ಪುರುಷರು ಈ ಆಹಾರ ಸೇವಿಸಿದ್ರೆ ವೀರ್ಯದ ಸಂಖ್ಯೆ ಕಡಿಮೆಯಾಗುತ್ತಂತೆ !

ಫಾಸ್ಟ್ ಫುಡ್‌ (Fastfood)ಗಳು ನಮ್ಮ ಬದುಕನ್ನೇ ಬದಲಾಯಿಸಿವೆ. ಎಂದೋ ಒಂದು ದಿನ ತಿಂದು ತೃಪ್ತಿಯಾದರೆ ಪರವಾಗಿಲ್ಲ. ಆದರೆ, ದಿನವೂ ಅವುಗಳನ್ನೇ ತಿನ್ನುತ್ತ ಬಂದರೆ ಆರೋಗ್ಯ ಹದಗೆಡೋದು ಖಂಡಿತ. ಆದ್ರೆ ನಿಮ್ಗೊಂದು ವಿಷ್ಯ ಗೊತ್ತಾ ? ಪಿಜ್ಜಾ, ಬರ್ಗರ್, ಹಾಟ್ ಡಾಗ್ ಗಳ ಸೇವನೆಯಿಂದ ಪುರುಷರಲ್ಲಿ ವೀರ್ಯದ (Sperm) ಸಂಖ್ಯೆ (Count) ಕಡಿಮೆಯಾಗುತ್ತದೆ ಹಾಗೂ ವೀರ್ಯಾಣುಗಳ ಗುಣಮಟ್ಟವೂ ಕುಸಿಯುತ್ತಂತೆ.

Male Fertility Foods To Avoid And What Foods To Eat Instead

ಬದಲಾಗುತ್ತಿರುವ ಪ್ರಪಂಚದಲ್ಲಿ ಜೀವನಶೈಲಿಯೂ (Lifestyle) ಸಾಕಷ್ಟು ಬದಲಾಗಿದೆ. 'ಎಲ್ಲವೂ ಮಾಡುವುದು ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ’ ಎಂದು ನುಡಿದರೂ ಹೊಟ್ಟೆಗೆ ಬೇಕಾದ ಸರಿಯಾದ ಆಹಾರ ಸೇವಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ, ಅನಾರೋಗ್ಯಕರ ಆಹಾರ ಪದ್ಧತಿ(Food Style) ನಮ್ಮದಾಗಿದೆ. 

ಇತ್ತೀಚಿನ ದಿನಗಳಲ್ಲಂತೂ ಬಾಹ್ಯ ಊಟ-ತಿನಿಸುಗಳ ಕಡೆಗೇ ಎಲ್ಲರಿಗೂ ಒಲವು ಹೆಚ್ಚಾಗಿದೆ. ಪ್ರತಿದಿನವೂ ಹೊರಗಿನ ಯಾವುದಾದರೂ ತಿಂಡಿ, ತಿನಿಸುಗಳನ್ನು ಸೇವಿಸುವ ಪದ್ಧತಿ ಹಲವರಿಗೆ ಇದೆ. ನಾರಿನಂಶ (Fibre) ಹೆಚ್ಚಿರುವ, ಪ್ರೊಟೀನ್, ಉತ್ತಮ ಕೊಬ್ಬು (Good Fat), ಕಾಂಪ್ಲೆಕ್ಸ್ ಕಾರ್ಬೋಹೈಡ್ರೇಟ್ ಗಳನ್ನು ಒಳಗೊಂಡಿರುವ ಆಹಾರ ಸೇವನೆ ಮಾಡಲು ತಜ್ಞರು ಸಲಹೆ ನೀಡುತ್ತಾರೆ. ಆದರೆ, ಅದನ್ನು ಪಾಲಿಸಲು ಹಲವರಿಂದ ಸಾಧ್ಯವಾಗುವುದಿಲ್ಲ. ಆದರೆ, ಪುರುಷರಿಗೆ (Male) ಹೊರಗಿನ ಕೆಲವು ತಿಂಡಿ ತಿನಿಸುಗಳು ಹೆಚ್ಚು ಪರಿಣಾಮ ಬೀರಬಲ್ಲವು.

