ನಿಮಿರುವಿಕೆ ದೌರ್ಬಲ್ಯ (ED) ಒಂದು ಸಾಮಾನ್ಯ ಲೈಂಗಿಕ ಸಮಸ್ಯೆ. ಇದರ ನಿವಾರಣೆಯಲ್ಲಿ ಆಹಾರ ಪದ್ಧತಿ ಪ್ರಮುಖ ಪಾತ್ರ ವಹಿಸುತ್ತದೆ. ಹೊಂದುವ ಆಹಾರ, ಸರಿಯಾದ ನಿದ್ರೆ, ವ್ಯಾಯಾಮ ಇತ್ಯಾದಿ (Health tips) ಇದ್ದಾಗ ಹಾಸಿಗೆ ಮೇಲಿನ ಆನಂದವೂ ಸರಿಯಾದ ಟ್ರ್ಯಾಕ್ ಕಂಡುಕೊಳ್ಳುತ್ತದೆ!
ನಿಮಗೆ ಲೈಂಗಿಕ ಸಂಬಂಧಕ್ಕೆ ಸಾಕಾಗುವಷ್ಟು ಗಟ್ಟಿಯಾದ ನಿಮಿರುವಿಕೆ ಬರದೇ ಅಥವಾ ಅದನ್ನು ಕಾಯ್ದುಕೊಳ್ಳಲು ತೊಂದರೆ ಆಗುತ್ತಿದೆಯಾ? ಇಂಥ ಲೈಂಗಿಕ ಸಮಸ್ಯೆಗಳು ಹೆಚ್ಚಿನ ಪುರುಷರಿಗೆ ತುಂಬಾ ಮುಜುಗರದ ವಿಷಯ. ಅದನ್ನು ನಿಮ್ಮ ಸಂಗಾತಿಯ ಜೊತೆಗೂ ಅಥವಾ ಡಾಕ್ಟರ್ ಜೊತೆಗೂ ಮಾತನಾಡಲು ಕಷ್ಟವಾಗಬಹುದು. ಕೆಲ ಆಹಾರಗಳು ನೈಸರ್ಗಿಕ ವಯಾಗ್ರಾ ತರ ಕೆಲಸ ಮಾಡುತ್ತವೆ ಅನ್ನೋದನ್ನು ನಾವು ಕೇಳಿರುತ್ತೇವೆ. ಆದರೆ ಲೈಂಗಿಕ ಸಂಬಂಧಕ್ಕೆ ಬೇಕಾದಷ್ಟು ಇರೆಕ್ಷನ್ ಬರದೇ, ಅದನ್ನು ಮುಂದುವರಿಸಿಕೊಳ್ಳಲು ಆಗದೇ ಇದ್ದರೆ, ಅದನ್ನು ಇರೆಕ್ಟೈಲ್ ಡಿಸ್ಫಂಕ್ಷನ್ (ED) ಅಂತ ಕರೀತಾರೆ. ಇದು ತುಂಬಾ ಸಾಮಾನ್ಯ ಸಮಸ್ಯೆ, ಮತ್ತು ಇದಕ್ಕೆ ಹಲವಾರು ಕಾರಣಗಳು ಇರಬಹುದು.
ರಕ್ತನಾಳಗಳನ್ನು ತಡೆಯುವ ಕಾಯಿಲೆಗಳು, ನರವ್ಯವಸ್ಥೆಯ ತೊಂದರೆಗಳು, ಕೆಲವು ಔಷಧಿಗಳು, ಆತಂಕ ಅಥವಾ ಡಿಪ್ರೆಶನ್, ಗಾಯಗಳು—ಇವೆಲ್ಲವೂ EDಗೆ ಕಾರಣವಾಗಬಹುದು.
