Hair Care: Anti-Dandruff ಶಾಂಪೂ ಎಷ್ಟು ಸಮಯ ಬಳಸಬಹುದು?
ಆಂಟಿ-ಡ್ಯಾಂಡ್ರಫ್ ಶಾಂಪೂ ಚಳಿಗಾಲದಲ್ಲಿ ಕೂದಲ ರಕ್ಷಣೆಗೆ ಎಲ್ಲರೂ ಬಳಸುವ ಉತ್ಪನ್ನವಾಗಿದೆ. ಇದು ತಲೆಹೊಟ್ಟು ಹೋಗಲಾಡಿಸಲು ಸಹಾಯ ಮಾಡುತ್ತದೆ. ಆದರೆ ನೀವು ಆಂಟಿ ಡ್ಯಾಂಡ್ರಫ್ ಶಾಂಪೂವನ್ನು ಎಷ್ಟು ದಿನ ಬಳಸಬಹುದು ? ಈ ಬಗ್ಗೆ ತಜ್ಞರು ಏನಂತಾರೆ ತಿಳಿಯೋಣ.
ಚಳಿಗಾಲ (Winter) ಶುರುವಾಯ್ತು ಅಂದ್ರೆ ಸಾಕು ಚರ್ಮ (Skin), ಕೂದಲಿನ ಆರೋಗ್ಯ ಹಾಳಾಗುತ್ತದೆ. ತಲೆಹೊಟ್ಟಿನ ಸಮಸ್ಯೆ ಕಾಡಲು ತೊಡಗುತ್ತದೆ. ಹೀಗಾಗಿ ಹೆಚ್ಚಿನವರು ಆ್ಯಂಟಿ ಡ್ಯಾಂಡ್ರಫ್ ಶಾಂಪೂವನ್ನು ಬಳಸಲು ಶುರು ಮಾಡುತ್ತಾರೆ. ಆದ್ರೆ ಹೀಗೆ ಆ್ಯಂಟಿ ಡ್ಯಾಂಡ್ರಫ್ ಶಾಂಪೂವನ್ನು ಎಷ್ಟು ಸಮಯ ಬಳಸಬಹುದು. ಡ್ಯಾಂಡ್ರಫ್ ಹೋಗುವ ವರೆಗೆ ಬಳಸಬಹುದು ಎಂದು ನೀವು ಅಂದುಕೊಳ್ಳಬಹುದು. ಆದರೆ ಇದು ಎಷ್ಟರಮಟ್ಟಿಗೆ ನಿಜ ಎಂಬುದನ್ನು ತಿಳಿದುಕೊಳ್ಳಬೇಕು. ತಲೆಹೊಟ್ಟಿನ ಸಮಸ್ಯೆ (Dandruff)ಯಿದ್ದರೆ ಬೇಗನೇ ಕಡಿಮೆಯಾಗುವುದಿಲ್ಲ. ಇದು ತಲೆಯಿಂದ ಹೋಗಲು ತಿಂಗಳುಗಟ್ಟಲೆ ಸಮಯವನ್ನು ತೆಗೆದುಕೊಳ್ಳುತ್ತದೆ. ಬಾಲಾಜಿ ಆಕ್ಷನ್ ಮೆಡಿಕಲ್ ಇನ್‌ಸ್ಟಿಟ್ಯೂಟ್‌ನಲ್ಲಿ ಡರ್ಮಟಾಲಜಿಯ ಹಿರಿಯ ಸಲಹೆಗಾರರಾದ ಡಾ.ವಿಜಯ್ ಸಿಂಘಾಲ್, ಆಂಟಿ-ಡ್ಯಾಂಡ್ರಫ್ ಶಾಂಪೂ ಕುರಿತು ಕೇಳಲಾದ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.
ಆ್ಯಂಟಿ ಡ್ಯಾಂಡ್ರಫ್ ಶಾಂಪೂ ಪ್ರತಿ ದಿನ ಬಳಸಿದರೆ ಕೂದಲು ಹಾಳಾಗುತ್ತದೆಯೇ ?
