ಮತ್ತೆ ಸಾಬೀತಾಯ್ತು ಆಯುರ್ವೇದದ ಶಕ್ತಿ; ಹಾರ್ಟ್ ಬ್ಲಾಕೇಜ್ ಗುಣಪಡಿಸಿದ ವೈದ್ಯರು!

ಭಾರತದ ಪುರಾತನ ಚಿಕಿತ್ಸಾ ಪದ್ಧತಿ ಆಯುರ್ವೇದ. ಅನೇಕರು ಆಯುರ್ವೇದ ಚಿಕಿತ್ಸೆ ಪಡೆಯುತ್ತಾರೆ. ಚಿಕ್ಕಪುಟ್ಟ ಖಾಯಿಲೆ ಮಾತ್ರ  ಅಲ್ಲ ದೊಡ್ಡ ಖಾಯಿಲೆಗೂ ಆಯುರ್ವೇದದಲ್ಲಿ ಮದ್ದಿದೆ ಎಂಬುದು ಮತ್ತೆ ಸಾಭೀತಾಗಿದೆ.

Heart Blockage Of Fifty Year Old Cured With Ayurvedic Therapy roo

ಆರೋಗ್ಯ ಸರಿಯಾಗಿಲ್ಲದೇ ಇದ್ದಾಗ ಒಬ್ಬೊಬ್ಬರು ಒಂದೊಂದು ರೀತಿಯ ವೈದ್ಯಕೀಯ ಪದ್ಧತಿಯನ್ನು ಅನುಸರಿಸುತ್ತಾರೆ. ಕೆಲವರು ಅಲೋಪಥಿ, ಕೆಲವರು ಆಯುರ್ವೇದ ಇನ್ಕೆಲವರು ಹೋಮಿಯೋಪತಿ ಮುಂತಾದವುಗಳ ಮೂಲಕ ಚಿಕಿತ್ಸೆ ಪಡೆದುಕೊಳ್ಳುತ್ತಾರೆ. ಅವರವರ ಶರೀರಕ್ಕೆ ಯಾವ ಔಷಧ ಹೊಂದಿಕೆಯಾಗುತ್ತದೆಯೋ ಆ ಔಷಧವನ್ನು ಅವರು ತೆಗೆದುಕೊಳ್ಳುತ್ತಾರೆ.

ಭಾರತ (India) ದಲ್ಲಿ ಆಯುರ್ವೇದ (Ayurveda) ಪದ್ಧತಿ ಮೊದಲಿನಿಂದಲೂ ಹೆಚ್ಚು ಚಾಲ್ತಿಯಲ್ಲಿದೆ. ಯಾವುದೇ ಅಡ್ಡಪರಿಣಾಮಗಳಿಲ್ಲದೇ ರೋಗ (disease) ವನ್ನು ಕಡಿಮೆಗೊಳಿಸುವ ಶಕ್ತಿ ಆಯುರ್ವೇದಕ್ಕಿದೆ. ಚಿಕ್ಕ ಪುಟ್ಟ ಸಮಸ್ಯೆಗಳಿಂದ ಹಿಡಿದು ದೊಡ್ಡ ದೊಡ್ಡ ಖಾಯಿಲೆಗಳಿಗೂ ಆಯುರ್ವೇದ ಔಷಧ ಪರಿಣಾಮಕಾರಿಯಾಗಿದೆ. ಕೊರೊನಾ ಸಂದರ್ಭದಲ್ಲಿ ಕೂಡ ಆಯುರ್ವೇದ ಚಿಕಿತ್ಸೆ ಹೆಚ್ಚು ಸುದ್ದಿಯಾಗಿತ್ತು. ಸಣ್ಣಪುಟ್ಟ ರೋಗಕ್ಕೆ ಜನರು ಆಯುರ್ವೇದದ ಮೊರೆ ಹೋಗ್ತಾರೆ. ಕಿಡ್ನಿ, ಹೃದಯ ಸಂಬಂಧಿ ಸಮಸ್ಯೆ ಕಾಡಿದಾಗ ಬಹುತೇಕ ಇಂಗ್ಲೀಷ್ ಔಷಧಿ ತೆಗೆದುಕೊಳ್ತಾರೆ. ಆದ್ರೆ ಇತ್ತೀಚೆಗೆ 50 ವರ್ಷದ ಒಬ್ಬ ವ್ಯಕ್ತಿ ಹಾರ್ಟ್ ಬ್ಲಾಕ್ ಸಮಸ್ಯೆಗೆ ಆಯುರ್ವೇದ ಚಿಕಿತ್ಸೆಯನ್ನು ಪಡೆದುಕೊಂಡು ಸಂಪೂರ್ಣವಾಗಿ ಗುಣಮುಖನಾಗಿದ್ದಾನೆ. ಇದರಿಂದ ಆಯುರ್ವೇದ ಪದ್ಧತಿಯ ಶಕ್ತಿ ಮತ್ತೊಮ್ಮೆ ಸಾಬೀತಾಗಿದೆ.

