ಘಮಘಮಿಸುವ ಊಟದ ವಾಸನೆ ಬಂದರೆ ಸಾಕು.. ತಕ್ಷಣ ಹಸಿವಾಗುತ್ತದೆ. ಇಷ್ಟವಾದ ಪರಿಮಳ ಮೂಗಿಗೆ ಬಡಿದರೆ ಮನಸ್ಸಿಗೆ ಖುಷಿಯಾಗುತ್ತದೆ. ಯಾವುದಾದರೂ ಕೆಟ್ಟ ವಾಸನೆ ಬಂದರೆ ಕೈಗಳು ತಾನಾಗಿಯೇ ಮೂಗು ಮುಚ್ಚಿಕೊಳ್ಳುತ್ತವೆ. ಇಷ್ಟಕ್ಕೂ ನಮ್ಮ ಮೂಗು ಇಷ್ಟೆಲ್ಲಾ ವಾಸನೆಗಳನ್ನು ಹೇಗೆ ಗುರುತಿಸುತ್ತದೆ?
ವಾಸನೆಗಳನ್ನು ಮೂಗು ಹೇಗೆ ಪತ್ತೆ ಮಾಡುತ್ತದೆ?
ನಮ್ಮ ಸುತ್ತಮುತ್ತ ಪ್ರತಿದಿನ ನೂರಾರು, ಸಾವಿರಾರು ಬಗೆಯ ವಾಸನೆಗಳಿರುತ್ತವೆ. ಹೂವಿನ ಪರಿಮಳ, ಕಾಫಿ ಘಮ, ಮಳೆ ಬಂದಾಗ ಬರುವ ಮಣ್ಣಿನ ವಾಸನೆ, ಪೆಟ್ರೋಲ್ ವಾಸನೆ, ಹಾಗೆ ನಮಗೆ ಇಷ್ಟವಾಗದ ಕೆಲವು ವಾಸನೆಗಳೂ ಇರುತ್ತವೆ. ಕಾಫಿ ವಾಸನೆ ಬಂದರೆ ಇದು ಕಾಫಿ, ಪಕ್ಕದಲ್ಲಿರುವ ಪರ್ಫ್ಯೂಮ್ ವಾಸನೆ ಬಂದರೆ ಇದು ಪರ್ಫ್ಯೂಮ್ ಅಂತ ನಾವು ಹೇಗೆ ಗುರುತಿಸುತ್ತೇವೆ ಅನ್ನೋ ಕುತೂಹಲ ಎಲ್ಲರಿಗೂ ಇರುತ್ತದೆ. ಪ್ರತಿ ವಾಸನೆಗೂ ಮೂಗಿನಲ್ಲಿ ಒಂದೊಂದು ಸೆನ್ಸಾರ್ ಇರುತ್ತಾ? ಖಂಡಿತ ಇಲ್ಲ; ನಮ್ಮ ಮೂಗು ವಾಸನೆಗಳನ್ನು ಗುರುತಿಸುವ ರೀತಿ ಇದಕ್ಕಿಂತಲೂ ತುಂಬಾನೇ ಅದ್ಭುತವಾಗಿರುತ್ತದೆ.
ಅಸಲಿಗೆ ವಾಸನೆ ಅಂದರೆ ಏನು?
ನಮ್ಮ ಸುತ್ತಮುತ್ತಲಿರುವ ಪ್ರತಿಯೊಂದು ವಸ್ತು ಅನೇಕ ರೀತಿಯ ಮಾಲಿಕ್ಯೂಲ್ಸ್ಗಳಿಂದ ತಯಾರಾಗಿರುತ್ತದೆ. ಅವುಗಳಲ್ಲಿ ಕೆಲವು ಮಾಲಿಕ್ಯೂಲ್ಸ್ ಗಾಳಿಯಲ್ಲಿ ಸುಲಭವಾಗಿ ಸೇರಿಕೊಳ್ಳುತ್ತವೆ; ಅವನ್ನೇ ನಾವು ವಾಸನೆ ಮೂಲಕ ಗುರುತಿಸುತ್ತೇವೆ. ಉದಾಹರಣೆಗೆ, ನಿಮ್ಮ ಮುಂದೆ ಒಂದು ಕಪ್ ಕಾಫಿ ಇಟ್ಟಿದ್ದಾರೆ ಅಂತ ಅಂದುಕೊಳ್ಳಿ. ಕಾಫಿಯಿಂದ ಸಣ್ಣ ಸಣ್ಣ ವಾಸನೆ ಮಾಲಿಕ್ಯೂಲ್ಸ್ ಗಾಳಿಯಲ್ಲಿ ಸೇರುತ್ತವೆ. ನಾವು ಉಸಿರು ಎಳೆದುಕೊಂಡಾಗ ಆ ಮಾಲಿಕ್ಯೂಲ್ಸ್ ಮೂಗಿನೊಳಗೆ ಹೋಗುತ್ತವೆ, ಅಲ್ಲಿಂದ ವಾಸನೆ ಪತ್ತೆ ಹಚ್ಚುವ ಪ್ರಕ್ರಿಯೆ ಶುರುವಾಗುತ್ತದೆ.