ಪ್ರತಿನಿತ್ಯ ತಲೆಹೊಟ್ಟು ನಿವಾರಕ ಶಾಂಪೂವನ್ನು ಬಳಸುವುದರಿಂದ ಸಮಸ್ಯೆಯನ್ನು ಉಲ್ಬಣಗೊಳಿಸಬಹುದು ಅಥವಾ ಹಾನಿಕಾರಕವಾಗಬಹುದು ಎಂದು ಹೇಳುವ ಅನೇಕ ಜನರಿದ್ದಾರೆ. ನೀವು ಪ್ರತಿದಿನ ಆಂಟಿ ಡ್ಯಾಂಡ್ರಫ್ ಶಾಂಪೂವನ್ನು ಬಳಸಬಹುದು ಎಂದು ಸಿಂಘಾಲ್ ಹಂಚಿಕೊಂಡಿದ್ದಾರೆ, ಆದರೆ ಉತ್ತಮ ಫಲಿತಾಂಶಗಳಿಗಾಗಿ ನಡುವೆ ಸೌಮ್ಯವಾದ ಶಾಂಪೂವನ್ನು ಬಳಸಲು ಸಲಹೆ ನೀಡಿದ್ದಾರೆ. ಒಣ ಕೂದಲು ಅಥವಾ ನೆತ್ತಿಯಿರುವ ಮಹಿಳೆ (Women)ಯರಿಗೆ ಸಾಮಾನ್ಯವಾಗಿ ಕಡಿಮೆ ಕೂದಲು ತೊಳೆಯುವುದು ಅಗತ್ಯವಾಗಿರುತ್ತದೆ ಎಂದು ಅವರು ಸೂಚಿಸಿದರು. ನೆತ್ತಿಯ ನೈಸರ್ಗಿಕ ತೈಲಗಳನ್ನು ಸಂರಕ್ಷಿಸಲು ಮತ್ತು ಕೂದಲನ್ನು ತೇವವಾಗಿರಿಸಲು ಅವರು ವಾರಕ್ಕೆ ಎರಡು ಬಾರಿ ಕೂದಲನ್ನು ತೊಳೆಯಬಹುದು.
Hair Health: ಶ್ಯಾಂಪೂನಲ್ಲಿರೋ ಈ ಅಂಶಗಳಿಂದಲೇ ಕೂದಲು ಉದುರೋದು
ಆಂಟಿ-ಡ್ಯಾಂಡ್ರಫ್ ಶಾಂಪೂ ಬಳಸುವ ಅವಧಿಯು ಬದಲಾಗುತ್ತದೆ
ಪ್ರತಿಯೊಬ್ಬರೂ ವಿಭಿನ್ನ ರೀತಿಯ ಕೂದಲನ್ನು ಹೊಂದಿದ್ದಾರೆ ಮತ್ತು ವಸ್ತುಗಳ ಬಗ್ಗೆ ನಮ್ಮ ಪ್ರತಿಕ್ರಿಯೆಯು ಒಂದೇ ಆಗಿರುವುದಿಲ್ಲ. ಹಾಗಾದರೆ, ಆ್ಯಂಟಿ ಡ್ಯಾಂಡ್ರಫ್ ಶಾಂಪೂವನ್ನು ನಾವು ಎಷ್ಟು ದಿನ ಬಳಸಬೇಕು? ಕೆಲವರಿಗೆ ಇದು ವ್ಯಕ್ತಿನಿಷ್ಠವಾಗಿದೆ, ಇದು ಒಂದು ಅಥವಾ ಎರಡು ವರ್ಷಗಳಲ್ಲಿ ಹಾನಿಕಾರಕವಾಗಬಹುದು, ಇತರರಿಗೆ ಇದು ಮೂರರಿಂದ ನಾಲ್ಕು ವರ್ಷಗಳನ್ನು ತೆಗೆದುಕೊಳ್ಳಬಹುದು ಎಂದು ತಜ್ಞರು ಹೇಳಿದ್ದಾರೆ.
ಆಂಟಿ ಡ್ಯಾಂಡ್ರಫ್ ಶಾಂಪೂ ಪದಾರ್ಥಗಳು ಕೂದಲಿಗೆ ಹಾನಿ ಮಾಡಬಹುದು
ತಲೆಹೊಟ್ಟು ವಿರುದ್ಧ ಹೋರಾಡಲು ಸಹಾಯ ಮಾಡುವ ಉತ್ಪನ್ನವು (Product) ಸ್ವಲ್ಪ ಸಮಯದ ನಂತರ ಚರ್ಮಕ್ಕೆ, ಕೂದಲಿಗೆ ಸಮಸ್ಯೆಯನ್ನುಂಟು ಮಾಡಬಹುದು. ಒಣ ನೆತ್ತಿಯಿಂದ ತೆಳ್ಳನೆಯ ಕೂದಲಿನವರೆಗೆ, ನಿಮ್ಮ ನೆತ್ತಿಯ ಪ್ರಕಾರಕ್ಕೆ ಸರಿಹೊಂದುವಂತೆ ಶಾಂಪೂದಲ್ಲಿ ಏನು ನೋಡಬೇಕು ಎಂಬ ಮಾಹಿತಿ ಇಲ್ಲಿದೆ.
