ಮಹಿಳೆಯರ ರಜಾ ಸೌಲಭ್ಯ: ಈ ಯಪ್ಪನದ್ದೇನು ಇಷ್ಟು ಕಿರಿಕಿರಿ?
ಮಹಿಳೆಯರ ಮುಟ್ಟಿನ ಸಂಗತಿ ಇಂದಿಗೂ ಹಲವರಿಗೆ ಬಹಿಷ್ಕಾರದ ವಿಚಾರ. ಹಾಗೆಯೇ, ಹೆರಿಗೆ, ಮುಟ್ಟಿನ ದಿನಗಳಲ್ಲಿ ರಜೆ ನೀಡುವುದು ಸಹ ಸಾಕಷ್ಟು ಜನರಿಗೆ ಒಲ್ಲದ ವಿಷಯ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಡಾ.ಪ್ರಶಾಂತ್ ಎನ್ನುವವರೊಬ್ಬರು ಮಾಡಿರುವ ಟ್ವೀಟೊಂದು ಇದೀಗ ಮತ್ತೊಮ್ಮೆ ಈ ಕುರಿತು ಚರ್ಚೆಗೆ ಆಸ್ಪದ ನೀಡಿದೆ.
ತಿಂಗಳ ಮುಟ್ಟಿನ ದಿನಗಳನ್ನು ಕಳೆಯುವುದು ಮಹಿಳೆಯರಿಗೆ ಕೆಲವೊಮ್ಮೆ ಅಸಹನೀಯವಾಗುತ್ತದೆ. ಉದ್ಯೋಗಸ್ಥರಾಗಿದ್ದರೆ ಒಂದು ರೀತಿ, ಗೃಹಿಣಿಯಾಗಿದ್ದರೆ ಇನ್ನೊಂದು ರೀತಿ. ಒಟ್ಟಿನಲ್ಲಿ ಮಹಿಳೆಯರಿಗೆ ಬಿಡುವು ಇರುವುದಿಲ್ಲ. ಪ್ರತಿ ತಿಂಗಳು ಮೂರ್ನಾಲ್ಕು ದಿನಗಳ ಕಾಲ ಕೆಲಸದ ಒತ್ತಡ ಸ್ವಲ್ಪ ಕಡಿಮೆ ಇದ್ದರೆ ಒಳಿತು ಎಂದು ಎಲ್ಲರೂ ಬಯಸುತ್ತಾರೆ. ಮುಟ್ಟಿನ ದಿನಗಳಲ್ಲಿ ರಜೆ ನೀಡುವುದು ಉತ್ತಮ ಎನ್ನುವ ಚಿಂತನೆಯೊಂದು ಸಾಕಷ್ಟು ಸಮಯದಿಂದ ಚರ್ಚೆಯಲ್ಲಿದೆ. ದೈಹಿಕವಾಗಿ, ಮಾನಸಿಕವಾಗಿ ಬಸವಳಿದಿರುವ ಸಮಯದಲ್ಲಿ ಸ್ವಲ್ಪ ಬಿಡುವು ನೀಡುವುದು ಉತ್ತಮವೇ. ಹೀಗಾಗಿ, ಇದನ್ನು ನಮ್ಮ ದೇಶದ ಹಲವು ಕಂಪೆನಿಗಳು ಹಾಗೂ ವಿದೇಶದ ಸಾಕಷ್ಟು ಕಂಪೆನಿಗಳು ಅಳವಡಿಸಿಕೊಂಡಿವೆ. ಆದರೂ ಬಹಳಷ್ಟು ಜನ ಇದರ ಬಗ್ಗೆ ಸಹಮತ ಹೊಂದಿಲ್ಲ. ಭಾರತೀಯ ಸಮಾಜದಲ್ಲಂತೂ ಮುಟ್ಟಿನ ಬಗ್ಗೆ ಇನ್ನೂ ಒಂದು ರೀತಿಯ ಬಹಿಷ್ಕಾರದ ಮನಸ್ಥಿತಿಯೇ ಇದೆ ಎಂದರೆ ತಪ್ಪಿಲ್ಲ. ಇದಕ್ಕೆ ಆಗಾಗ ಸಾಕಷ್ಟು ನಿದರ್ಶನಗಳು ಸಿಗುತ್ತಲೇ ಇರುತ್ತವೆ. ಇಂಥದ್ದೊಂದು ಮನಸ್ಥಿತಿ ಇದೀಗ ಸಾಮಾಜಿಕ ಜಾಲತಾಣದಲ್ಲಿ ಮತ್ತೊಮ್ಮೆ ಬಹಿರಂಗವಾಗಿದೆ. ಡಾ.ಪ್ರಶಾಂತ್ ಮೆಶ್ರಮ್ ಎನ್ನುವವರು ಮಾಡಿದ ಟ್ವೀಟ್ ಒಂದು ದೊಡ್ಡ ಸಂಚಲನವನ್ನೇ ಸೃಷ್ಟಿಸಿದೆ. ಮಹಿಳೆಯರು ಈ ವ್ಯಕ್ತಿಯ ಧೋರಣೆಯನ್ನು ಟೀಕಿಸಿದ್ದಾರೆ.
