Asianet Suvarna News Asianet Suvarna News

ಒಂದಕ್ಕಿಂತ ಹೆಚ್ಚು ಆರೋಗ್ಯ ವಿಮೆಯಿದ್ರೆ ಹೇಗೆ ಕ್ಲೈಮ್ ಮಾಡೋದು?

ಆರೋಗ್ಯ ಬಹಳ ಮುಖ್ಯ. ಆರೋಗ್ಯ ಹದಗೆಟ್ಟಾಗ ಅದ್ರ ಜೊತೆ ಆಸ್ಪತ್ರೆ ಖರ್ಚಿನ ಚಿಂತೆ ಬಹುತೇಕರನ್ನು ಕಾಡುತ್ತದೆ. ಅದೇ ಆರೋಗ್ಯ ವಿಮೆ ಹೊಂದಿದ್ರೆ ತಲೆನೋವಿಲ್ಲ. ಕೆಲವರು ಒಂದಕ್ಕಿಂತ ಹೆಚ್ಚು ಪಾಲಿಸಿ ಪಡೆದಿದ್ದರೆ ಅವರು ಏನು ಮಾಡ್ಬೇಕು ಗೊತ್ತಾ?
 

How Can I Claim For Multiple Health Insurance roo
Author
First Published Oct 26, 2023, 12:01 PM IST

ಕರೋನಾ ನಂತ್ರ ಆರೋಗ್ಯ ವಿಮೆಯ ಪ್ರಾಮುಖ್ಯತೆ ಹೆಚ್ಚಾಗಿದೆ. ಆರೋಗ್ಯ ವಿಮೆ ನಿಮ್ಮ ಆಸ್ಪತ್ರೆ ವೆಚ್ಚದ ಭಾರವನ್ನು ಕಡಿಮೆ ಮಾಡುತ್ತದೆ. ತುರ್ತು ಸಂದರ್ಭಗಳಲ್ಲಿ ಪರಿಸ್ಥಿತಿಗಳನ್ನು ನಿಭಾಯಿಸಲು ಸಹ ಇದು ಸಹಾಯ ಮಾಡುತ್ತದೆ. ಅನೇಕ ಕಂಪನಿಗಳು ಗ್ರೂಪ್ ಮೆಡಿಕಲ್ ಕವರ್ ನೀಡ್ತಿವೆ. ಇದು ನಿಮಗೆ ಬಹಳ ಅನುಕೂಲಕರವಾಗಿದೆ. ಪಾಲಿಸಿ ತೆಗೆದುಕೊಂಡ ಮೊದಲ ದಿನದಿಂದಲೇ ನೀವು ರೋಗಕ್ಕೆ ಚಿಕಿತ್ಸೆ ಪಡೆಯಬಹುದು.  ಆರೋಗ್ಯ ವಿಮೆ ಖರೀದಿ ಮಾಡುವ ಜನರಿಗೆ ಅದಕ್ಕೆ ಸಂಬಂಧಿಸಿದ ಮಾಹಿತಿಗಳು ಸರಿಯಾಗಿ ತಿಳಿದಿರಬೇಕು. ಕೆಲವರು ಕಂಪನಿಯ ಗ್ರೂಪ್ ಮೆಡಿಕಲ್ ಕವರ್ ಹಾಗೂ ವೈಯಕ್ತಿಕ ಆರೋಗ್ಯ ವಿಮೆ ಎರಡನ್ನೂ ಪಡೆದಿರುತ್ತಾರೆ. ಆಗ ಪ್ರಶ್ನೆಗಳು ಏಳುತ್ತವೆ. ಯಾವ ವಿಮೆ ಲಾಭವನ್ನು ಮೊದಲು ಪಡೆಯಬೇಕು ಹಾಗೆ ಹೇಗೆ ಒಂದನ್ನು ಮಾತ್ರ ಆಯ್ಕೆ ಮಾಡಿಕೊಳ್ಳಬೇಕು ಎಂಬೆಲ್ಲ ಪ್ರಶ್ನೆ ಕಾಡುತ್ತದೆ. ಅದಕ್ಕೆ ಉತ್ತರ ಇಲ್ಲಿದೆ.

