MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Life
  • Health
  • ಬಾಟಲ್ ನೀರು ಕುಡಿಯೋದು ಯಾಕೆ ಡೇಂಜರಸ್ ಇಲ್ಲಿ ತಿಳ್ಕೊಳ್ಳಿ!

ಬಾಟಲ್ ನೀರು ಕುಡಿಯೋದು ಯಾಕೆ ಡೇಂಜರಸ್ ಇಲ್ಲಿ ತಿಳ್ಕೊಳ್ಳಿ!

ಹೆಚ್ಚುತ್ತಿರುವ ಆರೋಗ್ಯ ಕಾಳಜಿ ಮತ್ತು ಶುದ್ಧ ಕುಡಿಯುವ ನೀರಿನ ಕೊರತೆಯು ಭಾರತದಲ್ಲಿ ಬಾಟಲಿ ನೀರಿನ ಮಾರುಕಟ್ಟೆಯ ಬೆಳವಣಿಗೆಗೆ ಕಾರಣವಾಗಿದೆ. ಪರಿಮಳಯುಕ್ತ ಬಾಟಲಿ ನೀರಿನ ಬಳಕೆಯು ಭಾರತದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಸಾದಾ ಬಾಟಲಿ ನೀರಿಗಿಂತ ಪರಿಮಳಯುಕ್ತ ಬಾಟಲಿ ನೀರಿಗೆ ಆದ್ಯತೆ ನೀಡುವ ಪ್ರವೃತ್ತಿ ಗ್ರಾಹಕರಲ್ಲಿ ಬೆಳೆಯುತ್ತಿದೆ. ಪರಿಮಳ ಅಥವಾ ಬ್ರಾಂಡ್ ಮೌಲ್ಯವನ್ನು ಲೆಕ್ಕಿಸದೆ ಯಾವುದೇ ಬಾಟಲ್ ನೀರು ಆರೊಗ್ಯಕ್ಕೆ ಒಳ್ಳೆಯದಲ್ಲ. ತಜ್ಞರು ಮತ್ತು ವೈಜ್ಞಾನಿಕವಾಗಿ ಸಾಬೀತುಪಡಿಸಿದ ಅಧ್ಯಯನಗಳ ಪ್ರಕಾರ, ಬಾಟಲಿ ನೀರು ದೀರ್ಘಾವಧಿಯಲ್ಲಿ ನಮ್ಮ ಆರೋಗ್ಯಕ್ಕೆ ಒಳ್ಳೆಯದಲ್ಲ.

2 Min read
Suvarna News
Published : Jul 26 2022, 03:02 PM IST
Share this Photo Gallery
  • FB
  • TW
  • Linkdin
  • Whatsapp
110

ಬಾಟಲಿ ನೀರು ಕುಡಿಯೋದನ್ನು ನೀವು ಏಕೆ ನಿಲ್ಲಿಸಬೇಕು 
1. ಬ್ಯಾಕ್ಟೀರಿಯಾದ(Bacteria) ಮಟ್ಟ
ಹೆಚ್ಚಿನ ಸಂದರ್ಭಗಳಲ್ಲಿ,ನ್ಯಾಚುರಲ್ ಮಿನರಲ್ ವಾಟರ್ ಸ್ಪ್ರಿಂಗ್ಸ್ ಅಥವಾ ಬೋರಿಂದ ಪಡೆಯಲಾಗುತ್ತೆ. ಮಿನರಲ್ ವಾಟರ್ ಕೋಲಿಫಾರ್ಮ್ ಗಳಂತಹ ವಿವಿಧ ಜೀವಿಗಳನ್ನು ಹೊಂದಿರುತ್ತೆ, ಅವು ವಿಶೇಷವಾಗಿ ನೀರನ್ನು ಪ್ಲಾಸ್ಟಿಕ್ ಬಾಟಲಿಗಳಲ್ಲಿ ತುಂಬಿಸಿದಾಗ ಹೆಚ್ಚು ಸಮಯದವರೆಗೆ ಬದುಕಬಲ್ಲವು. ಇತ್ತೀಚಿನ ವರ್ಷಗಳಲ್ಲಿ, ಬಾಟಲ್ ನೀರಿಂದ ಕ್ಯಾಂಪೈಲೋಬ್ಯಾಕ್ಟರ್ ಸೋಂಕಿನ ಅಪಾಯ ಹೆಚ್ಚಾಗಿದೆ. ಇದು ಸಾಮಾನ್ಯ ಆಹಾರದಿಂದ ಹರಡುವ ಕಾಯಿಲೆ. 