Male Fertility : ಮಹಿಳೆಯರನ್ನು ಮಾತ್ರವಲ್ಲ ಪುರುಷರನ್ನು ಹೆಚ್ಚಾಗಿ ಕಾಡ್ತಿದೆ ಬಂಜೆತನ

• ಫಾಸ್ಟ್ ಫುಡ್ (Fast Food)
ಎಲ್ಲರಿಗೂ ಗೊತ್ತೇ ಇದೆ. ಫಾಸ್ಟ್ ಫುಡ್ ಸೇವನೆ ಆರೋಗ್ಯಕ್ಕೆ ಹಾನಿಕರವೇ ಆಗಿರುತ್ತದೆ. ಆದರೂ ಪುರುಷರ ಮೇಲೆ ಇಂತಹ ಹಲವು ಆಹಾರ ಇನ್ನಷ್ಟು ಕೆಟ್ಟ ಪರಿಣಾಮ ಬೀರುತ್ತದೆ. ಯಾವುದೇ ರೀತಿಯ ಫಾಸ್ಟ್ ಫುಡ್ ನಲ್ಲಿ ಶೇ.64ರಷ್ಟು ಕ್ಯಾಲರಿ ಕೊಬ್ಬಿನಿಂದ ಬರುತ್ತದೆ. ಇವುಗಳಲ್ಲಿ ಪ್ರೊಟೀನ್ (Protein) ಅಂಶ ಸ್ವಲ್ಪವೂ ಇರುವುದಿಲ್ಲ. ಹಾಗೂ ನಾರಿನಂಶವೂ ಅತಿ ಕಡಿಮೆ ಇರುತ್ತದೆ.

ಪಿಜ್ಜಾ, ಬರ್ಗರ್, ಹಾಟ್ ಡಾಗ್ ಗಳ ಸೇವನೆಯಿಂದ ಪುರುಷರಲ್ಲಿ ವೀರ್ಯದ (Sperm) ಸಂಖ್ಯೆ (Count) ಕಡಿಮೆಯಾಗುತ್ತದೆ ಹಾಗೂ ವೀರ್ಯಾಣುಗಳ ಗುಣಮಟ್ಟವೂ ಕುಸಿಯುತ್ತದೆ. 

• ಫ್ರೆಂಚ್ ಫ್ರೈ, ಆಲೂ ಚಿಪ್ಸ್ (French Fry, Potato Chips)
ಇದರಲ್ಲಿರುವ ಅಕ್ರಿಲಮೈಡ್ ಅಂಶದಿಂದ ಕ್ಯಾನ್ಸರ್ (Cancer) ಉಂಟಾಗುವ ಸಂಯುಕ್ತ ಪತ್ತೆಯಾಗಿದೆ. ಪಿಷ್ಟಭರಿತ ಆಹಾರಗಳಲ್ಲಿ ಅಕ್ರಿಲಮೈಡ್ (Acrylamide) ರಾಸಾಯನಿಕ ಪತ್ತೆಯಾಗಿದೆ. ಇದು ಪುರುಷರು ಮಾತ್ರವಲ್ಲ, ಯಾರ ಆರೋಗ್ಯಕ್ಕೂ ಉತ್ತಮವಲ್ಲ. ಇದರಿಂದ ನರಗಳ ದೌರ್ಬಲ್ಯ, ಮಾಂಸಖಂಡಗಳ ವೀಕ್ ನೆಸ್ (Weakness) ಉಂಟಾಗುತ್ತದೆ.

• ಟ್ರಾನ್ಸ್ ಫ್ಯಾಟ್ (Trans Fat)
ಟ್ರಾನ್ಸ್ ಫ್ಯಾಟ್ ಅಂದರೆ ಕೆಟ್ಟ ಕೊಬ್ಬು. ಇದು ಎಲ್ಲ ರೀತಿಯ ಫಾಸ್ಟ್ ಫುಡ್, ಸಂಸ್ಕರಿತ ಆಹಾರಗಳಲ್ಲಿ ಕಂಡುಬರುತ್ತದೆ. ತಜ್ಞರ ಪ್ರಕಾರ, ಕೆಟ್ಟ ಕೊಬ್ಬಿನಿಂದ ಹೃದ್ರೋಗದ ಅಪಾಯ ಹೆಚ್ಚು. 2011ರಲ್ಲಿ ಸ್ಪೇನ್ ನಲ್ಲಿ ನಡೆದ ಒಂದು ಅಧ್ಯಯನದ ಪ್ರಕಾರ ಟ್ರಾನ್ಸ್ ಫ್ಯಾಟ್ ನಿಂದ ಪುರುಷರಲ್ಲಿ ವೀರ್ಯದ ಸಂಖ್ಯೆ ಕಡಿಮೆಯಾಗುತ್ತದೆ.

