ಡಿಜೆ ಸೌಂಡ್‌ ಗದ್ದಲ, ಹಾರ ಬದಲಿಸುತ್ತಿದ್ದಂತೆ ಹೃದಯಾಘಾತವಾಗಿ ಸಾವನ್ನಪ್ಪಿದ ವರ!

ಮದ್ವೆ ಮನೆ ಅಂದ್ರೆ ಸಂಭ್ರಮ-ಸಡಗರ. ಸಾಂಗ್‌, ಡ್ಯಾನ್ಸ್‌ ಡಿಜೆ ಸೌಂಡ್‌, ಮೋಜು ಮಸ್ತಿ ಇದ್ದೇ ಇರುತ್ತೆ. ಆದ್ರೆ ಇತ್ತೀಚಿಗೆ ಮಾತ್ರ ಇದು ವಿಪರೀತವಾಗುತ್ತಿದೆ. ಕಿವಿಗಡಚಿಕ್ಕುವ ಡಿಜೆ ಸೌಂಡ್‌ಗೆ ಮದುವೆಗೆ ಬಂದ ಗೆಸ್ಟ್‌ಗಳಿಗೂ ಎದ್ದು ಓಡಿ ಹೋಗಿಬಿಡುವಷ್ಟು ಕಿರಿಕಿರಿಯಾಗುತ್ತದೆ. ಅಷ್ಟೇ ಆದರೆ ಪರ್ವಾಗಿಲ್ಲ. ಆದ್ರೆ ಇಲ್ಲೊಂದೆಡೆ ವಿಪರೀತ ಡಿಜೆ ಸೌಂಡ್‌ಗೆ ವರನ ಪ್ರಾಣವೇ ಹೋಗಿದೆ. 

Groom dies of suspected heart attack while wedding rituals were underway in Bihar Vin

ಬಿಹಾರ: ಮದುವೆಯ ವಿಧಿವಿಧಾನಗಳು ನಡೆಯುತ್ತಿದ್ದಾಗ ಹೃದಯಾಘಾತದಿಂದ ವರ ಸಾವನ್ನಪ್ಪಿದ್ದಾನೆ. ಬಿಹಾರದ ಸೀತಾಮರ್ಹಿ ಜಿಲ್ಲೆಯ ಸೋನ್‌ಬರ್ಸಾ ಬ್ಲಾಕ್‌ನ ಇಂದರ್ವಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ವಿವಾಹ ವಿಧಿವಿಧಾನಗಳು ನಡೆಯುತ್ತಿದ್ದ ವೇಳೆಯೇ ಯುವಕ ಕುಸಿದು ಬಿದ್ದು ಮೃತಪಟ್ಟಿದ್ದಾನೆ. ಮೃತರನ್ನು ಅದೇ ಜಿಲ್ಲೆಯ ಮಾಣಿಕ್ತಾರ್ ಗ್ರಾಮದ ಸುರೇಂದ್ರ ಎಂದು ಗುರುತಿಸಲಾಗಿದೆ. ಮದುವೆಯ ದಿಬ್ಬಣ ಸ್ಥಳಕ್ಕೆ ಆಗಮಿಸಿದ ನಂತರ ವಿವಾಹ ವಿಧಿವಿಧಾನಗಳು ನಡೆಯುತ್ತಿದ್ದ ಸಂದರ್ಭ ಘಟನೆ ಸಂಭವಿಸಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಡಿಜೆ ಸೌಂಡ್‌ನಿಂದ ಅಸ್ವಸ್ಥತೆ ಅನುಭವಿಸಿದ್ದ ವರ
ಮದುವೆಯ (Marriage) ಶಾಸ್ತ್ರದಂತೆ ಹೂವಿನ ಮಾಲೆ ಹಾಕುವ ಸಂದರ್ಭ ಸುರೇಂದ್ರ ಅವರು ವೇದಿಕೆಯ ಮೇಲೆ ಹಠಾತ್ ಕುಸಿದು ಬಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಅಲ್ಲಿಗೆ ತಲುಪುವಷ್ಟರಲ್ಲಿ ಅವರು ಮೃತಪಟ್ಟಿದ್ದರು ಎಂದು ತಿಳಿದುಬಂದಿದೆ. ಸುರೇಂದ್ರ ಅವರು ವಿಪರೀತ ಡಿಜೆ ಸೌಂಡ್ ಹಾಕದಂತೆ ಮನವಿ ಮಾಡಿದ್ದರು. ಆದರೂ ಇದನ್ನು ನಿರ್ಲಕ್ಷಿಸಲಾಯಿತು ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಡಿಜೆ ಅಬ್ಬರ ಸಂಭ್ರಮದ ವಾತಾವರಣವನ್ನ ಶೋಕ ಸಾಗರವಾಗಿ ಪರಿವರ್ತಿಸಿದೆ. ವಧು-ವರರು (Bride-groom) ಹಾರಗಳನ್ನು ಬದಲಾಯಿಸಿಕೊಂಡ ಕೆಲವೇ ಕ್ಷಣಗಳಲ್ಲಿ ವರ ವೇದಿಕೆಯ ಮೇಲೆ ಕುಸಿದು ಬಿದ್ದಿದ್ದಾನೆ. ಹೈ ಡೆಸಿಬಲ್​ ಡಿಜೆ ಮ್ಯೂಸಿಕ್​ ಪರಿಣಾಮ ವರ ಅಸ್ವಸ್ಥನಾಗಿ ವೇದಿಕೆಯ ಮೇಲೆ ಕುಸಿದು ಬಿದ್ದಿದ್ದಾನೆ ಎಂದು ತಿಳಿದುಬಂದಿದೆ.

