Asianet Suvarna News Asianet Suvarna News

ವಿಶ್ವದ 58 ರಾಷ್ಟ್ರಗಳಿಗೆ ಹಬ್ಬಿದ ಕೊರೋನಾ; ಜಾಗತಿಕ ಅಪಾಯ ಗಂಭೀರ ಮಟ್ಟಕ್ಕೆ

ವಿಶ್ವ ಆರೋಗ್ಯ ಸಂಸ್ಥೆಯು, ಕೊರೋನಾ ಸೋಂಕಿನ ಜಾಗತಿಕ ಅಪಾಯ ಅಂದಾಜಿನ ಪ್ರಮಾಣವನ್ನು ಗಂಭೀರದಿಂದ ಅತಿ ಗಂಭೀರ ಮಟ್ಟಕ್ಕೆ ಏರಿಸಿದೆ. 

Corona Virus WHO upgrades global virus spread risk to Very High
Author
Bengaluru, First Published Feb 29, 2020, 12:34 PM IST

ಜಿನೇವಾ (ಫೆ. 29): ವಿಶ್ವ ಆರೋಗ್ಯ ಸಂಸ್ಥೆಯು, ಕೊರೋನಾ ಸೋಂಕಿನ ಜಾಗತಿಕ ಅಪಾಯ ಅಂದಾಜಿನ ಪ್ರಮಾಣವನ್ನು ಗಂಭೀರದಿಂದ ಅತಿ ಗಂಭೀರ ಮಟ್ಟಕ್ಕೆ ಏರಿಸಿದೆ. ಸೋಂಕು ಜಾಗತಿಕ ಷೇರುಪೇಟೆ ಕುಸಿಯಲು ಕಾರಣವಾದ ಮತ್ತು ಸಹಾರಾ ಆಫ್ರಿಕಾ ಪ್ರದೇಶಗಳಿಗೆ ವಿಸ್ತರಣೆಯಾಗಿರುವ ಹಿನ್ನೆಲೆಯಲ್ಲಿ ಅದು ಈ ನಿರ್ಧಾರ ಕೈಗೊಂಡಿದೆ.

ದಿನೇ ದಿನೇ ಪ್ರಕರಣಗಳು ಹೊಸ ಹೊಸ ಪ್ರದೇಶಕ್ಕೆ ವಿಸ್ತರಿಸುತ್ತಿರುವ ಕಾರಣ ನಾವು ಈ ನಿರ್ಧಾರಕ್ಕೆ ಬಂದಿದ್ದೇವೆ. ಆದರೆ ಈಗಲೂ ಸೊಂಕು ನಿಯಂತ್ರಿಸುವ ಅವಕಾಶ ಇದ್ದೇ ಇದೆ ಎಂದು ಡಬ್ಲ್ಯುಎಚ್‌ಒ ಮುಖ್ಯಸ್ಥ ಟೆಡ್ರೋಸ್‌ ಹೇಳಿದ್ದಾರೆ.

Fact Check: ಹೋಳಿಗೆ ಚೀನಾ ಬಣ್ಣ ಬಳ​ಸ​ದಂತೆ ಪ್ರಕ​ಟ​ಣೆ!

ವಿಶ್ವದ 58 ರಾಷ್ಟ್ರಗಳಿಗೆ ಹಬ್ಬಿದ ಕೊರೋನಾ

ನವದೆಹಲಿ: ಚೀನಾವೊಂದರಲ್ಲೇ 2800 ಜನರನ್ನು ಬಲಿಪಡೆದಿರುವ ಕೊರೋನಾ ವೈರಸ್‌ ಇದೀಗ ಬೆಲಾರಸ್‌, ಲಿತುವೇನಿಯಾ, ನ್ಯೂಜಿಲೆಂಡ್‌, ನೈಜೀರಿಯಾ, ಮೆಕ್ಸಿಕೋ, ಅಜರ್‌ಬೈಜಾನ್‌ ಹಾಗೂ ನೆದರ್‌ಲೆಂಡ್‌ ರಾಷ್ಟ್ರಗಳ ನಾಗರಿಕರಲ್ಲೂ ಪತ್ತೆಯಾಗಿದೆ. ತನ್ಮೂಲಕ ಈ ಮಾರಣಾಂತಿಕ ಸಾಂಕ್ರಮಿಕ ರೋಗವು ವಿಶ್ವದ 6 ಖಂಡಗಳ 58 ರಾಷ್ಟ್ರಗಳಿಗೂ ವ್ಯಾಪಿಸಿದಂತಾಗಿದೆ. ವಿಶ್ವದಾದ್ಯಂತ 88,000 ಜನರಿಗೆ ಇದೀಗ ಸೋಂಕು ಹಬ್ಬಿದೆ.

ಈ ಸೋಂಕಿನಿಂದಾಗಿ ಈಗಾಗಲೇ ವೆನಿಸ್‌, ಇಟಲಿ ಸೇರಿದಂತೆ ವಿಶ್ವದ ನಾನಾ ರಾಷ್ಟ್ರಗಳಲ್ಲಿ ಪ್ರವಾಸೋದ್ಯಮ ನೆಲಕಚ್ಚಿದೆ. ಆದರೆ, ಮುಂದಿನ ದಿನಗಳಲ್ಲಿ ಕೊರೋನಾ ಆರ್ಥಿಕತೆಯ ಮೇಲೂ ಪರಿಣಾಮ ಬೀರಬಹುದು ಎಂಬ ಆತಂಕ ವ್ಯಕ್ತವಾಗಿದೆ.

ಇನ್ನು ದಕ್ಷಿಣ ಕೊರಿಯಾದಲ್ಲಿ ಶುಕ್ರವಾರ ಒಂದೇ ದಿನ 571 ಮಂದಿಯಲ್ಲಿ ಹೊಸದಾಗಿ ಈ ವೈರಸ್‌ ಪತ್ತೆಯಾಗಿದೆ. ಈ ಹಿನ್ನೆಲೆ, ಕೊರಿಯಾದಲ್ಲಿ ಕೊರೋನಾ ಪೀಡಿತರ ಸಂಖ್ಯೆ 2337ಕ್ಕೆ ಏರಿದೆ.

ವಿಶ್ವದ ಅತೀ ದೊಡ್ಡ ಜಿನೆವಾ ಮೋಟಾರು ಶೋ ಕ್ಯಾನ್ಸಲ್!

ಚೀನಾದಲ್ಲಿ ಕೊರೋನಾ ಅಟ್ಟಹಾಸ

2788- ಈವರೆಗೂ ಕೊರೋನಾಕ್ಕೆ ಬಲಿಯಾದವರ ಸಂಖ್ಯೆ

44- ಗುರುವಾರ ಒಂದೇ ದಿನ ಸಾವಿಗೀಡಾದವರು

78,824- ಸೋಂಕಿಗೆ ಸಿಲುಕಿದವರು

Follow Us:
Download App:
  • android
  • ios