Health Tips : ನೋವು ಮಾತ್ರವಲ್ಲ ತೂಕ ಕಡಿಮೆ ಮಾಡುತ್ತೆ ಈ ಮಸಾಜ್
ಮಸಾಜ್ ಮಹತ್ವ ಮಾಡಿಸಿಕೊಂಡವರಿಗೆ ಗೊತ್ತು. ದೇಹದ ನೋವಿನ ಭಾಗಕ್ಕೆ ಮಸಾಜ್ ಸರಿಯಾಗಿ ಆದ್ರೆ ನೋವು ಕಡಿಮೆಯಾಗೋದು ಮಾತ್ರವಲ್ಲ ಮನಸ್ಸಿಗೆ ನೆಮ್ಮದಿಯಾಗುತ್ತೆ. ಆಯುರ್ವೇದದಲ್ಲಿರುವ ಒಂದು ಮಸಾಜ್, ತೂಕ ಇಳಿಸುವ ಕೆಲಸ ಕೂಡ ಮಾಡುತ್ತೆ.
ದೇಹದ ಯಾವುದೇ ಭಾಗದಲ್ಲಿ ನೋವಾಗಿದೆ ಎಂದಾಗ ನಾವು ನೋವಿನ ಮಾತ್ರೆ ಸೇವನೆ ಮೊದಲು ಮಸಾಜ್ ಮೊರೆ ಹೋಗ್ತೇವೆ. ಮನೆಯಲ್ಲಿರುವ ಯಾವುದೋ ನೋವಿನ ಆಯಿಲ್ ಅಥವಾ ತೆಂಗಿನ ಎಣ್ಣೆ ಬಳಸಿಕೊಂಡು ಮಸಾಜ್ ಮಾಡಿಕೊಳ್ತೇವೆ. ಆಯುರ್ವೇದದಲ್ಲಿ ಈ ಮಸಾಜ್ ಗೆ ಹೆಚ್ಚಿನ ಮಹತ್ವವಿದೆ. ಮಸಾಜ್ ಬರೀ ನೋವನ್ನು ಕಡಿಮೆ ಮಾಡುವುದು ಮಾತ್ರವಲ್ಲ ಮಾನಸಿಕ ಶಾಂತಿ ನೀಡುವ ಕೆಲಸ ಮಾಡುತ್ತದೆ. ಆಯುರ್ವೇದದಲ್ಲಿ ಅನೇಕ ಮಸಾಜ್ ಗಳಿವೆ. ಅದ್ರಲ್ಲಿ ಡ್ರೈ ಮಸಾಜ್ ಅಥವಾ ಆಯುರ್ವೇದದಲ್ಲಿ ಉದ್ವರ್ತನ ಮಸಾಜ್ ಕೂಡ ಒಂದು. ಇದು ಸ್ಟ್ರೆಸ್ ಕಡಿಮೆ ಮಾಡುವ ಅಧ್ಬುತ ಕೆಲಸವನ್ನು ಮಾಡುತ್ತದೆ. ನೀವು ಪ್ರತಿ ದಿನ ಉದ್ವರ್ತನ ಮಸಾಜ್ ಮಾಡಿಸಿಕೊಂಡ್ರೆ ನಿಮ್ಮ ದೇಹದಲ್ಲಿನ ಕೊಬ್ಬು ಕರಗುತ್ತದೆ. ಒಮ್ಮೆ ನೀವು ಉದ್ವರ್ತನ ಮಸಾಜ್ ಮಾಡಿಸಿಕೊಂಡ್ರೆ ದೇಹ ಹಗುರವಾದ ಅನುಭವವಾಗುತ್ತದೆ. ದೇಹಕ್ಕೆ ವಿಶ್ರಾಂತಿ ಸಿಗುತ್ತದೆ. ನಾವಿಂದು ಉದ್ವರ್ತನ ಮಸಾಜ್ ಅಂದ್ರೇನು, ಅದರಿಂದ ಆಗುವ ಲಾಭಗಳು ಏನು ಎಂಬುದನ್ನು ನಿಮಗೆ ಹೇಳ್ತೇವೆ.