ಮೂಗಿನೊಳಗೆ ನಡೆಯುವ ಪ್ರಕ್ರಿಯೆ - ಕಾಂಬಿನೇಷನ್ ಕೋಡ್
ಹೊರಗಡೆ ಕಾಣಿಸುವುದು ನಮ್ಮ ಮೂಗಿನ ಒಂದು ಸಣ್ಣ ಭಾಗ ಮಾತ್ರ. ಒಳಗೆ ಹೋದರೆ 'ಆಲ್ ಫ್ಯಾಕ್ಟರಿ ಎಪಿಥೀಲಿಯಂ' ಅನ್ನೋ ವಿಶೇಷ ಜಾಗ ಇರುತ್ತದೆ. ಇಲ್ಲಿ ದೊಡ್ಡ ಸಂಖ್ಯೆಯಲ್ಲಿ 'ಆಲ್ ಫ್ಯಾಕ್ಟರಿ ಸೆನ್ಸರಿ ನ್ಯೂರಾನ್ಸ್' ಅನ್ನೋ ವಾಸನೆ ಗುರುತಿಸುವ ನರಕೋಶಗಳಿರುತ್ತವೆ. ಇವುಗಳ ಮೇಲೆ 'ಆಲ್ ಫ್ಯಾಕ್ಟರಿ ರಿಸೆಪ್ಟರ್ಸ್' ಅನ್ನೋ ವಿಶೇಷ ಪ್ರೋಟೀನ್ಗಳಿರುತ್ತವೆ; ಇವೇ ವಾಸನೆ ಮಾಲಿಕ್ಯೂಲ್ಸ್ಗಳನ್ನು ಗುರುತಿಸುವ ಪ್ರಮುಖ ಸೆನ್ಸಾರ್ಗಳು.
ಆದರೆ ಇಲ್ಲೊಂದು ಟ್ವಿಸ್ಟ್ ಇದೆ. ನಮ್ಮ ಹತ್ತಿರ ನೂರಾರು ರೀತಿಯ ಆಲ್ ಫ್ಯಾಕ್ಟರಿ ರಿಸೆಪ್ಟರ್ಸ್ ಇದ್ದರೂ, ಪ್ರತಿ ವಾಸನೆಗೂ ಒಂದೇ ರಿಸೆಪ್ಟರ್ ಇರುವುದಿಲ್ಲ. ಒಂದು ರಿಸೆಪ್ಟರ್ ಅನೇಕ ರೀತಿಯ ಮಾಲಿಕ್ಯೂಲ್ಸ್ಗಳಿಗೆ ಸ್ಪಂದಿಸಬಲ್ಲದು. ಹಾಗೆಯೇ ಒಂದು ವಾಸನೆ ಮಾಲಿಕ್ಯೂಲ್ ಕೂಡ ಒಂದಕ್ಕಿಂತ ಹೆಚ್ಚು ರಿಸೆಪ್ಟರ್ಸ್ ಅನ್ನು ಆಕ್ಟಿವೇಟ್ ಮಾಡಬಲ್ಲದು. ಅಂದರೆ ಇದು 'ಒಂದು ವಾಸನೆ - ಒಂದು ಸೆನ್ಸಾರ್' ಲೆಕ್ಕಾಚಾರ ಅಲ್ಲ, ಇದೊಂದು ರೀತಿಯ ಕಾಂಬಿನೇಷನ್ ಕೋಡ್.
