Asianet Suvarna News Asianet Suvarna News

2 ದಿನ ಬೆಂಗ್ಳೂರಲ್ಲೇ ಇದ್ದ ಕೊರೋನಾ ಸೋಂಕಿತ ವ್ಯಕ್ತಿ..!

ತೆಲಂಗಾಣದಲ್ಲಿ ಕೊರೋನಾ ಸೋಂಕು ದೃಢಪಟ್ಟಿರುವ ವ್ಯಕ್ತಿಯು ದುಬೈನಿಂದ ನೇರವಾಗಿ ಬೆಂಗಳೂರಿಗೆ ಬಂದು ಎರಡು ದಿನ ಬೆಂಗಳೂರಿನಲ್ಲಿಯೇ ವಾಸ್ತವ್ಯ ಹೂಡಿದ್ದ ಎಂಬ ಆಘಾತಕಾರಿ ಸುದ್ದಿ ಬಯಲಾಗಿದೆ.

 

Corona Virus Effected man stayed in Bangalore for 2 days
Author
Bangalore, First Published Mar 3, 2020, 9:54 AM IST

ಬೆಂಗಳೂರು(ಮಾ.03): ತೆಲಂಗಾಣದಲ್ಲಿ ಕೊರೋನಾ ಸೋಂಕು ದೃಢಪಟ್ಟಿರುವ ವ್ಯಕ್ತಿಯು ದುಬೈನಿಂದ ನೇರವಾಗಿ ಬೆಂಗಳೂರಿಗೆ ಬಂದು ಎರಡು ದಿನ ಬೆಂಗಳೂರಿನಲ್ಲಿಯೇ ವಾಸ್ತವ್ಯ ಹೂಡಿದ್ದ ಎಂಬ ಆಘಾತಕಾರಿ ಸುದ್ದಿ ಬಯಲಾಗಿದೆ.

"

ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಸೋಂಕಿತ ವ್ಯಕ್ತಿ ಎಲ್ಲೆಲ್ಲಿ ಸಂಚರಿಸಿ ಯಾರನ್ನು ಸಂಪರ್ಕಿಸಿದ್ದ ಎಂಬ ಬಗ್ಗೆ ಪರಿಶೀಲನೆಗೆ ಆರೋಗ್ಯ ಇಲಾಖೆ ಮುಂದಾಗಿದೆ. ವಿಶ್ವಾದ್ಯಂತ ತೀವ್ರ ಆತಂಕ ಸೃಷ್ಟಿಸಿರುವ ಮಾರಣಾಂತಿಕ ಕರೋನಾ ವೈರಸ್‌ ಬೆಂಗಳೂರಿಗರಿಗೂ ಭಯದ ವಾತಾವರಣ ಸೃಷ್ಟಿಮಾಡಿದೆ.

ಬೆಂಗಳೂರು ಟೆಕಿಗೆ ಮಾರಕ ಕೊರೋನಾ ಸೋಂಕು!

ಮೂಲತಃ ಹೈದರಾಬಾದ್‌ನ ವ್ಯಕ್ತಿಯು ಬೆಂಗಳೂರಿನ ಖಾಸಗಿ ಸಂಸ್ಥೆಯಲ್ಲಿ ಕಾರ್ಯ ನಿರ್ವವಹಿಸುತ್ತಿದ್ದ. ಹೀಗಾಗಿ ಫೆ.19ರಂದು ದುಬೈನಿಂದ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾನೆ.

