Asianet Suvarna News Asianet Suvarna News

ಬೇರೆಯವರ ಬ್ರಷ್ ಬಳಸಿದರೆ ಏನೇನು ರೋಗ ಬರಬಹುದು ಐಡಿಯಾ ಇದೆಯಾ?

ನಮ್ಮ ಆರೋಗ್ಯ ನಮ್ಮ ಸ್ವಚ್ಛತೆಯನ್ನು ಅವಲಂಬಿಸಿದೆ. ಏನೂ ಆಗಲ್ಲ ಎನ್ನುವ ಕಾರಣ ಹೇಳ್ತಾ ಬ್ರೆಷ್, ಬಟ್ಟೆ, ಆಹಾರ ಎಲ್ಲವನ್ನೂ ಶೇರ್ ಮಾಡಿದ್ರೆ ಅದು ನಿಮ್ಮ ಆರೋಗ್ಯ ಹಾಳು ಮಾಡುತ್ತೆ. ಕೆಲವೊಂದು ರೋಗಕ್ಕೆ ನಿಮ್ಮ ಈ ಕೆಟ್ಟ ಹವ್ಯಾಸವೇ ಕಾರಣ.
 

How Do You Know If You Have Meningitis roo
Author
First Published Oct 6, 2023, 4:32 PM IST

ಮೆನಿಂಜೈಟಿಸ್ ಮೆದುಳಿನ ಮೇಲೆ ಪರಿಣಾಮ ಬೀರುವ ರೋಗ. ಮೆನಿಂಜೈಟಿಸ್ ಎಂದರೆ, ಮೆದುಳು ಮತ್ತು ಬೆನ್ನುಹುರಿಯ ಸುತ್ತಲಿನ ದ್ರವ ಮತ್ತು ಪೊರೆಗಳ ಸೋಂಕು ಮತ್ತು ಉರಿಯೂತವಾಗಿದೆ. ಈ ಪೊರೆಗಳನ್ನು ಮೆನಿಂಜಸ್ ಎಂದೂ ಕರೆಯಲಾಗುತ್ತದೆ. ಮೆನಿಂಜೈಟಿಸ್‌ನಿಂದ ಉಂಟಾಗುವ ಉರಿಯೂತವು ಸಾಮಾನ್ಯವಾಗಿ ತಲೆನೋವು, ಜ್ವರ ಮತ್ತು ಕುತ್ತಿಗೆ ಭಾಗ ಗಟ್ಟಿಯಾಗುವಂತಹ ರೋಗಲಕ್ಷಣವನ್ನು ಹೊಂದಿರುತ್ತದೆ. ಮೆನಿಂಜೈಟಿಸ್ ರೋಗಕ್ಕೆ ಕಾರಣವೇನು, ಅದ್ರ ರಕ್ಷಣೆ ಹೇಗೆ ಎಂಬ ಮಾಹಿತಿ ಇಲ್ಲಿದೆ.

ಮೆನಿಂಜೈಟಿಸ್ (Meningitis) ವಿಧ : 

ಬ್ಯಾಕ್ಟೀರಿಯಾ (Bacteria) ಮೆನಿಂಜೈಟಿಸ್ : ಬ್ಯಾಕ್ಟೀರಿಯಾವು ರಕ್ತ ಪ್ರವಾಹಕ್ಕೆ ಪ್ರವೇಶಿಸಿದಾಗ ಮತ್ತು ಮೆದುಳು ಮತ್ತು ಬೆನ್ನುಹುರಿಗೆ ಪ್ರವೇಶಿಸಿದಾಗ ಬ್ಯಾಕ್ಟೀರಿಯಾದ ಮೆನಿಂಜೈಟಿಸ್ ಉಂಟಾಗುತ್ತದೆ. ಇದು ಬ್ಯಾಕ್ಟೀರಿಯಾದ ಸೈನಸ್ ಮತ್ತು ನ್ಯುಮೋನಿಯಾದಿಂದ ಉಂಟಾಗಬಹುದು.

