ಸಿಗರೇಟ್ ಬಿಡೋಲ್ಲ, ಶ್ವಾಸಕೋಶದ ಆರೋಗ್ಯ ಕಾಪಾಡಬೇಕು ಅಂದ್ರೇನು ಮಾಡಬೇಕು?
ಸಿಗರೇಟ್ ಆರೋಗ್ಯಕ್ಕೆ ಹಾನಿಕರ. ಇದು ಗೊತ್ತಿದ್ರೂ ಧೂಮಪಾನ ಬಿಡೋಕಾಗ್ತಿಲ್ಲ ಎನ್ನುವವರಿದ್ದಾರೆ. ನಿಮ್ಮ ಈ ಚಟದಿಂದ ಆರೋಗ್ಯವಾಗಿದ್ದ ನಿಮ್ಮ ಶ್ವಾಸಕೋಶ ಹದಗೆಟ್ಟಿರುತ್ತೆ. ಅದನ್ನು ಸರಿ ಮಾಡ್ಬೇಕೆಂದ್ರೆ ಕೆಲ ಮನೆ ಮದ್ದನ್ನು ಬಳಸಬೇಕು. ಅದ್ರ ಜೊತೆ ಆರೋಗ್ಯಕರ ಜೀವನ ಶೈಲಿ ರೂಢಿ ಮಾಡಿಕೊಳ್ಳಬೇಕು.
ಉಸಿರಾಡಲು ಶ್ವಾಸಕೋಶ ಅತೀ ಅವಶ್ಯಕ. ಹೃದಯ ಮತ್ತು ಯಕೃತ್ತಿನಂತೆ ಶ್ವಾಸಕೋಶ ಕೂಡ ನಮ್ಮ ದೇಹಕ್ಕೆ ಮುಖ್ಯ ಅಂಗವಾಗಿದೆ. ಇದು ದೇಹದಲ್ಲಿ ಹೆಚ್ಚು ಬಾಳಿಕೆ ಬರುವ ಒಂದು ಭಾಗ. ಏಕೆಂದರೆ ಇದು ತಾನಾಗಿಯೇ ಅನಾರೋಗ್ಯಕ್ಕೆ ಒಳಗಾಗೋದಿಲ್ಲ. ತನ್ನ ಕೆಲಸ ನಿಲ್ಲಿಸುವುದಿಲ್ಲ. ಕಲುಷಿತ ವಾತಾವರಣ ಅಥವಾ ನಮ್ಮ ದುಶ್ಚಟಗಳಿಂದ ನಾವು ಇದನ್ನು ಹಾಳುಮಾಡಿಕೊಳ್ತೇವೆ. ಅದರಿಂದಲೇ ಮುಂದೆ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ಆಮ್ಲಜನಕ (Oxygen) ವನ್ನು ಫಿಲ್ಟರ್ ಮಾಡುವುದು ಶ್ವಾಸಕೋಶ (Lungs) ದ ಕೆಲಸವಾಗಿದೆ. ಆದರೆ ಈಗಿನ ಪ್ರಜ್ಞಾವಂತ ಜನರೇ ತಮ್ಮ ಕೆಟ್ಟ ಚಟಗಳ ಮೂಲಕ ಶ್ವಾಸಕೋಶವನ್ನು ಛಿದ್ರಗೊಳಿಸುತ್ತಿದ್ದಾರೆ. ಬೀಡಿ, ಸಿಗರೇಟ್ (Cigarette) ಮುಂತಾದ ಮಾದಕ ವಸ್ತುಗಳ ಸೇವನೆಯಿಂದ ಶ್ವಾಸಕೋಶ ದುರ್ಬಲಗೊಳ್ಳುತ್ತದೆ. ಹೀಗೆ ದುರ್ಬಲಗೊಂಡ ಶ್ವಾಸಕೋಶವನ್ನು ಮತ್ತೆ ಆರೋಗ್ಯವಾಗಿಡಬೇಕು, ಸುಸ್ಥಿತಿಯಲ್ಲಿಡಬೇಕು ಎಂದಾದರೆ ಈ ಕೆಳಗಿನ ಕೆಲವು ಪ್ರಯತ್ನಗಳನ್ನು ನೀವು ಮಾಡಬಹುದು.
