ಕೋಲ್ಡ್ ಡ್ರಿಂಕ್ಸ್, ಐಸ್‌ಕ್ರೀಂ ಬೇಡ, ಸ್ಕಾರ್ಫ್ ಕಟ್ಟಿ, ಮಾಸ್ಕ್ ಹಾಕಿ ! ಇಲ್ಲಿದೆ ಆರೋಗ್ಯ ಇಲಾಖೆಯ ಗೈಡ್‌ಲೈನ್ಸ್
ಮಾಂಡೌಸ್' ಚಂಡಮಾರುತದ ಪರಿಣಾಮ ಚಳಿ, ಮಳೆ, ತಂಪು ಗಾಳಿಯ ಪ್ರಭಾವ ಹೆಚ್ಚಾಗಿದೆ. ಅನೇಕ ಕಡೆಗಳಲ್ಲಿ ಮಳೆ ಮುಂದುವರಿದ ಪರಿಣಾಮ ಜನರ ಆರೋಗ್ಯ ಹದಗೆಡುತ್ತಿದ್ದು, ಅನಾರೋಗ್ಯಕ್ಕೆ ತುತ್ತಾಗದಂತೆ ಆರೋಗ್ಯ ಇಲಾಖೆ ಕೆಲವು ಸಲಹೆಗಳನ್ನು ನೀಡಿದೆ. ಹದಗೆಟ್ಟ ವಾತಾವರಣದಲ್ಲಿ ಆರೋಗ್ಯ ಚೆನ್ನಾಗಿರಬೇಕಾದರೆ ಏನು ಮಾಡಬೇಕು ? ಏನು ಮಾಡಬಾರದು ಎಂಬುದನ್ನು ಹೇಳಿದೆ.
ಮಾಂಡೌಸ್ ಚಂಡಮಾರುತದ ಅಬ್ಬರಕ್ಕೆ ರಾಜ್ಯದಲ್ಲಿ ಭಾರೀ ಮಳೆ (Rain), ಶೀತಗಾಳಿ ಹೆಚ್ಚುತ್ತಿದ್ದು, ಜನರು ತತ್ತರಿಸುತ್ತಿದ್ದಾರೆ. ಕಳೆದ ಮೂರು ದಿನಗಳಿಂದ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ವಿಪರೀತ ಗಾಳಿ, ಮಳೆಯಾಗುತ್ತಿದ್ದು, ಜನರು ಆರೋಗ್ಯ ಸಮಸ್ಯೆಗಳಿಗೀಡಾಗುತ್ತಿದ್ದಾರೆ. ಬೆಂಗಳೂರಿನಲ್ಲೂ ಹದಗೆಟ್ಟ ವಾತಾವರಣ (Weather)ದಿಂದ ಜನರು ತತ್ತರಿಸಿ ಹೋಗದ್ದಾರೆ. ಅನಾರೋಗ್ಯದಿಂದ ಆಸ್ಪತ್ರೆಗೆ ಹೋಗುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಹೀಗಾಗಿ ಆರೋಗ್ಯ ಸಚಿವ ಸುಧಾಕರ್ ರಾಜ್ಯದ ಜನತೆಗೆ ಆರೋಗ್ಯದ (Health) ಬಗ್ಗೆ ಕಾಳಜಿ (Care) ವಹಿಸುವಂತೆ ಸೂಚಿಸಿದ್ದಾರೆ.
