ಶೌಚಾಲಯಕ್ಕಿಂತಲೂ ನಿಮ್ಮ ವರ್ಕ್ ಡೆಸ್ಕ್ ಕೊಳಕು, ವಿಪರೀತ ಬ್ಯಾಕ್ಟಿರಿಯಾಗಳಿರುತ್ವೆ!
ಕೊಳಕು ಪ್ರದೇಶದಲ್ಲಿ ಮಾತ್ರ ಬ್ಯಾಕ್ಟೀರಿಯಾ ಇರುತ್ತೆ ಅಂತಾ ನಾವು ಭಾವಿಸಿದ್ರೆ ತಪ್ಪು. ಇಡೀ ದಿನ ಕೆಲಸ ಮಾಡುವ ನಮ್ಮ ಕಂಪ್ಯೂಟರ್, ಕೀಬೋರ್ಡ್ ಕೂಡ ನಮ್ಮ ಆರೋಗ್ಯ ಹಾಳು ಮಾಡುತ್ತದೆ. ಅದು ಹೇಗೆ ಅಂದ್ರಾ?
ಶೌಚಾಲಯ ಕೊಳಕು, ಶೌಚಾಲಯದ ಸೀಟ್ ಮೇಲೆ ಸಾಕಷ್ಟು ಬ್ಯಾಕ್ಟೀರಿಯಾ ಇರುತ್ತದೆ, ಅದು ಆರೋಗ್ಯ ಹಾಳು ಮಾಡುತ್ತದೆ ಎನ್ನುವ ವಿಷ್ಯ ಬಹುತೇಕ ಎಲ್ಲರಿಗೂ ತಿಳಿದಿದೆ. ಆದ್ರೂ ಶೌಚಾಲಯಕ್ಕೆ ಮೊಬೈಲ್ ತೆಗೆದುಕೊಂಡು ಹೋಗುವವರ ಸಂಖ್ಯೆ ಕಡಿಮೆ ಏನಾಗಿಲ್ಲ. ಅದೇನೇ ಇರಲಿ, ಆದ್ರೆ ಶೌಚಾಲಯ ಮಾತ್ರ ಕೊಳಕಲ್ಲ. ನಾವು ಪ್ರತಿನಿತ್ಯ ಓಡಾಡುವ ಜಾಗಗಳಲ್ಲೂ ಸಾಕಷ್ಟು ಬ್ಯಾಕ್ಟೀರಿಯಾ ಇರುತ್ತದೆ ಎಂಬುದನ್ನು ಇತ್ತೀಚಿನ ಸಂಶೋಧನೆಯೊಂದು ಹೇಳಿದೆ.
ಸಾರ್ವಜನಿಕ ಸ್ಥಳಗಳಿಗೆ ಹೋದಾಗ ನಾವು ಬಹಳ ಎಚ್ಚರಿಕೆಯಿಂದ ಇರ್ತೇವೆ. ಕೊರೊನಾ ನಂತ್ರ ಕೆಲ ವಸ್ತು (Material) ಗಳನ್ನು ಟಚ್ ಮಾಡೋದಿಲ್ಲ. ಆದ್ರೆ ಕಚೇರಿ (Office) ಮುಂತಾದ ನಮ್ಮದು ಎನ್ನುವ ಸ್ಥಳಗಳಲ್ಲಿ ಹಾಗಲ್ಲ. ಅಲ್ಲಿನ ಜಾಗ ಕ್ಲೀನ್ (Clean) ಇದೆ ಅಂತಾ ನಾವಂದುಕೊಳ್ಳೋದಲ್ಲದೆ ಅದನ್ನು ಆರಾಮವಾಗಿ ಬಳಸ್ತೇವೆ. ಆದರೆ ಅದು ನಿಜ ಅಲ್ಲ. ನಾವು ಕ್ಲೀನ್ ಆಗಿದೆ ಅಂತಾ ಅಂದುಕೊಳ್ಳೋ ಆಫೀಸಿನ ಛೇಂಬರ್, ಸೀಟ್ ಅಥವಾ ಡೆಸ್ಕ್ ಗಳು ಅನೇಕ ರೀತಿಯ ಜರ್ಮ್ಸ್ ಗಳ ಆಗರವಾಗಿದೆ. ಇದು ಶೌಚಾಲಯಗಳಿಗಿಂತಲೂ ಹೆಚ್ಚಿನ ಕೀಟಾಣುಗಳನ್ನು ಹೊಂದಿರುತ್ತದೆ ಎಂದು ತಜ್ಞರು ಹೇಳಿದ್ದಾರೆ.