ಉದ್ವರ್ತನ (Udvartana) ಮಸಾಜ್ ಅಂದ್ರೇನು? : ಮೊದಲೇ ಹೇಳಿದಂತೆ ಇದೊಂದು ಆಯುರ್ವೇದದ ಮಸಾಜ್ (Massage). ಕತ್ತಿನಿಂದ ಕೆಳಗಿನ ಭಾಗಕ್ಕೆ ಉದ್ವರ್ತನ ಮಸಾಜ್ ಮಾಡಲಾಗುತ್ತದೆ. ಕೂದಲ (Hair) ಬೆಳವಣಿಗೆಗೆ ವಿರುದ್ಧ ದಿಕ್ಕಿನಲ್ಲಿ ಮಸಾಜ್ ನಡೆಯುತ್ತದೆ. ಕಡಿಮೆ ಪ್ರೆಶರ್ ನಲ್ಲಿ ಮಸಾಜ್ ಮಾಡಲಾಗುತ್ತದೆ. ಎಣ್ಣೆಗೆ ಗಿಡಮೂಲಿಕೆ ಪುಡಿಯನ್ನು ಹಾಕಿ ನಂತ್ರ ದೇಹದ ಭಾಗಕ್ಕೆ ಎಣ್ಣೆಯನ್ನು ಹಚ್ಚಿ, ನಿಧಾನವಾಗಿ ಮಸಾಜ್ ಮಾಡಲಾಗುತ್ತದೆ. ಸ್ನಿಗ್ಧ, ಉದ್ಗರ್ಶನ ಮತ್ತು ಉತ್ಸಾದನ ಹೀಗೆ ಹಲವು ವಿಧದಲ್ಲಿ ಮಸಾಜ್ ಮಾಡಲಾಗುತ್ತದೆ. ಸ್ನಾನ (Bathing) ದ ಮೊದಲು ಹಾಗೂ ಖಾಲಿ ಹೊಟ್ಟೆಯಲ್ಲಿ ಈ ಮಸಾಜ್ ಮಾಡುವಂತೆ ತಜ್ಞರು ಸಲಹೆ ನೀಡ್ತಾರೆ.
ಲೈಂಗಿಕ ಆಸಕ್ತಿ ಹೆಚ್ಚಿಸುತ್ತಾ ಥಾಯ್ ಮಸಾಜ್?
ಉದ್ವರ್ತನ ಮಸಾಜ್ ನಿಂದ ಆಗುವ ಲಾಭಗಳು :
ಕೊಬ್ಬು ಕಡಿಮೆ ಮಾಡಲು ಸಹಕಾರಿ : ದೇಹದಲ್ಲಿ ಅಲ್ಲಲ್ಲಿ ಸಂಗ್ರಹವಾಗಿ, ದೇಹದ ತೂಕವನ್ನು ಹೆಚ್ಚು ಮಾಡುವ ಜೊತೆಗೆ ದೇಹದ ಆಕಾರವನ್ನು ಬದಲಿಸಿ, ಅನೇಕ ರೋಗಕ್ಕೆ ಕಾರಣವಾಗುವ ಕೊಬ್ಬನ್ನು ಈ ಮಸಾಜ್ ನಿಂದ ಕರಗಿಸಬಹುದು. ನೀವು ನಿಯಮಿತವಾಗಿ ಈ ಮಸಾಜ್ ಮಾಡಿಸಿಕೊಂಡಲ್ಲಿ ಮಾತ್ರ ಲಾಭ ಪಡೆಯಬಹುದು. ಈ ಮಸಾಜ್ ಬಾಡಿ ಮಾಸ್ ಇಂಡೆಕ್ಸ್ ಸಮತೋಲನ ಕಾಯ್ದುಕೊಳ್ಳಲು ನೆರವಾಗುತ್ತದೆ. ಕೊಬ್ಬು ಸಂಗ್ರಹವಾಗುವುದನ್ನು ತಡೆಯುತ್ತದೆ.