210

 2. ರುಚಿ ಮತ್ತು ಶುಚಿತ್ವದ ತಪ್ಪು ಕಲ್ಪನೆಯು ಅನೇಕ ಜನರನ್ನು ಬಾಟಲಿ ನೀರಿನತ್ತೆ ಆಕರ್ಷಿತರಾಗುವಂತೆ ಮಾಡುತ್ತೆ. ನಲ್ಲಿಯ ನೀರಿಗಿಂತ(Tap water) ಬಾಟಲಿ ನೀರಿನ ಗುಣಮಟ್ಟ ಉತ್ತಮವಾಗಿದೆ ಎಂದು ಗ್ರಾಹಕರು ನಂಬುತ್ತಾರೆ. ಆದರೆ, ವಾಸ್ತವಾಗಿ ಹಾಗಿಲ್ಲ. ಅಧ್ಯಯನಗಳ ಪ್ರಕಾರ, ಬಾಟಲ್ ನೀರಿನಲ್ಲಿನ ಬ್ಯಾಕ್ಟೀರಿಯಾದ ಮಟ್ಟ ನಲ್ಲಿಯ ನೀರಿನಲ್ಲಿ ಇರುವುದಕ್ಕಿಂತ ಬಹಳ ಹೆಚ್ಚಾಗಿರುತ್ತೆ.  

310

3. ಪ್ಲಾಸ್ಟಿಕ್ (Plastic) ಮಾಲಿನ್ಯ 
ಬಾಟಲಿಯಲ್ಲಿ ಬಳಸುವ ಪ್ಲಾಸ್ಟಿಕ್  ಪೆಟ್ರೋಲಿಯಂ ಉತ್ಪನ್ನ ಮತ್ತು ಇತರ ರಾಸಾಯನಿಕಗಳನ್ನು ಬಳಸಿ ತಯಾರಿಸಲಾಗುತ್ತೆ. ಇದರ ಪರಿಣಾಮವಾಗಿ, ಬಾಟಲಿ ನೀರಿನ ಪ್ಲಾಸ್ಟಿಕ್ ಕಂಟೇನರ್ ಕಾಲಾನಂತರದಲ್ಲಿ ಕ್ಷೀಣಿಸಬಹುದು, ಉತ್ಪಾದನಾ ವಿಧಾನ ಮತ್ತು ಸ್ಟೋರೇಜ್ ಅವಲಂಬಿಸಿ ಪ್ಲಾಸ್ಟಿಕ್ ಕಾಂಪೌಂಡ್ ನೀರಿನಲ್ಲಿ ಸೋರಿಕೆಯಾಗುವ ಚಾನ್ಸಸ್ ಇದೆ.

410

ಕೆಲವು ಬಾಟಲ್ ನೀರಿನ ತಯಾರಕರು ಬಿಪಿಎ ಹೊಂದಿರುವ ಬಾಟಲಿಗಳ ಬಳಕೆಯನ್ನು ನಿಲ್ಲಿಸುತ್ತಿದ್ದಾರೆ, ಆದರೆ ಎಲ್ಲಾ ಕಂಪನಿಗಳು ಹಾಗಲ್ಲ. ಇನ್ನು ಹಲವಾರು ಅಧ್ಯಯನಗಳಲ್ಲಿ ಪ್ಲಾಸ್ಟಿಕ್ ಕಾಂಪೌಂಡ್ ನೀರಿನಲ್ಲಿ ಸೋರಿಕೆಯಾಗೋದನ್ನು ತೋರಿಸಲಾಗಿದೆ. ಇದಲ್ಲದೆ, ಬಿಪಿಎ ನಮ್ಮ ದೇಹದಲ್ಲಿ ಸ್ತನ ಕ್ಯಾನ್ಸರ್(Breast cancer) ಬೆಳವಣಿಗೆಗೆ ಕಾರಣವಾಗಬಹುದು.

510

 4. ಕ್ಯಾನ್ಸರ್ ಕಾರಕಗಳ ಅಪಾಯ
 ಒಂದು ಪ್ಲಾಸ್ಟಿಕ್ ಬಾಟಲಿಯಲ್ಲಿರುವ ಬೆಚ್ಚಗಿನ ನೀರಿನಲ್ಲಿ ನೀರು ಮತ್ತು ಪ್ಲಾಸ್ಟಿಕ್ ನಡುವಿನ ರಿಯಾಕ್ಷನಿಂದಾಗಿ ಕ್ಯಾನ್ಸರ್ ಕಾರಕ ಕಾಂಪೌಂಡ್ ಗಳನ್ನು ಹೊಂದಿರುವ ಸಾಧ್ಯತೆ ಹೆಚ್ಚು. ಹಾಗಾಗಿ ಬೆಚ್ಚಗಿನ ನೀರನ್ನು ಪ್ಲಾಸ್ಟಿಕ್ ಬಾಟಲಿಗಳ ಬದಲು ಗಾಜಿನ ಬಾಟಲಿಗಳಲ್ಲಿ ಸಂಗ್ರಹಿಸಿ.