DRUG ADDICTION: ದಿನ ದಿನಕ್ಕೂ ಏರ್ತಿದೆ ಡ್ರಗ್ಸ್ ವ್ಯಸನಿಗಳ ಸಂಖ್ಯೆ..

ಹೃದಯಾಘಾತಕ್ಕೆ ಆಯುರ್ವೇದ ಚಿಕಿತ್ಸೆ:  ವೃತ್ತಿಯಲ್ಲಿ ಆಟೋಚಾಲಕನಾಗಿರುವ ಅವಧೇಶ್ ಎನ್ನುವ ವ್ಯಕ್ತಿಯೊಬ್ಬನಿಗೆ 2022 ರಲ್ಲಿ ಹೃದಯಾಘಾತವಾಗಿತ್ತು. ಅವನ ಎಡ ಮುಂಭಾಗದ ಅವರೋಹಣ ಅಪಧಮನಿ (LAD)ಯಲ್ಲಿ ಪ್ರತಿಶತ 95 ರಷ್ಟು ಬ್ಲಾಕ್ ಆಗಿತ್ತು. ಈ ವ್ಯಕ್ತಿ ನಾಲ್ಕು ತಿಂಗಳ ಕಾಲ ಆಯುರ್ವೇದ ಚಿಕಿತ್ಸೆಯನ್ನು ತೆಗೆದುಕೊಂಡು ಅದರಿಂದಲೇ ಸಂಪೂರ್ಣವಾಗಿ ಗುಣಮುಖನಾಗಿದ್ದಾನೆ ಎಂದು ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಆಯುರ್ವೇದ ಹೇಳಿದೆ.

ಕೋವಿಡ್‌ ವ್ಯಾಕ್ಸಿನ್‌ ಸೈಡ್‌ ಎಫೆಕ್ಟ್ ಆಗಿದ್ಯಾ? ಲೈವ್‌ ಶೋದಲ್ಲೇ ಬ್ರಿಟನ್ ಪ್ರಧಾನಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ವ್ಯಕ್ತಿ

ಹೃದಯಾಘಾತವಾದ ನಂತರ ಅವಧೇಶದ ಅವರನ್ನು ಸಫ್ದರ್ ಜಂಗ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಏಳು ದಿನ ದಾಖಲಾಗಿ ಚಿಕಿತ್ಸೆ ಪಡೆದ ನಂತರ ಎಂಜಿಯೋಗ್ರಫಿ ಮಾಡಲಾಯಿತು. ಅದರ ಮೂಲಕ ಎಡಭಾಗದ ಅವರೋಹಣದಲ್ಲಿ ಪ್ರತಿಶತ 95 ರಷ್ಟು ಮತ್ತು ಬಲ ಪರಿಧಮನಿಯಲ್ಲಿ ಪ್ರತಿಶತ 70 ರಷ್ಟು ಬ್ಲಾಕ್ ಆಗಿರುವುದು ತಿಳಿದು ಬಂತು. ಅಲ್ಲಿನ ವೈದ್ಯರು ಆಪರೇಷನ್ ಮಾಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು. ಆದರೆ ಹಣದ ಸಮಸ್ಯೆಯನ್ನು ಎದುರಿಸುತ್ತಿದ್ದ ಕಾರಣ ಅವಧೇಶ್ ಅವರು ಯಾವುದೇ ಶಸ್ತ್ರ ಚಿಕಿತ್ಸೆಗೆ ಒಳಗಾಗಲಿಲ್ಲ. ಅದರ ಬದಲಾಗಿ ಆಯುರ್ವೇದ ಚಿಕಿತ್ಸೆಯನ್ನು ಆಯ್ಕೆ ಮಾಡಿಕೊಂಡರು.