ರಜೆ, ಸಂಬಳ ಎರಡನ್ನೂ ನೀಡಿದೆ!
ಡಾ.ಪ್ರಶಾಂತ್ ಮೆಶ್ರಮ್ ಎನ್ನುವ ಟ್ವಿಟರ್ ಬಳಕೆದಾರ “ಹೆರಿಗೆಗಾಗಿ ರಜೆ (Leave), ಸಂಬಳ(Salary) ವನ್ನೂ ನೀಡಿದೆ. ಮಾಸಿಕ ಋತುಸ್ರಾವಕ್ಕಾಗಿ (Monthly Period) ರಜೆ ಹಾಗೂ ಸಂಬಳ ನೀಡಿದೆ. ಆದರೆ, ಮಹಿಳೆಯರು (Women) ಮಾತ್ರ ಫೇವರ್ (Favour) ಮಾಡುತ್ತಾರೆಯೇ ಹೊರತು, ಕೆಲಸ ಮಾಡಲ್ಲ’ ಎಂದು ಟ್ವೀಟ್ ಮಾಡಿದ್ದಾರೆ. ಸಹಜವಾಗಿ ಇದು ಹಲವರ ಗಮನ ಸೆಳೆದಿದ್ದು, ತೀವ್ರವಾದ ಅಸಮಾಧಾನ ವ್ಯಕ್ತವಾಗಿದೆ. ಈ ವ್ಯಕ್ತಿಯ ಸಂಕುಚಿತ (Narrow) ಬುದ್ಧಿಯನ್ನು ಎಲ್ಲರೂ ತೆಗಳಿದ್ದಾರೆ. ಕೆಲವರು, ಮಹಿಳೆಯರ ಮುಟ್ಟಿನ ಸಂಗತಿಯ ಬಗ್ಗೆ ಮಾತನಾಡಲು ಈ ವ್ಯಕ್ತಿಗೆ ಹಕ್ಕಿಲ್ಲ. ಆತನೇನು ಅನುಭವಿಸಿದ್ದಾನೆಯೇ? ಪ್ರತಿ ತಿಂಗಳ ನೋವು (Pain) ಆತನ ಅರಿವಿಗೆ ಇದೆಯೇ? ಪೀರಿಯೆಡ್ ಸಮಯದಲ್ಲಿ ಮಹಿಳೆಯರು ಅನುಭವಿಸುವ ಹಲವು ಸಂಕಷ್ಟಗಳು ಆತನಿಗೆ ತಿಳಿದಿವೆಯೇ? ಎಂದೆಲ್ಲ ಪ್ರಶ್ನಿಸಿದ್ದಾರೆ.
7 ನೇ ತಿಂಗಳಲ್ಲಿ ಈ ಕೆಲಸ ಮಾಡಿದ್ರೆ ನಾರ್ಮಲ್ ಡೆಲಿವರಿ ಸಾಧ್ಯತೆ 70%
ಒಬ್ಬರು “ಈ ವ್ಯಕ್ತಿಯ ಬಳಿ ಕೆಲಸ ಮಾಡುವ ಮಹಿಳೆಯರ ಪರಿಸ್ಥಿತಿ ಘೋರ, ಗಂಭೀರವಲ್ಲದ ಯಾವ ಕೆಲಸವೂ ಇರುವುದಿಲ್ಲ’ ಎಂದು ಹೇಳಿದ್ದರೆ, ಮತ್ತೊಬ್ಬರು “ಸ್ಪೇನ್ (Spain) ದೇಶ ಮುಟ್ಟಿನ ದಿನಗಳಲ್ಲಿ 3-4 ದಿನಗಳ ಕಾಲ ರಜೆ ನೀಡುವುದಾಗಿ ಇತ್ತೀಚೆಗೆ ಹೇಳಿದೆ ಎಂದು ಹೇಳಿದ್ದಾರೆ.
