ಆರೋಗ್ಯ ಚೆನ್ನಾಗಿರಬೇಕು ಎಂದು ದೈನಂದಿನ ಜೀವನದಲ್ಲಿ ಪ್ರತೀ ನಿತ್ಯ ಹಲವು ವ್ಯಾಯಾಮ ಹಲವು ಕಸರತ್ತುಗಳನ್ನು ಮಾಡುತ್ತೇವೆ. ಎಷ್ಟೇ ಡಯೆಟ್ ಮಾಡಿದರೂ, ಆಹಾರ ಸೇವನೆಯಲ್ಲಿಯೂ ಒಂದಷ್ಟು ಬೇಲಿ ಹಾಕಿಕೊಳ್ಳುತ್ತೇವೆ. ನಮ್ಮ ಸ್ನಾಯುವಿನ ನಿರ್ಮಾಣವನ್ನು ವೇಗಗೊಳಿಸಲು ಈ ಸ್ಮೂಥೀಸ್‌ಗಳು ಸಹಾಯ ಮಾಡುತ್ತವೆ.  

ದೇಹಕ್ಕೆ ಪ್ರೋಟೀನ್ ಬಹಳ ಅಗತ್ಯ. ಇದು ಉತ್ತಮ ಆರೋಗ್ಯ ಕಾಯ್ದುಕೊಳ್ಳಲು ಸಹಾಯ ಮಾಡುತ್ತದೆ. ಸ್ನಾಯುವಿನ ನಿರ್ಮಾಣವನ್ನು ವೇಗಗೊಳಿಸಲು ಇಂದು ಹಲವು ವಿಧಾನಗಳಿವೆ. ಅನೇಕ ಪಾಕವಿಧಾನಗಳು ನೀರು ಹಾಲಾಗಿ ಬದಲಾಗುತ್ತವೆ. ಇದು ಕ್ಯಾಲೋರಿ ಸೇವನೆಯನ್ನು ಹೆಚ್ಚಿಸಬಹುದು. ವರ್ಕೌಟ್ ಮಾಡಿದ ನಂತರ ದೊಡ್ಡ ಮತ್ತು ಬಲವಾದ ಸ್ನಾಯುಗಳಿಗೆ ಕಾರಣವಾಗಬಹುದು. ಮನೆಯಲ್ಲೇ ಫ್ರೆಶ್ ಆಗಿ ತಯಾರಿಸಬಹುದಾದ ಸ್ಮೂಥೀಸ್ ಮತ್ತು ಶೇಕ್‌ಗಳನ್ನು ಸೇವಿಸಿ ಉತ್ತಮ ಸ್ನಾಯುಗಳನ್ನು ಹೊಂದಲು ಸಹಕಾರಿಯಾಗಿದೆ. ಈ ಕುರಿತಾದ ಕೆಲ ರೆಸಿಪಿಗಳು ಇಲ್ಲಿವೆ.

ಸ್ನಾಯು ನಿರ್ಮಾಣಕ್ಕಾಗಿ ರುಚಿಕರವಾದ ಮತ್ತು ಆರೋಗ್ಯಕರ ಪ್ರೋಟೀನ್ ಶೇಕ್ಸ್ ಮತ್ತು ಸ್ಮೂಥಿ ರೆಸಿಪಿಗಳು ಇಲ್ಲಿವೆ. 
ಕಾಫೀ ಮತ್ತು ಕೋಕೋ
ಬೇಕಾಗುವ ಸಾಮಗ್ರಿಗಳು:
ಹಾಲು, ಕುದಿಸಿದ ಕಾಫಿ, ಚಾಕೋಲೇಟ್ ಫ್ಲೇವರ್‌ನ ಪ್ರೋಟೀನ್ ಪುಡಿ, ಮಾಪಲ್ ಸಿರಪ್, ಬಾಳೆಹಣ್ಣು, ಕೋಕೋ ಪೌಡರ್.
ಮಾಡುವ ವಿಧಾನ: ಒಂದು ಮಿಕ್ಸರ್ ಜಾರ್‌ಗೆ ಎಲ್ಲಾ ಪದಾರ್ಥಗಳನ್ನು ಹಾಕಿಕೊಂಡು ಚೆನ್ನಾಗಿ ನುಣ್ಣಗೆ ರುಬ್ಬಿಕೊಳ್ಳಿ. ಇದಕ್ಕೆ ಅಗತ್ಯವಿದ್ದಲ್ಲಿ ಅಥವಾ ಬೇಕಾದಲ್ಲಿ ವೆನಿಲ್ಲ ಐಸ್ ಕ್ರೀಮ್ ಅಥವಾ ಐಸ್ ಕ್ಯೂಬ್‌ಗಳನ್ನು ಹೆಚ್ಚಿನ ರುಚಿಗೆ ಬಳಸಬಹುದು. ರುಬ್ಬಿಕೊಂಡ ಮಿಶ್ರಣವನ್ನು ಚಾಕೋಲೇಟ್ ಸಿರಪ್‌ನಲ್ಲಿ ಅಲಂಕರಿಸಿದ ಒಂದು ಗ್ಲಾಸ್‌ಗೆ ಹಾಕಿಕೊಂಡು ಸವಿಯಿರಿ. 

