ಚಟ ಬಿಡದ, ಹಠ ಇರೋ ಗಂಡಸಿಗೆ ಬಂಜೆತನ ಕಾಡೋದು ಕಾಮನ್
ಮಗು (Baby) ಆಗಿಲ್ಲವೆಂದರೆ ಇವತ್ತಿಗೂ ಹೆಣ್ಣನ್ನೇ (Woman) ಬ್ಲೇಮ್ ಮಾಡುತ್ತಾರೆ. ಆದರೆ, ಗರ್ಭ ಧರಿಸಲು ಗಂಡಿಗೂ ಸೂಕ್ತ ಫಲವತ್ತತೆ (Fertility) ಇರಬೇಕು ಎಂಬುವುದು ಮಾತ್ರ ಪುರುಷ (Men)ಪ್ರಧಾನ ಸಮಾಜ ಒಪ್ಪೋಲ್ಲ. ಅಷ್ಟಕ್ಕೂ ಪುರುಷರ ಬಂಜೆತನಕ್ಕೇನು ಕಾರಣ?
ದೈಹಿಕ ಹಾಗೂ ಮಾನಸಿಕ ಸುಖ ನೀಡುವ ಸಂಭೋಗ ಗಂಡು, ಹೆಣ್ಣಿಗಿಬ್ಬರಿಗೂ ಬೇಕು. ವಂಶಾಭಿವೃದ್ಧಿಗೆ ಆರೋಗ್ಯವಾಗಿರುವ ವೀರ್ಯ (Sperm) ಪ್ರಮಾಣ ಪ್ರಮುಖ ಪಾತ್ರವಹಿಸುತ್ತದೆ. ಹೆಣ್ಣು ಮಕ್ಕಳ ತಲೆ ಬಿಸಿಗೆ ಕಾರಣವಾಗುತ್ತಿದ್ದ ಬಂಜೆತನ ಈಗ ಪುರುಷರನ್ನೂ ಬೆಂಬಿಡದೇ ಕಾಡುತ್ತಿದೆ. ಬದಲಾದ ಜೀವನಶೈಲಿಯಿಂದ (Lifestyle) ಪುರುಷರು ಬಂಜೆತನದಿಂದ ಕಾಡುವಂತೆ ಮಾಡುತ್ತಿದೆ. ಗಂಡನ ಈ ಸಮಸ್ಯಯಿಂದ ಹೆಣ್ಣು ಗರ್ಭ ಧರಿಸುವುದು ಕಷ್ಟವಾಗಿದೆ.
ವೀರ್ಯಾಣು ಸಂಖ್ಯೆ (Sperm Count) ಕುಂಠಿತದಿಂದ ಪುರುಷರು ಅನುಭವಿಸುವಂತಾಗಿದೆ. ಒಲಿಗೋಸ್ಪರ್ಮಿಯಾ ಎಂದು ಕರೆಯುವ ಕಡಿಮೆ ವೀರ್ಯದ ಸಂಖ್ಯೆಯೂ ಗರ್ಭ ಧರಿಸಲು ತಡೆಯೊಡ್ಡುತ್ತಿದೆ. ವೀರ್ಯವೇ ಇಲ್ಲವೆನ್ನುವುದನ್ನು ಅಜೋಸ್ಪೆರ್ಮಿಯಾ ಎನ್ನುತ್ತಾರೆ. ಪ್ರತಿ ಮಿಲಿಲೀಟರ್ ವೀರ್ಯಕ್ಕೆ 15 ಮಿಲಿಯನ್ ಶುಕ್ರಾಣು ಇದ್ದರೆ, ಕಡಿಮೆ ವೀರ್ಯವೆಂದೇ ಪರಿಗಣಿಸಲಾಗುತ್ತದೆ. 100 ಜೋಡಿಗಳಲ್ಲಿ 13 ದಂಪತಿಗೆ ಮಕ್ಕಳಾಗದಿರಲು ಪುರುಷರನ್ನು ಕಾಡುತ್ತಿರುವ ಈ ಸಮಸ್ಯೆಯೇ ಕಾರಣ.
Healthy Foods: ಮಲಗೋ ಮುನ್ನ ಈ ಆಹಾರ ತಿಂದ್ರೆ ಪುರುಷರ ಸಮಸ್ಯೆಗೆ ಪರಿಹಾರ
ತಿನ್ನೋ ಆಹಾರ, ಹೊತ್ತಿಗಲ್ಲದ ಹೊತ್ತಿಗೆ ಮಲಗೋದು ಸೇರಿ ಜೀವನದಲ್ಲಾಗುತ್ತಿರುವ ಹಲವು ಬದಲಾವಣೆಗಳಿಂದ ವೀರ್ಯದ ಗುಣಮಟ್ಟ (Quality of Sperm) ಕುಂಠಿತಗೊಳ್ಳುತ್ತಲೇ ಇದೆ. ಆರೋಗ್ಯ (Health) ಹಾಗೂ ಆಹಾರದ ಬಗ್ಗೆ ಹೆಚ್ಚಿನ ಗಮನ ಹರಿಸಿದರೆ ಈ ಸಮಸ್ಯೆಯನ್ನು ಸಾಕಷ್ಟು ಮಟ್ಟಿಗೆ ನಿಯಂತ್ರಿಸಬಹುದು.
