Yogasanas: ಒಳ್ಳೇದು ಅಂತ ಎಲ್ಲ ಯೋಗವೂ ನಿಮ್ಮ ದೇಹಕ್ಕ ದಕ್ಕೋಲ್ಲ

ಪ್ರತಿಯೊಬ್ಬನ ದೇಹವೂ ಭಿನ್ನ ರಚನೆ, ಸಮಸ್ಯೆಯನ್ನು ಹೊಂದಿದೆ. ದೇಹದಲ್ಲಿ ಎಲ್ಲ ಅಂಶಗಳು ಸರಿಯಾದ ಪ್ರಮಾಣದಲ್ಲಿದ್ದರೆ ಮಾತ್ರ ವ್ಯಕ್ತಿ ಆರೋಗ್ಯವಾಗಿರಲು ಸಾಧ್ಯ. ಕೆಲವರಿಗೆ ಪಿತ್ತ ಜಾಸ್ತಿಯಾದರೆ ಮತ್ತೆ ಕೆಲವರಿಗೆ ವಾತದ ಸಮಸ್ಯೆಯಿರುತ್ತದೆ. ಅಂತವರು ತಮ್ಮ ದೇಹವನ್ನು ಗಮನಿಸಿ ಅದಕ್ಕೆ ತಕ್ಕಂತೆ ಯೋಗ ಮಾಡ್ಬೇಕು. 
 

According To Your Body Type Some Yogasanas Suggested By Ayurveda

ಆಯುರ್ವೇದ (Ayurveda) ಪುರಾತನ ವೈದ್ಯಕೀಯ (Medical) ಪದ್ಧತಿಯಾಗಿದೆ. ಇದು ಎಲ್ಲರಿಗೂ ತಿಳಿದಿರುವ ಸಂಗತಿ. ಆಯುರ್ವೇದದಲ್ಲಿ ನಮ್ಮ ದೇಹ ಮೂರು ಮೂಲಭೂತ ವಸ್ತುಗಳಿಂದ ಮಾಡಲ್ಪಟ್ಟಿದೆ ಎಂದು ನಂಬಲಾಗುತ್ತದೆ. ಅದ್ರಲ್ಲಿ ಒಂದು ದೋಷ. ಈ ದೋಷದ ಪ್ರಮುಖ ನಿಯಮವೆಂದ್ರೆ ವಾತ, ಪಿತ್ತ ಹಾಗೂ ಕಫ. ಇವು ಮೂರೂ ನಮ್ಮ ಜೀರ್ಣಕ್ರಿಯೆ ಮೇಲೆ ಪರಿಣಾಮ ಬೀರುತ್ತದೆ. ಆರೋಗ್ಯವಂತ ವ್ಯಕ್ತಿ ದೇಹದಲ್ಲಿ ಇವು ಮೂರೂ ಸಮತೋಲನದಲ್ಲಿರುತ್ತದೆ. ಪ್ರತಿಯೊಬ್ಬ ವ್ಯಕ್ತಿ ದೇಹದ ರಚನೆ ಭಿನ್ನವಾಗಿದೆ. ಹಾಗಾಗಿಯೇ ಕೆಲ ವ್ಯಕ್ತಿಗಳಲ್ಲಿ ಪಿತ್ತ ದೋಷ ಕಾಣಿಸಿಕೊಳ್ಳುವುದು ಹೆಚ್ಚು. ಮತ್ತೆ ಕೆಲವರಲ್ಲಿ ಕಫದ ಸಮಸ್ಯೆ ಹೆಚ್ಚಿರುತ್ತದೆ. ನೀರು ಕುಡಿದ್ರೂ ಕಫವಾಯ್ತು ಎನ್ನುವವರಿದ್ದಾರೆ. ಇನ್ನು ಕೆಲವರು ವಾತದ ಸಮಸ್ಯೆ ಎದುರಿಸುತ್ತಾರೆ. ಮನುಷ್ಯನ ಮನಸ್ಸು ಹಾಗೂ ದೇಹ ಎರಡೂ ಆತನ ಆರೋಗ್ಯವನ್ನು ನಿಯಂತ್ರಿಸುತ್ತದೆ. ಮನಸ್ಸಿನಲ್ಲಿ ಬರುವ ಆಲೋಚನೆಗಳು ಕೂಡ, ವಾತ, ಪಿತ್ತ ಅಥವಾ ಕಫ ದೋಷಕ್ಕೆ ಕಾರಣವಾಗುತ್ತದೆ. ಹಾಗಾಗಿ ನಮ್ಮ ದೇಹ ಪ್ರಕೃತಿಯನ್ನು ನೋಡಿಕೊಂಡು ನಾವು ಯೋಗವನ್ನು ಮಾಡ್ಬೇಕು. ಪಿತ್ತ ದೋಷವಿರುವವರು ಹಾಗೂ ಕಫ ದೋಷವಿರುವವರು ಒಂದೇ ರೀತಿಯ ಯೋಗಾಸಾನ ಮಾಡುವ ಬದಲು, ಅವರ ದೋಷ ನಿವಾರಣೆ ಮಾಡುವಂತಹ ಯೋಗ (Yoga) ಮಾಡಿದ್ರೆ ಒಳ್ಳೆಯದು. ಇಂದು ನಾವು ಯಾವ ದೋಷವಿದ್ದಾಗ ಯಾವ ಯೋಗಾಸನ ಮಾಡ್ಬೇಕು ಎಂಬುದನ್ನು ನಿಮಗೆ ಹೇಳ್ತೇವೆ.

