ಆರೋಗ್ಯ ವೃದ್ಧಿಗೆ ಅಂತ ನಾವೆಲ್ಲ ಜಿಮ್ ಗೆ ಹೋಗ್ತೇವೆ. ಆದ್ರೆ ಅದೇ ಜಿಮ್ ನಮ್ಮ ಆರೋಗ್ಯವನ್ನು ಹಾಳು ಮಾಡಿದ್ರೆ? ಸಂಶೋಧನೆಯೊಂದು, ಜಿಮ್ ಎಷ್ಟು ಅಪಾಯಕಾರಿ ಎಂಬ ಅಂಶವನ್ನು ಹೇಳಿದೆ.    

ಬಾಡಿ ಬಿಲ್ಡಿಂಗ್ (body building) ಗಾಗಿ ಜಿಮ್ (gym) ನಲ್ಲಿ ಬೆವರಿಳಿಸುವ ಕ್ರೇಜ್ ಇಂದಿನ ಯುವಕರಲ್ಲಿ ಹೆಚ್ಚಾಗಿ ಕಾಣ್ತಿದೆ. ವಿಶೇಷವಾಗಿ 18 ರಿಂದ 26 ವರ್ಷ ವಯಸ್ಸಿನ ಯುವಕರು ಜಿಮ್‌ನಲ್ಲಿ ವ್ಯಾಯಾಮ (exercise) ಮಾಡಲು ಇಷ್ಟಪಡ್ತಾರೆ. ಯಂಗ್ ಜನರೇಷನ್ ಫೆವರೆಟ್ ಸ್ಥಳ ಜಿಮ್ ಅಂದ್ರೆ ತಪ್ಪಾಗೋದಿಲ್ಲ. ಆರೋಗ್ಯಕ್ಕೆ, ದೇಹದ ಸೌಂದರ್ಯ ಕಾಪಾಡಿಕೊಳ್ಳಲು, ಫಿಟ್ನೆಸ್ (fitness) ಮೆಂಟೇನ್ ಮಾಡಲು ವಾಕಿಂಗ್, ಜಾಗಿಂಗ್, ಯೋಗ ಅಂತ ಬೇರೆ ಬೇರೆ ಸ್ಥಳಕ್ಕೆ ಹೋಗಲು ಜನರಿಗೆ ಸಮಯವಿಲ್ಲ. ಒಂದೇ ಸ್ಥಳದಲ್ಲಿ ದೇಹದ ಎಲ್ಲ ಭಾಗಕ್ಕೆ ವ್ಯಾಯಾಮ ಸಿಗುತ್ತೆ ಎಂದಾಗ ಜಿಮ್ ಬೆಸ್ಟ್ ಎನ್ನುತ್ತಾರೆ ಯುವಕರು. ಕೊರೊನಾ ನಂತ್ರ ಸ್ವಲ್ಪ ಕಡಿಮೆಯಾಗಿದ್ದ ಜಿಮ್ ನಲ್ಲಿ ವರ್ಕ್ ಔಟ್ ಮಾಡುವವರ ಸಂಖ್ಯೆ ಈಗ ಮತ್ತೆ ಏರಿಕೆ ಕಾಣ್ತಿದೆ. ನಗರ ಪ್ರದೇಶಗಳಲ್ಲಿ ಗಲ್ಲಿ ಗಲ್ಲಿಗೊಂದು ಜಿಮ್ ಸೆಂಟರನ್ನು ನೀವು ನೋಡ್ಬಹುದು. ಜಿಮ್ ನಲ್ಲಿ ಸಾಕಷ್ಟು ಐಟಂ ಇರುತ್ತೆ. ಈ ವಸ್ತುಗಳನ್ನು ನಾವು ಪ್ರತಿ ದಿನ ಬಳಕೆ ಮಾಡ್ತೇವೆ. ಬರೀ ನಾವು ಮಾತ್ರವಲ್ಲ ನಮ್ಮಂತೆ ಜಿಮ್ ಗೆ ಬರುವ ಅನೇಕರು ಜಿಮ್ ವಸ್ತುಗಳನ್ನು ಬಳಸ್ತಾರೆ. ಅಧ್ಯಯನವೊಂದು ಈ ಬಗ್ಗೆ ಎಚ್ಚರಿಕೆ ಸಂದೇಶವನ್ನು ನೀಡಿದೆ.

