Asianet Suvarna News Asianet Suvarna News

ಅತಿಯಾದರೆ ಅಮೃತವೂ ವಿಷ, ಹಾಗೆ ಹೆಚ್ಚು ಖುಷಿಯಾದರೆ ಸಾವೂ ಸಂಭವಿಸಬಹುದು!

ತುಂಬಾ ಖುಷಿಪಡ್ಬೇಡ, ಆಮೇಲೆ ಅಳ್ತಿಯಾ ಅಂತಾ ದೊಡ್ಡವರು ಹೇಳ್ತಿರುತ್ತಾರೆ. ಈ ಖುಷಿ ಮುಂದೆ ಅಳು ತರಿಸುತ್ತೋ ಇಲ್ವೋ ಗೊತ್ತಿಲ್ಲ, ಆದ್ರೆ ಅತಿಯಾದ ಖುಷಿ ಕೆಲವೊಮ್ಮೆ ಸಾವಿಗೂ ಕಾರಣವಾಗುತ್ತಂತೆ. ಹಾಗಂತ ಅಧ್ಯಯನವೊಂದು ಹೇಳ್ತಿದೆ.
 

Happiness Can Kill You how more happiness affects health
Author
Banaganapalli, First Published Jul 20, 2022, 5:10 PM IST

ಆರೋಗ್ಯವಾಗಿ ಇರಬೇಕೆಂದ್ರೆ ಖುಷಿಯಾಗಿರಬೇಕು ಎಂಬ ಮಾತನ್ನು ಎಲ್ಲರೂ ಹೇಳ್ತಿರುತ್ತಾರೆ. ನಗ್ತಾ ಇದ್ರೆ ನೂರು ವರ್ಷ ಆರೋಗ್ಯವಾಗಿ ಬದುಕಬಹುದು ಎಂಬ ಮಾತನ್ನು ನಾವು ಎಷ್ಟೋ ಬಾರಿ ಕೇಳಿರ್ತೇವೆ. ಸಾಮಾನ್ಯವಾಗಿ ಶಾಕಿಂಗ್ ವಿಷ್ಯಗಳು, ಮನಸ್ಸಿಗೆ ನೋವುಂಟು ಮಾಡುವ ವಿಷ್ಯಗಳು ಹೃದಯಾಘಾತಕ್ಕೆ ಕಾರಣವಾಗುತ್ತವೆ. ಆಪ್ತರು ಸಾವನ್ನಪ್ಪಿದ ವಿಷ್ಯ ಕೇಳಿ ಹೃದಯಾಘಾತಕ್ಕೊಳಗಾದವರ ಸಂಖ್ಯೆ ಸಾಕಷ್ಟಿದೆ. ಇದೇ ಕಾರಣಕ್ಕೆ ಒಂದೇ ಬಾರಿ ನೋವಿನ ವಿಷ್ಯವನ್ನು ಯಾರಿಗೂ ಹೇಳ್ಬಾರದು, ಒಂದೇ ಬಾರಿ ದುಃಖದ ಸಂಗತಿಯನ್ನು ಹೇಳಬಾರದು ಎನ್ನಲಾಗುತ್ತದೆ. ಆದ್ರೆ ಬರೀ ನೋವು, ದುಃಖ, ಶಾಕ್ ಆದ್ರೆ ಮಾತ್ರವಲ್ಲ ಅತಿಯಾದ ಖುಷಿ ಕೂಡ ಆಪತ್ತಿಗೆ ಆಹ್ವಾನ ನೀಡುತ್ತದೆ ಎಂದ್ರೆ ನೀವು ನಂಬ್ಲೇಬೇಕು. ಜಪಾನ್ ನಲ್ಲಿ ನಡೆದ ಅಧ್ಯಯನದಲ್ಲಿ ಇದು ಬಹಿರಂಗವಾಗಿದೆ. ಅತಿಯಾದ ಸಂತೋಷ ನಮ್ಮ ಆರೋಗ್ಯಕ್ಕೆ ಅಪಾಯಕಾರಿ ಎಂಬ ಆಘಾತಕಾರಿ ವಿಷಯ ಅಧ್ಯಯನದಿಂದ ಹೊರಬಿದ್ದಿದೆ. ಇದನ್ನು ಕೇಳಿ ನಿಮಗೆ ಗೊಂದಲವಾಗಿರಬಹುದು. ಅತಿಯಾದ ಸಂತೋಷವೂ ಆಪತ್ತು ತರುತ್ತೆ ಅಂದ್ರೆ ಹೆಂಗೆ ಎಂದು ನೀವು ಪ್ರಶ್ನೆ ಮಾಡಬಹುದು. ದುಃಖದ ಹಾಗೆ ಸಂತೋಷವು ಸಹ ವ್ಯಕ್ತಿಯ ಭಾವನೆ ಮೇಲೆ ಪರಿಣಾಮ ಬೀರುತ್ತದೆ. ಇದಕ್ಕೆ ಸಂಬಂಧಿಸಿದಂತೆ ಜಪಾನ್ ನಲ್ಲಿ ನಡೆದ ಅಧ್ಯಯನದ ವರದಿ ಏನು ಎಂಬುದನ್ನು ನಾವಿಂದು ಹೇಳ್ತೇವೆ. 

