Health Tips: ಸ್ಟಾರ್ ಫ್ರೂಟ್ ತಿನ್ನೋದ್ರಿಂದ ಆರೋಗ್ಯಕ್ಕೆ ಎಷ್ಟು ಲಾಭವಿದೆ ಗೊತ್ತಾ ?
ಸ್ಪಲ್ಪ ಚಳಿ, ಸ್ಪಲ್ಪ ಬಿಸಿಲು. ಬೆಳಗ್ಗೆ ಒಂಥರಾ ವಾತಾವರಣ, ಸಂಜೆ ಇನ್ನೊಂಥರಾ. ಇಂಥಹಾ ವೆದರ್‌ಗೆ ಆರೋಗ್ಯ (Health) ಸಮಸ್ಯೆ ಕಾಡದಿರುತ್ತಾ. ಜ್ವರ, ಶೀತ, ಕೆಮ್ಮು ಸಾಮಾನ್ಯವಾಗಿಬಿಡುತ್ತೆ. ನಿಮ್ಗೂ ಇದೇ ಸಮಸ್ಯೆ (Problem) ಕಾಡ್ತಿದ್ಯಾ ? ಹಾಗಿದ್ರೆ ಹೀಗ್ ಮಾಡಿ ಎಲ್ಲಾ ಸಮಸ್ಯೆ ದೂರವಾಗುತ್ತೆ.
ಕಾಲ ಬದಲಾವಣೆ ಹಲವಾರು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಕೆಮ್ಮು, ಶೀತ ಮತ್ತು ಜ್ವರವು ಕಾಲ ಬದಲಾಗುವ ಕಂಡುಬರುವ ಸಾಮಾನ್ಯ ಆರೋಗ್ಯ ಸಮಸ್ಯೆಗಳಾಗಿವೆ. ಹೀಗಾಗಿಯೇ ಆಹಾರ ತಜ್ಞರು ಸೀಸನಲ್ ಫುಡ್ ಸೇವಿಸಲು ಸಲಹೆ ನೀಡುತ್ತಾರೆ. ಹಣ್ಣು, ತರಕಾರಿಗಳು ಯಾವುದೇ ಆಗಿರಬಹುದು ಋತುಮಾನದ ಉತ್ಪನ್ನಗಳನ್ನು ಸೇವಿಸುವಂತೆ ಸಲಹೆ ನೀಡುತ್ತಾರೆ. ಯಾಕೆಂದರೆ ಇದು ಆ ಕಾಲಕ್ಕೆ ತಕಕ್ಕಂತೆ ನೈಸರ್ಗಿಕವಾಗಿ ಹಲವಾರು ಆರೋಗ್ಯ ಪ್ರಯೋಜನಕಾರಿ ಗುಣಗಳಿಂದ ಸಮೃದ್ಧವಾಗಿರುತ್ತದೆ.
ಸ್ಟಾರ್ ಫ್ರುಟ್ (Star Fruit) ಸಹ ಅಂತಹಾ ಹಣ್ಣುಗಳಲ್ಲೊಂದು. ಇದನ್ನು ಕ್ಯಾರಂಬೋಲಾ ಎಂದು ಸಹ ಕರೆಯುತ್ತಾರೆ. ಸ್ಟಾರ್ ಫ್ರೂಟ್ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಈ ಹಣ್ಣನ್ನು ಕತ್ತರಿಸಿದ ನಂತರ ನಕ್ಷತ್ರದಂತಹ ಸ್ಲೈಸ್ ಕಾಣಬಹುದಾಗಿದೆ. ಹೀಗಾಗಿಯೇ ಈ ಹಣ್ಣಿಗೆ ಸ್ಟಾರ್ ಫ್ರುಟ್ ಎಂಬ ಹೆಸರು ಬಂತು. ಭಾರತದ ವಿವಿಧ ಪ್ರದೇಶಗಳಲ್ಲಿ ಈ ಹಣ್ಣನ್ನು ಕಮ್ರಾಖ್, ಅಂಬನಕಾಯ, ತಾಂಬರತಮ್ ಮತ್ತು ಕಾಮರಂಗ ಎಂದೂ ಕರೆಯಲಾಗುತ್ತದೆ. ಆಗ್ನೇಯ ಏಷ್ಯಾದ ಉಷ್ಣವಲಯದಲ್ಲಿ ಸ್ಟಾರ್ ಹಣ್ಣನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುತ್ತಾರೆ.