ಮಿಲ್ಕ್ ಟೀ ಕುಡಿಯೋದು ಬಿಡೋಕೆ ಆಗ್ತಿಲ್ವಾ? ಅದೂ ಚಟ ಸ್ವಾಮಿ

ದೀರ್ಘಕಾಲದ ಮೆನಿಂಜೈಟಿಸ್ :  ಶಿಲೀಂಧ್ರಗಳು ಮತ್ತು ಮೈಕೋಬ್ಯಾಕ್ಟೀರಿಯಂ ಕ್ಷಯರೋಗದಂತಹ ನಿಧಾನವಾಗಿ ಬೆಳೆಯುವ ಜೀವಿಗಳಿಂದ ಉಂಟಾಗುತ್ತದೆ. ಇವು ಮೆದುಳಿನ ಸುತ್ತಲಿನ ಪೊರೆಗಳು ಮತ್ತು ದ್ರವದ ಮೇಲೆ ದಾಳಿ ಮಾಡುತ್ತವೆ. ದೀರ್ಘಕಾಲದ ಮೆನಿಂಜೈಟಿಸ್ ಎರಡು ವಾರಗಳು ಅಥವಾ ಅದಕ್ಕಿಂತ ಹೆಚ್ಚು ಕಾಲ ಬೆಳೆಯುತ್ತದೆ.  ಇದು ನಿಮ್ಮ ಮೆದುಳಿಗೆ ತಲುಪಬಹುದಾದ ಇನ್ಫ್ಲುಯೆನ್ಸ ವೈರಸ್‌ನಿಂದ ಕೂಡ ಉಂಟಾಗುತ್ತದೆ.

ಮೆನಿಂಜೈಟಿಸ್ ಗೆ ಇತರ ಕಾರಣ : ತಾಯಿಯ ಗರ್ಭದಲ್ಲಿಯೇ ಮಗುವಿಗೆ ಈ ರೋಗ ಶುರುವಾಗಬಹುದು. ಹರ್ಪಿಸ್ ಸಿಂಪ್ಲೆಕ್ಸ್ ವೈರಸ್, ಎಚ್ಐವಿ, ಮಂಪ್ಸ್ ವೈರಸ್, ವೆಸ್ಟ್ ನೈಲ್ ವೈರಸ್ ಮತ್ತು ಇತರ ವೈರಸ್ ಗಳಿಂದ ಕೂಡ ಉಂಟಾಗುತ್ತದೆ.

ನಡೀತಾ ಇದ್ರೆ ಅಲ್ಲೇ ಪಾರ್ಶ್ವವಾಯು..! 100ಕ್ಕೂ ಅಧಿಕ ಬಾಲಕಿಯರಲ್ಲಿ ವಿಚಿತ್ರ ಕಾಯಿಲೆ ಕಂಡ ಬೆನ್ನಲ್ಲೇ ಕೀನ್ಯಾ ಶಾಲೆ

ಮೆನಿಂಜೈಟಿಸ್ ಲಕ್ಷಣಗಳು : 

ಜ್ವರ: ಅಧಿಕ ಉಷ್ಣತೆಯು ಮೆನಿಂಜೈಟಿಸ್‌ನ ಮೊದಲ ಲಕ್ಷಣಗಳಲ್ಲಿ ಒಂದಾಗಿದೆ.

ತೀವ್ರ ತಲೆನೋವು: ಇದು ಸಾಮಾನ್ಯವಾಗಿ ಸಾಮಾನ್ಯ ತಲೆನೋವಿಗಿಂತ ಭಿನ್ನವಾಗಿರುತ್ತದೆ ಮತ್ತು ನಿರಂತರವಾಗಿರುತ್ತದೆ.

ಗಟ್ಟಿಯಾದ ಕುತ್ತಿಗೆ ಭಾಗ : ಆಗಾಗ್ಗೆ ತಲೆನೋವು ಮತ್ತು ಜ್ವರದೊಂದಿಗೆ ಗಟ್ಟಿಯಾದ ಕುತ್ತಿಗೆ, ಮೆನಿಂಜೈಟಿಸ್‌ನ ವಿಶಿಷ್ಟ ಲಕ್ಷಣವಾಗಿದೆ. 

ಬೆಳಕಿಗೆ ಸೂಕ್ಷ್ಮತೆ: ಮೆನಿಂಜೈಟಿಸ್ ಇರುವ ಅನೇಕ ಜನರು ಪ್ರಕಾಶಮಾನವಾದ ಬೆಳಕಿಗೆ ಸಂವೇದನಾಶೀಲರಾಗುತ್ತಾರೆ.

ವಾಕರಿಕೆ ಮತ್ತು ವಾಂತಿ : ಈ ರೋಗದಿಂದ ಬಳಲುವವರಿಗೆ ವಾಂತಿ ಮತ್ತು ವಾಕರಿಕೆ ಕಾಡುತ್ತದೆ.

ಗೊಂದಲ ಅಥವಾ ಏಕಾಗ್ರತೆಯ ತೊಂದರೆ: ಇದು ಮೆದುಳಿನ ಮೇಲೆ ಪರಿಣಾಮ ಬೀರುತ್ತದೆ. 

ನಿದ್ರೆ ಸಮಸ್ಯೆ : ಮೆನಿಂಜೈಟಿಸ್‌ನಿಂದಾಗಿ ವ್ಯಕ್ತಿ ನಿದ್ರೆ ಸಮಸ್ಯೆಯನ್ನು ಎದುರಿಸುತ್ತಾನೆ. ಆತನಿಗೆ ಸರಿಯಾಗಿ ನಿದ್ರೆ ಬರುವುದಿಲ್ಲ. ಮಧ್ಯರಾತ್ರಿ ನಿದ್ರೆಯಿಂದ ಎಚ್ಚರವಾಗ್ತಿರುತ್ತದೆ.

