Asianet Suvarna News Asianet Suvarna News

14 ವರ್ಷದ ಮಗಳಿಗೆ ಮರುಜನ್ಮ ನೀಡಿದ ಮಹಾತಾಯಿ

ಅಪರೂಪದ ಲೀವರ್ ಕಸಿಗೆ ಸಾಕ್ಷಿಯಾದ ಗುಮ್ಮಟನಗರಿ
ಲೀವರ್ ದಾನ ಮಾಡಿ ಮಗಳಿಗೆ ಪುನರ್ಜನ್ಮ ನೀಡಿದ ಮಹಾತಾಯಿ
ಅಪರೂಪದ ಶಸ್ತ್ರ ಚಿಕಿತ್ಸೆ ನಡೆಸಿ ಸೈ ಎನಿಸಿಕೊಂಡ ಡಾ. ನಿಡೋಣಿ

Grandmother reborn her 14 year old daughter
Author
First Published Nov 23, 2022, 9:42 PM IST

ವರದಿ- ಷಡಕ್ಷರಿ‌ ಕಂಪೂನವರ್ ಏಷ್ಯಾನೆಟ್ ಸುವರ್ಣ ನ್ಯೂಸ್

ವಿಜಯಪುರ (ನ.23) : ಇದೊಂದು ಅಪರೂಪದ ಲೀವರ್  ಕಸಿಯ ಸ್ಟೋರಿ. ಮಗಳು ಗಂಭೀರ ಲೀವರ್ ಕಾಯಿಲೆಯಿಂದ ಬಳಲುವಾಗ ತಾಯಿಗೆ ಲೀವರ್ ದಾನ ಮಾಡಿ ಮಗಳನ್ನ ಉಳಿಸಿಕೊಂಡಿದ್ದಾಳೆ. ಈ ಮೂಲಕ ತಾನೇ ಹೆತ್ತ ಮಗಳಿಗೆ ತಾಯಿ ಮತ್ತೊಮ್ಮೆ ಮರುಜನ್ಮ ನೀಡಿದಂತಾಗಿದೆ. ಇತ್ತ ಇನ್ನೇನು ಬಾಲಕಿಯ ಜೀವನ ಮುಗಿದು ಹೋಯಿತು ಎನ್ನುವಾಗ, ಗುಮ್ಮಟನಗರಿ ವಿಜಯಪುರದಲ್ಲಿ ವೈದ್ಯರು ತಾಯಿಯ ಲೀವರ್‌ನ್ನ ಮಗಳಿಗೆ ಕಸಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ವಿಜಯಪುರ ಜಿಲ್ಲೆಯ ತಾಂಬಾದಲ್ಲಿರುವ ಕುಟುಂಬದಲ್ಲಿ  ಅಪರೂಪದ ಘಟನೆಯಿದು. 16 ವರ್ಷಗಳ ಹಿಂದೆ ಮದುವೆಯಾದ ದಂಪತಿಗೆ ಮಕ್ಕಳಾಗುತ್ತಿಲ್ಲ ಎಂದು ನಾನಾ ಆಸ್ಪತ್ರೆಗಳಿಗೆ ಭೇಟಿ ಕೊಟ್ಟು, ಕೊನೆಗೆ 2008ರಲ್ಲಿ ಹೆಣ್ಣು ಮಗು (Girl Baby) ಹುಟ್ಟಿದೆ. ಇವಳಿಗೆ ಕಾವ್ಯ (Kavya) (ಹೆಸರು ಬದಲಾಯಿಸಲಾಗಿದೆ) ಎಂದು ಹೆಸರಿಟ್ಟು ಮುದ್ದಾಗಿ ಬೆಳೆಸಿದ್ದಾರೆ. ಮಗಳ ಶಾಲೆಯಲ್ಲಿ ಯಾವಾಗಲು ಮುಂದೆ ಇರುವದನ್ನು ಕಂಡು ಅಪ್ಪ ಅಮ್ಮನಿಗೆ ಎಲ್ಲಿಲ್ಲದ ಖುಷಿ. ಆದರೆ,  ತಮ್ಮ ಮಗಳ ಹೊಟ್ಟೆಯಲ್ಲಿ ನೀರು ತುಂಬಿಕೊಂಡು ಕಣ್ಣುಗಳು ಹಳದಿ (Yellow eye) ಆಗತೊಡಗಿದವು. ಜೊತೆಗೆ ನೋಟ ಸ್ಪಷ್ಟತೆಯಿಲ್ಲದೆ ಮಂಜಾಗತೊಡಗಿದವು. ನಗರದ ಆಸ್ಪತ್ರೆಗೆ ಅವಳನ್ನು ದಾಖಲು ಮಾಡಿ ಪರೀಕ್ಷೆ ನಡೆಸಿದಾಗ ಆ ಮಗುವಿಗೆ ಅಪರೂಪದ ಅನುವಂಶಿಕವಾಗಿ ಬರುವ ವಿಲ್ಸನ್‌ ರೋಗ (Wilsons disease) ಎಂದು ಪತ್ತೆ ಹಚ್ಚಿದರು.  ಈ ರೋಗದಿಂದ ಬಾಲಕಿಯ ಲಿವರ್ ಪೂರ್ತಿಯಾಗಿ ಹಾನಿಯಾಗಿತ್ತು.