ವ್ಯಕ್ತಿಯು ಫೆ.19ರಿಂದ 21ರವರೆಗೆ ಎರಡು ದಿನ ಬೆಂಗಳೂರು ನಗರದಲ್ಲಿ ವಾಸವಿದ್ದ. ಹೀಗಾಗಿ ಬೆಂಗಳೂರಿನಲ್ಲಿ ಯಾರಾರ‍ಯರೊಂದಿಗೆ ಭೇಟಿ ಮಾಡಿದ್ದ, ಸೋಂಕಿತನೊಂದಿಗೆ ಯಾರಾರ‍ಯರು ಸಂಪರ್ಕ ಸಾಧಿಸಿದ್ದರು ಎಂಬುದನ್ನು ಪತ್ತೆ ಹಚ್ಚುವ ಕಾರ್ಯದಲ್ಲಿ ಇಲಾಖೆ ನಿರತವಾಗಿದೆ. ಸೋಂಕಿತನೊಂದಿಗೆ ಸಂಪರ್ಕ ಸಾಧಿಸಿದವರಿಗೂ ಸೋಂಕು ವ್ಯಾಪಿಸಿರುವ ಸಾಧ್ಯತೆಗಳಿರುತ್ತವೆ. ಅವರನ್ನು ನಿರ್ಲಕ್ಷ್ಯಿಸಿದರೆ ಅವರಿಗೆ ಮಾತ್ರವಲ್ಲದೆ ಅವರಿಂದ ಬೇರೆಯವರಿಗೂ ಸೋಂಕು ವ್ಯಾಪಿಸಬಹುದು. ಹೀಗಾಗಿ ಅವರೆಲ್ಲರನ್ನೂ ಪತ್ತೆ ಹಚ್ಚಿ ಪರೀಕ್ಷೆ ನಡೆಸಿದ ಬಳಿಕ ಅವರೆಲ್ಲರನ್ನೂ ನಿಗಾ ವ್ಯವಸ್ಥೆಯಲ್ಲಿಡಲು ಇಲಾಖೆ ಮುಂದಾಗಿದೆ.

ಭಾರತಕ್ಕೂ ಬಂತು ಮಾರಣಾಂತಿಕ ಕೊರೋನಾ : ಇಬ್ಬರಲ್ಲಿ ಸೋಂಕು ಪತ್ತೆ

ಸೋಂಕಿತ ವ್ಯಕ್ತಿಯು ವಿಮಾನ ನಿಲ್ದಾಣಕ್ಕೆ ಆಗಮಿಸಿದಾಗ ಎಲ್ಲಾ ಪ್ರಯಾಣಿಕರಂತೆಯೇ ಈತನಿಗೂ ಥರ್ಮಲ್‌ ಸ್ಕಾ್ಯನಿಂಗ್‌ ಮಾಡಲಾಗಿದೆ. ಯಾವುದೇ ರೋಗ ಲಕ್ಷಣ ಕಾಣಿಸಿಕೊಂಡಿಲ್ಲ. ಹೀಗಾಗಿ, ಸಾಮಾನ್ಯ ಪ್ರಯಾಣಿಕರಂತೆ ಮನೆಗೆ ತೆರಳಿದ್ದಾನೆ. ಬಳಿಕ ಬೆಂಗಳೂರಿನ ಮನೆಯಲ್ಲಿ ಎರಡು ದಿನ ವಾಸವಿದ್ದು, ಆ ನಂತರ ಹೈದರಾಬಾದ್‌ಗೆ ತೆರಳಿದ್ದಾನೆ. ಅಲ್ಲಿ ಅನಾರೋಗ್ಯ ಕಾಣಿಸಿಕೊಂಡ ಹಿನ್ನೆಲೆ ಆಸ್ಪತ್ರೆಗೆ ತೆರಳಿದ್ದು, ಕೊರೊನಾ ಸೋಂಕು ದೃಢಪಟ್ಟಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.

ಬೆಂಗಳೂರಿನಲ್ಲಿ ಎರಡು ದಿನ ವಾಸವಿದ್ದರಿಂದ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಕ್ಷಣದಿಂದ ಹೈದರಾಬಾದ್‌ಗೆ ತೆರಳುವವರೆಗೂ ಸೋಂಕಿತ ವ್ಯಕ್ತಿಯು ಯಾರಾರ‍ಯರನ್ನು ಸಂಪರ್ಕಿಸಿದ್ದ ಎಂಬ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದೇವೆ. ಶೀಘ್ರವೇ ಮಾಹಿತಿ ಪತ್ತೆ ಮಾಡಿ ಅವರೆಲ್ಲರನ್ನೂ ಸೋಂಕು ಪರೀಕ್ಷೆಗೆ ಗುರಿಪಡಿಸಿ ನಿಗಾ ವ್ಯವಸ್ಥೆಯಲ್ಲಿಡಲಾಗುತ್ತದೆ ಎಂದು ಆರೋಗ್ಯ ಇಲಾಖೆ ಸಾಂಕ್ರಾಮಿಕ ರೋಗಗಳ ವಿಭಾಗದ ಜಂಟಿ ನಿರ್ದೇಶಕರು ಡಾ. ಬಿ.ಜಿ.ಪ್ರಕಾಶ್‌ ಕುಮಾರ್‌ ತಿಳಿಸಿದ್ದಾರೆ.

Follow Us:
Download App:
  • android
  • ios