ವಾತ ದೋಷ : ವಾತ ದೋಷವಿರುವ ವ್ಯಕ್ತಿಗಳು ಸ್ಲಿಮ್ ಆಗಿರ್ತಾರೆಂದು ಆಯುರ್ವೇದದಲ್ಲಿ ಹೇಳಲಾಗಿದೆ. ಅವರು ಸದಾ ಸಕ್ರಿಯವಾಗಿರ್ತಾರೆ. ಉತ್ಸಾಹಿಯಾಗಿರ್ತಾರೆ. ಕಲ್ಪನಾ ಶಕ್ತಿ ಹೆಚ್ಚಿರುತ್ತದೆ. ಹಾಗೆಯೇ ಕಲಿಯಲು ಸದಾ ಮುನ್ನುಗ್ಗುವ ಸ್ವಭಾವ ಹೊಂದಿರುತ್ತಾರೆ. ಇವರಿಗೆ ಯಿನ್ ಯೋಗ ಹಾಗೂ ಸ್ಟ್ರಚ್ಚಿಂಗ್ ಯೋಗ (Yin And Stretching) ಹೆಚ್ಚು ಯೋಗ್ಯವಾಗಿರುತ್ತದೆ. ಇವುಗಳ ಜೊತೆಗೆ, ನಿಧಾನಗತಿಯಲ್ಲಿ ಮಾಡಬಹುದಾದ ಯೋಗಾಸನ, ಕಡಿಮೆ ಪ್ರಭಾವದ ಯೋಗವನ್ನು ಅವರು ಅಭ್ಯಾಸ ಮಾಡಬೇಕು. ಇದರಿಂದ ವಾತ ದೋಷ ಹೊಂದಿರುವ ಜನರಿಗೆ ಉಷ್ಣತೆಯ ಅನುಭವವಾಗುತ್ತದೆ ಹಾಗೂ ಮನಸ್ಸು ಶಾಂತಗೊಳ್ಳುತ್ತದೆ.

ಗರ್ಭಕಂಠ ಕ್ಯಾನ್ಸರ್‌ಗೆ ಸಿದ್ಧವಾಗಿದೆ ಮೊದಲ ದೇಸೀ ಲಸಿಕೆ

ವಾತ ದೋಷ ಹೊಂದಿರುವ ಜನರಿಗೆ ವೃಕ್ಷಾಸನ,ತಾಡಾಸನ ಮತ್ತು  ವೀರಭದ್ರಾಸನ 1 ಮತ್ತು ವೀರಭದ್ರಾಸನ 2 ಅಭ್ಯಾಸ ಮಾಡಬೇಕೆಂದು ತಜ್ಞರು ಸಲಹೆ ನೀಡ್ತಾರೆ.

