Asianet Suvarna News Asianet Suvarna News

ನಾವ್ ಕುಡಿಯೋ ನೀರಲ್ಲಿದ್ಯಾ ವಿಷ ! ಅಧ್ಯಯನದಿಂದ ತಿಳಿದುಬಂದಿದ್ದೇನು ?

ಭೂಮಿ ಸಂಪೂರ್ಣವಾಗಿ ಮಾಲಿನ್ಯದಿಂದ ತುಂಬಿಹೋಗಿದೆ. ಭೂಮಾಲಿನ್ಯ, ಜಲಮಾಲಿನ್ಯ, ವಾಯುಮಾಲಿನ್ಯ ವಿಪರೀತವಾಗಿದೆ. ಹೀಗಿರುವಾಗ ನಾವ್ ಕುಡಿಯೋ ನೀರು ಶುದ್ಧವಾಗಿದೆ ಎಂದು ಅಂದುಕೊಳ್ಳಲು ಸಾಧ್ಯವೇ ಇಲ್ಲ. ಅಧ್ಯಯನದಲ್ಲೂ ಆತಂಕಕಾರಿ ಮಾಹಿತಿ ಬಹಿರಂಗವಾಗಿದೆ. ಆ ಬಗ್ಗೆ ಇಲ್ಲಿದೆ ಮಾಹಿತಿ.

Govt Data Shows Poisonous Metals In Groundwater In Almost All States Vin
Author
Bengaluru, First Published Aug 5, 2022, 9:52 AM IST

ನವದೆಹಲಿ : ಭಾರತೀಯ ಜನಸಂಖ್ಯೆಯ ಬಹುಪಾಲು ಭಾಗವು ಕಲುಷಿತ ನೀರನ್ನು ಕುಡಿಯುತ್ತಿದೆ. ರಾಜ್ಯಸಭೆಯಲ್ಲಿಜಲಶಕ್ತಿ ಸಚಿವರು ಬಿಡುಗಡೆ ಮಾಡಿದ ಅಂಕಿಅಂಶಗಳು ಇದನ್ನು ಬಹಿರಂಗಪಡಿಸಿವೆ. ಸರ್ಕಾರದ ಅಂಕಿಅಂಶಗಳು ಬಹುತೇಕ ಎಲ್ಲಾ ರಾಜ್ಯಗಳಲ್ಲಿ ಅಂತರ್ಜಲದಲ್ಲಿ ವಿಷಕಾರಿ ಲೋಹಗಳನ್ನು ತೋರಿಸುತ್ತವೆ. ಗಮನಾರ್ಹವಾಗಿ ಹೆಚ್ಚಿನ ಸಂಖ್ಯೆಯ ಜನರು ವಿಷಕಾರಿ ನೀರು ಕುಡಿಯುತ್ತಿದ್ದಾರೆ ಎಂಬುದು ಸ್ಪಷ್ಟವಾಗಿದೆ. 18 ರಾಜ್ಯಗಳ 152 ಜಿಲ್ಲೆಗಳ ಭಾಗಗಳಲ್ಲಿ ಯುರೇನಿಯಂ ಪತ್ತೆಯಾಗಿದೆ ಎಂದು ಸರ್ಕಾರ ಸಂಸತ್ತಿಗೆ ತಿಳಿಸಿದೆ. ಅಧ್ಯಯನದ ಪ್ರಕಾರ ಹಳ್ಳಿಗಳಲ್ಲಿ ಸಮಸ್ಯೆ ಹೆಚ್ಚು ಎಂದು ತಿಳಿದುಬಂದಿದೆ. 

ಡೇಟಾ ಏನು ಹೇಳುತ್ತದೆ ?
ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಜಲಶಕ್ತಿ ರಾಜ್ಯ ಸಚಿವ ಬಿಶ್ವೇಶ್ವರ್ ತುಡು ಅವರು ಲಿಖಿತ ರೂಪದಲ್ಲಿ ಉತ್ತರಿಸಿದ್ದು, ಕುಡಿಯುವ ನೀರಿನಲ್ಲಿ (Drinking water) ಲೋಹವು ಪತ್ತೆಯಾಗಿರುವ ಕುರಿತಂತೆ ಡೇಟಾವನ್ನು ನೀಡಿದರು.ಈ ಕೆಳಗಿನ ರಾಜ್ಯಗಳಲ್ಲಿನ ಕುಡಿಯುವ ನೀರಿನಲ್ಲಿ ಲೋಹ ಪತ್ತೆಯಾಗಿದೆ.