ಶೌಚಾಲಯದಲ್ಲಿ ಅತಿ ಹೆಚ್ಚು ಬ್ಯಾಕ್ಟೀರಿಯಾ ಇರುತ್ತೆ. ಹಾಗಾಗಿ ಅಲ್ಲಿ ತುಂಬಾ ಸಮಯ ಕಳೆಯಬೇಡಿ, ಮೊಬೈಲ್ ಬಳಕೆಯನ್ನು ಶೌಚಾಲಯದಲ್ಲಿ ಮಾಡ್ಬೇಡಿ ಎಂಬೆಲ್ಲ ಎಚ್ಚರಿಕೆಯನ್ನು ತಜ್ಞರು ಈಗಾಗಲೇ ನೀಡಿದ್ದಾರೆ. ಈಗ ಶೌಚಾಲಯಕ್ಕಿಂತ ಹೆಚ್ಚು ಅಪಾಯಕಾರಿ ಜಿಮ್ ವಸ್ತುಗಳು ಎಂಬುದು ಗೊತ್ತಾಗಿದೆ. ತಜ್ಞರು, ಜಿಮ್ ವಸ್ತುಗಳ ಮೇಲೆ ಅಧ್ಯಯನ ನಡೆಸಿದ್ದಾರೆ. ಅದ್ರ ಪ್ರಕಾರ, ಜಿಮ್ ನಲ್ಲಿರುವ ವಸ್ತುಗಳ ಮೇಲೆ ಅತಿ ಹೆಚ್ಚು ಬ್ಯಾಕ್ಟೀರಿಯಾ ಇರುತ್ತೆ ಎಂಬುದು ಪತ್ತೆಯಾಗಿದೆ. ಟಾಯ್ಲೆಟ್ ಸೀಟ್‌ಗಿಂತ 362 ಪಟ್ಟು ಹೆಚ್ಚು ಸೂಕ್ಷ್ಮಜೀವಿಗಳನ್ನು ಜಿಮ್ ನಲ್ಲಿರುವ ಉಪಕರಣ ಹೊಂದಿರುತ್ತದೆ. ಸುಮಾರು ಶೇಕಡಾ 90ರಷ್ಟು ಬ್ಯಾಕ್ಟೀರಿಯಾಗಳು ಮನುಷ್ಯನಿಗೆ ಹಾನಿಕಾರಕವೆಂದು ಸಾಬೀತಾಗಿದೆ. ಫಿಟ್‌ನೆಸ್ ಹೆಸರಿನಲ್ಲಿ ನೀವು ಗಂಟೆಗಟ್ಟಲೇ ಜಿಮ್‌ನಲ್ಲಿ ಕಳೆಯುತ್ತಿದ್ದರೆ ನೈರ್ಮಲ್ಯೀಕರಣಕ್ಕೆ ಹೆಚ್ಚು ಆದ್ಯತೆ ನೀಡಿ ಎಂದು ತಜ್ಞರು ಸಲಹೆ ನೀಡಿದ್ದಾರೆ. 

ಪರಿಣೀತಿ 28 ಕೆಜಿ ತೂಕ ಇಳಿಸಿಕೊಂಡಿದ್ದು ಹೇಗೆ? ಇಲ್ಲಿದೆ ಅವರ ಫಿಟ್ನೆಸ್ ಮಂತ್ರ

ಜಿಮ್ ನಲ್ಲಿ ಅತಿ ಹೆಚ್ಚು ಬ್ಯಾಕ್ಟೀರಿಯಾ ಇರುವ ಸ್ಥಳ : 