ಪಿತ್ತ ದೋಷ : ಪಿತ್ತ ದೋಷ ಹೊಂದಿರುವ ಜನರು ಮಧ್ಯಮ ಎತ್ತರವನ್ನು ಹೊಂದಿರುತ್ತಾರೆ. ಅವರ ಜೀರ್ಣಕ್ರಿಯೆ ಶಕ್ತಿ ಬಲವಾಗಿರುತ್ತದೆ. ಹಾಗೆಯೇ ಹಸಿವು ಹಾಗೂ ಬಾಯಾರಿಕೆ ಕೂಡ ಪಿತ್ತ ದೋಷ ಹೊಂದಿರುವವರಿಗೆ ಹೆಚ್ಚು. ಅವರಿಗೆ ಒತ್ತಡದ ಕೋಪ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಕಿರಿಕಿರಿ ಅವರನ್ನು ಕಾಡ್ತಿರುತ್ತದೆ. ಪಿತ್ತ ದೋಷ ಹೊಂದಿರುವ ಜನರು ಬಿಸಿ ಅನುಭವನನ್ನು ಹೆಚ್ಚು ಅನುಭವಿಸುತ್ತಾರೆ. ಅವರ ದೇಹ ಉಷ್ಣತೆಯಿಂದ ಕೂಡಿರುತ್ತದೆ. ಬಿಸಿ ಕೋಪಕ್ಕೆ ಅವರು ಒಳಗಾಗ್ತಾರೆ. ತಜ್ಞರ ಪ್ರಕಾರ, ಪಿತ್ತ ದೋಷ ಹೊಂದಿರುವ ಜನರು ದೇಹವನ್ನು ಬಿಸಿ ಮಾಡುವ ಯೋಗದ ಭಂಗಿಗಳ ಅಭ್ಯಾಸವನ್ನು ಬಿಡಬೇಕು. ಸದಾ ಬಿಸಿಯಾಗಿರುವ ಅವರು ಅತಿಯಾಗಿ ಬೆವರುವುದು ಒಳ್ಳೆಯದಲ್ಲ.  
ಪಿತ್ತ ದೋಷ ಹೊಂದಿರುವವರು ದೇಹದವನ್ನು ತಂಪಾಗಿಡುವ ಯೋಗವನ್ನು ಮಾಡ್ಬೇಕು. ಉಷ್ಟ್ರಾಸನ, ಭುಜಂಗಾಸನ, ಸೇತು ಬಂಧ ಸರ್ವಾಂಗಾಸನ, ಮತ್ಸ್ಯಾಸನ, ಕಪೋತಾಸನ ತ್ತು ವೃಕ್ಷಾಸನದಂತಹ ಯೋಗವನ್ನು ಅಭ್ಯಾಸ ಮಾಡಬಹುದು. ಇವು ದೇಹವನ್ನು ತಂಪಾಗಿಡಲು ನೆರವಾಗುತ್ತವೆ. 

ಖಾಸಗಿ ಭಾಗದಲ್ಲಿ ತುರಿಕೆಯೇ? ಚಿಂತೆ ಬಿಡಿ ಇದನ್ನ ಟ್ರೈ ಮಾಡಿ

ಕಫ ದೋಷ : ಕಫ ದೋಷ ಹೊಂದಿರುವ ವ್ಯಕ್ತಿಗಳು ಬಲವಂತರು, ಶಕ್ತಿಶಾಲಿಗಳು. ಅವರ ದೇಹದ ತೂಕ ಆರಾಮವಾಗಿ ಏರಿಕೆ ಕಾಣುತ್ತದೆ. ಪಿತ್ತ ದೋಷವಿರುವವರು ದೇಹ ಬಿಸಿ ಮಾಡುವ ಯೋಗವನ್ನು ಅಭ್ಯಾಸ ಮಾಡಬೇಕು. ಕಫ ದೋಷ ಹೊಂದಿರುವ ಜನರು ಅದರಿಂದ ಹೆಚ್ಚು ಪ್ರಯೋಜನ ಪಡೆಯುತ್ತಾರೆ. ಅವರಿಗೆ ಪವರ್ ಯೋಗವನ್ನು ಸಹ ಶಿಫಾರಸು ಮಾಡಲಾಗುತ್ತದೆ.  ಅರ್ಧ ಚಂದ್ರನ ಭಂಗಿ ಮತ್ತು ಉತ್ಕಟಾಸನ, ಪರಿಪೂರ್ಣ ನವಾಸನ, ಚತುರಂಗ ದಂಡಾಸನ, ಶಲಭಾಸನ  ಮತ್ತು ಅಧೋ ಮುಖ ಶ್ವಾನಾಸನಾ ಭಂಗಿಯನ್ನು ಅಭ್ಯಾಸ ಮಾಡ್ಬೇಕು. 

According To Your Body Type Some Yogasanas Suggested By Ayurveda


 

Latest Videos
Follow Us:
Download App:
  • android
  • ios