-21 ರಾಜ್ಯಗಳ 176 ಜಿಲ್ಲೆಗಳ ಭಾಗಗಳಲ್ಲಿ ಸೀಸ ಪತ್ತೆಯಾಗಿದೆ.
-29 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿನ 491 ಜಿಲ್ಲೆಗಳ ಭಾಗಗಳಲ್ಲಿ ಕಬ್ಬಿಣವು ಕಂಡುಬಂದಿದೆ.
-11 ರಾಜ್ಯಗಳಲ್ಲಿ 29 ಜಿಲ್ಲೆಗಳ ಭಾಗಗಳಲ್ಲಿ ಕ್ಯಾಡ್ಮಿಯಮ್ ಪತ್ತೆಯಾಗಿದೆ.
-16 ರಾಜ್ಯಗಳಲ್ಲಿ 62 ಜಿಲ್ಲೆಗಳ ಭಾಗಗಳಲ್ಲಿ ಕ್ರೋಮಿಯಂ ಇರುವುದು ದೃಢಪಟ್ಟಿದೆ.

ಬಾಟಲ್ ನೀರು ಕುಡಿಯೋದು ಯಾಕೆ ಡೇಂಜರಸ್ ಇಲ್ಲಿ ತಿಳ್ಕೊಳ್ಳಿ!

ಇದಲ್ಲದೆ 14,079 ಕಬ್ಬಿಣದ ಬಾಧಿತ, 671 ಫ್ಲೋರೈಡ್ ಪೀಡಿತ, 814 ಆರ್ಸೆನಿಕ್ ಪೀಡಿತ, 9,930 ಲವಣಾಂಶ ಪೀಡಿತ, 517 ನೈಟ್ರೇಟ್ ಪೀಡಿತ ಮತ್ತು 111 ಹೆವಿ ಮೆಟಲ್ ಬಾಧಿತ ದೇಶಗಳಲ್ಲಿ ಇರುವುದರಿಂದ ಲೋಹದಿಂದ ತುಂಬಿದ ನೀರಿನ ಮೂಲಗಳ ವಿಸ್ತಾರವು ದೊಡ್ಡದಾಗಿದೆ ಎಂಬುದನ್ನು ಡೇಟಾ ತೋರಿಸಿದೆ. ಮೇಲ್ಮನೆಯಲ್ಲಿ ಮತ್ತೊಂದು ಪ್ರಶ್ನೆಗೆ ಲಿಖಿತ ಉತ್ತರ ನೀಡಿದ ಜಲಶಕ್ತಿ ರಾಜ್ಯ ಸಚಿವ ಪ್ರಹ್ಲಾದ್ ಸಿಂಗ್ ಪಟೇಲ್, ಮೇ ತಿಂಗಳಿನಿಂದ ದಕ್ಷಿಣ ದೆಹಲಿ ಜಲ ಮಂಡಳಿಯ ಗುಣಮಟ್ಟ ನಿಯಂತ್ರಣ ಪ್ರಯೋಗಾಲಯಗಳಲ್ಲಿ 10,182 ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷಿಸಲಾಗಿದೆ. ಮಾದರಿಗಳ ಶೇ. 1.95 ರಿಂದ 2.99ರ ವರೆಗಿನ ಅತೃಪ್ತಿಕರ ವ್ಯಾಪ್ತಿಯನ್ನು ಕಂಡುಹಿಡಿದಿದೆ. ಮಾಲಿನ್ಯ (Pollution) ವನ್ನು ನಿಲ್ಲಿಸಲು ಪ್ರಮಾಣಿತ ಕಾರ್ಯಾಚರಣಾ ವಿಧಾನದ ಪ್ರಕಾರ ಕ್ರಮ ಕೈಗೊಳ್ಳಲಾಗಿದೆ. ಈ ವಿಷಯದಲ್ಲಿ ಯಾವುದೇ ತಜ್ಞರ ಸಮಿತಿಯ ರಚನೆಯ ಪ್ರಸ್ತಾಪವಿಲ್ಲಎಂದು ಪಟೇಲ್ ಹೇಳಿದರು.

ಲೋಹವು ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ?
ಅಂತರ್ಜಲದಲ್ಲಿರುವ ಆರ್ಸೆನಿಕ್, ಕಬ್ಬಿಣ, ಸೀಸ, ಕ್ಯಾಡ್ಮಿಯಂ, ಕ್ರೋಮಿಯಂ ಮತ್ತು ಯುರೇನಿಯಂ ಪ್ರಮಾಣವು ನಿಗದಿತ ಪ್ರಮಾಣಕ್ಕಿಂತ ಹೆಚ್ಚಿರುವುದು ನಮ್ಮ ಆರೋಗ್ಯದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಅಧಿಕ ಆರ್ಸೆನಿಕ್ ಎಂದರೆ ಚರ್ಮ ರೋಗಗಳು (Disease) ಮತ್ತು ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ.

ತಾಮ್ರದಲ್ಲಿಟ್ಟ ನೀರು ಕುಡಿಯುವುದರಿಂದ ಆರೋಗ್ಯಕ್ಕೆ ಏನೆವೆ ಲಾಭ?