ಮೆನಿಂಜೈಟಿಸ್ ನಿಂದ ರಕ್ಷಿಸಿಕೊಳ್ಳಲು ಏನು ಮಾಡ್ಬೇಕು : ಮೆನಿಂಜೈಟಿಸ್ ನಿಮ್ಮನ್ನು ಕಾಡಬಾರದು ಎಂದಾದ್ರೆ ನೀವು ನೈರ್ಮಲ್ಯದ ಬಗ್ಗೆ ಹೆಚ್ಚು ಗಮನ ಹರಿಸಬೇಕಾಗುತ್ತದೆ.  ಕೈಗಳನ್ನು ಸ್ವಚ್ಛಗೊಳಿಸುವುದು, ಕೆಮ್ಮುವಾಗ ಮತ್ತು ಸೀನುವಾಗ ಬಾಯಿ ಮುಚ್ಚಿಕೊಳ್ಳುವುದು. ಬ್ಯಾಕ್ಟೀರಿಯಾ ಅಥವಾ ವೈರಸ್‌ಗಳು ನಿಮ್ಮ ಬಾಯಿಗೆ ಬರದಂತೆ ನೋಡಿಕೊಳ್ಳುವುದು ಮುಖ್ಯ. ಕೆಮ್ಮಿದಾಗ ಸೀನಿದಾಗ, ಚುಂಬಿಸಿದಾಗ ಅಥವಾ ತಿನ್ನುವ ಪಾತ್ರೆಗಳು, ಟೂತ್ ಬ್ರಷ್‌ಗಳು ಅಥವಾ ಸಿಗರೇಟ್‌ಗಳನ್ನು ಹಂಚಿಕೊಳ್ಳುವುದರಿಂದ ಮೆನಿಂಜೈಟಿಸ್ ಹೆಚ್ಚಾಗಬಹುದು. ಮಗು ಚಿಕ್ಕದಿರುವಾಗ್ಲೇ ನೀವು ಲಸಿಕೆ ಹಾಕಿಸುವುದು ಬಹಳ ಮುಖ್ಯವಾಗುತ್ತದೆ.

ಮೆನಿಂಜೈಟಿಸ್ ಯಾರನ್ನು ಹೆಚ್ಚಾಗಿ ಕಾಡುತ್ತದೆ? :  
ಶಿಶುಗಳು ಮತ್ತು ಚಿಕ್ಕ ಮಕ್ಕಳು: 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು, ವಿಶೇಷವಾಗಿ ಶಿಶುಗಳಲ್ಲಿ ಪ್ರತಿರಕ್ಷಣಾ ವ್ಯವಸ್ಥೆ ಕಡಿಮೆ ಇರುವ ಕಾರಣ ಈ ಅಪಾಯ ಹೆಚ್ಚು.  
ಹದಿಹರೆಯದವರು ಮತ್ತು ಯುವ ವಯಸ್ಕರು: 15 ರಿಂದ 24 ವರ್ಷ ವಯಸ್ಸಿನ ಜನರು ಸಹ ಹೆಚ್ಚಿನ ಅಪಾಯವನ್ನು ಹೊಂದಿರುತ್ತಾರೆ. ಹೆಚ್ಚು ಜನರಿರುವ ಪ್ರದೇಶದಲ್ಲಿ ವಾಸಿಸುವ ಜನರಿಗೆ ಅಪಾಯ ಹೆಚ್ಚು.  
ವೃದ್ಧರು : ಪ್ರತಿರಕ್ಷಣಾ ವ್ಯವಸ್ಥೆಯು ವಯಸ್ಸಾದಂತೆ ದುರ್ಬಲಗೊಳ್ಳುತ್ತದೆ. ಹಾಗಾಗಿ ಇವರಿಗೆ ಸೋಂಕಿನ ಅಪಾಯ ಹೆಚ್ಚು.  
ದುರ್ಬಲ ಪ್ರತಿರಕ್ಷಣಾ ವ್ಯವಸ್ಥೆ :  ಕೀಮೋಥೆರಪಿ ಸೇರಿದಂತೆ ಬೇರೆ ರೋಗದಿಂದ ಬಳಲುತ್ತಿರುವ, ಪ್ರತಿರಕ್ಷಣಾ ವ್ಯವಸ್ಥೆ ಕಡಿಮೆ ಇರುವವರುನ್ನು ಇದು ಕಾಡುತ್ತದೆ.  
 

Follow Us:
Download App:
  • android
  • ios