Food And Health: ಸೀಸನಲ್ ಫುಡ್ ಯಾಕೆ ಸೇವಿಸಬೇಕು ?
ಆಯಾ ದೇಶದಲ್ಲಿ ಸ್ಟಾರ್ ಫ್ರುಟ್‌ನ್ನು ವಿಭಿನ್ನವಾಗಿ ಸೇವಿಸಲು ಬಳಸುತ್ತಾರೆ. ಹಣ್ಣುಗಳು ರುಚಿಕರವಾಗಿ ವೈವಿಧ್ಯಮಯವಾಗಿರುವುದರಿಂದ, ಇದನ್ನು ವಿವಿಧ ಅದ್ಭುತ ರೀತಿಯಲ್ಲಿ ಸೇವಿಸಬಹುದು. ಚೀನಿಯರು ಇದನ್ನು ಮೀನಿನೊಂದಿಗೆ ಸೇವಿಸುತ್ತಾರೆ. ಆಸ್ಟ್ರೇಲಿಯನ್ನರು ಸ್ಟಾರ್ ಫ್ರುಟ್‌ನಿಂದ ಉಪ್ಪಿನಕಾಯಿ (Pickle) ತಯಾರಿಸುತ್ತಾರೆ. ಭಾರತದಲ್ಲಿ ಸ್ಟಾರ್ ಫ್ರೂಟ್ ಒಂದು ರಸಭರಿತವಾದ ಹಣ್ಣಾಗಿ ಬಳಕೆಯಾಗುತ್ತದೆ. ಇದಲ್ಲದೆ, ಸ್ಟಾರ್ ಫ್ರುಟ್‌ನಲ್ಲಿ ಹಲವು ಆರೋಗ್ಯ (Health) ಪ್ರಯೋಜನಗಳಿವೆ ಅನ್ನೋದು ನಿಮಗೆ ಗೊತ್ತಾ ?
ಸ್ಟಾರ್ ಫ್ರೂಟ್ ಆರೋಗ್ಯ ಪ್ರಯೋಜನಗಳು
ಸ್ಟಾರ್ ಫ್ರೂಟ್ ಹಲವಾರು ಆರೋಗ್ಯ ಪ್ರಯೋಜನಕಾರಿ ಗುಣಗಳಿಂದ ಕೂಡಿದೆ. ಈ ಹಣ್ಣಿನಲ್ಲಿರುವ ಪೋಷಕಾಂಶಗಳ ಪ್ರಮಾಣದ ಬಗ್ಗೆ ಸೆಲಬ್ರಿಟಿ ಪೌಷ್ಟಿಕತಜ್ಞ ನಾಮಿ ಅಗರ್ವಾಲ್ ಮಾಹಿತಿ ನೀಡಿದ್ದಾರೆ. ಅವರ ಇತ್ತೀಚಿನ ಪೋಸ್ಟ್‌ನ ಪ್ರಕಾರ, ಸ್ಟಾರ್ ಫ್ರೂಟ್, ವಿಟಮಿನ್ (Vitamin) ಎ, ವಿಟಮಿನ್ ಬಿ ಮತ್ತು ವಿಟಮಿನ್ ಸಿಯಲ್ಲಿ ಸಮೃದ್ಧವಾಗಿದೆ. ಅದರಲ್ಲೂ ಸೀಸನಲ್ ಫುಡ್ ಆಗಿ ಇದನ್ನು ಬಳಸುವುದು ಅತ್ಯುತ್ತಮ.
