ಪ್ರತಿದಿನ ಒಂದು ನಿಮಿಷ ಈ ಆಸನ ಮಾಡಿದ್ರೆ ಸಾಕು, ಬೊಜ್ಜು ಕರಗಿ ಹೊಟ್ಟೆ ಫ್ಲ್ಯಾಟ್ ಆಗುತ್ತೆ

ಅಧಿಕ ತೂಕ (Weight), ಬೊಜ್ಜು (Obesity) ಇವತ್ತಿನ ದಿನಗಳಲ್ಲಿ ಹಲವರಲ್ಲಿ ಕಂಡು ಬರುವ ಸಮಸ್ಯೆ. ಹೀಗಾಗಿಯೇ ಫಿಗರ್‌ ಮೈಂಟೇನ್ ಮಾಡಿಕೊಳ್ಳಲು ವ್ಯಾಯಾಮ (Exercise), ಯೋಗ, ಡಯೆಟ್ (Diet) ಅಂತ ಏನೇನೋ ಮಾಡ್ತಾರೆ. ಆದ್ರೆ ನೀವು ಇಷ್ಟೆಲ್ಲಾ ಕಷ್ಟಪಡಬೇಕಾಗಿಲ್ಲ. ಪ್ರತಿದಿನ ಒಂದು ನಿಮಿಷ ಈ ಆಸನ (Asana) ಮಾಡಿದ್ರೆ ಸಾಕು ಬೊಜ್ಜು ಕರಗಿ ಹೊಟ್ಟೆ (Stomach) ಫ್ಲ್ಯಾಟ್ ಆಗುತ್ತೆ. 

Having A Hard Time Getting Rid Of Stubborn Belly Fat, Then Give Halasana A Try

ಒತ್ತಡದ ಜೀವನಶೈಲಿ (Lifestyle), ಕಳಪೆ ಆಹಾರಪದ್ಧತಿಯಿಂದ ಇತ್ತೀಚಿನ ದಿನಗಳಲ್ಲಿ ಹೆಚ್ಚಿನವರಲ್ಲಿ ಅಧಿಕ ತೂಕ (Weight), ಬೊಜ್ಜಿನ ಸಮಸ್ಯೆ (Obesity) ಕಂಡು ಬರುತ್ತದೆ. ಬೇಕಾಬಿಟ್ಟಿ ತಿನ್ನೋ ಬರ್ಗರ್, ಪಿಜ್ಜಾ ಮೊದಲಾದ ಸ್ನ್ಯಾಕ್ಸ್‌ಗಳೂ ಇದಕ್ಕೆ ಕಾರಣವಾಗುತ್ತವೆ. ಹೆಚ್ಚು ತೂಕ, ಬೊಜ್ಜು ಬಂದ್ರೆ ಹೇಳ್ಬೇಕಾ ಮತ್ತೆ ಏನ್‌ ಮಾಡೋಕು ಕಷ್ಟಾನೇ. ಡ್ರೆಸ್ ಹಾಕಿಕೊಳ್ಳೋಕೂ ಒದ್ದಾಡ್ಬೇಕಾಗುತ್ತೆ. ಇಂಥಾ ಸಂದರ್ಭದಲ್ಲಿ ಬೊಜ್ಜನ್ನು ಕರಗಿಸಿಕೊಳ್ಳು ಎಲ್ಲರೂ ಒದ್ದಾಡ್ತಾರೆ. ಬೊಜ್ಜು ಕರಗಿಸಿ ಹೆಲ್ದೀಯಾಗಿರಲು ಹೆಚ್ಚಿನವರು ಕಂಡುಕೊಳ್ಳುವ ದಾರಿ ಯೋಗ. ಯೋಗ (Yoga) ದೈಹಿಕವಾಗಿ ಮಾತ್ರವಲ್ಲ ಮಾನಸಿಕವಾಗಿ ನಮ್ಮನ್ನು ಸದೃಢರನ್ನಾಗಿ ಮಾಡುತ್ತದೆ ಎಂದು ತಜ್ಞರು ಹೇಳುತ್ತಾರೆ. ಹೀಗಾಗಿ ಹೆಚ್ಚು ತೂಕ, ಬೊಜ್ಜಿನ ಸಮಸ್ಯೆಯಿರೋದು ಈ ವಿಶೇಷ ಯೋಗಾಸನ ಮಾಡಿದ್ರೆ ಸಾಕು ಕೆಲವೇ ದಿನಗಳಲ್ಲಿ ತೂಕ ಕಳ್ಕೊಂಡು ಹೊಟ್ಟೆ ಫ್ಲ್ಯಾಟ್ ಆಗುತ್ತೆ. 

