ಹೆಚ್ಚು ಸ್ಕ್ರೀನ್ ನೋಡೋದ್ರಿಂದ ಕಣ್ಣಿಗೆ ಕನ್ನಡಕ ಹಾಕಬೇಕಾಗತ್ತಾ?
ಇಂದಿನ ಜಗತ್ತಿನಲ್ಲಿ, ಸ್ಮಾರ್ಟ್ಫೋನ್, ಕಂಪ್ಯೂಟರ್ ಅಥವಾ ಲ್ಯಾಪ್ಟಾಪ್ ಇಲ್ಲದ ಜನವೇ ಇಲ್ಲ ಎಂದು ಹೇಳಬಹುದು. ಇದಲ್ಲದೆ, ಅನೇಕ ಎಲೆಕ್ಟ್ರಾನಿಕ್ ಗ್ಯಾಜೆಟ್ ನಮ್ಮ ಜೀವನದ ಒಂದು ಭಾಗವಾಗಿ ಮಾರ್ಪಟ್ಟಿವೆ. ಹೆಚ್ಚಿನ ಸಂಖ್ಯೆಯ ಜನರು ಸ್ಮಾರ್ಟ್ಫೋನ್ ಮತ್ತು ಲ್ಯಾಪ್ ಟಾಪ್ ಗಳಲ್ಲಿ ಪ್ರತಿದಿನ ಹಲವಾರು ಗಂಟೆ ಕಳೆಯುತ್ತಾರೆ. ಇದರಿಂದ ಕಣ್ಣುಗಳಿಗೆ ಹಾನಿಯಾಗೋ ಚಾನ್ಸಸ್ ಜಾಸ್ತಿ ಇರುತ್ತೆ.
ಸ್ಕ್ರೀನ್ ದೀರ್ಘಕಾಲದವರೆಗೆ ನೋಡೋದು ನಿಮ್ಮ ಕಣ್ಣುಗಳಿಗೆ ಹಾನಿಕಾರಕವೇ ಎಂಬ ಪ್ರಶ್ನೆ ನಿಮ್ಮಲ್ಲೂ ಮೂಡಿರಬಹುದು ಅಲ್ವಾ? ಈ ಕಾರಣದಿಂದಾಗಿ, ನಿಮ್ಮ ಕಣ್ಣಿಗೆ ಕನ್ನಡಕ(Specs) ಬರಬಹುದು. ನಿಮ್ಮ ಮನಸ್ಸಿನಲ್ಲಿ ಅಂತಹ ಪ್ರಶ್ನೆಗಳಿದ್ದರೆ, ಇಲ್ಲಿದೆ ನೋಡಿ ಎಕ್ಸ್ಪರ್ಟ್ ಹೇಳಿರೋ ಸೊಲ್ಯೂಷನ್ಸ್.
ಎಕ್ಸ್ಪರ್ಟ್ ಏನು ಹೇಳುತ್ತಾರೆ?
ಹಲವಾರು ಗಂಟೆಗಳ ಕಾಲ ಸ್ಕ್ರೀನ್ ಮೇಲೆ ಗಮನ ಕೇಂದ್ರೀಕರಿಸೋದರಿಂದ ನಮ್ಮ ಕಣ್ಣ(Eyes) ಮೇಲೆ ಒತ್ತಡ ಉಂಟಾಗುವ ಸಾಧ್ಯತೆ ಇದೆ ಎಂದು ಎಕ್ಸ್ಪರ್ಟ್ ಹೇಳುತ್ತಾರೆ. ಕಂಪ್ಯೂಟರ್ ಬಳಕೆಯಿಂದ ಉಂಟಾಗುವ ಕಣ್ಣಿನ ಸಮಸ್ಯೆಯನ್ನು ಕಂಪ್ಯೂಟರ್ ವಿಷನ್ ಸಿಂಡ್ರೋಮ್ (ಸಿವಿಎಸ್) ಎಂದು ಕರೆಯಲಾಗುತ್ತೆ.
ಕಂಪ್ಯೂಟರ್ ಸ್ಕ್ರೀನ್ (Computer screen)ಮೇಲೆ ಕೆಲಸ ಮಾಡೋ ಹೆಚ್ಚಿನ ಜನರು ಇಂತಹ ಸಮಸ್ಯೆ ಅನುಭವಿಸುತ್ತಾರೆ. ಕೆಲಸ ಮಾಡುವ ಜನರು ಮಾತ್ರ ಇದರಿಂದ ತೊಂದರೆಗೀಡಾಗೋದಲ್ಲ, ಆದರೆ ಹೆಚ್ಚು ಸ್ಮಾರ್ಟ್ಫೋನ್ ಅಥವಾ ಟ್ಯಾಬ್ಲೆಟ್ ನೋಡುವ ಮಕ್ಕಳು ಸಹ ಈ ಸಮಸ್ಯೆ ಎದುರಿಸಬೇಕಾಗುತ್ತೆ.
ಈ ಸಮಸ್ಯೆ ಯಾರನ್ನು ಹೆಚ್ಚಾಗಿ ಕಾಡುತ್ತೆ?
ಎಕ್ಸ್ಪರ್ಟ್(Expert) ಪ್ರಕಾರ, ನೀವು ಈಗಾಗಲೇ ಕಣ್ಣಿನ ಸಮಸ್ಯೆ ಹೊಂದಿದ್ದರೆ ಮತ್ತು ಸ್ಕ್ರೀನ್ ಬಳಸುವಾಗ ನೀವು ಕನ್ನಡಕ ಧರಿಸದಿದ್ದರೆ, ನಿಮಗೆ ಹೆಚ್ಚಿನ ತೊಂದರೆ ಉಂಟಾಗುವ ಸಾಧ್ಯತೆಯಿದೆ. ಆದುದರಿಂದ ಕನ್ನಡಕ ಬಳಸೋದನ್ನು ಮರೆಯಬೇಡಿ.
ಅತಿಯಾದ ಬಳಕೆ ದೃಷ್ಟಿ ದೋಷ, ಕಣ್ಣಿನ ಡ್ರೈ ನೆಸ್, ಕಣ್ಣಿನ ಇರಿಟೇಷನ್, ತಲೆನೋವು ಅಥವಾ ಕುತ್ತಿಗೆ ನೋವಿನಂತಹ(Neck pain) ಸಮಸ್ಯೆಗಳಿಗೆ ಕಾರಣವಾಗಬಹುದು. ಆದರೆ, ಸ್ಕ್ರೀನ್ ಕಾರಣದಿಂದಾಗಿ ನಿಮ್ಮ ಕಣ್ಣಿನ ಸೈಟ್ ಫುಲ್ ಹಾಳಾಗುತ್ತೆ ಎಂದು ಹೇಳೋದು ಸರಿಯಲ್ಲ. ಇದು ಜನರ ಸ್ಥಿತಿಯ ಮೇಲೆ ಅವಲಂಬಿತವಾಗಿರುತ್ತೆ.
ಕಣ್ಣಿನ ಸಮಸ್ಯೆಗಳಿಂದ ನಿಮ್ಮನ್ನು ನೀವು ರಕ್ಷಿಸಿ
ನೇತ್ರತಜ್ಞರ ಪ್ರಕಾರ, ಮಕ್ಕಳು(Children) ಸ್ಕ್ರೀನ್ ಹೆಚ್ಚು ಕಾಲ ನೋಡಬಾರದು. ನೀವು ಆಫೀಸ್ನಲ್ಲಿ ಕುಳಿತು ಕೆಲಸ ಮಾಡುತ್ತಿದ್ದರೆ, ನೀವು ನಡುವೆ ಬ್ರೇಕ್ ತೆಗೆದುಕೊಳ್ಳಬೇಕು. 20 ನಿಮಿಷಗಳ ಕಾಲ ಕೆಲಸ ಮಾಡಿದ ನಂತರ, 20 ಸೆಕೆಂಡು ರೆಸ್ಟ್ ತೆಗೆದುಕೊಳ್ಳಿ ಮತ್ತು ಈ ಸಮಯದಲ್ಲಿ 20 ಬಾರಿ ಕಣ್ಣು ಮಿಟುಕಿಸಿ.
ಕಣ್ಣುಗಳಲ್ಲಿ ಡ್ರೈ ನೆಸ್ (Dryness)ಇದ್ದರೆ, ವೈದ್ಯರನ್ನು ಭೇಟಿಯಾಗಿ ಡ್ರಾಪ್ಸ್ ತೆಗೆದುಕೊಳ್ಳಬಹುದು. ಅತ್ಯಂತ ಮುಖ್ಯವಾದ ವಿಷಯವೆಂದರೆ ಪ್ರತಿ 3 ತಿಂಗಳಿಗೊಮ್ಮೆ ನೀವು ಕಣ್ಣಿನ ತಪಾಸಣೆ ಮಾಡಬೇಕು. ಇಲ್ಲವಾದರೆ ಕಣ್ಣಿನ ಸಮಸ್ಯೆ ಹೆಚ್ಚಾಗುವ ಸಾಧ್ಯತೆ ಇದೆ.