ನಿಮ್ಮ ಶ್ವಾಸಕೋಶವನ್ನು ಹೀಗೆ ಶುದ್ಧ ಮಾಡಿ :
ವಾಲ್ ನಟ್ (Wall Nut) : ಮೆರಿಕನ್ ಕಾಲೇಜ್ ಆಫ್ ನ್ಯುಟ್ರಿಷನ್ ಪ್ರಕಟಿಸಿದ ವರದಿಯ ಪ್ರಕಾರ ಅಕ್ರೊಟ್ ನಲ್ಲಿ ಒಮೆಗಾ – 3 ಮತ್ತು ಕೊಬ್ಬಿನ ಆಮ್ಲಗಳು ಹೇರಳವಾಗಿದೆ. ಹಾಗಾಗಿ ಪ್ರತಿದಿನ ನೀವು ಒಂದು ಮುಷ್ಟಿಯಷ್ಟು ವಾಲ್ ನಟ್ ಸೇವಿಸಿದರೆ ಶ್ವಾಸಕೋಶಕ್ಕೆ ಸಂಬಂಧಿಸಿದ ತೊಂದರೆಗಳು ದೂರವಾಗುತ್ತವೆ. ವಾಲ್ ನಟ್ ಸೇವನೆ ಉಸಿರಾಟದ ತೊಂದರೆ ಮತ್ತು ಅಸ್ತಮಾಗೂ ಕೂಡ ಒಳ್ಳೆಯ ಔಷಧವಾಗಿದೆ.
ಕೊಬ್ಬಿನ ಮೀನು : ಯಾವ ಮೀನಿನಲ್ಲಿ ಹೆಚ್ಚಿನ ಕೊಬ್ಬಿನ ಅಂಶ ಇರುತ್ತದೆಯೋ ಅಂತಹ ಮೀನುಗಳನ್ನು ತಿನ್ನುವುದರಿಂದ ಶ್ವಾಸಕೋಶಕ್ಕೆ ಬಹಳ ಒಳ್ಳೆಯದು. ಕೊಬ್ಬಿನ ಮೀನಿನಲ್ಲಿಯೂ ಒಮೆಗಾ-3 ಹೆಚ್ಚಿನ ಪ್ರಮಾಣದಲ್ಲಿರುತ್ತದೆ.
ಶುಂಠಿ (Ginger) : ಶುಂಠಿಯಲ್ಲಿ ಉರಿಯೂತ ನಿವಾರಕ ಗುಣವಿದೆ. ಇದು ಶ್ವಾಸಕೋಶದಲ್ಲಿ ಕುಳಿತಿರುವ ಕಲ್ಮಶಗಳನ್ನು ಹೊರಹಾಕುತ್ತದೆ. ಇದರಿಂದ ಶ್ವಾಕೋಶದ ಮಾರ್ಗಗಳು ತೆರೆಯುತ್ತವೆ.
ಬ್ರಾಕೊಲಿ (Braccoli) : ಹಸಿರು ಗೋಬಿ ಎಂದೇ ಕರೆಯಲ್ಪಡುವ ಬ್ರಾಕೊಲಿ ಶರೀರಕ್ಕೆ ಶಕ್ತಿಯನ್ನು ಕೊಡುತ್ತದೆ ಮತ್ತು ಇದು ಶ್ವಾಸಕೋಶದ ಆರೋಗ್ಯವನ್ನೂ ಕಾಪಾಡುತ್ತದೆ. ಎಂಟಿ ಆಕ್ಸಿಡೆಂಟ್ ಹೆಚ್ಚಿರುವ ಆಹಾರಗಳು ಶ್ವಾಸಕೋಶಕ್ಕೆ ಒಳ್ಳೆಯದು ಹಾಗಾಗಿ ಹೂಕೋಸು, ಎಲೆಕೋಸು, ಹಸಿರು ಎಲೆ ಮತ್ತು ತರಕಾರಿಗಳಿಂದ ಶ್ವಾಸಕೋಶದ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು.
ಸೇಬು (Apple) : ದಿನಕ್ಕೆ ಒಂದು ಸೇಬುವನ್ನು ತಿನ್ನಿ ವೈದ್ಯರನ್ನು ದೂರವಿಡಿ ಎಂಬ ಮಾತನ್ನು ನೀವು ಕೇಳಿರುತ್ತೀರಿ. ಸೇಬು ಹಣ್ಣಿನಲ್ಲಿ ವಿಟಮಿನ್ ಇ ಮತ್ತು ವಿಟಮಿನ್ ಸಿ ಹಾಗೂ ಬೀಟಾ ಕ್ಯಾರೊಟಿನ್ ಇದೆ. ಇದು ಶ್ವಾಸಕೋಶಕ್ಕೆ ಬಹಳ ಒಳ್ಳೆಯದು.
