Health Tips: ಒಂದೇ ಸಮಾ ಮಾತಾಡೋ ಬದ್ಲು ಒಂದ್ಗಂಟೆ ಸುಮ್ನಿರಿ

ಕುಟುಂಬಸ್ಥರು, ಸ್ನೇಹಿತರು, ಸಹೋದ್ಯೋಗಿಗಳು ಅವರು ಇವರು ಅಂತಾ ದಿನದಲ್ಲಿ ಅದೆಷ್ಟು ಜನರ ಜೊತೆ ಅದೆಷ್ಟ ವಿಷ್ಯ ಮಾತಾಡ್ತೇವೆ ನಮಗೆ ನೆನಪಿರೋದಿಲ್ಲ. ಒಂದು ಐದು ನಿಮಿಷ ಸುಮ್ಮನಿರೋಕೆ ಅನೇಕರಿಗೆ ಕಷ್ಟ. ಈ ನಿಮ್ಮ ಮೌನದಿಂದ ಸಾಕಷ್ಟು ಲಾಭವಿದೆ. ಅದೇನು ಗೊತ್ತಾ?
 

Health Tips How Being Silent For One Hour Daily Can Change Life And Improve Health roo

ಹಿಂದಿನ ಕಾಲದಲ್ಲಿ ಜನರು ಒಂದು ದಿನ ಅಥವಾ ದಿನದ ಒಂದಿಷ್ಟು ಗಂಟೆ ಮೌನವ್ರತ ಮಾಡ್ತಾ ಇದ್ದರು. ಈಗ ದಿನಗಟ್ಟಲೆ ಮೌನವಾಗಿದ್ರೆ ನೋಡಿದ ಜನರು ನಗೋದಿದೆ. ಇನ್ನು ಕೆಲವರು ಧ್ಯಾನದ ಹೆಸರಿನಲ್ಲಿ ಸ್ವಲ್ಪ ಹೊತ್ತು ಮೌನವಾಗಿರಲು ಪ್ರಯತ್ನ ನಡೆಸುತ್ತಾರೆ. ಇಡೀ ದಿನ ಒಂದಲ್ಲ ಒಂದು ವಿಷ್ಯದ ಬಗ್ಗೆ ನಾನ್ ಸ್ಟಾಪ್ ಮಾತನಾಡುವುದಕ್ಕಿಂತ ಸ್ವಲ್ಪ ಸಮಯ ಮೌನವಾಗಿರೋದು ಒಳ್ಳೆಯದು. ಮೌನವನ್ನು ಯಾವಾಗ್ಲೂ ಬಂಗಾರಕ್ಕೆ ಹೋಲಿಕೆ ಮಾಡಲಾಗುತ್ತದೆ. ಮೌನ ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುವ ಜೊತೆಗೆ ನಿಮ್ಮ ಮಾತನ್ನು ಬೇರೆಯವರು ಕೇಳುವಂತೆ ಮಾಡುತ್ತದೆ. 

ದಿನಕ್ಕೆ ಕೇವಲ 1 ಗಂಟೆ ಮೌನ (Silent) ವಾಗಿರುವುದರಿಂದ  ಐದು ಬದಲಾವಣೆಗಳನ್ನು ನಮ್ಮ ಜೀವನ (Life) ದಲ್ಲಿ ಕಾಣಬಹುದು. ಮಾನಸಿಕ, ದೈಹಿಕ ಆರೋಗ್ಯ ಇದ್ರಿಂದ ವೃದ್ಧಿಯಾಗುವ ಜೊತೆಗೆ ಆತ್ಮವಿಶ್ವಾಸ (Self confidence) ಹೆಚ್ಚಾಗುತ್ತದೆ. ಇದಲ್ಲದೆ ಇನ್ನೇನೆಲ್ಲ ಬದಲಾವಣೆ ಆಗುತ್ತೆ ಎಂಬುದನ್ನು ನಾವು ಹೇಳ್ತೇವೆ.