Weight Loss And Fertility: ತೂಕ ಇಳಿಕೆ ಮಾಡ್ಕೊಂಡ್ರೂ ಸಂತಾನೋತ್ಪತ್ತಿಗೆ ಲಾಭವಿಲ್ಲ

• ಸಂಸ್ಕರಿತ ಮಾಂಸ (Processed Meat)
ಸಂಸ್ಕರಿತ ಮಾಂಸ ಹಾಗೂ ಇಂತಹ ಉತ್ಪನ್ನಗಳನ್ನು ದೀರ್ಘ ಕಾಲ ಇಡಲು ಅನೇಕ ರೀತಿಯ ಪ್ರಿಸರ್ವೇಟಿವ್ಸ್ ಬಳಕೆ ಮಾಡಲಾಗುತ್ತದೆ. ಸಂರಕ್ಷಕಗಳನ್ನು ಬಳಕೆ ಮಾಡಿದ ಸಂಸ್ಕರಿತ ಆಹಾರ ಅಪಾಯಕಾರಿ. ಇತ್ತೀಚೆಗೆ ನಡೆದ ಅಧ್ಯಯನದ ಪ್ರಕಾರ, ಸಂಸ್ಕರಿತ ಮಾಂಸದ ಸೇವನೆಯಿಂದ ಅನೇಕ ರೋಗಗಳು ಬರುತ್ತವೆ. ಹಾಗೂ ಪುರುಷರಲ್ಲಿ ವೀರ್ಯದ ಗುಣಮಟ್ಟ ಕುಸಿಯುತ್ತದೆ. ಈ ಅಧ್ಯಯನದಲ್ಲಿ ಚಿಕನ್ ಬಗ್ಗೆ ಏನೂ ಹೇಳಿಲ್ಲ. ಆದರೆ, ಇತರೆ ಮಾಂಸದ ಬಗ್ಗೆ ಹೇಳಲಾಗಿದೆ.

•  ಸೋಯಾ ಉತ್ಪನ್ನಗಳು (Soya Products)
ಆಕ್ಸ್ ಫರ್ಡ್ ನಿಯತಕಾಲಿಕದಲ್ಲಿ ಪ್ರಕಟವಾದ ಸಂಶೋಧನಾ ಲೇಖನ ಹೇಳುವಂತೆ ಸೋಯಾ ಉತಯ್ಪನ್ನಗಳಿಂದ ಪುರುಷರಲ್ಲಿ ಹಲವಾರು ರೀತಿಯ ಅಡ್ಡ ಪರಿಣಾಮಗಳು ಉಂಟಾಗುತ್ತವೆ. ಒಂದೊಮ್ಮೆ ಪುರುಷನೊಬ್ಬ ಮೂರು ತಿಂಗಳ ಕಾಲ ಪ್ರತಿದಿನ ಸೋಯಾ ಉತ್ಪನ್ನಗಳನ್ನು ಯಾವುದಾದರೂ ರೀತಿಯಲ್ಲಿ ಸೇವನೆ ಮಾಡಿದರೆ ಅವರ ವೀರ್ಯದ ಸಂಖ್ಯೆ ಅತೀವವಾಗಿ ಕುಸಿಯುತ್ತದೆ. ವೀರ್ಯದ ಸಂಖ್ಯೆ ಮಿಲಿಯನ್ ಗಟ್ಟಲೆ ಕಡಿಮೆಯಾಗಿ ಮಕ್ಕಳೇ ಆಗದಷ್ಟು ಪರಿಣಾಮವುಂಟಾಗುತ್ತದೆ.

ವಿಚಿತ್ರವೆಂದರೆ, ಇವುಗಳ ಸೇವನೆಯಿಂದ ಪುರುಷರಲ್ಲಿ ಈಸ್ಟ್ರೋಜೆನ್ ಹಾರ್ಮೋನ್ ಹೆಚ್ಚು ಸ್ರವಿಕೆಯಾಗುತ್ತದೆ. ಇದರಿಂದ ದೇಹದಲ್ಲಿ ಹಲವಾರು ರೀತಿಯ ಬದಲಾವಣೆ ಉಂಟಾಗುತ್ತದೆ. ಏಕೆಂದರೆ, ಇದು ಮಹಿಳೆಯರಲ್ಲಿ ಇರುವ ಹಾರ್ಮೋನ್ (Hormone).

Latest Videos
Follow Us:
Download App:
  • android
  • ios