ಬೆಂಗಳೂರು, ಮಾ.03): ರೋಗಗಳು ಬರುತ್ತವೆ ಹೋಗುತ್ತವೆ. ಆದ್ರೆ, ಇದೀಗ ಕೊರೋನಾ ವೈರಸ್‌ ತೀವ್ರ ಭಯಾನಕವಾಗಿದ್ದು, ಇಡೀ ವಿಶ್ವವನ್ನೇ ಬೆಚ್ಚಿಬೀಳುವಂತೆ ಮಾಡಿದೆ.

ಸಾಮಾನ್ಯವಾಗಿ ಕೊರೋನಾ ವೈರಸ್ ಒಬ್ಬರಿಂದ ಒಬ್ಬರಿಗೆ ಹರಡುವ ರೋಗ. ಫಸ್ಟ್ ಚೀನಾದಲ್ಲಿ ಕಾಣಿಸಿಕೊಂಡಿದ್ದ ಈ ಮಹಾಮಾರಿ ಕೊರೋನಾ ಇದೀಗ ಜಗತ್ತಿನ 64 ದೇಶಗಳಿಗೆ ವ್ಯಾಪಿಸಿದೆ. 

ರಾಜ್ಯದಲ್ಲಿ ಟೆಕ್ಕಿಗೆ ಕೊರೋನಾ ವೈರಸ್ ಪತ್ತೆ; ಅಧಿಕಾರಿಗಳು ಹೈ ಅಲರ್ಟ್ 

ಇದೀಗ ಭಾರತಕ್ಕೂ ಕಾಲಿಟ್ಟಿದ್ದಲ್ಲದೇ ದುಬೈನಿಂದ ಬಂದ ಓರ್ವ ಟೆಕ್ಕಿಯಿಂದ ಕೊರೋನಾ ವೈರಸ್ ಕರ್ನಾಟಕಕ್ಕೂ ಒಕ್ಕರಿಸಿದೆ. ಇದು ಜನರಲ್ಲಿ ಆತಂಕ ಸೃಷ್ಟಿಸಿದೆ.  ಈ ಕೊರೋನಾ ವೈರಸ್‌ ವಿಶ್ವದೆಲ್ಲೆಡೆ ಹಂತ-ಹಂತವಾಗಿ ವ್ಯಾಪಕವಾಗಿ ಹರಡುತ್ತಿದ್ದು, ಸಾವಿನ ಸಂಖ್ಯೆಯೂ ಸಹ ಏರುತ್ತಿದೆ. 

ಈ ಹಿನ್ನೆಲೆಯಲ್ಲಿ ಎಲ್ಲಾ ವಿಮಾನ ನಿಲ್ದಾಣಗಳಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ.  ಅದರಲ್ಲೂ ಮಹಾಮಾರಿ ಕರ್ನಾಟಕ್ಕೂ ಪ್ರವೇಶಿಸಿದ್ದು, ದುಬೈನಿಂದ ಬೆಂಗಳೂರಿಗೆ ಬಂದಿರುವ ಟೆಕ್ಕಿಯೋರ್ವನಿಗೆ ಕೊರೋನಾ ಇರುವುದು ಪತ್ತೆಯಾಗಿದೆ. ಇದರಿಂದ ಬೆಂಗಳೂರಿನ ಜನರಲ್ಲಿ ಆತಂಕ ಸೃಷ್ಟಿಸಿದೆ. 

2 ದಿನ ಬೆಂಗ್ಳೂರಲ್ಲೇ ಇದ್ದ ಕೊರೋನಾ ಸೋಂಕಿತ ವ್ಯಕ್ತಿ..!

ಜನರು ಯಾವುದೇ ಆತಂಕಪಡುವ ಅಗತ್ಯವಿಲ್ಲ. ಆರೋಗ್ಯ ಇಲಾಖೆ ಈಗಾಗಲೇ ಅಲರ್ಟ್ ಆಗಿದ್ದು, ಮುಂಜಾಗ್ರತಾ ಕ್ರಮಗಳನ್ನ ಕೈಗೊಂಡಿದೆ. ಅಲ್ಲದೇ ಪ್ರತಿ ಜಿಲ್ಲಾಸ್ಪತ್ರೆಗಳಲ್ಲಿ ಕೊರೋನಾ ವೈರಸ್ ತಪಾಸಣಾ ಕೇಂದ್ರವನ್ನ ತೆಗೆಯಲು ಆರೋಗ್ಯ ಸಚಿವ ಶ್ರೀರಾಮುಲು ಸೂಚಿಸಿದ್ದಾರೆ. 