ನಗದು ರಹಿತ (Cashless) ಅಥವಾ ಮರುಪಾವತಿಯ ಲಾಭ : ನಿಮ್ಮ ಬಳಿ ಎರಡು ಪಾಲಿಸಿಗಳಿದ್ದರೆ ನೀವು ಒಂದು ಪಾಲಿಸಿಯನ್ನು ನಗದು ರಹಿತ ಪಾಲಿಸಿ ಮಾಡಿಕೊಳ್ಳಬಹುದು. ಇನ್ನೊಂದರಲ್ಲಿ ಮರುಪಾವತಿ (Reimbursement) ಲಾಭ ಪಡೆಯಬಹುದು. ನೀವು ವಿಮಾ (Insurance) ಕಂಪನಿಯೊಂದಿಗೆ ಮರುಪಾವತಿ ಹಕ್ಕು ಸಲ್ಲಿಸುವಾಗ ಮೊದಲ ಕಂಪನಿಯಿಂದ ಕ್ಲೈಮ್ ಇತ್ಯರ್ಥ ಪತ್ರವನ್ನು ನೀಡಬೇಕಾಗುತ್ತದೆ. ಚಿಕಿತ್ಸೆಯ ಬಿಲ್ ಮೊದಲ ಪಾಲಿಸಿಯ ಮೊತ್ತವನ್ನು ಮೀರಿದಾಗ ಮಾತ್ರ ಈ ಪ್ರಕ್ರಿಯೆಯು ಕಾರ್ಯರೂಪಕ್ಕೆ ಬರುತ್ತದೆ.  ಮೊದಲ ವಿಮಾ ಕಂಪನಿಯು ಪಾಲಿಸಿ ಮಿತಿಯವರೆಗೂ ಕ್ಲೈಮ್ (Claim)  ಮಾಡುತ್ತದೆ. ಉಳಿದ ಮೊತ್ತವನ್ನು ನೀವು ಎರಡನೇ ವಿಮಾ ಕಂಪನಿಯಿಂದ ಪಡೆಯಬೇಕಾಗುತ್ತದೆ.

ಮೊದಲು ಯಾವುದನ್ನು ಬಳಸ್ಬೇಕು? : ನಿಮ್ಮ ಬಳಿ ಕಂಪನಿ ಮೆಡಿಕಲ್ ಪಾಲಿಸಿ ಹಾಗೂ ವೈಯಕ್ತಿಕ ಪಾಲಿಸಿ ಎರಡೂ ಇದ್ದಲ್ಲಿ ನೀವು ಮೊದಲು ಕಂಪನಿ ಮೆಡಿಕಲ್ ಪಾಲಿಸಿ ಬಳಕೆ ಮಾಡುವುದು ಉತ್ತಮ ಆಯ್ಕೆ. ಇದು ಹೆಚ್ಚಿನ ಕವರ್‌ಗಳನ್ನು ಹೊಂದಿರುತ್ತದೆ. ಹೆರಿಗೆ ಮತ್ತು ಪೂರ್ವ ಅಸ್ತಿತ್ವದಲ್ಲಿರುವ ರೋಗಗಳು ಇದ್ರ ಅಡಿಯಲ್ಲಿ ಬರುತ್ತವೆ. ನಿಮಗೆ ಈ ಪಾಲಿಸಿಯ ಲಾಭ ಮೊದಲ ದಿನದಿಂದಲೇ ಸಿಗುತ್ತದೆ. ನೀವು ಕಂಪನಿ ಪಾಲಿಸಿ ಬಳಕೆ ಮಾಡಿದ್ರೆ ನಿಮ್ಮ ವೈಯಕ್ತಿಕ ಪಾಲಿಸಿ ಹಾಗೆ ಉಳಿಯುತ್ತದೆ. ಅದನ್ನು ನೀವು ತುರ್ತು ಸಮಯದಲ್ಲಿ ಬಳಸಬಹುದು.