ಒತ್ತಡ ಕಡಿಮೆ ಮಾಡುವ ಮಸಾಜ್ : ಇಡೀ ದಿನ ಒಂದಲ್ಲ ಒಂದು ಸಮಸ್ಯೆಯಲ್ಲಿ ಜನರು ಜೀವನ ಸಾಗಿಸ್ತಿದ್ದಾರೆ. ಬೆಳಿಗ್ಗೆ ಎದ್ದಾಗಿನಿಂದ ರಾತ್ರಿವರೆಗೆ ನಡೆಯುವ ಕೆಲಸ ಅವರ ಒತ್ತಡ ಹೆಚ್ಚಿಸಿದೆ. ಈ ಒತ್ತಡ ಅನೇಕ ಖಾಯಿಲೆಗಳನ್ನು ತರ್ತಿದೆ. ಒತ್ತಡದಿಂದ ಮುಕ್ತಿಬೇಕು, ಮನಸ್ಸು ರಿಲ್ಯಾಕ್ಸ್ ಆಗ್ಬೇಕು, ಮುಖದಲ್ಲಿ ನಗು ಇರಬೇಕೆಂದ್ರೆ ನೀವು ಉದ್ವರ್ತನ ಮಸಾಜ್ ಮಾಡಿಸಿಕೊಳ್ಳಬಹುದು. ಈ ಮಸಾಜ್ ಮನಸ್ಸು ಮತ್ತು ದೇಹವನ್ನು ಆರಾಮಗೊಳಿಸುತ್ತದೆ. ಈ ಮಸಾಜ್‌ನಿಂದ ದೇಹವು ತುಂಬಾ ಹಗುರವಾಗುತ್ತದೆ. ಒತ್ತಡ ಮುಕ್ತವಾಗುತ್ತದೆ. ನಿದ್ರೆಯ ಸಮಸ್ಯೆಯಿಂದ ನೀವು ತೊಂದರೆಗೊಳಗಾಗಿದ್ದರೆ ಈ ಮಸಾಜ್ ಒಳ್ಳೆಯದು. ಒತ್ತಡ ಕಡಿಮೆಯಾಗಿ ಶಾಂತ ನಿದ್ರೆ ನಿಮ್ಮನ್ನು ಆವರಿಸಲು ಇದು ನೆರವಾಗುತ್ತದೆ.
ಮಲಗುವ ಮೊದಲು ‘ಪಾದಾಭ್ಯಂಗ’ ಮಾಡಿದ್ರೆ, ಅನೇಕ ರೋಗ ದೂರವಾಗುತ್ತೆ!
ಮೃದು ಮತ್ತು ಹೊಳೆಯುವ ಚರ್ಮಕ್ಕೆ ಬೆಸ್ಟ್ : ಮಸಾಜ್ ನಿಂದ ಸಾಕಷ್ಟು ಪ್ರಯೋಜನವಿದೆ. ಉದ್ವರ್ತನ ಮಸಾಜ್ ನಿಮ್ಮ ಚರ್ಮದ ಕಾಂತಿಯನ್ನು ಹೆಚ್ಚಿಸುವ ಕೆಲಸ ಮಾಡುತ್ತದೆ. ಮಸಾಜ್ ಗೆ ಬಳಸುವ ಪೌಡರ್ ಚರ್ಮವನ್ನು ಮೃದುಗೊಳಿಸುತ್ತದೆ. ಅಲ್ಲದೆ ಹೊಳಪು ನೀಡುತ್ತದೆ. ನಿಮ್ಮ ಚರ್ಮದ ಮೇಲೆ ಸಂಗ್ರಹವಾಗಿರುವ ಕೊಳೆ, ಧೂಳುಗಳನ್ನು ತೆಗೆದುಹಾಕಿ ಚರ್ಮ ಕಾಂತಿಗೊಳ್ಳಲು ಉದ್ವರ್ತನ ಮಸಾಜ್ ಸಹಾಯಕಾರಿಯಾಗಿದೆ.