ವಿಶ್ವದ 58 ರಾಷ್ಟ್ರಗಳಿಗೆ ಹಬ್ಬಿದ ಕೊರೋನಾ; ಜಾಗತಿಕ ಅಪಾಯ ಗಂಭೀರ ಮಟ್ಟಕ್ಕೆ

ಇನ್ನು ನಮ್ ಹುಷಾರಲ್ಲಿ ನಾವು ಇರಬೇಕು ಅಂತಾರಲ್ಲಾ ಹಾಗೇ ಕೊರೋನಾ ವೈರಸ್ ಲಕ್ಷಣಗಳೇನು..? ಅದರಿಂದ ಮುನ್ನೆಚ್ಚರಿಕೆವಾಗಿ ಹೇಗಿರಬೇಕು..? ಎನ್ನುವುದು ತಿಳಿದುಕೊಳ್ಳುವುದು ಸೂಕ್ತ. ಹಾಗಾಗಿ ಕೊರೋನಾ ಲಕ್ಷಣಗಳು ಹಾಗೂ ಮುಂಜಾಗ್ರತಾ ಕ್ರಮಗಳು ಹೇಗಿರಬೇಕೆನ್ನುವ ಮಾಹಿತಿ ನಿಮಗಾಗಿ ಈ ಕೆಳಗಿನಂತಿದೆ ನೋಡಿ.

ಕೊರೋನಾ ಲಕ್ಷಣಗಳು
* ವೈರಸ್‌ನಿಂದಾಗಿ ತೀವ್ರ ಶೀತ , ನ್ಯುಮೋನಿಯಾ ಹಾಗೂ ಶ್ವಾಸಕೋಶದ ಸಮಸ್ಯೆ ಉಂಟಾಗುತ್ತೆ.
* ತಲೆನೋವು, ಹೊಟ್ಟೆ ನೋವು ಕೂಡಾ ಬರುತ್ತೆ...! 

ಒಬ್ಬರಿಂದ ಒಬ್ಬರಿಗೆ ಹೇಗೆ ಹರಡುತ್ತದೆ? 
 ಶೀನು ಮತ್ತು ಕೆಮ್ಮಿನ ಗಾಳಿಯಿಂದ ಹರಡುತ್ತೆ. ತುಂಬಾ ಹತ್ತಿರದ ದೈಹಿಕ ಸಂಪರ್ಕ ಅಂತಂದ್ರೆ ಸ್ಪರ್ಶ ಮತ್ತು ಹಸ್ತಲಾಘವ ಮಾಡಿದ್ರೆ ಹರಡುವ ಸಂಭವ ಇದೆ. ವೈರಸ್ ಇರುವ ವಸ್ತುವನ್ನು ಮುಟ್ಟುವುದು. ಇದರ ಬಳಿಕ ಬಾಯಿ, ಮೂಗು ಅಥವಾ ಕಣ್ಣುಗಳನ್ನು ಕೈ ತೊಳೆಯದೆ ಮುಟ್ಟಿದ್ರೂ ವೈರಸ್ ತಗಲುವು ಸಾಧ್ಯತೆಗಳಿವೆ

ವೈರಸ್ ಪತ್ತೆಯ ಬಳಿಕ ವೈದ್ಯರ ಪರೀಕ್ಷೆ ವಿವರ
* ದೈಹಿಕ ಪರೀಕ್ಷೆ ಮಾಡುವರು
* ರಕ್ತ ಪರೀಕ್ಷೆ ಮಾಡಬಹುದು.
* ಕಫ, ಗಂಟಲಿನ ಸ್ವಾಬ್ ನ ಮಾದರಿ ಮತ್ತು ಇತರ ಉಸಿರಾಟದ ಪರೀಕ್ಷೆ ಮಾಡಿಸಬಹುದು.

 ಮುನ್ನೆಚ್ಚರಿಕೆ ಕ್ರಮಗಳು....! 
* ಸೋಪ್ ಮತ್ತು ನೀರು ಹಾಕಿ 20 ಸೆಕೆಂಡು ಕಾಲ ಕೈ ತೊಳೆಯಬೇಕು
* ತೊಳೆಯದೆ ಮುಖ, ಮೂಗು ಅಥವಾ ಬಾಯಿಯನ್ನು ಮುಟ್ಟಲು ಹೋಗಬೇಡಿ.
* ಅನಾರೋಗ್ಯದಲ್ಲಿರುವ ಜನರೊಂದಿಗೆ ಹತ್ತಿರದ ಸಂಪರ್ಕವಿಟ್ಟುಕೊಳ್ಳಬೇಡಿ.
* ಪದೇ ಪದೇ ಮುಟ್ಟುತ್ತಲಿರುವ ಜಾಗವನ್ನು ಆಗಾಗ ಚೆನ್ನಾಗಿ ಸ್ವಚ್ಛ ಮಾಡಿಟ್ಟುಕೊಳ್ಳಿ.
* ಕೆಮ್ಮು ಮತ್ತು ಶೀನು ಬಂದ ವೇಳೆ ಟಿಶ್ಯೂ ಅಡ್ಡ ಹಿಡಿಯಿರಿ. ಇದರ ಬಳಿಕ ಟಿಶ್ಯೂ ಬಿಸಾಕಿ, ಕೈಗಳನ್ನು ತೊಳೆಯಿರಿ.
* ಅನಾರೋಗ್ಯವಿದ್ದರೆ ಮನೆಯಲ್ಲೇ ಉಳಿಯಿರಿ.