Asianet Suvarna News Asianet Suvarna News

Mental Health : ಯುವಕರಲ್ಲಿ ಹೆಚ್ಚಾಗ್ತಿದೆ ಉದ್ಯೋಗ ಹುಡುಕಾಟದ ಖಿನ್ನತೆ

ವಿದ್ಯೆಗೆ ತಕ್ಕ ಉದ್ಯೋಗ ಸಿಗೋದು ಸುಲಭದ ಮಾತಲ್ಲ. ಇದಕ್ಕೆ ಸಾಕಷ್ಟು ಪರಿಶ್ರಮ ಅಗತ್ಯ. ಕೆಲಸದ ಹುಡುಕಾಟ, ಅಲ್ಲಿ ಎದುರಿಸುವ ಸಮಸ್ಯೆ ಯುವಜನರ ಮನಸ್ಸು ಹಾಳು ಮಾಡ್ತಿದೆ. ಬೇಗ ಅವರು ಮಾನಸಿಕ ಖಾಯಿಲೆಗೆ ಬಲಿಯಾಗ್ತಿದ್ದಾರೆ.
 

Job Search Depression These Six Tips Will Help You To Deal With It roo
Author
First Published Oct 12, 2023, 3:24 PM IST

ಒಂದು ಸರ್ಕಾರಿ ಉದ್ಯೋಗ ಖಾಲಿಯಿದೆ ಎಂತಾ ಗೊತ್ತಾದ್ರೆ ಲಕ್ಷಾಂತರ ಮಂದಿ ಇದಕ್ಕೆ ಅರ್ಜಿ ಸಲ್ಲಿಸ್ತಾರೆ. ಇದ್ರಿಂದ ನಮ್ಮ ದೇಶದಲ್ಲಿ ನಿರುದ್ಯೋಗಿಗಳ ಸಂಖ್ಯೆ ಎಷ್ಟಿದೆ ಎಂಬುದನ್ನು ನೀವು ಅಂದಾಜಿಸಬಹುದು. ಸರಿಯಾದ ಸಮಯಕ್ಕೆ ಉದ್ಯೋಗ ಸಿಗದೆ ಇರುವುದು ಜನರ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರ್ತಿದೆ. ಕಾಲೇಜು ಮುಗಿಸಿ ಉದ್ಯೋಗ ಕ್ಷೇತ್ರಕ್ಕೆ ಕಾಲಿಡಲು ಯುವಕರಿಗೆ ತಕ್ಷಣ ಕೆಲಸ ಸಿಗ್ತಿಲ್ಲ. ಅನೇಕರು  ಮೂರ್ನಾಲ್ಕು ವರ್ಷ ಖಾಲಿ ಕುಳಿತುಕೊಳ್ಳುವ ಸ್ಥಿತಿ ಎದುರಾಗ್ತಿದೆ. ಇದ್ರಿಂದ ಅನೇಕರು ಖಿನ್ನತೆಗೆ ಒಳಗಾಗ್ತಿದ್ದಾರೆ. ವಿಶ್ವ ಸಂತೋಷ ಸೂಚ್ಯಂಕದಲ್ಲಿ ನಮ್ಮ ದೇಶ 136 ದೇಶಗಳ ಪಟ್ಟಿಯಲ್ಲಿ 126 ನೇ ಸ್ಥಾನದಲ್ಲಿರುವುದು ಕೂಡ ಇದೇ ಕಾರಣಕ್ಕೆ. ನಾವಿಂದು ಉದ್ಯೋಗ ಹುಟುಕಾಟದ ಖಿನ್ನತೆ ಎದುರಿಸೋದು ಹೇಗೆ ಎಂಬುದನ್ನು ನಿಮಗೆ ಹೇಳ್ತೇವೆ.