ನಿಮಗೆ ED ಸಮಸ್ಯೆ ಇದ್ದರೆ, ಅನುಭವ ಇರುವ ಡಾಕ್ಟರ್‌ರನ್ನು ಸಂಪರ್ಕಿಸುವುದು ತುಂಬಾ ಉತ್ತಮ. ಅವರು ಔಷಧಿ ಅಥವಾ ಜೀವನಶೈಲಿ ಬದಲಾವಣೆಗಳನ್ನು ಸಲಹೆ ಕೊಡಬಹುದು. ಆದರೆ ನಿಮಗೆ ಗೊತ್ತಾ? ಕೆಲವು ಆಹಾರಗಳು ED ಸಮಸ್ಯೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ. ಈ ಮಾರ್ಗದರ್ಶಿಯಲ್ಲಿ ED ಅಂದ್ರೇನು, ಆಹಾರ ಇದಕ್ಕೆ ಹೇಗೆ ಪರಿಣಾಮ ಬೀರುತ್ತದೆ, ಮತ್ತು ಲೈಂಗಿಕ ಶಕ್ತಿಗೆ ಸಹಾಯ ಮಾಡುವ ನೈಸರ್ಗಿಕ ವಯಾಗ್ರಾ ತರದ ಆಹಾರಗಳು ಯಾವುವು ಅನ್ನೋದನ್ನು ತಿಳಿಯುತ್ತೀರಿ.
ಇರೆಕ್ಟೈಲ್ ಡಿಸ್ಫಂಕ್ಷನ್ ಅಂದ್ರೇನು?
ಇರೆಕ್ಟೈಲ್ ಡಿಸ್ಫಂಕ್ಷನ್ (ED), ಕೆಲವೊಮ್ಮೆ ಇಂಪೋಟೆನ್ಸ್ ಅಂತಲೂ ಕರೀತಾರೆ, ಅಂದ್ರೆ ಲೈಂಗಿಕ ಸಂಬಂಧಕ್ಕೆ ಬೇಕಾದಷ್ಟು ಗಟ್ಟಿಯಾದ ನಿಮಿರುವಿಕೆ ಬರದೇ ಇರುವುದು ಅಥವಾ ಅದನ್ನು ಕಾಯ್ದುಕೊಳ್ಳಲು ಆಗದಿರುವುದು.
EDಯ ಸಾಮಾನ್ಯ ಲಕ್ಷಣಗಳು:
ಇರೆಕ್ಷನ್ ಬರೋಕೆ ಕಷ್ಟ
ಬಂದ ಇರೆಕ್ಷನ್ ಉಳಿಸಿಕೊಳ್ಳಲು ಆಗದಿರುವುದು
ಲೈಂಗಿಕ ಆಸಕ್ತಿ ಕಡಿಮೆಯಾಗುವುದು
ಒಮ್ಮೊಮ್ಮೆ ಆಗುವ ತೊಂದರೆ ನಾರ್ಮಲ್. ಆದರೆ ಇದು ಆಗಾಗ ಆಗುತ್ತಿದ್ದರೆ, ಡಯಾಬಿಟಿಸ್, ಹೃದಯ ರೋಗ, ಅಥವಾ ಹೆಚ್ಚು ಒತ್ತಡದಂತಹ ಒಳಗಿನ ಆರೋಗ್ಯ ಸಮಸ್ಯೆ ಇರಬಹುದು.
ED ಸುಧಾರಣೆಯಲ್ಲಿ ನೈಸರ್ಗಿಕ ಆಹಾರದ ಪಾತ್ರ
ನಮ್ಮ ಆಹಾರ ಪದ್ಧತಿ ED ಬರೋಕೆ ಅಥವಾ ಅದನ್ನು ತಪ್ಪಿಸೋಕೆ ತುಂಬಾ ಮುಖ್ಯ ಪಾತ್ರ ವಹಿಸುತ್ತದೆ. ಕೆಲ ಸಂದರ್ಭಗಳಲ್ಲಿ ಆಹಾರ ಬದಲಿಸಿದ್ರೇನೇ ED ಸಮಸ್ಯೆ ಕಡಿಮೆಯಾಗಬಹುದು. ಸಂಶೋಧನೆಯ ಪ್ರಕಾರ, ನಿಯಮಿತವಾಗಿ ಹಣ್ಣು, ತರಕಾರಿ, ಬೇಳೆ, ಡ್ರೈ ಫ್ರೂಟ್ಸ್, ಆರೋಗ್ಯಕರ ಕೊಬ್ಬುಗಳನ್ನು ತಿನ್ನೋದು, ಮತ್ತು ಪ್ರೊಸೆಸ್ಡ್ ಫುಡ್, ಕೆಂಪು ಮಾಂಸ, ಫುಲ್-ಫ್ಯಾಟ್ ಹಾಲು ಉತ್ಪನ್ನಗಳನ್ನು ತಪ್ಪಿಸುವುದರಿಂದ ED ಅಪಾಯ ಕಡಿಮೆಯಾಗುತ್ತದೆ.
