ತಾಮ್ರದಲ್ಲಿಟ್ಟ ನೀರು ಕುಡಿಯುವುದರಿಂದ ಆರೋಗ್ಯಕ್ಕೆ ಏನೆವೆ ಲಾಭ?

ಡಯಾಬಿಟಿಸ್ ಇರುವವರು ಸಾಮಾನ್ಯವಾಗಿ ತಾಮ್ರದಲ್ಲಿ ಇಟ್ಟಿರುವ ನೀರನ್ನು ಕುಡಿಯುತ್ತಾರೆ. ಅಲ್ಲದೆ ಆಯುರ್ವೇದದಲ್ಲಿ ತಾಮ್ರಕ್ಕೆ ಮಹತ್ವದ ಸ್ಥಾನವಿದ್ದು, ಹಲವು ಆರೋಗ್ಯ ಸಮಸ್ಯೆಗಳನ್ನು ನಿವಾರಿಸುವ ಗುಣಗಳನ್ನು ಹೊಂದಿದೆ. ಆರೋಗ್ಯದ ಮೇಲೆ ತಾಮ್ರ ಹೇಗೆ ಪರಿಣಾಮಿಸುತ್ತದೆ ಇಲ್ಲಿದೆ ಮಾಹಿತಿ.

Health  Tips Benefits of Drinking Water from Copper Vessels

ಇತ್ತೀಚಿನ ದಿನಗಳಲ್ಲಿ ತಾಮ್ರದ ಬಳಕೆ ಹೆಚ್ಚುತ್ತಿದೆ. ಆದರೆ ಇದು ನಮ್ಮ ಪೂರ್ವಜನರ ಕಾಲದಿಂದಲೂ ಚಾಲ್ತಿಯಲ್ಲಿತ್ತು. ಅಲ್ಲದೆ ಆಯುರ್ವೇದದಲ್ಲಿ ಇದನ್ನು ಔಷಧವಾಗಿ ಬಳಸಲಾಗುತ್ತಿತ್ತು. ರಾತ್ರಿ ತಾಮ್ರದ ಪಾತ್ರೆಯಲ್ಲಿ ಶೇಖರಿಸಿ ಇಟ್ಟ ನೀರನ್ನು ಬೆಳಗ್ಗೆ ಎದ್ದು ಕುಡಿಯಲಾಗುತ್ತಿತ್ತು. ದೇಹದ ಬಹುತೇಕ ಸಮಸ್ಯೆಗಳಿಗೆ ತಾಮ್ರದ ಅಗತ್ಯವಿದ್ದು, ಅಂಗಾAಗಳಲ್ಲಿ ಶಕ್ತಿ ಹೆಚ್ಚಿಸುತ್ತದೆ. ಮಾನವ ಮೆದುಳಿನಲ್ಲಿರುವ ರಾಸಾಯನಿಕ ಸಂವಹನ ವ್ಯವಸ್ಥೆ ಸೇರಿದಂತೆ ದೈಹಿಕ ಚಟುವಟಿಕೆಗಳಿಗೆ ತಾವ್ರವು ಅವಶ್ಯಕ.  ತಾಮ್ರ ಪಾತ್ರೆಯಲ್ಲಿನ ನೀರನ್ನು ಸೇವಿಸುವುದರಿಂದ ಲೋಹವು ನೀರಿನಲ್ಲಿ ಸೇರಿಕೊಳ್ಳುವುದರಿಂದ ಆರೋಗ್ಯಕ್ಕೆ ಒಳ್ಳೆಯದು. 

ತಾಮ್ರದಲ್ಲಿನ ನೀರು ಕುಡಿಯುವುದರಿಂದ ಆಗುವ ಪ್ರಯೋಜನಗಳು
1. ಕ್ಯಾನ್ಸರ್ ನಿವಾರಿಸುತ್ತದೆ

ತಾಮ್ರದಲ್ಲಿ ಆಂಟಿಆಕ್ಸಿಡೆAಟ್ ಪ್ರಮಾಣ ಹೇರಳವಾಗಿದೆ. ಇದು ಗೆಡ್ಡೆಗಳನ್ನು ಉಂಟು ಮಾಡುವ, ಕ್ಯಾನ್ಸರ್ ಕೋಶಗಳನ್ನು ಉತ್ತೇಜಿಸುವ ಸ್ವತಂತ್ರ ರ‍್ಯಾಡಿಕಲ್ಸ್ಗಳ ವಿರುದ್ಧ ಹೋರಾಡುತ್ತದೆ. ಸ್ವತಂತ್ರ ರ‍್ಯಾಡಿಕಲ್ಸ÷್ಗಳು(Free Radicles) ಬಿಡುಗಡೆ ಮಾಡುವ ನೆಗೆಟಿವ್ ಅಂದರೆ ಹಾನಿಕಾರಕ ವಸ್ತುಗಳು ದೇಹದಲ್ಲಿ ಕ್ಯಾನ್ಸರ್‌ಗೆ(Cancer) ಪ್ರಮುಖ ಕಾರಣವಾಗಿದೆ. ತಾಮ್ರವು ಮೆಲನಿನ್(Melanin) ಆಂಶವನ್ನು ಉತ್ಪಾದಿಸುವುದರಿಂದ ಅವುಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಅಲ್ಲದೆ ವ್ಯಕ್ತಿಯ ಚರ್ಮ ಮತ್ತು ಕಣ್ಣುಗಳಿಗೆ ಬಣ್ಣ ನೀಡುತ್ತದೆ. ಸೂರ್ಯನಿಂದ ಹೊರಹೊಮ್ಮುವ ಯುವಿ ಕಿರಣಗಳಿಂದ(UV Rays) ಚರ್ಮ ಹಾನಿಯಾಗುವುದನ್ನು ರಕ್ಷಿಸುತ್ತದೆ.

