಅನವಶ್ಯಕ ಎನ್ನುವುದು ಅವರ ಅಭಿಪ್ರಾಯ.

ಗಾಂಜಾದಿಂದ ಅನಾರೋಗ್ಯ : ಗಾಂಜಾ ಕೂಡ ನಿಮ್ಮ ಮೆದುಳಿನ ಆರೋಗ್ಯವನ್ನು ಹಾಳು ಮಾಡುತ್ತದೆ. ವರ್ಲ್ಡ್ ಲಾರ್ಜೆಸ್ಟ್ ಇಮೇಜಿಂಗ್ ಸ್ಟಡಿ 62454 ಮೆದುಳಿನ ಸ್ಕ್ಯಾನ್ ವರದಿಯನ್ನು ಪರಿಶೀಲಿಸಿ ಈ ಮಾಹಿತಿ ನೀಡಿದೆ ಎನ್ನುತ್ತಾರೆ ಅವರು. 

ಮಡಿಕೇರಿ; ಹೃದಯಾಘಾತಕ್ಕೆ 24 ವರ್ಷದ ಸುಂದರ ಯುವತಿ ಬಲಿ

ಸ್ಕಿಜೋಫ್ರೇನಿಯಾ : ವೈದ್ಯರು ಸ್ಕಿಜೋಫ್ರೇನಿಯಾ ಬಗ್ಗೆಯೂ ಮಾತನಾಡಿದ್ದಾರೆ. ಸ್ಕಿಜೋಫ್ರೇನಿಯಾ ಮಾನಸಿಕ ಅಸ್ವಸ್ಥತೆಯಾಗಿದೆ. ಇದು ವ್ಯಕ್ತಿಯಲ್ಲಿನ ಮಾನಸಿಕ ಅಸ್ವಸ್ಥತೆಗಳನ್ನು ಸೂಚಿಸುತ್ತದೆ. ಈ ಅಸ್ವಸ್ಥತೆಯಿಂದ ಬಳಲುತ್ತಿರುವ ವ್ಯಕ್ತಿಯು ವಾಸ್ತವ ಅಥವಾ ಅವನ ಆಲೋಚನೆಗಳನ್ನು ವ್ಯಕ್ತಪಡಿಸಲು ಕಷ್ಟಪಡುತ್ತಾನೆ ಮತ್ತು ಸಾಮಾಜಿಕವಾಗಿ ಮತ್ತು ವೃತ್ತಿಪರವಾಗಿ ಸಮಸ್ಯೆಗಳನ್ನು ಎದುರಿಸುತ್ತಾನೆ. ಈ ಸ್ಥಿತಿಯಲ್ಲಿ ನಮ್ಮ ಮೆದುಳು 10 ವರ್ಷ ಹೆಚ್ಚು ವಯಸ್ಸಾದಂತೆ ವರ್ತಿಸಲು ಶುರು ಮಾಡುತ್ತದೆ ಎನ್ನುತ್ತಾರೆ ಅವರು. 
 

Latest Videos
Follow Us:
Download App:
  • android
  • ios