ಉದ್ಯೋಗ (Employment) ಹುಡುಕಾಟ ಖಿನ್ನತೆ ಎಂದರೇನು?: ಉದ್ಯೋಗ ಹುಡುಕಾಟದ ಖಿನ್ನತೆ (Depression) ಅಂದ್ರೆ ಉದ್ಯೋಗ ಹುಡುಕಾಟ ನಡೆಸುವಾಗ ಕಾಡುವ ಒತ್ತಡವಾಗಿದೆ. ಉದ್ಯೋಗವನ್ನು ಹುಡುಕುವ ಸಮಯದಲ್ಲಿ ಬರಬಹುದಾದ ಭಾವನಾತ್ಮಕ ಮತ್ತು ಮಾನಸಿಕ ಒತ್ತಡ (Pressure) ವನ್ನು ಇದು ಸೂಚಿಸುತ್ತದೆ. ಸಕ್ರಿಯವಾಗಿ ಉದ್ಯೋಗವನ್ನು ಹುಡುಕುತ್ತಿರುವ ವ್ಯಕ್ತಿಗಳ ಮೇಲೆ ಇದು  ಪರಿಣಾಮ ಬೀರುತ್ತದೆ. ಸರಿಯಾದ ಸಮಯಕ್ಕೆ ಹಾಗೂ ಯೋಗ್ಯವಾದ ಉದ್ಯೋಗ ಸಿಗದೆ ಹೋದಾಗ ಜನರು  ಹತಾಶೆ, ಆತಂಕ ಮತ್ತು ಖಿನ್ನತೆಯ ಭಾವನೆ ಎದುರಿಸುತ್ತಾರೆ. ಅನೇಕ ಸಂದರ್ಶನಗಳನ್ನು ಸರಿಯಾಗಿ ನಿಭಾಯಿಸಲಾಗದೆ ಫೇಲ್ ಆದಾಗ ಜನರು ಮತ್ತಷ್ಟು ಕುಗ್ಗಿ ಹೋಗ್ತಾರೆ.  

ಚಿಕಿತ್ಸೆಗಾಗಿ ಬಾಲಕಿ ಮೆದುಳಿನ ಒಂದು ಭಾಗ ಸ್ವಿಚ್ ಆಫ್ ಮಾಡಿದ ವೈದ್ಯರು!

ಉದ್ಯೋಗ ಹುಡುಕಾಟ ಖಿನ್ನತೆ ಎದುರಿಸೋದು ಹೇಗೆ? : 

ವಾಸ್ತವ ಅರಿಯಿರಿ : ಉದ್ಯೋಗ ಹುಡುಕುವ ಸಮಯದಲ್ಲಿ ನೀವು ವಾಸ್ತವವನ್ನು ಅರಿತಿರಬೇಕು. ನೀವು ಉದ್ಯೋಗಕ್ಕೆ ಅರ್ಜಿ ಸಲ್ಲಿಸಿದ ತಕ್ಷಣವೇ ನಿಮಗೆ ಕೆಲಸ ಸಿಗೋದಿಲ್ಲ. ಅದಕ್ಕೆ ತುಂಬಾ ಪ್ರಯತ್ನಪಡಬೇಕು. ಹಾಗೆ ಸಮಯ ನೀಡಬೇಕು. 

ತೂಕ ಇಳಿಯುತ್ತೆ, ಕೊಬ್ಬು ಕರಗುತ್ತೆ ಅಂತ ಏನೋನೇ ತಿನ್ನೋ ಮುನ್ನ ಚಾಣಕ್ಯ ಹೇಳೋದ ಕೇಳಿ!

ಕಂಪನಿಗಳ ಪ್ರತಿಕ್ರಿಯೆನ್ನು ಧನಾತ್ಮಕವಾಗಿ ಸ್ವೀಕರಿಸಿ : ಸಂದರ್ಶನಕ್ಕೆ ಹೋದ ಸಂದರ್ಭದಲ್ಲಿ ಅಥವಾ ಸಂದರ್ಶನದ ನಂತ್ರ ಕಂಪನಿ ನೀಡುವ ಉತ್ತರವನ್ನು ನೀವು ಧನಾತ್ಮಕವಾಗಿ ಸ್ವೀಕರಿಸಬೇಕು. ನಿಮ್ಮನ್ನು ಕೆಲಸಕ್ಕೆ ಆಯ್ಕೆ ಮಾಡಿಲ್ಲ ಎಂದಾಗ ಕುಗ್ಗಿಹೋಗದೆ ಅದನ್ನು ಸಾಮಾನ್ಯ ಎನ್ನುವಂತೆ ಸ್ವೀಕರಿಸಬೇಕು. 