ತೂಕ ಇಳಿಸೋದ್ರಿಂದ, ಒತ್ತಡ ನಿವಾರಿಸೋವರೆಗೆ ಕಿಕ್ ಬಾಕ್ಸಿಂಗ್ ಬೆಸ್ಟ್

ಶುಂಠಿ ಸ್ಮೂಥಿ (Ginger smoothy)
ಬೇಕಾಗುವ ಸಾಮಗ್ರಿಗಳು:
ಮಧ್ಯಮ ಗಾತ್ರದ ತಾಜಾ ಪೀಚ್, ಸಣ್ಣ ತುಂಡು ಶುಂಠಿ, ಹಾಲು, ಮ್ಯಾಚಾ ವ್ಹೇ ಪ್ರೋಟೀನ್.
ಮಾಡುವ ವಿಧಾನ: ಪೀಚಸ್‌ಗಳನ್ನು ಸಣ್ಣದಾಗಿ ಹೆಚ್ಚಿಕೊಂಡು ಒಂದು ಜಾರ್‌ಗೆ ಹಾಕಿಕೊಳ್ಳಿ. ನಂತರ ಇದಕ್ಕೆ ಮ್ಯಾಚಾ ವ್ಹೇ, ಶುಂಠಿ, ಹಾಲು ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ. ನಂತರ ಒಂದು ಗ್ಲಾಸ್‌ಗೆ ಸರ್ವ ಮಾಡಿದರೆ ಸ್ಮೂಥಿ ರೆಡಿ.

ಸಾಲ್ಟೆಡ್ ಕ್ಯಾರಮೆಲ್ ಶೇಕ್
ಬೇಕಾಗುವ ಸಾಮಗ್ರಿಗಳು:
ಸಾಲ್ಟಡ್ ಕ್ಯಾರಮೆಲ್ ಪ್ರೋಟೀನ್, ಇನ್‌ಸ್ಟೆಂಟ್ ಓಟ್ಸ್ ಅಥವಾ ಸಣ್ಣಗೆ ಪುಡಿಯಾದ ಓಟ್ಸ್, ಬಾಳೆಹಣ್ಣು, ಬಾದಾಮಿ, ಹಾಲು.
ಮಾಡುವ ವಿಧಾನ: ಸಣ್ಣಗೆ ಹೆಚ್ಚಿಕೊಂಡ ಬಾಳೆಹಣ್ಣನ್ನು ಒಂದು ಜಾರ್‌ಗೆ ಹಾಕಿಕೊಳ್ಳಿ. ನಂತರ ಇದಕ್ಕೆ ನೆನೆಸಿ ಸಿಪ್ಪೆ ತೆಗೆದ ಬಾದಾಮಿ ಹಾಗೂ ಉಳಿದ ಎಲ್ಲಾ ಸಾಮಗ್ರಿಗಳನ್ನು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ರುಬ್ಬಿದ ಮಿಶ್ರಣವನ್ನು ಒಂದು ಗ್ಲಾಸ್‌ಗೆ ಸರ್ವ ಮಾಡಿ ಮೇಲೆ ಓಟ್ಸ್ ಪುಡಿಯಿಂದ ಅಲಂಕರಿಸಿದರೆ ಕ್ಯಾರಮಲ್ ಶೇಕ್ ಸವಿಯಲು ರೆಡಿ. 