1. ಪಾಲಿಥಿಲೀನ್ ಗ್ಲೈಕಾಲ್: ಇದು ಪೆಟ್ರೋಲಿಯಂನ ಉತ್ಪನ್ನವಾಗಿದೆ. ಇದನ್ನು ಕೂದಲಿನ ಉತ್ಪನ್ನಗಳಲ್ಲಿ ದಪ್ಪವಾಗಿಸುವ ಏಜೆಂಟ್ ಆಗಿ ಬಳಸಲಾಗುತ್ತದೆ. ಆದರೆ ಇದು ನಿಮ್ಮ ನೆತ್ತಿಯ ಮೇಲೆ ಹಾನಿಕಾರಕ ಪರಿಣಾಮವನ್ನು ಬೀರುತ್ತದೆ ಎಂದು ಸಿಂಘಾಲ್ ಎಚ್ಚರಿಸಿದ್ದಾರೆ.
ಡವ್ ಶಾಂಪೂ ಕ್ಯಾನ್ಸರ್‌ಗೆ ಕಾರಣವಾಗುತ್ತಾ ? ಉತ್ಪನ್ನ ವಾಪಾಸ್ ಪಡೆಯಲು ಯೂನಿಲಿವರ್ ಆದೇಶ
2. ಡಿಮೆಥಿಕೋನ್: ಇದು ಕೂದಲಿನ ಉತ್ಪನ್ನಗಳಿಗೆ ಸೇರಿಸಲಾದ ಒಂದು ರೀತಿಯ ಸಿಲಿಕೋನ್ ಆಗಿದೆ ಮತ್ತು ಕೂದಲಿನ ಶಾಫ್ಟ್‌ಗೆ ರಕ್ಷಣಾತ್ಮಕ ಪದರದಂತೆ ಕಾರ್ಯನಿರ್ವಹಿಸುತ್ತದೆ. ಆದರೆ ಸ್ವಲ್ಪ ಸಮಯದ ನಂತರ, ಇದು ಕೂದಲಿನ ನೆತ್ತಿಯನ್ನು ಡ್ರೈ ಮಾಡುತ್ತದೆ.
3. ರೆಟಿನೈಲ್ ಪಾಲ್ಮಿಟೇಟ್: ರೆಟಿನಾಲ್ ಮತ್ತು ಪಾಲ್ಮಿಟಿಕ್ ಆಮ್ಲದ ಎಸ್ಟರ್ ಇದರ ಘಟಕಾಂಶವಾಗಿದೆ, ಇದು ಕೆಂಪು, ತುರಿಕೆ, ಸ್ಕೇಲಿಂಗ್ ಮತ್ತು ಸಿಪ್ಪೆಸುಲಿಯುವಿಕೆಯಂತಹ ಚರ್ಮಕ್ಕೆ (Skin) ಸಂಬಂಧಿಸಿದ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಹೀಗಾಗಿ ಆಂಟಿ ಡ್ಯಾಂಡ್ರಫ್ ಶಾಂಪೂ ಬಳಸಿದ ನಂತರ ಕೂದಲಿನ ಆರೈಕೆಯನ್ನು ಮಾಡುವುದು ಮುಖ್ಯ. ಯಾಕೆಂದರೆ ಆಂಟಿ ಡ್ಯಾಂಡ್ರಫ್ ಶಾಂಪೂ ರಾಸಾಯನಿಕಗಳಿಂದ ತುಂಬಿರುತ್ತದೆ.
ಕೂದಲ ರಕ್ಷಣೆಯನ್ನು ಚೆನ್ನಾಗಿ ನೋಡಿಕೊಳ್ಳಲು ಪರಿಗಣಿಸಬೇಕಾದ ಕೆಲವು ಅಂಶಗಳು ಇಲ್ಲಿವೆ
• ಕೂದಲನ್ನು ಸರಿಯಾಗಿ ಮತ್ತು ನಿಯಮಿತವಾಗಿ ತೊಳೆಯಿರಿ.
• ರಾಸಾಯನಿಕ ಮುಕ್ತ ಶ್ಯಾಂಪೂಗಳನ್ನು ಬಳಸಿ.
• ಸರಿಯಾದ ಕೂದಲು ಕಂಡೀಷನರ್ ಬಳಸಿ.
• ಹೇರ್ ಡ್ರೈಯರ್ ಅನ್ನು ಬಳಸುವ ಬದಲು ಕೂದಲನ್ನು ನೈಸರ್ಗಿಕವಾಗಿ ಒಣಗಿಸಿ.
• ನಿಯಮಿತವಾಗಿ ನಿಮ್ಮ ಕೂದಲಿಗೆ ಎಣ್ಣೆಯನ್ನು ಅನ್ವಯಿಸಿ.
• ಕೂದಲನ್ನು ನೈಸರ್ಗಿಕವಾಗಿ ಸ್ಟೈಲ್ ಮಾಡಿ.
• ಕೂದಲನ್ನು ನಿಯಮಿತವಾಗಿ ಟ್ರಿಮ್ ಮಾಡಿ.
• ಹೆಚ್ಚು ನೀರು ಕುಡಿಯಿರಿ.
• ಆರೋಗ್ಯಕರ ಆಹಾರವನ್ನು ಸೇವಿಸಿ.