ಮಾಂಡೌಸ್ ಚಂಡಮಾರುತದ ಅಬ್ಬರದ ಬೆನ್ನಲ್ಲೇ, ಬಂಗಾಳಕೊಲ್ಲಿಯಲ್ಲಿ ಮತ್ತೊಂದು ಚಂಡಮಾರುತ (Cyclone) ಸೃಷ್ಟಿಯಾಗುವ ಸಾಧ್ಯತೆ ಇದೆ. ಹೀಗೆ ಮಳೆ, ಗಾಳಿ, ಚಳಿ ಹೆಚ್ಚಾಗುತ್ತಿದ್ದಂತೆ ಜನರಿಗೆ ಶೀತ, ಜ್ವರ ಇನ್ನಿತರ ಕಾರಣಗಳಿಂದ ಅನಾರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ. ಅದರಲ್ಲೂ ಮಕ್ಕಳು, ಗರ್ಭಿಣಿಯರು (Pregnant), ವೃದ್ಧರಿಗೆ ಇಂತಹ ಅನಾರೋಗ್ಯ ಸಮಸ್ಯೆ ಹೆಚ್ಚು. ಈ ಕಾರಣಕ್ಕೆ ನಿಮ್ಮ ಕುಟುಂಬದ ಆರೋಗ್ಯ ದೃಷ್ಟಿಯಿಂದ ಹಲವು ಆರೋಗ್ಯ ಕ್ರಮ ಅನುಸರಿಸುವಂತೆ ರಾಜ್ಯ ಆರೋಗ್ಯ ಇಲಾಖೆ ಸೂಚಿಸಿದೆ.
Winter Tips: ಚಳಿಗೆ ನೀರನ್ನೇ ಮುಟ್ಟೋಕಾಗಲ್ಲ, ಪಾತ್ರೆ ತೊಳೆಯೋದು ಹೇಗಪ್ಪಾ ?
ಆರೋಗ್ಯ ಚೆನ್ನಾಗಿಟ್ಟುಕೊಳ್ಳಲು ಏನು ಮಾಡಬೇಕು ?
* ದೇಹವನ್ನು ಯಾವಾಗಲೂ ಹೈಡ್ರೇಟ್ ಆಗಿಟ್ಟುಕೊಳ್ಳಿ. ಬಿಸಿ ನೀರು, ಸೂಪ್ ಕುಡಿಯುತ್ತಿರಿ
* ತಾಜಾ ಆಹಾರ ಅಥವಾ ಬಿಸಿ ಆಹಾರ ಮಾತ್ರ ಸೇವಿಸಿ. ಆಹಾರ ಸುಲಭವಾಗಿ ಜೀರ್ಣವಾಗುವಂತಿರಲಿ.
* ಸಾಧ್ಯವಾದಷ್ಟು ಸ್ವೆಟರ್, ಸಾಕ್ಸ್, ಕೈಗವಸು ಸೇರಿದಂತೆ ಬೆಚ್ಚಿನ ಧಿರಿಸು ಧರಿಸಬೇಕು. ಮನೆಯಲ್ಲಿಯೂ ಬೆಚ್ಚಗಿರಬೇಕು.
* ಸ್ನಾನಕ್ಕೆ ಬಿಸಿ ನೀರು/ ಇಲ್ಲವೇ ತುಸು ಬೆಚ್ಚಗಿನ ನೀರು ಬಳಸಬೇಕು.
* ಅನಗತ್ಯ ಮನೆಯಿಂದ ಹೊರಗಡೆ ಹೋಗೋದನ್ನು ನಿಲ್ಲಿಸಬೇಕು.
* ಅನಿವಾರ್ಯ ಪರಿಸ್ಥಿತಿಗಳಲ್ಲಿ ಮನೆಯಿಂದ ಹೊರಗೆ ಹೋಗಲೇಬೇಕಾದಲ್ಲಿ ಕಿವಿಗಳಿಗೆ ಸ್ಕಾರ್ಪ್ ಕಟ್ಟಿಕೊಳ್ಳಬೇಕು ಮತ್ತು ಮನೆಯಿಂದ ಹೊರ ಹೋಗುವಾಗ ಮಾಸ್ಕ್ ಧರಿಸಬೇಕು.
* ಕೆಮ್ಮು, ಶೀತ, ಜ್ವರ ಇರುವವರಿಂದ ದೂರವಿರಬೇಕು.