ಪ್ರೊಟೀನ್ ಪೌಡರ್, ಸಪ್ಲಿಮೆಂಟ್ ಇಲ್ಲದೇನೂ ಪಡೆಯಬಹುದು Strong muscles

 ಬರ‍್ರಿ ಸ್ಮೂಥೀಸ್
ಬರ‍್ರಿಯಲ್ಲಿ ನೈಸರ್ಗಿಕವಾದ ಆಂಟಿ ಆಕ್ಸಿಡೆಂಟ್ ಅಂಶ ಹೇರಳವಾಗಿದೆ. ಇದು ಸ್ನಾಯುವನ್ನು ಬಲಗೊಳಿಸಲು ಸಹಾಯ ಮಾಡುತ್ತದೆ. ನೋಡಲು ಎಷ್ಟು ಸುಂದರವೋ ಸವಿಯಲೂ ಅಷ್ಟೇ ಅದ್ಭುತವಾಗಿರುತ್ತದೆ.
ಬೇಕಾಗುವ ಸಾಮಗ್ರಿಗಳು: ಗಟ್ಟಿ ಮೊಸರು, ಮಿಕ್ಸಡ್ ಫ್ರೇಜೊನ್ ಬರ‍್ರಿ, ವೆನಿಲ್ಲಾ ಪ್ರೋಟೀನ್ ಪುಡಿ.
ಮಾಡುವ ವಿಧಾನ: ಒಂದು ಮಿಕ್ಸರ್ ಜಾರ್‌ನಲ್ಲಿ ಈ ಎಲ್ಲಾ ಸಾಮಗ್ರಿಗಳನ್ನು ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ. ನಂತರ ಒಂದು ಗ್ಲಾಸ್‌ಗೆ ಹಾಕಿ ಸರ್ವ ಮಾಡಿದರೆ ಸ್ಮೂಥೀಸ್ ರೆಡಿ. ಸ್ಮೂಥೀಸ್‌ಗೆ ಸಿಹಿ ಬೇಕೆನ್ನುವವರು ಇದಕ್ಕೆ ಜೇನುತುಪ್ಪವನ್ನು ಹಾಕಿಕೊಳ್ಳಬಹುದು.

ಸ್ಟ್ರಾಬರ‍್ರಿ ಮತ್ತು ಬಾಳೆಹಣ್ಣಿನ ಸ್ಮೂಥೀ
ಅತ್ಯಂತ ಒಳ್ಳೆಯ ಕಾಂಬಿನೇಶನ್‌ಗಳಲ್ಲಿ ಬೆಸ್ಟ್ ಈ ಸ್ಟಾçಬರ‍್ರಿ ಮತ್ತು ಬಾಳೆಹಣ್ಣಿನ ಸ್ಮೂಥೀಸ್. ಡಯೆಟ್ ಅನ್ನು ಈಗ ಆರಂಭಿಸಿದ್ದರೆ ಮೊದಲು ಈ ಸ್ಮೂಥೀಸ್ ಟ್ರೆöÊ ಮಾಡಿ. ಇದರಲ್ಲಿ ಹೇರಳವಾದ ನ್ಯೂಟ್ರೀಷನ್ ಇದ್ದು, ರುಚಿಯೂ ಅದ್ಭುತವಾಗಿರುತ್ತದೆ.
ಬೇಕಾಗುವ ಸಾಮಗ್ರಿಗಳು: ಬಾಳೆಹಣ್ಣು, ಸ್ಟಾಬರ‍್ರಿ, ಐಸ್ ಕ್ಯೂಬ್, ಮೊಸರು, ಪ್ರೋಟೀನ್ ಪೌಡರ್.
ಮಾಡುವ ವಿಧಾನ: ಬಾಳೆಹಣ್ಣು, ಸ್ಟ್ರಾಬರಿ, ಮೊಸರು (Curd), ಪ್ರೋಟೀನ್ ಪುಡಿ, ಐಸ್ ಕ್ಯೂಬ್ (Ice Cube) ಎಲ್ಲವನ್ನೂ ಹಾಕಿ ಚೆನ್ನಾಗಿ ನುಣ್ಣಗೆ ರುಬ್ಬಿಕೊಳ್ಳಿ. ನಂತರ ಒಂದು ಗ್ಲಾಸ್‌ಗೆ ಸರ್ವ ಮಾಡಿ ಸವಿಯಿರಿ. ಸಿಹಿ ಬೇಕೆನ್ನುವವರು ಇದಕ್ಕೆ ಕಲ್ಲುಸಕ್ಕರೆ ಅಥವಾ ಜೇನುತುಪ್ಪವನ್ನು ಹಾಕಿಕೊಳ್ಳಬಹುದು.