ಕಣ್ರೆಪ್ಪೆ ಮುಚ್ಚಿ ತೆರೆಯೋದ್ರೊಳಗೆ ಜೀವಾನೇ ಹೋಗಿತ್ತು, ಬದುಕು ಎಷ್ಟು ಕ್ಷಣಿಕ ನೋಡಿ..

ಬುಧವಾರದಂದು ಸುರೇಂದ್ರ ಮತ್ತು ವಧು ಇಬ್ಬರೂ ಮದುವೆಗೆ ಸಿದ್ಧಪಡಿಸಲಾದ ವೇದಿಕೆ ಮೇಲೆ ನಿಂತಿದ್ದರು. ನವಜೋಡಿ ಹಾರ ಬದಲಾಯಿಸಿಕೊಂಡು ಇತರ ಧಾರ್ಮಿಕ ವಿಧಿಗಳನ್ನು ಮುಗಿಸಿದ್ದಾರೆ. ಈ ವೇಳೆ ಸುರೇಂದ್ರ ಅವರು ತಮ್ಮ ಮದುವೆಯ ಮೆರವಣಿಗೆಯಲ್ಲಿ ಪ್ಲೇ ಆಗುತ್ತಿದ್ದ ಡಿಜೆಯ ಭಾರಿ ಶಬ್ದವನ್ನು ತಗ್ಗಿಸುವಂತೆ ಹಲವು ಬಾರಿ ಮನವಿ ಮಾಡಿದ್ದಾರೆ. ಆದರೂ ಇವರ ಮಾತನ್ನು ಯಾರು ಕೇಳಿಲ್ಲ. ಹಾರ ಬದಲಿಸಿಕೊಂಡ ಕೆಲವೇ ಕ್ಷಣಗಳಲ್ಲಿ, ಸುರೇಂದ್ರ ವೇದಿಕೆಯ ಮೇಲೆ ಕುಸಿದುಬಿದ್ದಿದ್ದಾರೆ. ನಂತರ ಅವರನ್ನು ಚಿಕಿತ್ಸೆಗಾಗಿ (Treatment) ಸ್ಥಳೀಯ ಆಸ್ಪತ್ರೆಗೆ ಸಾಗಿಸುವ ಪ್ರಯತ್ನ ಮಾಡಲಾಯಿತು, ಆದರೆ ಸುರೇಂದ್ರ ದಾರಿಯಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.