ಡಯಾಬಿಟಿಸ್, ಹೈ ಬಿಪಿ- ಇವು EDಗೆ ಕಾರಣವಾಗುವದರಿಂದ, ರಕ್ತದಲ್ಲಿನ ಸಕ್ಕರೆ, ಬಿಪಿ ಮತ್ತು ತೂಕ ನಿಯಂತ್ರಣದಲ್ಲಿರೋ ಹಾಗೆ ಸಮತೋಲನ ಆಹಾರ ತೆಗೆದುಕೊಳ್ಳುವುದು ಬಹಳ ಉಪಯುಕ್ತ.
ಆಹಾರ ED ಮೇಲೆ ಪರಿಣಾಮ ಬೀರುತ್ತಾ?
ಹೌದು, ಆದರೆ ನೇರವಾಗಿ ಅಲ್ಲ. ಆಹಾರ ರಕ್ತಸಂಚಾರ, ಟೆಸ್ಟೋಸ್ಟೆರೋನ್ ಉತ್ಪಾದನೆ, ರಕ್ತನಾಳಗಳ ಆರೋಗ್ಯ- ಇವನ್ನೆಲ್ಲಾ ಪ್ರಭಾವಿಸುತ್ತದೆ. ಸಕ್ಕರೆ ಮತ್ತು ಪ್ರೊಸೆಸ್ಡ್ ಫ್ಯಾಟ್ ಜಾಸ್ತಿ ಇರುವ ಆಹಾರ ರಕ್ತನಾಳಗಳನ್ನು ಹಾನಿ ಮಾಡುತ್ತವೆ. ಆದರೆ ಪೋಷಕಾಂಶ ಇರುವ ಆಹಾರ ಅವುಗಳನ್ನು ಉತ್ತಮಗೊಳಿಸುತ್ತವೆ.
ಗಟ್ಟಿಯಾದ ಇರೆಕ್ಷನ್‌ಗಾಗಿ ಟಾಪ್ 10 ಆಹಾರಗಳು
ಕೆಲವು ಆಹಾರಗಳು ನೈಸರ್ಗಿಕ ವಯಾಗ್ರಾ ತರ ಕೆಲಸ ಮಾಡಿ, ರಕ್ತನಾಳಗಳನ್ನು ರಿಲ್ಯಾಕ್ಸ್ ಮಾಡಿ ಲಿಂಗಕ್ಕೆ ರಕ್ತ ಹರಿವು ಹೆಚ್ಚಿಸುತ್ತವೆ.
1. ಕಲ್ಲಂಗಡಿ ಹಣ್ಣು (Watermelon)
ಇದನ್ನು ನೈಸರ್ಗಿಕ ವಯಾಗ್ರಾ ಅಂತ ಕರೀತಾರೆ. ಇದರಲ್ಲಿ ಇರುವ L-citrulline ರಕ್ತ ಹರಿವು ಹೆಚ್ಚಿಸುತ್ತದೆ. ಜೊತೆಗೆ ಇದರಲ್ಲಿ ಲೈಕೋಪಿನ್ ಇದ್ದು, ಹೃದಯ ಆರೋಗ್ಯ ಮತ್ತು ರಕ್ತಸಂಚಾರ ಸುಧಾರಿಸುತ್ತದೆ. ಗುವಾ, ಟೊಮೇಟೋ, ಕ್ಯಾರೆಟ್, ಅಪ್ರಿಕಾಟ್, ಪಿಂಕ್ ಗ್ರೇಪ್‌ಫ್ರೂಟ್‌ಲ್ಲೂ ಲೈಕೋಪಿನ್ ಇರುತ್ತದೆ.