ಎಐಐಎ ನಲ್ಲಿ ಅವಧೇಶ್ ಅವರಿಗೆ ವಿರೇಚನಾ – ಪಂಚಕರ್ಮ ಥೆರಪಿಯನ್ನು ನೀಡಲಾಯಿತು. ಈ ಚಿಕಿತ್ಸೆಯು ದೇಹದಲ್ಲಿನ ರೋಗಗ್ರಸ್ಥ ಅಥವಾ ಅಮಾ (ವಿಷ)ವನ್ನು ಹೊರಹಾಕಿ ದೇಹವನ್ನು ಒಳಗಿನಿಂದ ಸ್ವಚ್ಛಗೊಳಿಸುತ್ತದೆ. ಈ ಚಿಕಿತ್ಸೆ ದೇಹದಿಂದ ವಿಷಕಾರಿ ಅಂಶವನ್ನು ತೆಗೆದುಹಾಕಿ ದೇಹವನ್ನು ಸಮತೋಲನದಲ್ಲಿಡುತ್ತದೆ. ಅವಧೇಶ್ ಅವರು ಮೂರು ತಿಂಗಳ ಕಾಲ ಆಯುರ್ವೇದ ಅಂಶಗಳನ್ನು ಅನುಸರಿಸಿದ ನಂತರ ಈಗ ಎಲ್ಎಡಿ ಮತ್ತು ಆರ್ ಸಿ ಎ ಎರಡರಲ್ಲೂ ಪ್ರತಿಶತ 0-5 ರಷ್ಟು ಬ್ಲಾಕ್ ಹೊಂದಿದ್ದಾರೆ. 

LAD ಬ್ಲಾಕೇಜ್ ನಿಂದ ಏನಾಗುತ್ತದೆ ಹಾಗೂ ಅದರ ಲಕ್ಷಣಗಳೇನು? :  ಹೃದಯಕ್ಕೆ ರಕ್ತದ ಹರಿವು ಸರಿಯಾದ ಪ್ರಮಾಣದಲ್ಲಿ ಆಗದೇ ಇರುವಾಗ ಹೃದಯಾಘಾತ ಆಗುತ್ತದೆ. ಹೃದಯಕ್ಕೆ ರಕ್ತವನ್ನು ಪೂರೈಸುವ ಅಪಧಮನಿಗಳಲ್ಲಿ ಕೊಬ್ಬಿನ ಫ್ಲೇಕ್ಸ್ ಗಳು ನಿರ್ಮಾಣವಾದಾಗ ಹೃದಯಕ್ಕೆ ರಕ್ತ ಸಂಚಾರ ಸರಿಯಾಗಿ ಆಗುವುದಿಲ್ಲ. ಇದರಿಂದ ಆರ್ಹೆತ್ಮಿಯಾ, ಹೃದಯಾಘಾತ, ಮಯೋಕಾರ್ಡಿಯಲ್ ಇಷ್ಕೆಮಿಯಾ ಮತ್ತು ಹೃದಯಾಘಾತದಿಂದ ಹಠಾತ್ ಸಾವು ಮುಂತಾದವು ಎಲ್ಎಡಿ ಬ್ಲಾಕೇಜ್ ನ ಪ್ರಮುಖ ಲಕ್ಷಣಗಳಾಗಿವೆ.

ರಕ್ತಪರಿಚಲನೆ ಆರೋಗ್ಯಕರವಾಗಿರಬೇಕಂದ್ರೆ ಹೀಗೆ ಮಾಡಿ: ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುವ ಮತ್ತು ಹೃದಯದ ಆರೋಗ್ಯವನ್ನು ಕಾಪಾಡುವ ಆಹಾರಗಳನ್ನು ಸೇವಿಸಿ, ಅನಾರೋಗ್ಯಕರ ಆಹಾರದಿಂದ ದೂರವಿರಿ. ಆಲ್ಕೋಹಾಲ್ ಸೇವನೆ ಮಾಡಬೇಡಿ. ತೂಕವನ್ನು ನಿಯಂತ್ರಣದಲ್ಲಿಡಲು ನಿಯಮಿತವಾಗಿ ವ್ಯಾಯಾಮ ಮಾಡಿ. ಸಕ್ಕರೆ ಮತ್ತು ಸೋಡಿಯಂ ಬಳಕೆಯನ್ನು ಕಡಿಮೆ ಮಾಡುವ ಮೂಲಕ ಮಧುಮೇಹ ಮತ್ತು ರಕ್ತದೊತ್ತಡದ ಮಟ್ಟವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಿ.

Latest Videos
Follow Us:
Download App:
  • android
  • ios