ಈಗೀಗ ಕೆಲವು ವಿಚಾರಗಳನ್ನು ಜನರು ಮಾತನಾಡಲು ಹಿಂಜರಿಯುವುದಿಲ್ಲ. ಅಲ್ಲದೇ ಸೂಕ್ತ ಮಾಹಿತಿ ಸಿಗಲು ಎಲ್ಲರ ಕೈಯಲ್ಲಿಯೂ ಇಂಟರ್ನೆಟ್ ಇದೆ. ಆದರೂ ಲೈಗಿಕ ವಿಷಯಕ್ಕೆ ಬಂದಾಗ ಮಾತ್ರ ಜನರಿನ್ನೂ ಮಡಿವಂತಿಕೆ ಬಿಟ್ಟಿಲ್ಲ. ಹೇಳಲಾಗದಂಥ ಸಮಸ್ಯೆಗಳನ್ನು ಅನುಭವಿಸುತ್ತಾರೆ. ಅದೂ ಅಲ್ಲದೇ ಚಳಿಗಾಲದಲ್ಲಿ ನಮ್ಮ ದೇಹದಲ್ಲಿ ಅನೇಕ ಬದಲಾವಣೆಗಳಾಗಲಿದ್ದು, ಲೈಂಗಿಕಾಸಕ್ತಿಯಲ್ಲಿಯೂ ಏರಿಳಿತವಾಗುತ್ತವೆ.

ಶಿಶ್ನದ ಗಾತ್ರ ಚಳಿಗಾಲದಲ್ಲಿ ಹೆಚ್ಚು ಕಮ್ಮಿ ಆದಂತೆ ಭಾಸವಾಗುತ್ತದೆ. ಈ ಬಗ್ಗೆ ಹಲವರು ತಲೆ ಕೆಡಿಸಿಕೊಳ್ಳುವುದುಂಟು. ಆದರೆ, ಹವಾಮಾನಕ್ಕೆ ತಕ್ಕಂತೆ ಮನುಷ್ಯನ ದೇಹದಲ್ಲಿ ಹಲವು ಬದಲಾವಣೆಗಳಾಗಿದ್ದು, ಲೈಂಗಿಕ ಕ್ರಿಯೆ ಹಾಗೂ ಶಿಶ್ನದ ಗಾತ್ರದ ಮೇಲೂ ಈ ಬದಾಲಾವಣೆ ಸಹಜ. ಬೇಸಿಗೆಯಲ್ಲಿ ಪುರುಷನ ಗುಪ್ತಾಂಗ ತುಸು ದೊಡ್ಡದಾದಂತೆ ಎನಿಸುತ್ತದೆ. ಆದರೆ, ಚಳಿಗಾಲದಲ್ಲಿ ಮುರುಟುವುದಷ್ಟೇ ಹೊರತು, ಗಾತ್ರದಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲವೆಂಬುದನ್ನು ಪುರುಷರು ಗಮನಿಸಬೇಕು.

ದೇಹದೊಳಗೆ ಅದರಲ್ಲಿಯೂ ಶಿಶ್ನಕ್ಕೆ ಚಳಿಗಾಲದಲ್ಲಿ ರಕ್ತ ಸಂಚಾರ ಕಡಿಮೆಯಾಗುತ್ತದೆ. ಇದರಿಂದ ಲೈಂಗಿಕ ಸುಖವೂ ಕಡಿಮೆಯಾಗುವ ಸಾಧ್ಯತೆ ಇದೆ, ಎಂದು ಸಂಶೋಧನೆಗಳು ಹೇಳುತ್ತವೆ. 

  • ಚಳಿಗಾಲ ಮನಸಿನ ಮೇಲೂ ವ್ಯತಿರಿಕ್ತ ಪರಿಣಾಮ ಬೀರಲಿದ್ದು, ಮನಸ್ಸಿನ ಮೇಲಿನ ಹವಾಮಾನದ ಪ್ರಭಾವದಿಂದಲೂ ಇಂಥ ಬದಲಾವಣೆ ಆಗುವ ಸಾಧ್ಯತೆ ಇದೆ.
  • ಚಳಿಯಿಂದ ದೇಹ ನಿರುತ್ಸಾಹಗೊಳ್ಳುವುದರಿಂದಲೂ ಶಿಶ್ನ ಕ್ರಿಯಾಶೀಲತೆಯನ್ನು ಕಳದುಕೊಂಡು, ಹೆಚ್ಚು ಪ್ರತಿಕ್ರಿಯೆ ನೀಡುವುದಿಲ್ಲ. ಅಲ್ಲದೇ ಹವಾಮಾನದ ಕಾರಣದಿಂದಲೇ ಗಂಡು ಲೈಂಗಿಕ ತೃಪ್ತಿ ಪಡೆಯುವುದೂ ನಿಧಾನವಾಗಬಹುದು.