2. ಡಾರ್ಕ್ ಚಾಕೊಲೇಟ್
ಇದರಲ್ಲಿ ಫ್ಲೇವನಾಯ್ಡ್ಸ್ ಇರುತ್ತದೆ, ಅದು ರಕ್ತ ಹರಿವು ಉತ್ತಮಗೊಳಿಸುತ್ತದೆ. ಜೊತೆಗೆ ಮೂಡ್ ಚೆನ್ನಾಗಿರೋಕೆ ಸಹಾಯ ಮಾಡುತ್ತದೆ. ಅದಕ್ಕೇ ಚಾಕೊಲೇಟ್‌ನ್ನು ಆಫ್ರೋಡಿಸಿಯಾಕ್ ಅಂತಲೂ ಹೇಳ್ತಾರೆ.
3. ಪಾಲಕ್ ಮತ್ತು ಹಸಿರು ಸೊಪ್ಪುಗಳು
ಪಾಲಕ್, ಸಾಸಿವೆ ಸೊಪ್ಪು, ಲೆಟ್ಯೂಸ್- ಇವುಗಳಲ್ಲಿ ಫೋಲೇಟ್ ಜಾಸ್ತಿ ಇರುತ್ತದೆ. ED ಇರುವ ಪುರುಷರಲ್ಲಿ ಫೋಲಿಕ್ ಆಸಿಡ್ ಕಡಿಮೆ ಇರೋದು ಕಂಡುಬಂದಿದೆ. ಅದಕ್ಕಾಗಿ ಹಸಿರು ಸೊಪ್ಪುಗಳು ತುಂಬಾ ಒಳ್ಳೆಯದು.
4. ಬಾದಾಮಿ ಮತ್ತು ಇತರ ಡ್ರೈ ಫ್ರೂಟ್ಸ್
ಬಾದಾಮಿಯಲ್ಲಿ ಹೃದಯ ಆರೋಗ್ಯ ಮತ್ತು ರಕ್ತಸಂಚಾರಕ್ಕೆ ಒಳ್ಳೆಯ ಅಮಿನೋ ಆಸಿಡ್‌ಗಳು ಇರುತ್ತವೆ. ವಾಲ್ನಟ್‌ನಲ್ಲಿ ಓಮೆಗಾ-3 ಫ್ಯಾಟಿ ಆಸಿಡ್ ಇರುತ್ತದೆ. ಪಿಸ್ತಾ ಕಾಯಿ ಆಂಟಿಆಕ್ಸಿಡೆಂಟ್‌ಗಳಿಂದ ತುಂಬಿದೆ. ದಿನವೂ ಸ್ವಲ್ಪ ತೆಗೆದುಕೊಳ್ಳಿ.
5. ಸೇಬು ಮತ್ತು ಬೆರ್ರಿಗಳು
ಸೇಬು, ಸ್ಟ್ರಾಬೆರಿ, ಬ್ಲ್ಯಾಕ್‌ಬೆರಿ, ಪಿಯರ್ಸ್- ಇವುಗಳಲ್ಲಿ ಫ್ಲೇವನಾಯ್ಡ್ಸ್ ಜಾಸ್ತಿ. ಇಂಥ ಆಹಾರ ತಿನ್ನುವ ಪುರುಷರಲ್ಲಿ ED ಸಮಸ್ಯೆ 9–11% ಕಡಿಮೆಯಾಗುತ್ತದೆ.
6. ದಾಳಿಂಬೆ ಜ್ಯೂಸ್
ಇದರಲ್ಲಿ ಇರುವ ಆಂಟಿಆಕ್ಸಿಡೆಂಟ್‌ಗಳು ನೈಟ್ರಿಕ್ ಆಸಿಡ್ ಮಟ್ಟ ಹೆಚ್ಚಿಸಿ ED ಸುಧಾರಿಸುತ್ತದೆ.