ಕಾಡೋ ಪುರುಷರ ಬಂಜೆತನಕ್ಕೇನು ಕಾರಣ?
ಧೂಮಪಾನ (Smoking): ಪುರುಷರಲ್ಲಿ ಧೂಮಪಾನ ಫಲವತ್ತತೆಯನ್ನು ಕಡಿಮೆ ಮಾಡುತ್ತದೆ. ವೀರ್ಯದ ಸಂಖ್ಯೆ ಮತ್ತು ಗುಣಮಟ್ಟ, ಚಲನೆಯ ಸಾಮರ್ಥ್ಯದ ಮೇಲೂ ಈ ದುಶ್ಚಟ ಪರಿಣಾಮ ಬೀರುತ್ತದೆ. ಧೂಮಪಾನ ಮಾಡುವುದ್ರಿಂದ ವೀರ್ಯ ನಿಷ್ಕ್ರಿಯಗೊಳ್ಳಬಹುದು. ಮಕ್ಕಳು ಬೇಕಾ? ಹಾರ್ಟ್ ಅಟ್ಯಾಕ್‌ಗೂ ಕಾರಣವಾಗೋ ಈ ಚಟದಿಂದ ದೂರವಾಗಿ.
ಬೊಜ್ಜು (Obesity): ಅಮೆರಿಕದ ನಾಲ್ವರಲ್ಲಿ ಮೂರು ಪುರುಷರಿಗೆ ಅಧಿಕ ತೂಕ (Excess Weight) ಅಥವಾ ಬೊಜ್ಜಿನ (Obesity) ಸಮಸ್ಯೆ ಇದ್ದೇ ಇರುತ್ತೆ. ಒಟ್ಟು ಜನಸಂಖ್ಯೆಯ ಶೇ. 35 ರಷ್ಟು ಜನರು ಅಗತ್ಯಕ್ಕಿಂತ ಹೆಚ್ಚು ತೂಗುತ್ತಾರೆ. ಕೊಬ್ಬಿನ ಶೇಖರಣೆ ಮತ್ತು ಹೆಚ್ಚಿನ ಬಾಡಿ ಮಾಸ್ ಇಂಡೆಕ್ಸ್ (Body Mass Index)ನಿಂದ ವೀರ್ಯಾಣುಗಳ ಸಂಖ್ಯೆ ಕಡಿಮೆಯಾಗ್ತಿದೆ. ವೀರ್ಯ ಉತ್ಪಾದನೆಯನ್ನು ಪುರುಷರಲ್ಲಿರುವ ಟೆಸ್ಟೋಸ್ಟೆರಾನ್ ಕಡಿಮೆ ಮಾಡುತ್ತದೆ. ಮಕ್ಕಳನ್ನು ಬಯಸುವ ಜನರು ಮೊದಲು ತೂಕ ಇಳಿಸಬೇಕು. ತೂಕ ಇಳಿಸಿದರೆ ವೀರ್ಯದ ಸಂಖ್ಯೆ ಏರುತ್ತದೆ.
ವಿವಾಹಿತ ಪುರುಷರು ತಪ್ಪದೇ ತಿನ್ನಬೇಕಾದ ತರಕಾರಿಗಳಿವು
ಹಾಟ್ ಟಬ್-ಸನ್ ಬಾತ್ (Hot Tub Sun Bath): ಪುರುಷರು ಧರಿಸುವ ಒಳ ಉಡುಪೂ ವೀರ್ಯಾಣು ಸಂಖ್ಯೆ ಮೇಲೆ ಪರಿಣಾಮ ಬೀರುತ್ತದೆ. ಆ ಭಾಗವನ್ನು ಸದಾ ತಂಪಾಗಿಟ್ಟುಕೊಳ್ಳಬೇಕು. ಆದರೆ, ಬಿಸಿ ನೀರಿನಲ್ಲಿ ಸ್ನಾನ ಮಾಡಿದಾಗ, ಸೂರ್ಯ ಸ್ನಾನ ಮಾಡಿದಾಗ ವೀರ್ಯದ ಸಂಖ್ಯೆ ಕಡಿಮೆಯಾಗುತ್ತದೆ. ಮಗು ಬಯಿಸಿದಾಗ, ವೀರ್ಯ ಕೊರತೆ ಇದ್ದು ಆಗದಿದ್ದರೆ, ಹಾಟ್ ಟಬ್ ಬಳಸೋದು ನಿಲ್ಲಿಸೋದು ಒಳಿತು.