ಯೋಗದಲ್ಲಿ ದೇಹದ ಪ್ರತಿಯೊಂದು ಅಂಗದ ಕಡೆಗೂ ಗಮನ ಹರಿಸಬಹುದು. ಉದಾಹರಣೆಗೆ ನಿಮಗೆ ತೋಳುಗಳಲ್ಲಿ ಬೊಜ್ಜು ಹೆಚ್ಚಿದ್ದರೆ ಅದಕ್ಕೆ ಪ್ರತ್ಯೇಕ ಯೋಗ ಭಂಗಿಗಳಿವೆ. ಇನ್ನು ಬೊಜ್ಜಿನ ಸಮಸ್ಯೆ ಬಹುತೇಕರಿಗೆ ಇರುತ್ತದೆ. ಯಾರು ಪ್ರತಿನಿತ್ಯ ಯೋಗಾಭ್ಯಾಸ ಮಾಡುತ್ತಾರೋ ಅವರಿಗೆ ಮೈ ಬೊಜ್ಜಿನ ಸಮಸ್ಯೆನೇ ಇರಲ್ಲ. ಏಕೆಂದರೆ ಯೋಗಕ್ಕೆ ಅಂಥದ್ದೊಂದು ಶಕ್ತಿ ಇದೆ. ಯೋಗವು ಮೈ ಬೊಜ್ಜು ಕರಗಿಸುವಲ್ಲಿ ತುಂಬಾನೇ ಪರಿಣಾಮಕಾರಿ. ಪ್ರತಿಯೊಂದು ಆಸನವೂ ಅನೇಕ ಪ್ರಯೋಜನಗಳನ್ನು ಒಳಗೊಂಡಿರುತ್ತದೆ. ಅದರಲ್ಲೂ ಪ್ರತಿದಿನ ಹಾಲಾಸನ (Halasana) ಮಾಡಿದ್ರೆ ಬೊಜ್ಜಿನ ಬಗ್ಗೆ ಭಯವೇ ಬೇಕಿಲ್ಲ.

Yogasanas: ಒಳ್ಳೇದು ಅಂತ ಎಲ್ಲ ಯೋಗವೂ ನಿಮ್ಮ ದೇಹಕ್ಕ ದಕ್ಕೋಲ್ಲ

ಹಾಲಾಸನ ಎಂದರೇನು ?
ಯೋಗದಲ್ಲಿ ಹೊಟ್ಟೆ ಬೊಜ್ಜು ಕರಗಿಸಲೆಂದೇ ಪರಿಣಾಮಕಾರಿಯಾದ ಆಸನವಿದೆ, ಅದುವೇ ಹಾಲಾಸನ, ಇದನ್ನು ಬ್ಲೋ ಬೋಸ್‌ ಎಂದೂ ಕರೆಯಲಾಗುವುದು. ಇದನ್ನು ಪ್ರತಿದಿನ ಮಾಡುವುದರಿಂದ ಕೆಲವೇ ದಿನಗಳಲ್ಲಿ ಹೊಟ್ಟೆಯ ಬೊಜ್ಜನ್ನು ಕರಗಿಸಿಕೊಳ್ಳಬಹುದಾಗಿದೆ.  ಹಾಲಾಸನ ಅಥವಾ ನೇಗಿಲು ಭಂಗಿಯು ತಲೆಕೆಳಗಾದ ಆಸನವಾಗಿದೆ, ಇದು ತೂಕ ನಷ್ಟವನ್ನು ಸಾಧಿಸಲು ಸಹಾಯ ಮಾಡುತ್ತದೆ. ಈ ಭಂಗಿಯನ್ನು ನಿರ್ವಹಿಸುವಾಗ, ನಿಮ್ಮ ಹೊಟ್ಟೆ ಮತ್ತು ಹೊಟ್ಟೆಯ ಪ್ರದೇಶದ ಮೇಲೆ ಒತ್ತಡ ಉಂಟಾಗುತ್ತದೆ. ಹೀಗಾಗಿ ಬೊಜ್ಜು ಸುಲಭವಾಗಿ ಕರಗುತ್ತದೆ.

ಹಾಲಾಸನ ಮಾಡುವುದು ಹೇಗೆ?
ಮ್ಯಾಟ್‌ ಮೇಲೆ ಮಲಗಿ, ನಿಮ್ಮ ಕೈಗಳು ನಿಮ್ಮ ಪಕ್ಕದಲ್ಲಿರಲಿ, ಕಾಲುಗಳು 90 ಡಿಗ್ರಿ ಆಂಗಲ್‌ನಲ್ಲಿ ಇರಬೇಕು. ಈಗ ನಿಧಾನಕ್ಕೆ ಕಾಲುಗಳನ್ನು ಎತ್ತಿ ನಿಮ್ಮ ಹಿಂಬದಿಗೆ ಸಪೋರ್ಟ್‌ಗೆ ಕೈಗಳನ್ನು ಇಡಿ. ಈಗ ಕಾಲುಗಳನ್ನು ನಿಧಾನಕ್ಕೆ 180 ಡಿಗ್ರಿ ಆಂಗಲ್‌ಗೆ ಎತ್ತಿ ನಿಧಾನಕ್ಕೆ ನಿಮ್ಮ ಕಿವಿಯ ಹಿಂದೆಕ್ಕೆ ತನ್ನಿ ಈ ಭಂಗಿಯಲ್ಲಿ ಒಂದು ನಿಮಿಷ ಇರಿ. ಈ ಭಂಗಿಗೆ ಬರುವ ಮುನ್ನ ದೀರ್ಘ ಉಸಿರು ತೆಗೆದು ನಿಧಾನವಾಗಿ ಉಸಿರು ಬಿಡುತ್ತಾ ಈ ಭಂಗಿಗೆ ಬರಬೇಕು, ನಂತರ ಸಹಜವಾಗಿ ಉಸಿರಾಡಬೇಕು. ನಂತರ ನಿಧಾನಕ್ಕೆ ಉಸಿರನ್ನು ಬಿಡುತ್ತಾ ಈ ಭಂಗಿಯಿಂದ ವಾಪಾಸ್‌ ಬನ್ನಿ.