* ಸೀನುವಾಗ ಕರವಸ್ತ್ರ ಬಳಸಿ. ಇಲ್ಲವಾದಲ್ಲಿ ಸೀನುವಾಗ ಮೊಣಕೈ ಅಡ್ಡವಿಟ್ಟುಕೊಳ್ಳಬೇಕು.
* ಕೈಗಳನ್ನು ಆಗಾಗ ತೊಳೆಯುತ್ತಿರಿ. ಇದರಿಂದ ಬ್ಯಾಕ್ಟಿರೀಯಾಗಳಿದ್ದರೂ ಸಾಯುತ್ತವೆ
* ಜ್ವರ, ಇನ್ನಿತರ ಖಾಯಿಲೆ ಲಕ್ಷಣ ಕಂಡು ಬಂದರೆ ಕೂಡಲೇ ಹತ್ತಿರದ ಆಸ್ಪತ್ರೆ ವೈದ್ಯರನ್ನು ಸಂಪರ್ಕಿಸಬೇಕು.
Snacks Recipes: ಮೈ ಕೊರೆಯುವ ಚಳಿಗೆ ಬಿಸಿ ಬಿಸಿ ಬೋಂಡಾ ಮಾಡಿ ತಿನ್ನಿ, ರೆಸಿಪಿ ಇಲ್ಲಿದೆ
ಆರೋಗ್ಯ ಚೆನ್ನಾಗಿರಬೇಕಾದರೆ ಹೀಗೆಲ್ಲಾ ಮಾಡಬಾರದು
* ತಣ್ಣಗಿನ ಪಾನೀಯ, ನೀರು, ಐಸ್‌ಕ್ರೀಂ ಸೇವಿಸಬೇಡಿ
* ಮಳೆಯಲ್ಲಿ ನೆನೆಯುವುದು ಇಲ್ಲವೇ ಶೀತಗಾಳಿಗೆ ಮೈ ಒಡ್ಡುವುದನ್ನು ನಿಲ್ಲಿಸಬೇಕು.
* ಹಿಲ್ ಸ್ಟೇಶನ್ ಇನ್ನಿತರ ಕಡೆಗಳಲ್ಲಿನ ಪ್ರವಾಸ ಆದಷ್ಟು ನಿರ್ಬಂಧಿಸಿ.
* ಬಿಸಿ ಬಿಸಿ ಆಹಾರ ಸೇವಿಸುವಂತೆ ತಜ್ಞರು ಸೂಚಿಸುತ್ತಾರೆ.
* ಮಸಾಲೆಯುಕ್ತ/ಜಂಕ್ ಫುಡ್‌ಗಳನ್ನು ಸೇವಿಸಬಾರದು
* ತಣ್ಣಗಿನ ನೀರನ್ನು ಕುಡಿಯಿರಿ.ಆರಿಸಿದ ನೀರನ್ನು ಕುಡಿಯಿರಿ.
ಬೆಂಗಳೂರಿನಲ್ಲಿ ಉಷ್ಣಾಂಶ ತೀವ್ರವಾಗಿ ಕುಸಿದಿದ್ದು, ತಾಪಮಾನವು 16 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ರಾಜ್ಯದ ಉತ್ತರ ಒಳನಾಡು, ದಕ್ಷಿಣ ಒಳನಾಡು, ಕರಾವಳಿ ಮತ್ತು ಬೆಂಗಳೂರು ಭಾಗಗಳಲ್ಲಿ ಇನ್ನು ಮೂರು ದಿನಗಳ ಕಾಲ ಮಳೆ ಮುಂದುವರೆಯಬಹುದು ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ಮುಂದಿನ ಕೆಲದಿನಗಳವರೆಗೂ ಚಂಡಮಾರುತದ ಪ್ರಭಾವ ದಕ್ಷಿಣ ಭಾರತದಲ್ಲಿ ಇರಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ಹೀಗಾಗಿ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವಂತೆ ಸೂಚನೆ ನೀಡಲಾಗಿದೆ.