ಒಂದೊಳ್ಳೆ ದಿನಚರಿ ಪಾಲನೆ ಮಾಡಿ : ಉದ್ಯೋಗ ಹುಡುಕಾಟ, ನೆಟ್‌ವರ್ಕಿಂಗ್ ಮತ್ತು ಸ್ವಯಂ ಆರೈಕೆ ಚಟುವಟಿಕೆಗಳಿಗೆ ಸಮಯವನ್ನು ಒಳಗೊಂಡಿರುವ ದೈನಂದಿನ ಅಥವಾ ಸಾಪ್ತಾಹಿಕ ದಿನಚರಿಯನ್ನು ನೀವು ಪಾಲಿಸಿ. ಕೆಲಸ ಸಿಗ್ಲಿಲ್ಲ ಎನ್ನುವ ಕಾರಣಕ್ಕೆ ನೀವು ನಿರಾಸೆಯಾಗಿ ಕುಳಿತುಕೊಳ್ಬೇಡಿ. 

ಸಣ್ಣಪುಟ್ಟ ಗುರಿ ಸಾಧನೆ : ನಿಮ್ಮ ಸ್ನೇಹಿತರು ಅಥವಾ ಸಂಬಂಧಿಕರು ದೊಡ್ಡ ದೊಡ್ಡ ಸಾಧನೆ ಮಾಡಿ ಹೆಸರು ಮಾಡಿರಬಹುದು. ಅದು ನಿಮ್ಮಿಂದ ಸಾಧಯವಾಗಿಲ್ಲ ಎಂದು ದುಃಖಪಡ್ತಾ ಕುಳಿತುಕೊಳ್ಳುವ ಬದಲು ಸಣ್ಣ ಸಣ್ಣ ಗುರಿಯನ್ನು ಹೊಂದಿಸಿಕೊಂಡು ಅದನ್ನು ಸಾಧಿಸ್ತಾ ಬನ್ನಿ. ಅಲ್ಲಿ ಇಲ್ಲಿ ಹುಡುಕಾಟ ನಡೆಸಿ, ಕೆಲಸಕ್ಕೆ ಅರ್ಜಿ ಸಲ್ಲಿಸುತ್ತಿರಿ. 

ನಿಮ್ಮನ್ನು ನೀವು ಅರ್ಥ ಮಾಡಿಕೊಳ್ಳಿ : ಉದ್ಯೋಗ ಹುಡುಕಾಟದ ಸಮಯದಲ್ಲಿ  ನಿಮ್ಮನ್ನು ನೀವು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ. ಸ್ವಯಂ ವಿಮರ್ಶೆ ಅಥವಾ ನಕಾರಾತ್ಮಕ ಚರ್ಚೆಯನ್ನು ಮಿತಿಗೊಳಿಸಿ. ವೈಫಲ್ಯ ಮತ್ತು ನಿರಾಕರಣೆ ಸಾಮಾನ್ಯ ಎಂಬುದನ್ನು ತಿಳಿದು ನೀವೂ ಯೋಗ್ಯರಾಗುವ ನಿಟ್ಟಿನಲ್ಲಿ ಪ್ರಯತ್ನ ನಡೆಸಿ.  

ಕಲಿಕೆ ಬಹಳ ಮುಖ್ಯ : ನೀವು ಹೊಸದನ್ನು ಕಲಿಯಲು ಆಸಕ್ತಿ ತೋರಬೇಕು. ನಿಮ್ಮ ಕೆಲಸವನ್ನು ನೀವು ಟ್ರ್ಯಾಕ್ ಮಾಡಲು ಸ್ಪ್ರೆಡ್‌ಶೀಟ್‌ಗಳು, ಕ್ಯಾಲೆಂಡರ್‌, ಉದ್ಯೋಗ ಹುಡುಕಾಟದ ಅಪ್ಲಿಕೇಶನ್‌ ಬಳಸಿ. ಅದರ ಬಳಕೆ ತಿಳಿದಿಲ್ಲವೆಂದ್ರೆ ಅದನ್ನು ತಿಳಿಯುವ ಪ್ರಯತ್ನ ನಡೆಸಿ.  ವಿದ್ಯಾರ್ಹತೆಗಳನ್ನು ಹೆಚ್ಚಿಸುವ ಹೊಸ ಕೌಶಲ್ಯಗಳನ್ನು ಕಲಿಯಿರಿ. ಇದು ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. 
 

Follow Us:
Download App:
  • android
  • ios