ನಡೀತಾ ಇದ್ರೆ ಅಲ್ಲೇ ಪಾರ್ಶ್ವವಾಯು..! 100ಕ್ಕೂ ಅಧಿಕ ಬಾಲಕಿಯರಲ್ಲಿ ವಿಚಿತ್ರ ಕಾಯಿಲೆ ಕಂಡ ಬೆನ್ನಲ್ಲೇ ಕೀನ್ಯಾ ಶಾಲೆ ಬಂದ್!
ವಿಚಿತ್ರ ಕಾಯಿಲೆ ಅಂದಾಜು 100ಕ್ಕೂ ಅಧಿಕ ಬಾಲಕಿಯರಿಗೆ ತಟ್ಟಿದ್ದರಿಂದ ಅವರು ಶಾಲೆಯಲ್ಲಿ ನಡೆದಾಡಲು ಕೂಡ ಕಷ್ಟಪಡುತ್ತಿದ್ದರು. ಇದರ ಬೆನ್ನಲ್ಲಿಯೇ ಕೀನ್ಯಾದ ಸೇಂಟ್ ಥೆರಸಾ ಎರೆಗಿ ಬಾಲಕಿಯರ ಪ್ರೌಢಶಾಲೆಯನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ.
ನೈರೋಬಿ (ಅ.5): ನಿಗೂಢವಾಗಿರುವ ಕಾಯಿಲೆಯ ಕಾರಣಕ್ಕಾಗಿ ಕೀನ್ಯಾದ ಸೇಂಟ್ ಥೆರೆಸಾ ಎರೇಗಿ ಬಾಲಕಿಯರ ಪ್ರೌಢಶಾಲೆಯುನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಅಂದಾಜು 100ಕ್ಕೂ ಅಧಿಕ ಬಾಲಕಿಯರಿಗೆ ಈ ಅನಾರೋಗ್ಯ ಕಾಣಿಸಿಕೊಂಡಿದ್ದು, ಇದರಿಂದಾಗಿ ಅವರು ಕಾಲುಗಳಿಗೆ ಪಾರ್ಶ್ವವಾಯು ಉಂಟಾಗುತ್ತದೆ. ಶಾಲೆಯಲ್ಲಿ ನಡೆದಾಡಲು ಕೂಡ ಅವರು ಕಷ್ಟಪಡುತ್ತಿರುವ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಆದರೆ, ಈ ಕಾಯಿಲೆಗೆ ನಿಖರವಾದ ಕಾರಣ ಏನು ಅನ್ನೋದು ತಿಳಿದುಬಂದಿಲ್ಲ. ಕೀನ್ಯಾ ಸರ್ಕಾರವು ಈ ವಿಷಯವನ್ನು ತನಿಖೆ ನಡೆಸುತ್ತಿದೆ ಎಂದು ಆಫ್ರಿಕಾ ನ್ಯೂಸ್ ವರದಿ ಮಾಡಿದೆ. ಅನಾರೋಗ್ಯದ ಸ್ವರೂಪ ಹಾಗೂ ಅದರ ಮೂಲದ ಬಗ್ಗೆ ಉತ್ತರ ಪಡೆಯುವ ಪಡೆಯುವ ಸಲುವಾಗಿ ಈ ವಿದ್ಯಾರ್ಥಿನಿಯರ ರಕ್ತದ ಮಾದರಿಗಳನ್ನು ಕೀನ್ಯಾ ವೈದ್ಯಕೀಯ ಸಂಶೋಧನಾ ಸಂಸ್ಥೆಗೆ (ಕೆಇಎಂಆರ್‌ಐ) ವಿಶ್ಲೇಷಣೆಗಾಗಿ ಕಳುಹಿಸಲಾಗಿದೆ ಎಂದು ವರದಿ ತಿಳಿಸಿದೆ. ಶಿಕ್ಷಣ ಇಲಾಖೆ, ಕೌಂಟಿ ಸರ್ಕಾರ ಮತ್ತು ಸಾರ್ವಜನಿಕ ಆರೋಗ್ಯ ಇಲಾಖೆಯು ಮಕ್ಕಳಿಗೆ ಸೂಕ್ತ ಚಿಕಿತ್ಸೆಯನ್ನು ನೀಡುವುದರಲ್ಲಿ ನಿರತವಾಗಿದೆ ಎಂದು ಪ್ರಾದೇಶಿಕ ಶಿಕ್ಷಣ ನಿರ್ದೇಶಕ ಜೇರೆಡ್ ಒಬಿರೋ ಹೇಳಿದ್ದಾರೆ ಎಂದು ಆಫ್ರಿಕಾ ನ್ಯೂಸ್ ತಿಳಿಸಿದೆ.