ಹೆಚ್ಚುವರಿ ಕಬ್ಬಿಣವು ಆಲ್ಝೈಮರ್ ಮತ್ತು ಪಾರ್ಕಿನ್ಸನ್‌ನಂತಹ ನರಮಂಡಲಕ್ಕೆ ಸಂಬಂಧಿಸಿದ ರೋಗಗಳಿಗೆ ಕಾರಣವಾಗಬಲ್ಲದು. ನೀರಿನಲ್ಲಿ ಹೆಚ್ಚಿನ ಪ್ರಮಾಣದ ಸೀಸವು ನಮ್ಮ ನರಮಂಡಲದ ಮೇಲೆ ಪರಿಣಾಮ ಬೀರುತ್ತದೆ. ಹೆಚ್ಚಿನ ಪ್ರಮಾಣದ ಕ್ಯಾಡ್ಮಿಯಂ ಮೂತ್ರಪಿಂಡದ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ. ಹೆಚ್ಚಿನ ಪ್ರಮಾಣದ ಕ್ರೋಮಿಯಂ ಸಣ್ಣ ಕರುಳಿನಲ್ಲಿ ಪ್ರಸರಣ ಹೈಪರ್ಪ್ಲಾಸಿಯಾವನ್ನು ಉಂಟುಮಾಡಬಹುದು, ಇದು ಗೆಡ್ಡೆಗಳ ಅಪಾಯವನ್ನು ಹೆಚ್ಚಿಸುತ್ತದೆ. ಕುಡಿಯುವ ನೀರಿನಲ್ಲಿ ಹೆಚ್ಚಿನ ಪ್ರಮಾಣದ ಯುರೇನಿಯಂ ಮೂತ್ರಪಿಂಡದ ಕಾಯಿಲೆಗಳು ಮತ್ತು ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ.

ಸರ್ಕಾರ ಕೈಗೊಂಡ ಕ್ರಮಗಳು
ನೀರು ರಾಜ್ಯದ ವಿಷಯ. ಹಾಗಾಗಿ ಜನರಿಗೆ ಕುಡಿಯುವ ನೀರು ಒದಗಿಸುವುದು ರಾಜ್ಯಗಳ ಜವಾಬ್ದಾರಿ ಎಂದು ಕೇಂದ್ರ ಸರ್ಕಾರ ಸಂಸತ್ತಿಗೆ ತಿಳಿಸಿದೆ. ಆದರೆ, ಕೇಂದ್ರ ಸರ್ಕಾರವು ಶುದ್ಧ ಕುಡಿಯುವ ನೀರು ಒದಗಿಸಲು ಹಲವು ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಸರ್ಕಾರವು ಜಲ ಜೀವನ್ ಮಿಷನ್ ಅನ್ನು ಆಗಸ್ಟ್ 2019 ರಲ್ಲಿ ಪ್ರಾರಂಭಿಸಿದೆ. ಇದರ ಅಡಿಯಲ್ಲಿ, 2024ರ ವೇಳೆಗೆ ಪ್ರತಿ ಗ್ರಾಮೀಣ ಮನೆಗಳಿಗೆ ನಲ್ಲಿಗಳ ಮೂಲಕ ಕುಡಿಯುವ ನೀರು ಸರಬರಾಜು ಮಾಡಲಾಗುವುದು.

ಸರ್ಕಾರದ ಉತ್ತರದ ಪ್ರಕಾರ, ಇದುವರೆಗೆ, 19.15 ರಲ್ಲಿ ದೇಶದ ಕೋಟ್ಯಾಂತರ ಗ್ರಾಮೀಣ ಕುಟುಂಬಗಳಿಗೆ, 9.81 ಕೋಟಿ ಕುಟುಂಬಗಳಿಗೆ ನಲ್ಲಿ ನೀರು ಸರಬರಾಜು ಮಾಡಲಾಗುತ್ತಿದೆ. ಇದರ ಹೊರತಾಗಿ, 2021ರ ಅಕ್ಟೋಬರ್‌ನಲ್ಲಿ ಕೇಂದ್ರ ಸರ್ಕಾರದಿಂದ ಅಮೃತ್ 2.0 ಯೋಜನೆಯನ್ನು ಪ್ರಾರಂಭಿಸಲಾಗಿದೆ. ಇದರ ಅಡಿಯಲ್ಲಿ, ಮುಂದಿನ 5 ವರ್ಷಗಳಲ್ಲಿ ಅಂದರೆ 2026 ರ ವೇಳೆಗೆ ಎಲ್ಲಾ ನಗರಗಳಿಗೆ ನಲ್ಲಿ ನೀರನ್ನು ಪೂರೈಸುವ ಗುರಿಯನ್ನು ನಿಗದಿಪಡಿಸಲಾಗಿದೆ.

Follow Us:
Download App:
  • android
  • ios