ಅಧ್ಯಯನ (Study) ದ ವಿವರ : ಜಪಾನ್‌ (Japan) ನ ಹಿರೋಷಿಮಾ ಸಿಟಿ ಆಸ್ಪತ್ರೆಯ ಡಾ. ಹಿಕಾರು ಸಾಟೊ ಮತ್ತು ಅವರ ಸಹೋದ್ಯೋಗಿಗಳು ಅಧ್ಯಯನ ನಡೆಸಿದ್ದಾರೆ. ವಿಪರೀತ ಸಂತೋಷ (Happiness) ವಾದ್ರೆ ಅದು ಮನುಷ್ಯನ ದೇಹದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂಬುದನ್ನು ಅಧ್ಯಯನ ನಡೆಸಿದ್ದಾರೆ. ಈಗ ಅಧ್ಯಯನದ ವರದಿ ಬಹಿರಂಗಗೊಂಡಿದೆ. ಈ ಅಧ್ಯಯನದ ಪ್ರಕಾರ, ಅತಿಯಾದ ಸಂತೋಷದ  ಸ್ಥಿತಿಯಲ್ಲಿ ಜನರು ಹ್ಯಾಪಿ ಹಾರ್ಟ್ ಸಿಂಡ್ರೋಮ್ ಗೆ ಒಳಗಾಗ್ತಾರೆ ಎಂಬುದು ಪತ್ತೆಯಾಗಿದೆ.  ಇದನ್ನು ಟಕೋಟ್ಸುಬೊ ಕಾರ್ಡಿಯೊಮಿಯೊಪತಿ ಎಂದೂ ಕರೆಯುತ್ತಾರೆ. ಅತಿಯಾದ ಸಂತೋಷದಲ್ಲಿರುವ ವ್ಯಕ್ತಿ ಹ್ಯಾಪಿ ಹಾರ್ಟ್ ಸಿಂಡ್ರೋಮಕ್ಕೆ ಒಳಗಾಗುವುದಲ್ಲದೆ ಇದರಿಂದ ಕೆಲವರಿಗೆ ಹೃದಯಾಘಾತವಾಗುತ್ತದೆ. ಈ ರೋಗ ಲಕ್ಷಣದಲ್ಲಿ  ವ್ಯಕ್ತಿಯ ಹೃದಯದ ಸ್ನಾಯುಗಳು ದುರ್ಬಲವಾಗುತ್ತವೆ. ಇದು ರಕ್ತವನ್ನು ಪಂಪ್ ಮಾಡುವ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತದೆ. ಅತಿಯಾದ ಸಂತೋಷ ಆರೋಗ್ಯಕ್ಕೆ ಅಪಾಯಕಾರಿ ಎಂದು ಅಧ್ಯಯನದಲ್ಲಿ ಗೊತ್ತಾಗಿದೆ. 