ಬೆಂಗಳೂರಿಗರೇ ಹುಷಾರ್..ನಗರಕ್ಕೆ ಬರೋ ತರಕಾರಿಯಲ್ಲಿದೆ ಡೇಂಜರಸ್ ಲೋಹದ ಅಂಶ!
ಟಾಯ್ಲೆಟ್ ಗಿಂತ ಹೆಚ್ಚು ಜರ್ಮ್ಸ್ ಅನ್ನು ಹೊಂದಿರುತ್ತೆ ಆಫೀಸ್ ಡೆಸ್ಕ್ : ಕಚೇರಿಯ ಡೆಸ್ಕ್ ಗಳು ಟಾಯ್ಲೆಟ್ ಸೀಟ್ ಗಿಂತ ಸುಮಾರು 60,000 ಪಟ್ಟು ಹೆಚ್ಚು ಬ್ಯಾಕ್ಟೀರಿಯಾ ಮತ್ತು ವೈರಸ್ ಗಳನ್ನು ಹೊಂದಿರುತ್ತದೆ ಎಂದು ತಜ್ಞರು ಹೇಳಿದ್ದಾರೆ. ತಜ್ಞರು ನಡೆಸಿದ ಅಧ್ಯಯನದ ಪ್ರಕಾರ, ಕೀಬೋರ್ಡ್, ಡ್ರಾವರ್ ಗಳು, ವರ್ಕ್ ಡೆಸ್ಕ್ ಮುಂತಾದವು ಕೀಟಾಣುಗಳು ನೆಲೆಸುವ ಸ್ಥಳವಾಗಿದೆ ಎನ್ನುವುದು ತಿಳಿದುಬಂದಿದೆ. ಡೆಸ್ಕ್ ಗಳಲ್ಲಿ 30.5 ಮಿಲಿಯನ್ CFU ಸೂಕ್ಷ್ಮಾಣು ಜೀವಿ ಇರುತ್ತದೆ ಎಂಬ ಆಘಾತಕಾರಿ ಸಂಗತಿ ತಿಳಿದುಬಂದಿದೆ.
ದಿಢೀರ್ ಆಗಿ ಎದ್ದು ನಿಂತಾಗ ತಲೆ ತಿರುಗಿದಂತೆ ಆಗುತ್ತದೆಯೇ? ಕಾರಣವೇನು ಗೊತ್ತಾ?
ಕಚೇರಿಯಲ್ಲಿ ಬ್ಯಾಕ್ಟೀರಿಯಾ ಇರಲು ಕಾರಣವೇನು? : ಸಂಶೋಧಕರು ಹೇಳುವ ಪ್ರಕಾರ ಕಚೇರಿಗಳಲ್ಲಿ ಇರಿಸಲಾಗುವ ನಾನಾ ಬಗೆಯ ಗ್ಯಾಜೆಟ್ ಗಳೇ ಸೋಂಕಿನ ಮೂಲಗಳಾಗಿವೆ. ಇಂತಹ ಗ್ಯಾಜೆಟ್ ಗಳನ್ನು ಟಾಯ್ಲೆಟ್, ಆಸ್ಪತ್ರೆ ಮುಂತಾದ ಸಾರ್ವಜನಿಕ ಸ್ಥಳಗಳಿಗೆ ಕೊಂಡೊಯ್ಯುವುದರಿಂದ ಇವುಗಳು ಸೋಂಕಿನ ಮೂಲವಾಗಿ ಕಾರ್ಯನಿರ್ವಹಿಸುತ್ತವೆ ಎಂದು ಸಂಶೋಧಕರು ಹೇಳಿದ್ದಾರೆ. ಮಾರಣಾಂತಿಕ ಔಷಧ ನಿರೋಧಕ ಬ್ಯಾಕ್ಟೀರಿಯಾಗಳು ವ್ಯಾಂಕೋಮೈಸಿನ್ ನಿರೋಧಕ ಎಂಟರೊಕೊಕಸ್ ಪೆಸಿಯಮ್ ಅಥವಾ VRE ಮತ್ತು ಮೆಥಿಸಿಲಿನ್ ನಿರೋಧಕ ಸ್ಟ್ಯಾಫಿಲೋಕೊಕಸ್ ಔರೆಸ್ ಅಥವಾ MRSA ಗಳು ಕೀಬೋರ್ಡ್ ನಲ್ಲಿ 24 ಗಂಟೆಗಳ ಕಾಲ ಬದುಕಬಲ್ಲವು. ಪ್ರಾಣಾಂತಿಕವಲ್ಲದ ಸ್ಯೂಡೋಮೊನಾಸ್ ಎರುಗಿನೋಸಾ ಒಂದು ಗಂಟೆ ಮಾತ್ರ ಬದುಕಬಲ್ಲದು. ಇವುಗಳ ಕಾರಣದಿಂದಲೇ ಅನೇಕ ಮಂದಿಗೆ ತಲೆ ನೋವು ಮತ್ತು ಮೂಗು ಕಟ್ಟುವ ಸಮಸ್ಯೆ ಎದುರಾಗುತ್ತದೆ. ಇತ್ತೀಚಿನ ಮುಕ್ಕಾಲು ಭಾಗ ಕಚೇರಿಗಳು ಹವಾನಿಯಂತ್ರಿತವಾಗಿರುವುದರಿಂದ ಅಲ್ಲಿ ಹೆಚ್ಚಿನ ಪ್ರಮಾಣ ವೈರಸ್ ಗಳು ಉತ್ಪತ್ತಿಯಾಗುತ್ತವೆ. ಇದರಿಂದಲೂ ಅನೇಕ ಸೋಂಕುಗಳು ಹರಡುತ್ತದೆ.
ಕಚೇರಿಗಳಲ್ಲಿ ಜರ್ಮ್ಸ್ ಗಳಿಂದ ದೂರವಿರೋದು ಹೇಗೆ? :
ಕಚೇರಿಗಳಲ್ಲಿ ಕೆಲಸ ಮಾಡುವವರಿಗೆ ನಿಯಮಿತವಾಗಿ ಕೀ ಬೋರ್ಡ್, ಡೆಸ್ಕ್ ಮುಂತಾದವುಗಳ ಸಂಪರ್ಕದಲ್ಲಿರುವುದು ಅನಿವಾರ್ಯವಾಗಿರುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಸೂಕ್ಷ್ಮಜೀವಿಗಳು ಹರಡುವುದನ್ನು ತಡೆಗಟ್ಟಲು ಕೆಲವು ಸುಲಭ ಮಾರ್ಗಗಳನ್ನು ಅನುಸರಿಸಬೇಕು.
1. ಕಚೇರಿಗಳಲ್ಲಿ ಕೆಲಸ ಮಾಡುವವರು ನಿಯಮಿತವಾಗಿ ತಮ್ಮ ಕೈಗಳನ್ನು ತೊಳೆಯುತ್ತಿರಬೇಕು. ನಿಮ್ಮದೇ ಕೀ ಬೋರ್ಡ್ ಆಗಿದ್ರೂ, ಕೀ ಬೋರ್ಡ್ ಬಳಕೆ ಮಾಡಿದ ನಂತ್ರ ಕೈ ವಾಶ್ ಮಾಡಿ.
2.ಕೀಬೋರ್ಡ್ ಮತ್ತು ಮೌಸ್, ಡೆಸ್ಕ್, ಖುರ್ಚಿಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸಬೇಕು.
3. ಡೆಸ್ಕ್ ಗಳ ಮೇಲೆ ಆಹಾರ ಸೇವಿಸುವುದನ್ನು ನಿಲ್ಲಿಸಬೇಕು.
4. ಆಲ್ಕೋಹಾಲ್ ಆಧಾರಿತ ಹ್ಯಾಂಡ್ ರಬ್ ಗಳನ್ನು ಬಳಸಬೇಕು.