ಕೆಲವು ಮಾಧ್ಯಮ ವರದಿಗಳ ಪ್ರಕಾರ ವಿದ್ಯಾರ್ಥಿಗಳ ಪರಿಸ್ಥಿತಿ ಗಂಭೀರ ಹಂತಕ್ಕೆ ಹೋಗಿದೆ. ಪರಿಸ್ಥಿತಿಯನ್ನು ನಿಭಾಯಿಸಲು ಅಲ್ಲಿನ ಸ್ಥಳೀಯ ಸರ್ಕಾರಕ್ಕೆ ಹಾಗೂ ಶಾಲೆಗಳಿಗೆ ಸಾಧ್ಯವಾಗಿಲ್ಲ. ವಿದ್ಯಾರ್ಥಿನಿಯರು ತಮ್ಮನ್ನು ಮನೆಗೆ ಕಳಿಸಿಕೊಡಿ ಎನ್ನುವ ಬೇಡಿಕೆ ಇಟ್ಟಿದ್ದರು ಎಂದು ಹೇಳಿದೆ. ಆರಂಭದಲ್ಲಿ ಶಾಲಾ ಆಡಳಿತ ಮಂಡಳಿಯ ಮಾಹಿತಿಯ ಪ್ರಕಾರ 80 ವಿದ್ಯಾರ್ಥಿನಿಯರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಇದು ಸದ್ಯ 95ಕ್ಕೆ ಏರಿದೆ ಎಂದು ವರದಿಯಾಗಿದೆ. ಇನ್ನೂ ಕೆಲವು ವಿದ್ಯಾರ್ಥಿನಿಯರಿಗೆ ಈ ವಿಚಿತ್ರ ಅನಾರೋಗ್ಯ ಕಾಡಿದೆ.
ಸ್ಥಳೀಯ ವರದಿಗಳ ಪ್ರಕಾರ ಕೆಲವು ಪೀಡಿತ ವಿದ್ಯಾರ್ಥಿಗಳನ್ನು ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ, 30 ಕಾಕಮೆಗಾ ಲೆವನ್ ಫೈವ್ ಆಸ್ಪತ್ರೆಗಳಲ್ಲಿ, 20 ಶಿಬ್ವೆ ಲೆವಲ್ ಫೋರ್ ಆಸ್ಪತ್ರೆಯಲ್ಲಿ ಮತ್ತು 12 ಇಗುಹು ಲೆವಲ್ 4 ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿದೆ. ಆರಂಭಿಕ ಪ್ರಯೋಗಾಲಯ ಪರೀಕ್ಷೆಗಳು ಹೆಚ್ಚಿನ ಎಲೆಕ್ಟ್ರೋಲೈಟ್ ಮಟ್ಟವನ್ನು ಸೂಚಿಸಿದೆ. ಇದು ಇದರ ನಷ್ಟಕ್ಕೂ ಕಾರಣವಾಗಿರಬಹುದು ಎನ್ನಲಾಗಿದೆ.
ಇಬ್ಬಾಗವಾಗುತ್ತಿರುವ ಈ ಕಂಪನಿಯ ಜಾಹೀರಾತಿನಲ್ಲಿ ನಟಿಸಿದ್ದರು ರವೀಂದ್ರನಾಥ್ ಠಾಗೋರ್!
ಈ ನಿಗೂಢ ಅನಾರೋಗ್ಯದ ಕಾರಣವನ್ನು ನಿರ್ಧರಿಸಲಾಗದಿದ್ದರೂ, ಕೆಲವು ವರದಿಗಳು ಘಟನೆಯನ್ನು "ಸಾಮೂಹಿಕ ಹಿಸ್ಟೀರಿಯಾ" ಎಂದು ಹೇಳಿವೆ. ಕೀನ್ಯಾದ ಆರೋಗ್ಯ ಅಧಿಕಾರಿಗಳು ಅನಾರೋಗ್ಯದ ಮೂಲವನ್ನು ಅರ್ಥಮಾಡಿಕೊಳ್ಳಲು ಮತ್ತು ಅನಾರೋಗ್ಯ ಪೀಡಿತ ವಿದ್ಯಾರ್ಥಿಗಳಿಗೆ ಸೂಕ್ತವಾದ ಚಿಕಿತ್ಸಾ ಪ್ರೋಟೋಕಾಲ್ಗಳನ್ನು ಅಭಿವೃದ್ಧಿಪಡಿಸಲು ಸಕ್ರಿಯವಾಗಿ ಕೆಲಸ ಮಾಡುತ್ತಿದ್ದಾರೆ.
ಕುಟುಂಬದ ನಡುವೆ ಸೌಹಾರ್ದ ವಿಭಜನೆಗೆ ರೆಡಿಯಾಯ್ತು 1.76 ಲಕ್ಷ ಕೋಟಿ ಒಡೆತನದ ಭಾರತದ ಹೆಮ್ಮೆಯ ಕಂಪನಿ!