ಈ ರೀತಿ ಬೇರೆ ಬೇರೆ ಕಾಂಬಿನೇಷನ್ಗಳನ್ನು ಮೂಗು ಗುರುತಿಸಿ, ಆ ಮಾಹಿತಿಯನ್ನು ಮೆದುಳಿಗೆ ಕಳುಹಿಸುತ್ತದೆ. ನಮ್ಮ ಮೂಗು ಪ್ರತಿ ವಾಸನೆಗೂ ಒಂದು ಹೆಸರನ್ನು ನೆನಪಿಟ್ಟುಕೊಳ್ಳುವುದಿಲ್ಲ; ಬದಲಿಗೆ ಸೃಷ್ಟಿಯಾದ ಸಿಗ್ನಲ್ ಪ್ಯಾಟರ್ನ್ ಅನ್ನು ಗುರುತಿಸುತ್ತದೆ. ಇದು ಒಂದು ಪಾಸ್ವರ್ಡ್ ಇದ್ದ ಹಾಗೆ—ನಂಬರ್ ಕಾಂಬಿನೇಷನ್ ಬದಲಾದರೆ ಪಾಸ್ವರ್ಡ್ ಬದಲಾದಂತೆ, ರಿಸೆಪ್ಟರ್ಸ್ ಆಕ್ಟಿವೇಟ್ ಆಗುವ ಪ್ಯಾಟರ್ನ್ ಬದಲಾದರೆ ನಮಗೆ ಅನಿಸುವ ವಾಸನೆ ಕೂಡ ಬದಲಾಗುತ್ತದೆ.
ವಾಸನೆಯಿಂದ ಹಳೆಯ ನೆನಪುಗಳು ಮರುಕಳಿಸುತ್ತವಾ?
ಕೆಲವೊಮ್ಮೆ ವಾಸನೆಯ ಜೊತೆಗೆ ಆ ಸಮಯದಲ್ಲಿ ನಡೆದ ಘಟನೆಗಳು, ಮೆದುಳು ಕಲಿತ ಮಾಹಿತಿಯೂ ಸಹಾಯಕ್ಕೆ ಬರುತ್ತದೆ. ಉದಾಹರಣೆಗೆ ಚಿಕ್ಕ ವಯಸ್ಸಿನಲ್ಲಿ ಮನೆಯ ಹತ್ತಿರ ಇದ್ದ ಗುಲಾಬಿ ತೋಟದ ವಾಸನೆ ನಿಮಗೆ ನೆನಪಿರಬಹುದು. ವರ್ಷಗಳ ನಂತರ ಅದೇ ವಾಸನೆ ಬಂದರೆ, ಆ ಹಳೆಯ ನೆನಪು ಒಂದೇ ಸಮನೆ ಕಣ್ಣ ಮುಂದೆ ಬರಬಹುದು. ವಾಸನೆಯನ್ನು ಪ್ರೊಸೆಸ್ ಮಾಡುವ ಮೆದುಳಿನ ಭಾಗಗಳಿಗೆ ಮೆಮೊರಿ, ಎಮೋಷನ್ಸ್, ಆಗಿನ ಘಟನೆಗಳು, ಮಾತುಗಳಿಗೆ ಸಂಬಂಧಿಸಿದ ಭಾಗಗಳ ಜೊತೆ ಸ್ಟ್ರಾಂಗ್ ಕನೆಕ್ಷನ್ ಏರ್ಪಟ್ಟಿರುತ್ತದೆ. ಇವುಗಳನ್ನು ಪರ್ಮನೆಂಟ್ ಆಗಿ ಸ್ಟೋರ್ ಮಾಡುವ ಶಕ್ತಿ ನಮ್ಮ ಬ್ರೈನ್ ಗೆ ಇದೆ. ಅದಕ್ಕೆ ಒಂದು ಸಣ್ಣ ವಾಸನೆ ವರ್ಷಗಳ ಹಿಂದಿನ ನೆನಪನ್ನು ಮತ್ತೆ ತರಬಲ್ಲದು.
ಸ್ವಲ್ಪ ಹೊತ್ತಿನಲ್ಲೇ ವಾಸನೆ ಯಾಕೆ ಕಡಿಮೆಯಾಗುತ್ತದೆ?