ನಿಷೇಧದ ಹೊರತಾಗಿಯೂ ಡಿಜೆ ಬಳಕೆ
ಮದುವೆ ಮನೆ, ಸಮಾರಂಭಗಳಲ್ಲಿ ಡಿಜೆ ಮೇಲೆ ಕಟ್ಟುನಿಟ್ಟಾದ ನಿಷೇಧವೇರಿದೆ. ಆದರೂ ಇದರ ಬಳಕೆ ಮಾಡಿರುವುದು ಎಷ್ಟು ಸರಿ ಎಂಬ ಪ್ರಶ್ನೆ ಮೂಡಿದೆ. ಸಾಮಾಜಿಕ ಕಾರ್ಯಕರ್ತ ಡಾ.ರಾಜೀವ್ ಕುಮಾರ್ ಮಿಶ್ರಾ ಕೂಡ ಡಿಜೆಗಳ ಮೇಲಿನ ನಿಷೇಧವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕೆಂದು ಸ್ಥಳೀಯ ಆಡಳಿತವನ್ನು ಒತ್ತಾಯಿಸಿದ್ದಾರೆ.

ಮಾರ್ನಿಂಗ್‌ ವಾಕ್‌ ಮಾಡುವಾಗ ಹಾರ್ಟ್‌ಅಟ್ಯಾಕ್‌, ಅಪಾಯ ಮೊದಲೇ ತಿಳಿದುಕೊಳ್ಳೋದು ಹೇಗೆ ?

ವಿವಾಹ ಸಮಾರಂಭ ಟೈಮಲ್ಲೇ ಹೃದಯಾಘಾತದಿಂದ ಮೃತಪಟ್ಟ ವಧು: ತಂಗಿಯ ಜತೆ ಮದ್ವೆ ಮಾಡಿಕೊಟ್ಟ ಕುಟುಂಬ
ಗುಜರಾತಿನ ಭಾವನಗರದಲ್ಲಿ ವಧುವೊಬ್ಬರು ಸುಭಾಷ್‌ನಗರ ಪ್ರದೇಶದ ಮದುವೆ ಸ್ಥಳದಲ್ಲಿ, ಅದರಲ್ಲೂ ಮದುವೆ ಸಮಾರಂಭದ ಮಧ್ಯೆಯೇ ಹೃದಯಾಘಾತದಿಂದ ಮೃತಪಟ್ಟಿದ್ದರು. ಗುಜರಾತಿನ ಭಾವನಗರದ ಭಗವಾನೇಶ್ವರ ಮಹಾದೇವ ದೇವಸ್ಥಾನದ ಮುಂಭಾಗದಲ್ಲಿ ಈ ಅಹಿತಕರ ಘಟನೆ ನಡೆದಿತ್ತು. ಜಿನಾಭಾಯಿ ರಾಥೋಡ್ ಎಂದು ಗುರುತಿಸಲಾದ ವ್ಯಕ್ತಿಯ ಪುತ್ರಿಯಾದ ಹೀತಲ್‌, ನಾರಿ ಗ್ರಾಮದ ರಾಣಾಭಾಯ್ ಬೂತಭಾಯ್ ಅಲ್ಗೋಟಾರ್ ಅವರ ಮಗ ವಿಶಾಲ್ ಅವರನ್ನು ಮದುವೆಯಾಗುವ (Marriage) ಮುನ್ನವೇ ಹಾರ್ಟ್‌ ಅಟ್ಯಾಕ್‌ನಿಂದ ಸಾವನ್ನಪ್ಪಿದ್ದರು.

ದುವೆಯನ್ನು ನಿಲ್ಲಿಸಲು ಇಷ್ಟಪಡದ ಸಂಬಂಧಿಕರು ಮದುವೆ ಸಮಾರಂಭ ಮುಂದುವರಿಸಲು ವರ ವಿಶಾಲ್‌ಗೆ ವಧುವಿನ ಬದಲು ಆಕೆಯ ತಂಗಿಯನ್ನು ಮದುವೆಯಾಗಲು ಸಲಹೆ ನೀಡಿದರು. ಅದಕ್ಕೆ ವರ ಕೂಡ ಒಪ್ಪಿದ ನಂತರ, ಎರಡೂ ಕುಟುಂಬದವರು ವಧುವಿನ ತಂಗಿ ಜತೆ ಮದುವೆ ಮಾಡಲಾಯಿತು.

Latest Videos
Follow Us:
Download App:
  • android
  • ios