ಅಗಸೆಬೀಜ : ಅಗಸೆ ಬೀಜದಲ್ಲಿ ಒಮೆಗಾ-3 ಸಮೃದ್ಧವಾಗಿದೆ. ಇದು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಅಗಸೆಬೀಜ ಶ್ವಾಸಕೋಶ ಹಾನಿಗೊಳಗಾಗುವುದನ್ನು ತಪ್ಪಿಸುತ್ತದೆ ಮತ್ತು ಹಾನಿಗೊಳಗಾದ ಶ್ವಾಸಕೋಶವನ್ನು ಕೂಡ ಮೊದಲ ಸ್ಥಿತಿಗೆ ತರುತ್ತೆ.
ಈ ತೊಂದರೆಗಳಿಂದ ನಿಮ್ಮ ಶ್ವಾಸಕೋಶವನ್ನು ಕಾಪಾಡಿ :
ಧೂಮಪಾನ : ಧೂಮಪಾನ ಶ್ವಾಸಕೋಶಕ್ಕೆ ಬಹಳ ಹಾನಿಕರ. ಇದು ನಿಮ್ಮ ಶ್ವಾಸಕೋಶವನ್ನಲ್ಲದೇ ನಿಮ್ಮ ಸುತ್ತ ಇರುವವರ ಆರೋಗ್ಯವನ್ನೂ ಹಾಳುಮಾಡುತ್ತದೆ.
ವಾಯು ಮಾಲಿನ್ಯ (Air Pollution): ಹೆಚ್ಚಿನ ಮಂದಿ ಕೆಲಸದ ನಿಮಿತ್ತ ದೊಡ್ಡ ದೊಡ್ಡ ನಗರಗಳಲ್ಲಿ ವಾಸಿಸುತ್ತಾರೆ. ಹೊರಗಡೆ ಇರುವ ವಾಯುಮಾಲಿನ್ಯದಿಂದ ನಿಮ್ಮ ಶ್ವಾಸಕೋಶ ಹದಗೆಡುತ್ತದೆ. ಹಾಗಾಗಿ ವಾಯುಮಾಲಿನ್ಯದಿಂದ ದೂರವಿರಿ.
ವ್ಯಾಯಾಮ (Exercise): ವ್ಯಾಯಾಮಕ್ಕೂ ಮತ್ತು ಶ್ವಾಸಕೋಶಕ್ಕೂ ನೇರ ಸಂಬಂಧವಿಲ್ಲದಿದ್ದರೂ ನೀವು ಪ್ರತಿನಿತ್ಯ ವ್ಯಾಯಾಮ ಮಾಡುವುದರಿಂದ ಶ್ವಾಸಕೋಶ ದೇಹದ ಎಲ್ಲ ಭಾಗಗಳಿಗೆ ಅಗತ್ಯವಾದ ಆಮ್ಲಜನಕವನ್ನು ಪೂರೈಸುವಲ್ಲಿ ಸಹಾಯವಾಗುತ್ತದೆ. ಶ್ವಾಸಕೋಶದ ಖಾಯಿಲೆಯಿಂದ ಬಳಲುತ್ತಿರುವವರಿಗೂ ವ್ಯಾಯಾಮ ಬಹಳ ಒಳ್ಳೆಯದು.
Fertility Food; ಗರ್ಭ ಧರಿಸಲು ಸಮಸ್ಯೆಯಿದ್ದರೆ ಅಂಡಾಣುವಿನ ಗುಣಮಟ್ಟ ಹೆಚ್ಚಿಸೋ ಈ ಆಹಾರ ಸೇವಿಸಿ
ಮನೆಯ ಒಳಗೂ ಶುದ್ಧವಾದ ಗಾಳಿ (Fresh Air) ಇರಲಿ: ಮನೆಯ ಒಳಗೂ ಕೂಡ ಮಾರುಕಟ್ಟೆಯಲ್ಲಿ ಸಿಗುವ ರಾಸಾಯನಿಕಭರಿತ ಏರ್ ಫ್ರೆಶನರ್, ಸುಗಂಧ ದ್ರವ್ಯ, ಮೇಣದ ಬತ್ತಿ, ಊದಿನಕಡ್ಡಿ ಮುಂತಾದವುಗಳನ್ನು ಬಳಸುವುದನ್ನು ಆದಷ್ಟು ಕಡಿಮೆಗೊಳಿಸಿ. ಮನೆಯನ್ನು ಸ್ವಚ್ಛಗೊಳಿಸುವಾಗ ಮಾಸ್ಕ್ ಗಳನ್ನು ಬಳಸಿ.