ನಿಮ್ಮ ಅಮ್ಮನಿಗೆ ನಾಚಿಕೆಯಾಗುತ್ತೆ!
ಒಂದು ಕಮೆಂಟ್ (Comment) ಇನ್ನೂ ತೀವ್ರವಾಗಿದ್ದು, “ನೋ ಯುಟರಸ್ (Uterus), ನೋ ಒಪಿನಿಯನ್’ (Opinion) ಎಂದು ಕಾಲೆಳೆದಿದೆ. ಆದರೆ, ಡಾ.ಪ್ರಶಾಂತ್ ಇದನ್ನು ಸಹ ಸರಿಯಾಗಿ ಸ್ವೀಕಾರ ಮಾಡಿಲ್ಲ. “ನನ್ನ ಕಂಪೆನಿ, ನನ್ನ ಅಭಿಪ್ರಾಯ’ ಎಂದೇ ಒರಟುತನ ತೋರಿದ್ದಾರೆ. “ಈ ಪುರುಷನ (Male) ಜತೆ ಕೆಲಸ ಮಾಡುವ ಮಹಿಳೆಯರ ಬಗ್ಗೆ ಕನಿಕರ (Pity) ಬರುತ್ತಿದೆ’ ಎಂದು ಒಬ್ಬರು ಹೇಳಿದ್ದರೆ, ಮತ್ತೊಬ್ಬರು, “ನಿಮ್ಮ ಅಮ್ಮ ಏಕೆ ನಿಮ್ಮ ಬಗ್ಗೆ ಫೇವರ್ ಮಾಡಿದರು? ನಿಮಗೆ ಜನ್ಮ (Birth) ನೀಡಿದರು? ಆಕೆಗೆ ನಾಚಿಕೆ (Shame) ಆಗುತ್ತದೆ’ ಎಂದೂ ಹೇಳಿದ್ದಾರೆ.
ಗರ್ಭಪಾತ ನಿರ್ಧರಿಸುವ ಹಕ್ಕು ಮಹಿಳೆಗಿದೆ; 32 ವಾರದ ಗರ್ಭಿಣಿಯ ಅಬಾರ್ಷನ್‌ಗೆ ಹೈಕೋರ್ಟ್ ಅಸ್ತು..!
ಯಾಕಾಗಿ ರಜೆ ಅಗತ್ಯ?
ಮಾಸಿಕ ಋತುಸ್ರಾವದ (Cycle) ರಜೆಯ ಬಗ್ಗೆ ಸಾಕಷ್ಟು ಭಿನ್ನಾಭಿಪ್ರಾಯಗಳಿವೆ, ಅದನ್ನು ಬೆಂಬಲಿಸುವವರೂ ಇದ್ದಾರೆ. ಈ ರಜೆಯ ಸೌಲಭ್ಯ (Fecility) ದುರುಪಯೋಗವಾಗುತ್ತದೆ ಎಂದು ಹೇಳುವವರೂ ಇದ್ದಾರೆ. ಆದರೆ, ಉದ್ಯೋಗಸ್ಥ ಮಹಿಳೆಯರ ಆರೋಗ್ಯದ (Health) ದೃಷ್ಟಿಯಿಂದ ಈ ರಜಾ ಸೌಲಭ್ಯ ನೀಡುವುದು ಅತ್ಯಗತ್ಯ. ಅಷ್ಟಕ್ಕೂ ಮಹಿಳೆಯರು ತೀರ ಅಗತ್ಯವಿದ್ದಾಗ ಮಾತ್ರ ರಜೆ ಸೌಲಭ್ಯಗಳನ್ನು ತೆಗೆದುಕೊಳ್ಳುತ್ತಾರೆ ಎನ್ನುವುದು ಗಮನಾರ್ಹ.