ಬೇಗ ತೂಕ ಇಳಿಸಿಕೊಳ್ಳಬೇಕಾ ? ಈರುಳ್ಳಿ ಸೇವಿಸಿ

ಅತಿಯಾದ ಸಂತೋಷಕ್ಕೆ ಸಾವು ಬರೋದು ಅಪರೂಪ : ಹ್ಯಾಪಿ ಹಾರ್ಟ್ ಸಿಂಡ್ರೋಮ ರೋಗ ಲಕ್ಷಣ ಮಹಿಳೆಯರು ಹಾಗೂ 50 ವರ್ಷ ಮೇಲ್ಪಟ್ಟ ಜನರ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಹ್ಯಾಪಿ ಹಾರ್ಟ್ ಮತ್ತು ಬ್ರೋಕನ್ ಹಾರ್ಟ್ ಸಿಂಡ್ರೋಮದಿಂದ ಸಾವನ್ನಪ್ಪುವವರ ಸಂಖ್ಯೆ ತೀರಾ ಕಡಿಮೆ ಎಂದು ಅಧ್ಯಯನದಲ್ಲಿ ಪತ್ತೆಯಾಗಿದೆ. ಬಹಳ  ಅಪರೂಪದ ಸಂದರ್ಭಗಳಲ್ಲಿ ಮಾತ್ರ ಈ ಸಿಂಡ್ರೋಮದಿಂದ ಜನರು ತಮ್ಮ ಜೀವನವನ್ನು ಕಳೆದುಕೊಳ್ಳುತ್ತಾರೆ. ಅತಿ ಖುಷಿಯಿಂದ ಹೃದಯಕ್ಕೆ ಹಾನಿಯಾಗುವ ಅಪಾಯವೂ ತುಂಬಾ ಕಡಿಮೆ. ಸಂತೋಷವಾದ್ರೆ ಹೃದಯಾಘಾತವಾಗುತ್ತೆ ಎಂದು ಜನರು ಭಯಪಡುವ ಅಗತ್ಯವಿಲ್ಲ. ಅಪರೂಪದಲ್ಲಿ ಅಪರೂಪಕ್ಕೆ ಒಬ್ಬರಿಗೆ ಈ ಸಮಸ್ಯೆ ಕಾಡಬಹುದು. ಒಂದ್ವೇಳೆ ಸಮಸ್ಯೆ ಎನ್ನಿಸಿದ್ರೆ ವೈದ್ಯರನ್ನು ಭೇಟಿಯಾಗಿ ಎಂದು ಅಧ್ಯಯನ ನಡೆಸಿದ ತಜ್ಞರು ಸಲಹೆ ನೀಡಿದ್ದಾರೆ. ಚಿಕಿತ್ಸೆಯ ಮೂಲಕ ಈ ಸಮಸ್ಯೆಗೆ ನೀವು ಪರಿಹಾರ ಕಂಡುಕೊಳ್ಳಬಹುದು. 

ಟೊಮೆಟೋ ಜ್ಯೂಸ್ ಕುಡಿದ್ರೆ ಅಧಿಕ ರಕ್ತದೊತ್ತಡದ ಅಪಾಯ ಹೆಚ್ಚು !

ಹ್ಯಾಪಿ ಹಾರ್ಟ್ ಸಿಂಡ್ರೋಮ ರೋಗ ಲಕ್ಷಣಗಳು :  ಹ್ಯಾಪಿ ಹಾರ್ಟ್ ಸಿಂಡ್ರೋಮಕ್ಕೆ ಒಳಗಾದವರಿಗೆ ತೀವ್ರ ಒತ್ತಡದ ನಂತರ ಎದೆ ನೋವು ಮತ್ತು ಉಸಿರಾಟದ ತೊಂದರೆ ಕಾಣಿಸಿಕೊಳ್ಳುತ್ತದೆ. ಸೂಕ್ತ ಸಮಯಕ್ಕೆ ಚಿಕಿತ್ಸೆ ಪಡೆದರೆ  ನೀವು ಒಂದು ತಿಂಗಳಲ್ಲಿ ಸಂಪೂರ್ಣವಾಗಿ ಚೇತರಿಸಿಕೊಳ್ಳಬಹುದು. ಹಾಗಾಗಿ ಯಾವುದೇ ಭಯದ ಅಗತ್ಯವಿಲ್ಲ. ಮನಸ್ಸು ಬಿಚ್ಚಿ ನಗಿ, ಸಂತೋಷವಾಗಿರಿ.

Follow Us:
Download App:
  • android
  • ios