ಮೌನವಾಗಿರುವುದ್ರಿಂದ ಆಗುವ ಲಾಭಗಳು :
ಸಂವಹನ ಕೌಶಲ್ಯದಲ್ಲಿ ವೃದ್ಧಿ (Improvement of Communication Skill) :
ನೀವು ಇಡೀ ದಿನ ಮೌನವಾಗಿರಬೇಕಾಗಿಲ್ಲ. ಕೇವಲ ಒಂದು ಗಂಟೆ ಮೌನವಾಗಿದ್ದರೆ ಸಾಕು. ನಿಮ್ಮೆಲ್ಲ ಕೆಲಸಗಳನ್ನು ಬದಿಗಿಟ್ಟು ನೀವು ಒಂದು ಶಾಂತ ಸ್ಥಳದಲ್ಲಿ ಮೌನವಾಗಿ ಕುಳಿತುಕೊಳ್ಳಿ. ಈ ಸಮಯದಲ್ಲಿ ನೀವು ಆಳವಾಗಿ ಆಲೋಚನೆ ಮಾಡಬಹುದು. ಈ ಮೌನ ನಿಮ್ಮ ಸಂವಹನ ಕೌಶಲ್ಯವನ್ನು ಹೆಚ್ಚಿಸುತ್ತದೆ. ನಿಮ್ಮ ಮಾತಿನ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಈ ಮೌನ, ನೀವು ಬೇರೆಯವರು ಏನು ಹೇಳ್ತಿದ್ದಾರೆ ಎಂಬುದನ್ನು ಕೇಳುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.  ನಿಮ್ಮ ಮುಂದಿರುವ ವ್ಯಕ್ತಿ ಹೇಳಿದ್ದನ್ನು ಶಾಂತವಾಗಿ ಕೇಳಿ ನಂತ್ರ ಉತ್ತರ ನೀಡುವ ಅಭ್ಯಾಸ ಬೆಳೆಯುತ್ತದೆ. ಇದ್ರಿಂದ ನಿಮ್ಮ ಮಾತಿನಲ್ಲಿ ಹಿಡಿತ ಸಿಗುತ್ತದೆ.  

Health Tips: ಭಾರತದಲ್ಲಿ 10 ಕೋಟಿಗೂ ಹೆಚ್ಚು ಜನರನ್ನು ಕಾಡ್ತಿದೆ ಈ ಸಮಸ್ಯೆ

ರಕ್ತದೊತ್ತಡ ನಿಯಂತ್ರಣಕ್ಕೆ ಮೌನ ಸಹಕಾರಿ: ರಕ್ತದೊತ್ತಡವನ್ನು ಕಡಿಮೆ ಮಾಡಲು ಮೌನ ಪ್ರಯೋಜನಕಾರಿಯಾಗಿದೆ. ಯಾವುದೇ ಮಾತು, ಕೆಲಸವಿಲ್ಲದೆ ನೀವು  ಸ್ವಲ್ಪ ಸಮಯ ಆರಾಮವಾಗಿ, ಶಾಂತವಾಗಿ ಕುಳಿತರೆ, ಅದು ದೇಹದ ರಕ್ತದ ಹರಿವನ್ನು ನಿಯಂತ್ರಿಸುತ್ತದೆ. ಇದ್ರಿಂದ ನಿಮ್ಮ ಹೃದ್ರೋಗದ ಅಪಾಯ ಕಡಿಮೆಯಾಗುತ್ತದೆ.