Yoga Health : ದೇಹದ ಈ ಮೂರು ಅಂಗಕ್ಕೆ ನಿಯಮಿತವಾಗಿ ಬೇಕು ಯೋಗಾಸನ

ಹಾಲಾಸನ ಬೊಜ್ಜನ್ನು ಹೇಗೆ ಕಡಿಮೆ ಮಾಡುತ್ತದೆ ?
ಈ ಆಸನವು ಜೀರ್ಣಕಾರಿ ಅಂಗಗಳನ್ನು ಮಸಾಜ್ ಮಾಡುತ್ತದೆ ಮತ್ತು ಆದ್ದರಿಂದ, ಜೀರ್ಣಕ್ರಿಯೆ (Digestion)ಯನ್ನು ಸುಧಾರಿಸುತ್ತದೆ ಮತ್ತು ಹಸಿವನ್ನು ನಿಯಂತ್ರಿಸುತ್ತದೆ. ಹಾಲಸನವು ಥೈರಾಯ್ಡ್ ಗ್ರಂಥಿಯ ಮೇಲೆ ಕೆಲಸ ಮಾಡುತ್ತದೆ ಮತ್ತು ನಿಮ್ಮ ಚಯಾಪಚಯವನ್ನು ಸುಧಾರಿಸುತ್ತದೆ. ಹೀಗಾಗಿ ಇದು ಹೆಚ್ಚುವರಿ ಕೊಬ್ಬನ್ನು ಹೊರಹಾಕಲು ಬಯಸುವವರಿಗೆ ಉತ್ತಮ ಆಯ್ಕೆಯಾಗಿದೆ. ಹಾಲಾಸನದ ನಿಯಮಿತ ಅಭ್ಯಾಸವು ನಿಮ್ಮ ಉಸಿರಾಟವನ್ನು ಸುಗಮಗೊಳಿಸುತ್ತದೆ ಮತ್ತು ಇದು ತೂಕ ನಷ್ಟಕ್ಕೆ ಸಹಾಯ ಮಾಡುವ ಮತ್ತೊಂದು ಸಾಧನವಾಗಿದೆ.

ಇಂಥವರು ಹಾಲಾಸನ ಮಾಡಲೇಬೇಡಿ
ನೀವು ಅತಿಸಾರ, ಮುಟ್ಟಿನ ಅಥವಾ ಕುತ್ತಿಗೆ ಗಾಯದ ಸಮಸ್ಯೆಯನ್ನು ಹೊಂದಿದ್ದರೆ, ದಯವಿಟ್ಟು ಈ ಭಂಗಿಯನ್ನು ಮಾಡುವುದನ್ನು ತಪ್ಪಿಸಿ. ಅಧಿಕ ರಕ್ತದೊತ್ತಡ ಮತ್ತು ಆಸ್ತಮಾ (Asthama)ದಿಂದ ಬಳಲುತ್ತಿದ್ದರೆ, ನೀವು ಈ ಆಸನವನ್ನು ಅಭ್ಯಾಸ ಮಾಡುವಾಗ, ನಿಮ್ಮ ಕಾಲುಗಳನ್ನು ಅಥವಾ ಬೆನ್ನನ್ನು ಆಧಾರಗಳೊಂದಿಗೆ ಬೆಂಬಲಿಸಿ. ನೀವು ಗರ್ಭಿಣಿಯಾಗಿದ್ದರೆ, ನೀವು ದೀರ್ಘಕಾಲದವರೆಗೆ ಅಭ್ಯಾಸ (Habit) ಮಾಡುತ್ತಿದ್ದರೆ ಮಾತ್ರ ಈ ಆಸನವನ್ನು ಮಾಡಿ. ಗರ್ಭಾವಸ್ಥೆಯಲ್ಲಿ ಅಭ್ಯಾಸವನ್ನು ಪ್ರಾರಂಭಿಸಬೇಡಿ.

Latest Videos
Follow Us:
Download App:
  • android
  • ios