7. ಬೆಳ್ಳುಳ್ಳಿ
ಬೆಳ್ಳುಳ್ಳಿಯಲ್ಲಿರುವ ಅಲಿಸಿನ್ ರಕ್ತಸಂಚಾರ ಹೆಚ್ಚಿಸುತ್ತದೆ. ರುಚಿ ಇಷ್ಟ ಇಲ್ಲ ಅಂದ್ರೆ, ಒಂದು–ಎರಡು ಎಸಳು ಮಾತ್ರೆ ಥರ ನುಂಗಬಹುದು.
8. ಸಾಲ್ಮನ್ ಮತ್ತು ಕೊಬ್ಬು ಮೀನುಗಳು
ಸಾಲ್ಮನ್, ಟ್ಯೂನಾ, ಸಾರ್ಡಿನ್, ಮ್ಯಾಕ್ರೆಲ್- ಇವು ಓಮೆಗಾ-3ನಲ್ಲಿ ಶ್ರೀಮಂತ. ವಾರಕ್ಕೆ ಕೆಲ ಬಾರಿ ತಿನ್ನುವುದು ಒಳ್ಳೆಯದು.
9. ಅವಕಾಡೋ
ಸಾಲಡ್‌ಗೆ ಸೇರಿಸಿ, ಟೋಸ್ಟ್ ಮೇಲೆ ಹಾಕಿ ತಿನ್ನಬಹುದು. ಇದರಲ್ಲಿ ಜಿಂಕ್ ಜಾಸ್ತಿ, ಇದು ಟೆಸ್ಟೋಸ್ಟೆರೋನ್ ಉತ್ಪಾದನೆಗೆ ಸಹಾಯ ಮಾಡುತ್ತದೆ.
10. ಕಾಫಿ
ಕಾಫಿ ಮೂಡ್ ಮತ್ತು ಎನರ್ಜಿ ಹೆಚ್ಚಿಸುವುದರ ಜೊತೆಗೆ, ಆಂಟಿಆಕ್ಸಿಡೆಂಟ್‌ಗಳನ್ನೂ ಕೊಡುತ್ತದೆ. ಸರಿಯಾದ ಪ್ರಮಾಣದಲ್ಲಿ ಕುಡಿದ್ರೆ ಉಪಯುಕ್ತ.
ಈ ಆಹಾರಗಳನ್ನು ನಿಯಮಿತವಾಗಿ ತಿನ್ನುವುದರಿಂದ EDಗೆ ಶಾಶ್ವತ ಪರಿಹಾರ ಸಿಗದೇ ಇರಬಹುದು. ಆದರೆ ಲೈಂಗಿಕ ಸಾಮರ್ಥ್ಯ ಮತ್ತು ಆತ್ಮವಿಶ್ವಾಸವನ್ನು ಖಂಡಿತವಾಗಿ ಹೆಚ್ಚಿಸುತ್ತವೆ.
ನಿಮಿರುವಿಕೆ ಆರೋಗ್ಯಕ್ಕೆ ಇನ್ನೂ ಬೇಕಾದ ಜೀವನಶೈಲಿ ಬದಲಾವಣೆಗಳು
ತೂಕ ಕಡಿಮೆ ಮಾಡಿ: ಜಾಸ್ತಿ ತೂಕ ED ಹೆಚ್ಚಿಸುತ್ತದೆ
ವ್ಯಾಯಾಮ ಮಾಡಿ: ರಕ್ತ ಹರಿವು ಹೆಚ್ಚುತ್ತದೆ, ಸ್ಟ್ರೆಸ್ ಕಡಿಮೆಯಾಗುತ್ತದೆ
ಧೂಮಪಾನ ಬಿಡಿ, ಮದ್ಯ ಕಡಿಮೆ ಮಾಡಿ
ಚೆನ್ನಾಗಿ ನಿದ್ರೆ ಮಾಡಿ
ಸಂಬಂಧದ ಸಮಸ್ಯೆಗಳನ್ನು ಪರಿಹರಿಸಿ: ಒತ್ತಡ ಕಡಿಮೆಯಾಗುತ್ತದೆ, ಲೈಂಗಿಕ ಜೀವನ ಸುಧಾರಿಸುತ್ತದೆ

