ಚಳಿಗಾಲದಲ್ಲಿ ಇಮ್ಯೂನಿಟಿ ಬೂಸ್ಟ್ ಮಾಡೋ ಸತು ಪೂರಿತ ಆಹಾರ
First Published Nov 26, 2020, 4:28 PM IST
ನಮ್ಮ ದೇಹವು ಸೋಂಕುಗಳ ವಿರುದ್ಧ ಹೋರಾಡಲು ಮತ್ತು ರೋಗಗಳನ್ನು ದೂರವಿಡಲು ಉತ್ತಮ ರೋಗನಿರೋಧಕ ಶಕ್ತಿ ಅಗತ್ಯ. ಆದರೆ ಚಳಿಗಾಲದಲ್ಲಿ ಸೋಂಕುಗಳು ಮತ್ತು ರೋಗಗಳ ವಿರುದ್ಧ ನಮ್ಮ ದೇಹದ ಪ್ರತಿರಕ್ಷೆಯು ಕ್ಷೀಣಿಸುತ್ತದೆ. ಆದ್ದರಿಂದ, ನಿಯಮಿತವಾದ ವ್ಯಾಯಾಮ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಮೂಲಕ ಮತ್ತು ಆರೋಗ್ಯಕರ ಆಹಾರವನ್ನು ತೆಗೆದುಕೊಳ್ಳುವ ಮೂಲಕ ನಾವು ಈ ಋುತುವಿನಲ್ಲಿ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ.

ವಿಟಮಿನ್ ಸಿ ಅನ್ನು ರೋಗನಿರೋಧಕ ವರ್ಧಕ ಎಂದು ಕರೆಯಲಾಗುತ್ತದೆ ಆದರೆ ರೋಗಗಳ ವಿರುದ್ಧ ಹೋರಾಡುವ ನಮ್ಮ ದೇಹದ ನೈಸರ್ಗಿಕ ಸಾಮರ್ಥ್ಯಕ್ಕೆ ಇದು ಸಹಾಯ ಮಾಡುತ್ತದೆ. ಆರೋಗ್ಯ ತಜ್ಞರ ಪ್ರಕಾರ, ರೋಗ ನಿರೋಧಕ ಶಕ್ತಿಯ ಕಾರ್ಯಚಟುವಟಿಕೆಯಲ್ಲಿ ಸತುವು ಪ್ರಮುಖ ಪಾತ್ರ ವಹಿಸುತ್ತದೆ. ಸತುವು ಸಮೃದ್ಧವಾಗಿರುವ ಆಹಾರವನ್ನು ಸೇವಿಸುವುದರಿಂದ ರೋಗ ನಿರೋಧಕ ಶಕ್ತಿಯನ್ನುಹೆಚ್ಚಿಸಲಾಗುತ್ತದೆ.

ಆರೋಗ್ಯ ತಜ್ಞರ ಪ್ರಕಾರ, ವಯಸ್ಕ ದೇಹಕ್ಕೆ ಪ್ರತಿದಿನ ಕನಿಷ್ಠ 8 ರಿಂದ 13 ಮಿಲಿಗ್ರಾಂ ಜಿಂಕ್ (ಸತು)ವು ಬೇಕಾಗುತ್ತದೆ. ಚಳಿಗಾಲದ ಆರಂಭದೊಂದಿಗೆ, ನಮಗೆ ಸಾಕಷ್ಟು ಪ್ರಮಾಣದ ಸತುವು ಸಿಗುವುದು ಬಹಳ ಮುಖ್ಯ. ಆದ್ದರಿಂದ, ನಾವು ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುವ 7 ಸತು-ಭರಿತ ಆಹಾರಗಳ ಪಟ್ಟಿಯನ್ನು ಸಿದ್ಧಪಡಿಸಿದ್ದೇವೆ.
Today's Poll
ಎಷ್ಟು ಜನರೊಂದಿಗೆ ಆನ್ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?