ನಿಮ್ಮ ಲಿವರ್ ಜೋಪಾನ: ಕಲ್ಮಶರಹಿತ ಯಕೃತ್’ಗಾಗಿ ಈ ಆಹಾರ ಸೇವನೆ ಅತಿ ಮುಖ್ಯ.

ಸಮಸ್ಯೆಗೆ ಸ್ಪಂದಿಸಿದ ವೈದ್ಯ ಡಾ. ನಿಡೋಣಿ: ನಗರದ ಖ್ಯಾತ ವೈದ್ಯರಾದ ಲಿವರ್ ಸ್ಪೆಷಲಿಸ್ಟ್ ಹಾಗೂ  ಡಾ. ರವೀಂದ್ರ ನೀಡೋಣಿ (Dr. Ravindra Nidoni) ಅವರ ಹತ್ತಿರ ಮಗಳನ್ನು ಪರೀಕ್ಷೆಗೆ ಕರೆದೊಯ್ಯುತ್ತಾರೆ. ಇವಳನ್ನು ಸಂಪೂರ್ಣವಾಗಿ ಪರೀಕ್ಷಿಸಿದ ವೈದ್ಯರು, ಬಾಲಕಿಗೆ ಲಿವರ್ (Liver) ಬದಲಾಯಿಸಬೇಕು ಎಂದಾಗ ತಂದೆ- ತಾಯಿಗೆ ನೆಲವೆ ಕುಸಿದಂತಹ ಅನುಭವಾಗುತ್ತದೆ. ಇವರಿಗೆ ಧೈರ್ಯ ತುಂಬಿದ ವೈದ್ಯರು, ನಿಮ್ಮ ಮಗಳ ಜವಾಬ್ದಾರಿ ನನ್ನದು. ನೀವು ಧೈರ್ಯವಾಗಿ ಮಗಳನ್ನು ಕರೆದು ಕೊಂಡು ಬೆಂಗಳೂರಿಗೆ ಬಂದುಬಿಡಿ ಅಂತ ಹೇಳುತ್ತಾರೆ.

ಮಗಳಿಗೆ ಮತ್ತೊಂದು ಜನ್ಮ ನೀಡಿದ ತಾಯಿ: ಮಗಳನ್ನು ಬೆಂಗಳೂರಿಗೆ ಕರೆದು ಕೊಂಡು ಹೋಗಿ ಡಾ.ರವೀಂದ್ರ ಅವರ ಆಸ್ಪತ್ರೆಗೆ ದಾಖಲು ಮಾಡುತ್ತಾರೆ. ಆಗ ಎದುರಾಗಿದ್ದು ಲಿವರ್ ದಾನ ಮಾಡುವ ಸಮಸ್ಯೆ. ವೈದ್ಯರು ಮಗುವಿಗೆ ಯಾರು ಲಿವರ್ ದಾನ ಮಾಡುತ್ತೀರಿ ಎಂದಾಗ ಪೋಷಕರಿಗೆ ದಿಕ್ಕೆ ಯೋಚದಂತಾಗುತ್ತದೆ. ಆಗ ಲಕಿಯ ತಾಯಿ ಯಾವುದೇ ತನ್ನ ಮಗಳಿಗೆ ಲಿವರ್ ದಾನ (Liver donation) ಮಾಡುವುದಾಗಿ ಒಪ್ಪಿಕೊಳ್ಳುತ್ತಾರೆ. ಲಿವರ್‍‌ ದಾನದ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡು 15 ದಿನಗಳಲ್ಲಿ ತಾಯಿ ಮತ್ತು ಮಗಳು ಬೆಂಗಳೂರಿನ ಆಸ್ಪತ್ರೆಗೆ ದಾಖಲಾದರು. 

ಲಿವರ್‌ ಕೊಡಲು ಒಪ್ಪಿದ ಅಪ್ರಾಪ್ತ ಮಗ, ಕೋರ್ಟ್‌ನಲ್ಲಿ ವಿಚಾರಣೆಗೂ ಮುನ್ನವೇ ಸಾವು ಕಂಡ ತಂದೆ!