610

5. ಗರ್ಭಧಾರಣೆಯಲ್ಲಿ ಕಾಂಪ್ಲಿಕೇಷನ್ಸ್ 
ಟೈಪ್ 7 ಪ್ಲಾಸ್ಟಿಕ್ ನೀರಿನ ಬಾಟಲಿಗಳಲ್ಲಿ ಬಳಸಲಾಗುವ ಬಿಪಿಎ ಗರ್ಭಿಣಿಯರಿಗೆ ಮತ್ತು  ಹುಟ್ಟಲಿರುವ ಮಕ್ಕಳಿಗೆ ತೊಂದರೆ ಉಂಟುಮಾಡುತ್ತೆ  ಎಂದು ಸಾಬೀತಾಗಿದೆ. ಬಿಪಿಎ ಫಾಕ್ಸ್-ಈಸ್ಟ್ರೋಜೆನ್, ಇದು ಕ್ರೋಮೋಸೋಮ್ ಅಸಹಜತೆಗಳು ಮತ್ತು ಜನನ ದೋಷಗಳಿಗೆ ಕಾರಣವಾಗಬಹುದು.

710

6. ಈಸ್ಟ್ರೊಜೆನ್ (Estrogen)ನಂತಹ ಹಾರ್ಮೋನುಗಳ ಮೇಲೆಯೂ ಪ್ಲಾಸ್ಟಿಕ್ ಬಾಟಲ್ ಪರಿಣಾಮ ಬೀರುತ್ತದೆ . ಇದಲ್ಲದೆ, ಕಡಿಮೆ ಗುಣಮಟ್ಟದ ಬಾಟಲಿ ನೀರು ಫರ್ಟಿಲಿಟಿ  ಮೇಲೆ ಪರಿಣಾಮ ಬೀರುತ್ತೆ  ಎಂದು ಅನೇಕ ಅಧ್ಯಯನಗಳು ತೋರಿಸುತ್ತೆ. 

810

7. ಪರಿಸರಕ್ಕೆ ಅಪಾಯ 
ಪ್ಲಾಸ್ಟಿಕ್ ಮರುಬಳಕೆ ಮಾಡಲು ಸಾಧ್ಯವಿರದೇ ಇರೋದ್ರಿಂದ ಇದು ಪರಿಸರಕ್ಕೆ ಹಾನಿಯನ್ನುಂಟು ಮಾಡುತ್ತೆ. ಪ್ಲಾಸ್ಟಿಕ್ ನೀರಿನ ಬಾಟಲಿ ಭೂಮಿಯ ಮೇಲೆ ಹೆಚ್ಚು ಕಸವಾಗಿಯೇ ಉಳಿದಿದೆ. ಪ್ಲಾಸ್ಟಿಕ್ ಬಾಟಲಿ ಕೊಳೆಯಲು 450 ರಿಂದ 1000 ವರ್ಷಗಳನ್ನು ತೆಗೆದುಕೊಳ್ಳುತ್ತೆ. ಹಾಗಾಗಿ ಭೂಮಿಗೆ, ನಮಗೆ ಇದರಿಂದ ಅಪಾಯವೇ ಹೆಚ್ಚು .  

910

ಶಾಲೆಗಳಿಗೆ, ಆಫೀಸ್, ಕಾಲೇಜು, ಟ್ರಾವೆಲ್ ಮಾಡುವಾಗ ನೀರನ್ನು ಕೊಂಡೊಯ್ಯಲು ಅತ್ಯುತ್ತಮ ಮಾರ್ಗವೆಂದರೆ ಸ್ಟೈನ್ ಲೆಸ್ ಸ್ಟೀಲ್ ನಿಂದ ಮಾಡಿದ ಇನ್ಸುಲೇಟೆಡ್ ಥರ್ಮೋಸ್. ಇದು ನೀರು ತಣ್ಣಗಿರಲಿ ಅಥವಾ ಬಿಸಿಯಾಗಿರಲಿ, ಅದು ಹಾಗೆ ಇರೋಹಾಗೆ ಮಾಡುತ್ತೆ. ನಿಮ್ಮ ಥರ್ಮೋಸ್  ತಾಜಾ ಮತ್ತು ಕೀಟಾಣು ಮುಕ್ತವಾಗಿಡಲು, ಅದನ್ನು ಪ್ರತಿದಿನ ಬ್ರಷ್ ಮತ್ತು ಬೆಚ್ಚಗಿನ ನೀರಿನಿಂದ ತೊಳೆಯಿರಿ. 

1010

ನೀರನ್ನು ಸಂಗ್ರಹಿಸಲು ಮತ್ತು  ತೊಗೊಂಡೋಗಲು ನೀವು ಸರಿಯಾದ ಬಾಟಲಿ ಆಯ್ಕೆ ಮಾಡುತ್ತೀರಿ ಎಂದು ಖಚಿತಪಡಿಸಿಕೊಳ್ಳಿ. ನೀರನ್ನು ಸಂಗ್ರಹಿಸುವಾಗ, ಗಾಜು ಅಥವಾ ಸ್ಟೀಲ್ ಬಾಟಲಿಗಳನ್ನು ಬಳಸೋದು ಉತ್ತಮ.  ಬಾಟಲಿಗಳ ಗುಣಮಟ್ಟವು ಒಳಗಿರುವ ನೀರಿನ ಗುಣಮಟ್ಟವನ್ನು ನಿರ್ಧರಿಸುತ್ತೆ .

About the Author

SN
Suvarna News
ನೀರು
ಆರೋಗ್ಯ
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved