Health Tips: ಬ್ಲಡ್ ಗ್ರೂಪ್‌ಗೆ ತಕ್ಕಂತೆ ಆಹಾರ ಸೇವಿಸಿದ್ರೆ ಆರೋಗ್ಯ ಭಾಗ್ಯ

ಮನುಷ್ಯ ಆರೋಗ್ಯವಾಗಿದ್ರೆ ಏನನ್ನಾದ್ರೂ ಸಾಧಿಸಬಲ್ಲ. ದೇಹಕ್ಕೆ ಅಗತ್ಯವಿರುವಷ್ಟು ರಕ್ತವಿರಬೇಕು. ಅದು ಶುದ್ಧವಾಗಿರಬೇಕು ಹಾಗೇ ರಕ್ತದ ಹರಿವು ಸರಾಗವಾಗಿರಬೇಕು. ಇದಕ್ಕೆಲ್ಲ ನಾವು ತಿನ್ನುವ ಆಹಾರ ಮುಖ್ಯವಾಗುತ್ತೆ. ನಿಮ್ಮ ರಕ್ತದ ಗುಂಪು ತಿಳಿದ್ಕೊಂಡು ಆಹಾರ ಸೇವನೆ ಮಾಡೋದು ಬಹಳ ಒಳ್ಳೆಯದು.
 

Health Tips Diet According To Blood Group to stay fit and healthy roo

ಜೂನ್ 14ರಂದು ವಿಶ್ವ ರಕ್ತದಾನಿಗಳ ದಿನವನ್ನಾಗಿ ಆಚರಣೆ ಮಾಡಲಾಗುತ್ತದೆ. ನಮ್ಮ ದೇಹಕ್ಕೆ ರಕ್ತ ಎಷ್ಟು ಅಗತ್ಯ ಎಂಬುದು ನಮಗೆ ತಿಳಿದಿದೆ. ನಾವು ಆರೋಗ್ಯವಾಗಿದ್ರೆ ಬೇರೆಯವರಿಗೆ ರಕ್ತದಾನ ಮಾಡಬಹುದು. ರಕ್ತದಾನಕ್ಕೆ ಮಾತ್ರವಲ್ಲ ನಮ್ಮ ಆರೋಗ್ಯಕ್ಕೂ ನಾವು ಸೇವನೆ ಮಾಡುವ ಆಹಾರ ಮುಖ್ಯವಾಗುತ್ತದೆ. ಹೆಚ್ಚು ಪೌಷ್ಟಿಕವಿರುವ ಆಹಾರ ಸೇವನೆ ಮಾಡಿದಾಗ ನಮ್ಮ ದೇಹ ಆರೋಗ್ಯವಾಗಿರುತ್ತದೆ. 

ಪ್ರತಿಯೊಂದು ರಕ್ತ (Blood)ದ ಗುಂಪು ತನ್ನದೇ ಆದ ಸ್ವಭಾವ (Nature) ವನ್ನು ಹೊಂದಿರುತ್ತದೆ. A, B, AB ಮತ್ತು O ಎಂದು ನಾಲ್ಕು ರಕ್ತದ ವಿಧಗಳಿವೆ. ವೈದ್ಯ (Doctor)ರನ್ನು ಭೇಟಿ ಮಾಡುವ ಮೂಲಕ ನಮ್ಮ ರಕ್ತದ ಗುಂಪನ್ನು ನಾವು ತಿಳಿದುಕೊಳ್ಳಬಹುದು. ನಮ್ಮ ರಕ್ತದ ಗುಂಪು ಯಾವುದಿದೆ ಎಂಬುದು ಪತ್ತೆಯಾದ್ಮೇಲೆ ನಾವು ಅದಕ್ಕೆ ತಕ್ಕ ಆಹಾರ ಸೇವನೆ ಮಾಡ್ಬೇಕು. ಹೌದು, ನಿಮ್ಮ ರಕ್ತದ ಗುಂಪಿಗೆ ಅನುಕೂಲವಾಗುವ ಆಹಾರವನ್ನು ನೀವು ಸೇವನೆ ಮಾಡಿದ್ರೆ ಮತ್ತಷ್ಟು ಆರೋಗ್ಯ ಚೆನ್ನಾಗಿರುತ್ತದೆ ಎನ್ನುತ್ತಾರೆ ತಜ್ಞರು. ಯಾವ ರಕ್ತದ ಗ್ರೂಪ್ ನವರು ಯಾವ ಆಹಾರ ಸೇವನೆ ಮಾಡ್ಬೇಕು ಅಂತಾ ನಾವು ಹೇಳ್ತೇವೆ.

Health Tips: ರಕ್ತನಾಳಗಳಲ್ಲಿ ಕೊಬ್ಬು ಹೆಚ್ತಾ ಇದ್ಯಾ? ಕಾಲುಗಳಲ್ಲಿ ಗೊತ್ತಾಗುತ್ತೆ ಅಲಕ್ಷ್ಯ ಬೇಡ

ಯಾವ ರಕ್ತದ ಗ್ರೂಪ್ ನವರು ಯಾವ ಆಹಾರ ಸೇವನೆ ಮಾಡ್ಬೇಕು? :

ಬಿ ರಕ್ತದ ಗ್ರೂಪ್ ನವರು ಈ ಆಹಾರ ಸೇವನೆ ಮಾಡಿ : ಆಹಾರದ ವಿಷ್ಯದಲ್ಲಿ ಬಿ ರಕ್ತದ ಗ್ರೂಪಿನ ಜನರು ಅದೃಷ್ಟವಂತರು ಎನ್ನಬಹುದು. ಯಾಕೆಂದ್ರೆ ಅವರು ಯಾವುದೇ ಆಹಾರವನ್ನು ಆರಾಮವಾಗಿ ಸೇವನೆ ಮಾಡಬಹುದು. ಇವರ ಜೀರ್ಣಾಂಗ ವ್ಯವಸ್ಥೆ ಪ್ರಬಲವಾಗಿದೆ. ಅವರ ದೇಹದಲ್ಲಿ ಕೊಬ್ಬು ಸಂಗ್ರಹವಾಗೋದು ಕಡಿಮೆ. ನೀವು ಹಸಿರು ಸೊಪ್ಪು, ತರಕಾರಿ, ಹಣ್ಣು, ಚಿಕನ್-ಮಟನ್ ಸೇರಿದಂತೆ ಎಲ್ಲ ರೀತಿಯ ಆಹಾರವನ್ನು ಸೇವನೆ ಮಾಡಬಹುದು. ಹಾಲು ಹಾಗೂ ಹಾಲಿನ ಉತ್ಪನ್ನಗಳನ್ನು, ಮೊಟ್ಟೆ ಸೇವನೆ ಮಾಡಿದ್ರೂ ಒಳ್ಳೆಯದು. ಬಿ ರಕ್ತ ಗುಂಪಿನವರು ಸಮತೋಲಿತ ಆಹಾರಕ್ಕೆ ಮಹತ್ವ ನೀಡ್ಬೇಕಾಗುತ್ತದೆ.

ಎ ರಕ್ತದ ಗುಂಪಿನವರಿಗೆ ಯಾವ ಆಹಾರ ಬೆಸ್ಟ್ ? : ಎ ರಕ್ತದ ಗುಂಪು ಹೊಂದಿರುವ ಜನರ ಪ್ರತಿರಕ್ಷಣಾ ವ್ಯವಸ್ಥೆ ಸೂಕ್ಷ್ಮವಾಗಿರುತ್ತದೆ. ಹಾಗಾಗಿ ಅವರು ಆಹಾರದ ಬಗ್ಗೆ ಸ್ವಲ್ಪ ಹೆಚ್ಚುವರಿ ಕಾಳಜಿ ವಹಿಸಬೇಕು. ಮಾಂಸದ ಸೇವನೆ ಕಡಿಮೆ ಮಾಡಿದ್ರೆ ಒಳ್ಳೆಯದು. ಯಾಕೆಂದ್ರೆ ಇದ್ರ ಜೀರ್ಣಕ್ರಿಯೆಗೆ ತುಂಬಾ ಸಮಯ ಹಿಡಿಯುತ್ತದೆ. ಚಿಕನ್ ಹಾಗೂ ಮಟನ್ ನಿಂದ ದೂರವಿದ್ಡಷ್ಟು ಒಳ್ಳೆಯದು. ನೀವು ಹಸಿರು ತರಕಾರಿ, ಕ್ಯಾರೆಟ್, ಬೆಳ್ಳುಳ್ಳಿ, ಧಾನ್ಯ, ಪೇರಳೆ ಹಣ್ಣು, ಬೀನ್ಸ್ ಮತ್ತು ಹಣ್ಣುಗಳನ್ನು ತಿನ್ನಬಹುದು. ಮೊಸರು ಹಾಗೂ ಸೋಯಾ ಹಾಲನ್ನು ಇವರು ಸೇವಿಸಬಹುದು. ಆದ್ರೆ ಹಾಲು ಹಾಗೂ ಅದ್ರ ಉತ್ಪನ್ನ, ಅಕ್ಕಿ, ಮೊಟ್ಟೆ ತಿನ್ನುವ ವೇಳೆ ಸ್ವಲ್ಪ ಎಚ್ಚರಿಕೆ ವಹಿಸಬೇಕು.

Blood Donor Day: ರಕ್ತದಾನಿ ದಿನದ ಆಚರಣೆ ಎಂದು? ರಕ್ತ ನೀಡಿದ್ರೇನು ಲಾಭ?

ಎಬಿ ರಕ್ತದ ಗ್ರೂಪ್ ಜನರಿಗಿರಲಿ ಈ ಆಹಾರ : ಎ ಮತ್ತು ಬಿ ರಕ್ತದ ಗುಂಪಿನ ಜನರು ಯಾವುದನ್ನೂ ಸೇವನೆ ಮಾಡಬಾರದೋ ಅದನ್ನು ಎಬಿ ರಕ್ತದ ಗುಂಪಿನ ಜನರು ಕೂಡ ಸೇವನೆ ಮಾಡಬಾರದು. ಹಣ್ಣು ಹಾಗೂ ತರಕಾರಿಯನ್ನು ಹೆಚ್ಚಾಗಿ ತಿಂದ್ರೆ ಒಳ್ಳೆಯದು. ಮಾಂಸಹಾರದಿಂದ ದೂರವಿರಬೇಕು. ನೀವು ಮೊಟ್ಟೆಯನ್ನು ತಿನ್ನಬಹುದು. ಇದಲ್ಲದೆ ಹಾಲಿನಿಂದ ಮಾಡಿದ ಆಹಾರ ಸೇವನೆ ಮಾಡಿದ್ರೆ ನಷ್ಟವೇನಿಲ್ಲ.

ಒ ರಕ್ತ ಗುಂಪಿನ ಜನರು ತಿನ್ನಬೇಕು ಈ ಆಹಾರ : ಒ ರಕ್ತದ ಗುಂಪಿನ ಜನರಿಗೆ ಪ್ರೋಟೀನ್ ಅಗತ್ಯ ಹೆಚ್ಚಿರುತ್ತದೆ. ಹಾಗಾಗಿ ಪ್ರೋಟೀನ್ ಭರಿತ ಆಹಾರವನ್ನು ಇವರು ಹೆಚ್ಚು ತಿನ್ನಬೇಕಾಗುತ್ತದೆ. ಬೇಳೆಕಾಳುಗಳು, ಮಾಂಸ, ಮೀನು, ಹಣ್ಣುಗಳ ಸೇವನೆ ಹೆಚ್ಚು ಪ್ರಯೋಜನಕಾರಿ. ಧಾನ್ಯಗಳು ಮತ್ತು ಬೀನ್ಸನ್ನು ಇವರು ಸಮತೋಲನಗೊಳಿಸಿ ಸೇವನೆ ಮಾಡಿದ್ರೆ ಹೆಚ್ಚು ಲಾಭ ಪಡೆಯುತ್ತಾರೆ. 
 

Latest Videos
Follow Us:
Download App:
  • android
  • ios