ಒಂದೇ ವಾಸನೆಯನ್ನು ಸ್ವಲ್ಪ ಹೊತ್ತು ಕಂಟಿನ್ಯೂಯಸ್ ಆಗಿ ಮೂಸುತ್ತಿದ್ದರೆ, ಅದು ನಮಗೆ ಅಷ್ಟಾಗಿ ಗೊತ್ತಾಗುವುದಿಲ್ಲ. ಇದನ್ನೇ ಆಲ್ ಫ್ಯಾಕ್ಟರಿ ಅಡಾಪ್ಟೇಶನ್ ಅನ್ನುತ್ತಾರೆ. ಒಂದು ರೂಮ್ ಒಳಗೆ ಹೋದಾಗ ಜೋರಾಗಿ ಅನಿಸುವ ವಾಸನೆ, ಸ್ವಲ್ಪ ಹೊತ್ತಿನ ನಂತರ ಅಷ್ಟೇನೂ ಗೊತ್ತಾಗುವುದಿಲ್ಲ. ವಾಸನೆ ಹೋಯಿತು ಅಂತಲ್ಲ, ನಮ್ಮ ಸೆನ್ಸರಿ ಸಿಸ್ಟಮ್ ಆ ವಾಸನೆಗೆ ಸ್ವಲ್ಪ ಮಟ್ಟಿಗೆ ಅಡ್ಜಸ್ಟ್ ಆಗಿರುತ್ತದೆ. ಹಾಗಾಗಿ ಆ ರೂಮಿನಲ್ಲಿ ಬಹಳ ಹೊತ್ತು ಇದ್ದವರಿಗೆ ವಾಸನೆ ಗೊತ್ತಾಗದಿದ್ದರೂ, ಹೊರಗಿನಿಂದ ಹೊಸದಾಗಿ ಬಂದವರಿಗೆ ತಕ್ಷಣ ಗೊತ್ತಾಗುತ್ತದೆ.
ಮೂಗು ಬ್ಲಾಕ್ ಆದರೆ ಊಟದ ರುಚಿ ಯಾಕೆ ಗೊತ್ತಾಗಲ್ಲ?
ನಮ್ಮ ನಾಲಿಗೆ ಸಿಹಿ, ಉಪ್ಪು, ಹುಳಿ, ಕಹಿ ಮುಂತಾದ ಬೇಸಿಕ್ ರುಚಿಗಳನ್ನು ಗುರುತಿಸುತ್ತದೆ. ಆದರೆ ನಾವು ಸವಿಯುವ 'ಫ್ಲೇವರ್' ನಲ್ಲಿ ವಾಸನೆ ಕೂಡ ದೊಡ್ಡ ಪಾತ್ರ ವಹಿಸುತ್ತದೆ. ಊಟ ಅಗಿಯುವಾಗ ಬಿಡುಗಡೆಯಾಗುವ ವೊಲಟೈಲ್ ಮಾಲಿಕ್ಯೂಲ್ಸ್ ಮೂಗಿನ ಹಿಂಭಾಗವನ್ನು ತಲುಪುತ್ತವೆ; ಇದನ್ನೇ ರೆಟ್ರೋನೇಸಲ್ ಓಲ್ಫ್ಯಾಕ್ಷನ್ ಅನ್ನುತ್ತಾರೆ. ಶೀತದಿಂದ ಮೂಗು ಬ್ಲಾಕ್ ಆದರೆ ರುಚಿ ಸಂಪೂರ್ಣವಾಗಿ ಹೋಗುವುದಿಲ್ಲ, ಆದರೆ ಫ್ಲೇವರ್ ನ ವಾಸನೆ ಭಾಗ ಕಡಿಮೆಯಾಗುವುದರಿಂದ ಊಟದ ರುಚಿ ಅಷ್ಟು ಗೊತ್ತಾಗುವುದಿಲ್ಲ. ಒಟ್ಟಿನಲ್ಲಿ ನಮ್ಮ ಮೂಗು ಕೇವಲ ವಾಸನೆ ಹಿಡಿಯುವ ಅಂಗ ಮಾತ್ರ ಅಲ್ಲ. ಗಾಳಿಯಲ್ಲಿನ ಮಾಲಿಕ್ಯೂಲ್ಸ್ಗಳನ್ನು ಗುರುತಿಸಿ, ರಿಸೆಪ್ಟರ್ಸ್ ಮೂಲಕ ಪರೀಕ್ಷಿಸಿ, ನರಗಳ ಸಿಗ್ನಲ್ಸ್ ಆಗಿ ಬದಲಾಯಿಸಿ, ಮೆದುಳಿಗೆ ಕಳುಹಿಸಿ ಒಂದು ಅನುಭವವಾಗಿ ಬದಲಾಯಿಸುವ ಅದ್ಭುತವಾದ ಕೆಮಿಕಲ್ ಸೆನ್ಸಿಂಗ್ ಸಿಸ್ಟಮ್.
