ಶೌಚಾಲಯಕ್ಕಿಂತಲೂ ನಿಮ್ಮ ವರ್ಕ್ ಡೆಸ್ಕ್ ಕೊಳಕು, ವಿಪರೀತ ಬ್ಯಾಕ್ಟಿರಿಯಾಗಳಿರುತ್ವೆ!

ದಾಖಲೆಗಳನ್ನು ಸರಿಯಾಗಿ ಪರಿಶೀಲನೆ ಮಾಡುವುದು ಮುಖ್ಯ : ನೀವು ವಿಮೆ ಕ್ಲೈಮ್ ಪಡೆಯುವ ಮೊದಲು ದಾಖಲೆಗಳನ್ನು ಸರಿಯಾಗಿ ಓದಿರಬೇಕು. ನಿಮಗೆ ಅದ್ರ ಬಗ್ಗೆ ಸರಿಯಾದ ಮಾಹಿತಿ ಇಲ್ಲದೆ ಹೋದ್ರೆ  ಕ್ಲೈಮ್ ಮಾಡಲು ಅನಗತ್ಯ ಸಮಯ ಹಿಡಿಯುತ್ತದೆ. ಪಾವತಿ ರಸೀದಿ, ವೈದ್ಯಕೀಯ ವರದಿ, ವೈದ್ಯರ ಮೊದಲ ಸಮಾಲೋಚನೆ ಪತ್ರ, ಡಿಸ್ಚಾರ್ಜ್ ಸಾರಾಂಶ, ಬ್ಯಾಂಕ್ ವಿವರ, ರದ್ದುಪಡಿಸಿದ ಚೆಕ್, ಫೋಟೋ ಐಡಿ ಫೋಟೋ ಪ್ರತಿಗಳು ಪ್ರಮುಖ ದಾಖಲೆಗಳಲ್ಲಿ ಬರುತ್ತವೆ. 

Financial Tips: ಆರ್ಥಿಕ ಸ್ವಾತಂತ್ರ್ಯ ನಿಮ್ಮದಾಗಬೇಕೆ? ಹಾಗಿದ್ರೆ ಈ ಅಭ್ಯಾಸಕ್ಕೆ ಬೈ ಹೇಳ್ಬಿಡಿ

ಆರೋಗ್ಯ ವಿಮೆ ಪ್ರಯೋಜನಗಳು : ಪ್ರತಿಯೊಬ್ಬರೂ ಆರೋಗ್ಯ ವಿಮೆ ಪಡೆಯುವ ಅಗತ್ಯ ಈಗಿದೆ. ಕೆಲ ಆರೋಗ್ಯ ವಿಮೆಯಲ್ಲಿ ನಿಯಮಿತ ತಪಾಸಣೆ, ಸ್ಕ್ರೀನಿಂಗ್ (Screening) ಒಳಗೊಂಡಿರುತ್ತದೆ. ನಿಮಗೆ ಆರಂಭದಲ್ಲಿಯೇ ರೋಗಗಳನ್ನು ಪತ್ತೆ ಮಾಡಲು ಇದು ನೆರವಾಗುತ್ತದೆ. ಇನ್ನು ಕೆಲ ಆರೋಗ್ಯ ಪಾಲಿಸಿಗಳು ಕ್ಯಾನ್ಸರ್, ಹೃದ್ರೋಗ ಸೇರಿದಂತೆ ಗಂಭೀರ ಖಾಯಿಲೆಗಳಿಗೆ ಸಹಾಯ ಮಾಡುವುದ್ರಿಂದ ನಿಮ್ಮ ಖರ್ಚು ಕಡಿಮೆ ಆಗುತ್ತದೆ. ಇನ್ನು ಕೆಲ ಆರೋಗ್ಯ ವಿಮೆಯಲ್ಲಿ ಹೆರಿಗೆಗೆ ಮುನ್ನ ಹಾಗೂ ಹೆರಿಗೆ ನಂತ್ರದ ಕವರ್ ಇರುತ್ತದೆ. ಹಾಗಾಗಿ ಮಹಿಳೆ ತನ್ನ ಮತ್ತು ಮಗುವಿನ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿವಹಿಸಬಹುದಾಗಿದೆ. 

Follow Us:
Download App:
  • android
  • ios