10 ದಿನದಲ್ಲಿ ತಾಯಿ-ಮಗಳು ಚೇತರಿಕೆ: ತಾಯಿಯೇ ತನ್ನ ಮಗಳಿಗೆ ಲಿವರ್ ಕೊಡುತ್ತಿರುವಾಗ, ವೈದ್ಯರಿಗೆ ಎರಡು ಸವಾಲುಗಳು ಎದುರಾಗಿದ್ದವು. ಮೊದಲನೆಯದು ಆರೋಗ್ಯವಂತಾಗಿರುವ ಮಹಿಳೆಯ ಆಪರೇಷನ್ ಮಾಡಿ ಲಿವರ್ ತಗೆಯುವುದು, ನಂತರ ಮಗುವಿಗೆ ಆಪರೇಷನ್ ಮಾಡಿ ಆ ಲಿವರ್ ಮರು ಜೋಡಿಸುವುದು. ಕೊನೆಗೂ ಡಾ. ರವೀಂದ್ರ ನೀಡೋಣಿ ನೇತೃತ್ವದ ತಂಡ ತಾಯಿಯ ಅರ್ಧ ಲಿವರ್ ತಗೆದು ಮಗಳಿಗೆ ಕಸಿ ಮಾಡುವಲ್ಲಿ ಯಶಸ್ವಿಯಾಗುತ್ತಾರೆ. ಆಶ್ಚರ್ಯ ಅಂದ್ರೆ ಆಪರೇಷನ್ ಆದ ಒಂದೇ ವಾರಕ್ಕೆ ತಾಯಿ ಹಾಗೂ 10ನೇ ದಿನಕ್ಕೆ ಮಗಳು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುತ್ತಾರೆ. ಮಗಳ ಆರೈಕೆಯಲ್ಲಿ ತಾಯಿ ತೊಡಗುತ್ತಾರೆ. ಇದು ಪೋಷಕರಲ್ಲಿ ಹೊಸ ಮಂದಹಾಸ ಮೂಡಿಸುತ್ತದೆ. 

ಇದೊಂದು ಆನುವಂಶಿಯ ಕಾಯಿಲೆ: ಡಾ. ರವೀಂದ್ರ ಅವರ ಪ್ರಕಾರ  ಚಿಕ್ಕ ವಯಸ್ಸಿಗೆ ಲಿವರ್ ಸಿರೋಸಿಸ್ (Liver cirrhosis) ಆಗಲು ಸಾಕಷ್ಟ ಕಾರಣಗಳಿದ್ದಾವೆ. ಚಿಕ್ಕ ಮಕ್ಕಳಗೆ ಅನುವಂಶಿಕವಾಗಿ (Hereditary) ನೂರಾರು ಕಾಯಿಲೆಗಳು ಬರುತ್ತವೆ. ಅದರಲ್ಲಿ ಈ ಅಪರೂಪದ ಕಾಯಿಲೆ  ಕೂಡ ಒಂದು. ಈ ಕಾಯಿಲೆಯ  ರೋಗಿಯ ಜೀವ ಕೋಶಗಳು ತಾಮ್ರದ ಅಂಶವನ್ನು ದೇಹದಿಂದ ಹೊರಗೆ ಹಾಕುವ ಶಕ್ತಿಯನ್ನು ಕಳೆದು ಕೊಂಡಿರುತ್ತವೆ. ಇವರಿಂದಾಗಿ ತಾಮ್ರವು ಲಿವರ್ ಅಲ್ಲಿ ನೆಲೆಗೊಂಡು ಲಿವರ್ ಗೆ ಹಾನಿ ಮಾಡುತ್ತದೆ. ಇನ್ನು ದೊಡ್ಡವರಲ್ಲಿ ಲಿವರ್ ಹಾನಿಯಾಗಲು ಸಾಮಾನ್ಯ ಕಾರಣ ಗಳೆಂದರೆ ಅತಿಯಾದ ಮದ್ಯಸೇವನೆ, ಹೆಪಾಟೈಟಿಸ್ 'ಬಿ' ಆಗಿದೆ. ಎಲ್ಲ ವಯಸ್ಸಿನ ರೋಗಿಗಳ ಲಿವರ್ ಟ್ರಾನ್ಸ್ ಪ್ಲೇಂಟ್ ಮಾಡುವ ಮೂಲಕ ರೋಗ ಗುಣಪಡಿಸಬಹುದು ಎಂದು ಹೇಳಿದ್ದಾರೆ.

ಕುಟುಂಬದಲ್ಲಿ ಮರಳಿದ ಸಂತಸ: ಕಾವ್ಯ ಕುಟುಂಬವನ್ನು ಸಂಪರ್ಕಿಸಿದಾಗ ಅವರ ಸಂತಸಕ್ಕೆ ಪಾರವೇ ಇರಲಿಲ್ಲ. ತಮ್ಮ ಮಗಳನ್ನೂ ಉಳಿಸಿ ಕೊಂಡು ಬಿಟ್ಟೆವು ಎನ್ನುವ ಸಂತಸ ಮನೆಮಾಡಿತ್ತು. ಕಷ್ಟಕಾಲದಲ್ಲಿ ಕೈ ಹಿಡಿದ ಡಾ. ರವೀಂದ್ರ ನೀಡೋಣಿ ಆದಿಯಾಗಿ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದ ಮನೋಭಾವ ತಾಯಿಯ ಮುಖದಲ್ಲಿ ಎದ್ದು ಕಾಣುತ್ತಿತ್ತು.

Follow Us:
Download App:
  • android
  • ios