ಬಾಕ್ಸರ್ ಶಾರ್ಟ್ಸ್ : ಭಾರತೀಯರಲ್ಲಿ ಒಳು ಉಡುಪಿನ ಬಗ್ಗೆ ಎಲ್ಲಿಲ್ಲದ ಧೋರಣೆಯೇ ಹೆಚ್ಚು. ಆದರೆ, ಅದರ ಸ್ವಚ್ಛತೆ, ಸರಿಯಾದ ಅಳತೆ ವೀರ್ಯಾಣು ಉತ್ಪತ್ತಿ ಮೇಲೂ ಪರಿಣಾಮ ಬೀರುತ್ತೆ, ಎಂಬುವುದು ಅಧ್ಯಯನಗಳಿಂದ ಸಾಬೀತು ಆಗಿದೆ. ಬಾಕ್ಸರ್ ಶಾರ್ಟ್ಸ್ ಧರಿಸಿದ ಪುರುಷರು ಬಿಗಿಯಾದ ಬ್ರೀಫ್ಸ್ ಧರಿಸಿದವರಿಗಿಂತ ಹೆಚ್ಚಿನ ವೀರ್ಯಾಣುಗಳನ್ನು ಹೊಂದಿದ್ದರೆಂದು ಸಂಶೋಧನೆಯೊಂದು ಹೇಳಿದೆ. ತಂದೆಯಾಗಲು ಬಯಿಸಿದರೆ, ಸಡಿಲ ಒಳ ಉಡುಪು ಧರಿಸೋದು ಒಳ್ಳೆ ಪರಿಣಾಮ ಬೀರುತ್ತೆ. ವೃಷಣ ಭಾಗದ ಉಷ್ಣತೆಯು ದೇಹದ ಉಷ್ಣತೆಗಿಂತ 3 ರಿಂದ 4 ಡಿಗ್ರಿ ಕಡಿಮೆ ಇದ್ದರೆ ಆರೋಗ್ಯಕ್ಕೆ ಹಾಗೂ ವೀರ್ಯ ಸಂಖ್ಯೆ ವೃದ್ಧಿಗೆ ಒಳ್ಳೆಯದು.
ಪುರುಷರು ಈ ಆಹಾರ ಸೇವಿಸಿದ್ರೆ ವೀರ್ಯದ ಸಂಖ್ಯೆ ಕಡಿಮೆಯಾಗುತ್ತಂತೆ !
ಮಧುಮೇಹ (Diabetic): ಟೈಪ್ 2 ಮಧುಮೇಹ ಕಡಿಮೆ ಟೆಸ್ಟೋಸ್ಟೆರಾನ್ ಮಟ್ಟ ಮತ್ತು ಬಂಜೆತನಕ್ಕೆ ಕಾರಣವಾಗುತ್ತದೆ. ದಪ್ಪಗಿದ್ದರೆ ತೆಳ್ಳಗೆ ಆಗಬೇಕು. ರಕ್ತದಲ್ಲಿರುವ ಸಕ್ಕರೆ ಅಂಶವನ್ನು ಕಡಿಮೆ ಮಾಡಿಕೊಳ್ಳುವುದರಿಂದ ಆರೋಗ್ಯ ಸುಧಾರಣೆಯಾಗುತ್ತದೆ. ಅಗತ್ಯ ಡ್ರೈ ಫ್ರೂಟ್ಸ್ ಹಾಗೂ ಇತರೆ ಪೋಷಕಾಂಶಗಳುಳ್ಳ ಆಹಾರ ಸೇವನೆಯಿಂದ ವೀರ್ಯ ಸಂಖ್ಯೆ ಹೆಚ್ಚುತ್ತದೆ.
ಜೀವ ಹೋಗುವಂತಾದರೂ ಚಟ ಬಿಡೋಲ್ಲ ಅನ್ನೋ ಹಠ ಗಂಡಿಸಿಗೆ ಹೆಚ್ಚು. ಇಂಥವರಿಗೂ ವೀರ್ಯ ಕೊರತೆ ಕಾಡಬಹುದು. ಮಧ್ಯ ಸೇವನೆ ಹಾಗೂ ಡ್ರಗ್ಸ್ ದಾಸರಾಗಿದ್ದರೆ ತಿಪ್ಪರಲಾಗ ಹಾಕಿದರೂ ಮಕ್ಕಳಾಗೋಲ್ಲ. ಜೀವನಸೈಲಿ, ತಿನ್ನುವ ಆಹಾರ, ಅಗತ್ಯದಷ್ಟು ಸಮಯ ನಿದ್ರಿಸಿದರೆ ಮಾತ್ರ ಆರೋಗ್ಯ ಸುಧಾರಿಸಿ, ವೀರ್ಯ ಮಟ್ಟ ಹೆಚ್ಚುವುದರಲ್ಲಿ ಅನುಮಾನವೇ ಇಲ್ಲ. ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