ಟ್ರೆಡ್ ಮಿಲ್ : ಟ್ರೆಡ್‌ಮಿಲ್‌ , ಜನರು ಹೆಚ್ಚಾಗಿ ಬಳಕೆ ಮಾಡುವ ಸ್ಥಳ. ಸಾರ್ವಜನಿಕ ಸಿಂಕ್, ಕೆಫೆಟೇರಿಯಾ ಟ್ರೇಗಳಿಗಿಂತ ಶೇಕಡಾ 39ರಿಂದ ಶೇಕಡಾ 74 ಪಟ್ಟು ಹೆಚ್ಚು ಬ್ಯಾಕ್ಟೀರಿಯಾ ಟ್ರೆಡ್ ಮಿಲ್ ನಲ್ಲಿ ಕಾಣ್ಬಹುದು. ಇದ್ರಲ್ಲಿ ಓಡುವ ಜನರ ಬೆವರು ಅಲ್ಲೇ ಬಿದ್ದಿರುತ್ತದೆ. ಅದನ್ನು ಟವೆಲ್ ನಲ್ಲಿ ಒರೆಸಿ ಅದನ್ನು ಪಕ್ಕದಲ್ಲಿ ಇಡ್ತಾರೆ. ಇದು ಮತ್ತಷ್ಟು ಅನೈರ್ಮಲ್ಯಕ್ಕೆ ಕಾರಣವಾಗುತ್ತದೆ. ಟ್ರೆಡ್‌ಮಿಲ್‌ಗಳು ಚರ್ಮದ ಸೋಂಕುಗಳು ಮತ್ತು ನ್ಯುಮೋನಿಯಾವನ್ನು ಉಂಟುಮಾಡುವ ಬ್ಯಾಕ್ಟೀರಿಯಾದ ಸಾಮಾನ್ಯ ಸಂತಾನೋತ್ಪತ್ತಿ ಸ್ಥಳವಾಗಿದೆ.

ಡಂಬ್ಬೆಲ್ಸ್: ಡಂಬ್ಬೆಲ್, ಜಿಮ್ ನ ಮತ್ತೊಂದು ಕೊಳಕು ಪ್ರದೇಶವಾಗಿದೆ. ಇದಕ್ಕೆ ಹೆಚ್ಚು ಕೊಳಕು ಬ್ಯಾಕ್ಟೀರಿಯಾಗಳು ಅಂಟಿಕೊಂಡಿರುತ್ತವೆ. ವಿವಿಧ ಸೋಂಕುಗಳಿಗೆ ಇದು ಕಾರಣವಾಗಬಹುದು. ಪ್ರತಿ ಬಾರಿ ಇದನ್ನು ಬಳಸಿದ ನಂತ್ರ ಕೈಗಳನ್ನು ತೊಳೆದುಕೊಳ್ಳಿ.

ಪುಟ್ಟ ಹೃದಯಗಳ ರಕ್ಷಿಸುವುದು ಹೇಗೆ? ಮಕ್ಕಳಲ್ಲಿ ಹೃದಯಾಘಾತಕ್ಕೆ ಕಾರಣ, ಪರಿಹಾರ

ಯೋಗ ಮ್ಯಾಟ್ : ಜಿಮ್ ನಲ್ಲಿ ಬಳಸುವ ಯೋಗ ಮ್ಯಾಟ್ ಕೂಡ ಆರೋಗ್ಯಕ್ಕೆ ಒಳ್ಳೆಯದಲ್ಲ. ನೀವು ಜಿಮ್ ನಲ್ಲಿರುವ, ಎಲ್ಲರೂ ಬಳಕೆ ಮಾಡುವ ಯೋಗ ಮ್ಯಾಟ್ ಬಳಸಬೇಡಿ. ಇದು ಬ್ಯಾಕ್ಟೀರಿಯಾ ಮೂಲಗಳಲ್ಲಿ ಒಂದಾಗಿದೆ.

ಇತರೇ ವಸ್ತು : ಜಿಮ್ ನಲ್ಲಿ ಪ್ರತಿಯೊಬ್ಬರೂ ಅತಿ ಹೆಚ್ಚು ಸಮಯ ಕಳೆಯುವ ಜಾಗದಲ್ಲಿ ಹೆಚ್ಚು ಬ್ಯಾಕ್ಟೀರಿಯಾ ಉತ್ಪತ್ತಿಯಾಗುತ್ತದೆ. ಸ್ಟೆಬಿಲಿಟಿ ಬಾಲ್‌, ಪುಲ್ ಅಪ್ ಬಾಲ್, ಬೆಂಚ್ ಎಲ್ಲವೂ ಅಪಾಯಕಾರಿ ಸ್ಥಳಗಳಾಗಿವೆ.