ನಿಮ್ಮನ್ನು ನೀವು ಅರಿಯಲು ಸಹಕಾರಿ: ಇಡೀ ದಿನ ಕೆಲಸದ ಒತ್ತಡದಲ್ಲಿ ನೀವು ಓಡ್ತಿರುತ್ತೀರಿ. ಬೇರೆಯವರು ಹೇಳಿದ್ದು, ಬೇರೆಯವರಿಗಾಗಿ ಮಾಡುವ ಕೆಲಸವೇ ಹೆಚ್ಚಿರುತ್ತದೆ. ಇದ್ರಿಂದ ನಿಮಗೇನು ಬೇಕು, ನಿಮ್ಮ ಸೃಜನಶೀಲತೆ ಏನು ಎಂಬುದನ್ನೇ ನೀವು ಮರೆತಿರುತ್ತೀರಿ. ನೀವು ಒಂದು ಗಂಟೆ ಮೌನವಾಗಿ ಕುಳಿತಾಗ ನಿಮ್ಮನ್ನು ನೀವು ಅರಿಯಬಹುದು. ನಿಮ್ಮ ಮನಸ್ಸು ಏನು ಬಯಸುತ್ತದೆ ಎಂಬುದನ್ನು ನೀವು ತಿಳಿಯಬಹುದು. ನಿಮ್ಮ ಇತರ ಕೌಶಲ್ಯಗಳಾವುವು, ಅದನ್ನು ವೃದ್ಧಿಸಿಕೊಳ್ಳುವುದು ಹೇಗೆ ಎಂಬೆಲ್ಲ ವಿಷ್ಯ ನಿಮ್ಮ ಅರಿವಿಗೆ ಬರುತ್ತದೆ.

Mental Health : ಯುವಕರಲ್ಲಿ ಹೆಚ್ಚಾಗ್ತಿದೆ ಉದ್ಯೋಗ ಹುಡುಕಾಟದ ಖಿನ್ನತೆ

ದೇಹಕ್ಕೆ ಸಿಗುತ್ತೆ ಶಕ್ತಿ : ದಿನಪೂರ್ತಿ ನೀವು ಮಾತನಾಡ್ತಾ, ಕೆಲಸ ಮಾಡ್ತಾ ದಣಿದಿರುತ್ತೀರಿ. ದಿನದ ಒಂದು ಗಂಟೆ ನೀವು ಮೌನವಾಗಿದ್ದರೆ ಅದು ನಿಮಗೆ ವಿಶ್ರಾಂತಿ ನೀಡುತ್ತದೆ. ಮತ್ತೆ ಕೆಲಸ ಮಾಡುವ ಶಕ್ತಿಯನ್ನು ಇದು ನೀಡುತ್ತದೆ. ನೀವು ಬೆಳಿಗ್ಗೆ ಒಂದು ಗಂಟೆ ಮೌನವ್ರತ ಮಾಡಿದ್ರೆ ನಿಮ್ಮ ಇಡೀ ದಿನ ಉತ್ಸಾಹದಿಂದ ಕೂಡಿರುತ್ತದೆ. ಮನಸ್ಸು ಶಾಂತವಾಗಿರುತ್ತದೆ. ಎಂಥ ಸಮಸ್ಯೆಯನ್ನು ಕೂಡ ನೀವು ಕೂಲ್ ಆಗಿ ನಿಭಾಯಿಸುವ ಶಕ್ತಿ ಪಡೆಯುತ್ತೀರಿ. 

ಚುರುಕುಗೊಳ್ಳುವ ಮನಸ್ಸು : ಮೌನದಿಂದ ಏನು ಸಿಗುತ್ತೆ ಎನ್ನುವವರು ಒಂದು ತಿಂಗಳು ಪ್ರತಿ ದಿನ ಒಂದು ಗಂಟೆ ಮೌನಕ್ಕೆ ಶರಣಾದ್ರೆ ಅದ್ರ ಪರಿಣಾಮ ಗೊತ್ತಾಗುತ್ತದೆ. ಮೌನದಿಂದ ನಿಮ್ಮ ಮನಸ್ಸು, ಬುದ್ಧಿ ಚುರುಕುಗೊಳ್ಳುತ್ತದೆ. ನಿಮ್ಮ ಯೋಚನಾ ಸಾಮರ್ಥ್ಯ ಇದ್ರಿಂದ ಹೆಚ್ಚಾಗುತ್ತದೆ. 

Latest Videos
Follow Us:
Download App:
  • android
  • ios