Get Rid of Fruit Flies: ಹಣ್ಣುಗಳಲ್ಲಿ ಕೂರುವ ನೊಣಗಳ ಕಾಟ ತಪ್ಪಿಸಲು ಹೀಗೆ ಮಾಡಿ
ಋತುಮಾನದ ಬದಲಾವಣೆಯ ಮುಖ್ಯ ಕಾಯಿಲೆಯೆಂದರೆ ಚಿಕನ್ ಪಾಕ್ಸ್. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಚಿಕನ್ ಪಾಕ್ಸ್ ವರಿಸೆಲ್ಲಾ ಎಂದೂ ಕರೆಯಲ್ಪಡುತ್ತದೆ. ಇದು ಸಾಂಕ್ರಾಮಿಕ ರೋಗವಾಗಿದ್ದು, ವರಿಸೆಲ್ಲಾ-ಜೋಸ್ಟರ್ ವೈರಸ್ ಎಂಬ ಪ್ರಾಥಮಿಕ ಸೋಂಕಿನಿಂದ ಉಂಟಾಗುತ್ತದೆ. ಈ ಸಮಯದಲ್ಲಿ, ನಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಲು ಸೂಚಿಸಲಾಗುತ್ತದೆ. ತಜ್ಞರ ಪ್ರಕಾರ, ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುವುದು ಕಾಲೋಚಿತ ರೋಗಗಳನ್ನು ತಪ್ಪಿಸಲು ಸಹಾಯ ಮಾಡುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಸ್ಟಾರ್ ಹಣ್ಣಿನಂತಹ ವಿಟಮಿನ್ ಸಿ ಭರಿತ ಹಣ್ಣುಗಳು ಆರೋಗ್ಯದ ರಕ್ಷಣೆಗೆ ಉತ್ತಮವಾಗಿವೆ.
ವಿಟಮಿನ್ ಸಿ, ಉರಿಯೂತದ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ದೇಹದಲ್ಲಿ ರೋಗನಿರೋಧಕ ಶಕ್ತಿ (Immunity Power)ಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದಲ್ಲದೆ, ಬಿಳಿ ರಕ್ತ ಕಣಗಳು ನಿಮ್ಮ ದೇಹವನ್ನು ಸಾಮಾನ್ಯ ಸೋಂಕುಗಳು ಮತ್ತು ರೋಗಗಳಿಂದ ರಕ್ಷಿಸುತ್ತದೆ ಎಂದು ತಿಳಿದಿದೆ. ಆದರೆ ದೇಹವು ಅವುಗಳನ್ನು ಸ್ವತಃ ಉತ್ಪಾದಿಸಲು ಸಾಧ್ಯವಾಗುವುದಿಲ್ಲ. ಆದರೆ ಸ್ಟಾರ್ ಫ್ರೂಟ್‌ನಂತಹಾ ವಿಟಮಿನ್ ಸಿ ಭರಿತ ಹಣ್ಣುಗಳು ದೇಹದಲ್ಲಿ ಬಿಳಿ ರಕ್ತ ಕಣಗಳ ಉತ್ಪಾದನೆಯನ್ನು ಉತ್ತೇಜಿಸುತ್ತದೆ ಎಂದು ಹೇಳಲಾಗುತ್ತದೆ.
ಅಷ್ಟೇ ಅಲ್ಲ, ಸ್ಟಾರ್ ಹಣ್ಣು ರಕ್ತದೊತ್ತಡವನ್ನು ನಿರ್ವಹಿಸಲು ಸಹಾಯ ಮಾಡುತ್ತದೆ. ಹೃದಯ (Heart)ದ ಆರೋಗ್ಯ ಉತ್ತೇಜಿಸುತ್ತದೆ. ಮೇಲಿನ ಅಂಶಗಳನ್ನು ಪರಿಗಣಿಸಿ, ನಿಮ್ಮ ದೈನಂದಿನ ಆಹಾರದಲ್ಲಿ ಸ್ಟಾರ್ ಹಣ್ಣುಗಳನ್ನು ಸೇರಿಸಿ. ಕಾಲ ಬದಲಾದರೂ ಆರೋಗ್ಯವನ್ನು ಉತ್ತಮವಾಗಿಡಬಹುದು.