ಊಟದ ಮಧ್ಯೆ ಆಗಾಗ ನೀರು ಕುಡಿಯುವ ಅಭ್ಯಾಸ ಒಳ್ಳೆಯದಾ?

2. ಹೈಪರ್‌ಟೆನ್ಷನ್ ಕಡಿಮೆ ಮಾಡುತ್ತದೆ
ಒಂದು ಅಧ್ಯಯನದ ಪ್ರಕಾರ ತಾಮ್ರವು ಕೊಲೆಸ್ಟಾçಲ್(Cholesterol) ಮತ್ತು ಟ್ರೆöÊಗ್ಲಿಸರೈಡ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಬಾಲ್ಯದಿಂದಲೂ ದೇಹದಲ್ಲಿ ತಾಮ್ರದ ಕೊರತೆ ಕಂಡುಬAದರೆ ಹೈಪೊಟೆನ್ಷನ್ ಬೆಳವಣಿಗೆಗೆ ಕಾರಣವಾಗುತ್ತದೆ. ಅದಾಗ್ಯೂ ವಯಸ್ಕರು ತಾಮ್ರದ ಕೊರತೆಯಿಂದ ಬಳಲುತ್ತಿದ್ದರೆ ಅವರು ಅಧಿಕ ರಕ್ತದೊತ್ತಡಕ್ಕೆ(High Blood Pressure) ಒಳಗಾಗಿದ್ದಾರೆ ಎಂದು. ಹಾಗಾಗಿ ಪ್ರತೀ ದಿನ ತಾಮ್ರದಲ್ಲಿಟ್ಟ ನೀರನ್ನು ಕುಡಿಯುವುದರಿಂದ ವ್ಯಕ್ತಿಯಲ್ಲಿ ರಕ್ತದೊತ್ತಡ ನಿಯಂತ್ರಣಕ್ಕೆ ಬರುತ್ತದೆ.

3. ಸಂಧಿವಾತ ನಿವಾರಣೆ
ತಾಮ್ರವು ಉರಿಯೂತದ ಗುಣಲಕ್ಷಣಗಳನ್ನು ಹೊಂದಿದೆ. ಹಾಗಾಗಿ ಇದು ಸಂಧಿವಾತ ಮತ್ತು ಸಂಧಿವಾತದಿAದ ಬಳಲುತ್ತಿರುವ ರೋಗಿಗಳಿಗೆ ಉತ್ತಮ ಪರಿಹಾರ ನೀಡುತ್ತದೆ. ಅಲ್ಲದೆ ತಾಮ್ರವು ಮೂಳೆಗಳನ್ನು ಬಲಪಡಿಸುವ(Strong Bone) ಗುಣಗಳನ್ನು ಹೊಂದಿದೆ. 

4. ಇನ್ಫೆಕ್ಷಗಳಿಂದ ಮುಕ್ತಿ
ನೈಸರ್ಗಿಕವಾಗಿ ಸಿಗುವ ಆಂಟಿಬಯೋಟಿಕ್(Antibiotic) ಅಂದರೆ ಅದು ತಾಮ್ರ. ತಾಮ್ರದ ಬಾಟಲಿಗಳಲ್ಲಿ 8ಗಂಟೆಗಳಿಗಿAತ ಹೆಚ್ಚು ಕಾಲ ಶೇಖರಿಸಲಾದ ನೀರು ಕುಡಿಯುವುದು ಒಳ್ಳೆಯದು. ಏಕೆಂದರೆ ಈ ನೀರು ಎಲ್ಲಾ ಸೂಕ್ಷö್ಮಜೀವಿಗಳಿಂದ ಮುಕ್ತವಾಗಿರುತ್ತವೆ. ಇತರೆ ಸಾಮಾನ್ಯ ನೀರಿನಿಂದ ಹರಡುವ ರೋಗ ಉಂಟುಮಾಡುವ ಇ ಕೊಲಿ, ಔರೆಸ್, ಕಾಲರಾ(Choler) ಬ್ಯಾಸಿಲಸ್‌ಗಳ ವಿರುದ್ಧ ಪರಿಣಾಮಕಾರಿಯಾಗಿ ಹೋರಾಡುವ ಗುಣ ತಾಮ್ರದಲ್ಲಿದೆ.

5. ಜೀರ್ಣಕ್ರಿಯೆಗೆ ಸಹಕಾರಿ
ಹೊಟ್ಟೆಯಲ್ಲಿನ ಸೂಕ್ಷö್ಮಜೀವಿಗಳನ್ನು ಕೊಲ್ಲಲು ತಾಮ್ರ(Copper) ಆಧಾರಿತ ಔಷಧವನ್ನು ಹಿಂದಿನ ಕಾಲದಲ್ಲಿ ಶಿಫಾರಸ್ಸು ಮಾಡಲಾಗುತ್ತಿತ್ತು. ಆಯುರ್ವೇದವು ತಾಮ್ರ ಜಲ್(Tamra Jal) ಕುಡಿಯುವುದರಿಂದ ಹೊಟ್ಟೆಯನ್ನು ನಿರ್ವಿಷಗೊಳಿಸುತ್ತದೆ ಮತ್ತು ಶುದ್ಧಗೊಳಿಸುತ್ತದೆ ಎಂದು ಹೇಳಲಾಗಿದೆ. ಹೊಟ್ಟೆಯ ಒಳಪದರದ ಉರಿಯೂತವನ್ನು ಕಡಿಮೆ ಮಾಡುತ್ತದೆ ಮತ್ತು ಉತ್ತಮ ಜೀರ್ಣಕ್ರಿಯೆಗೆ(Digestion) ಸಹಾಯ ಮಾಡುತ್ತದೆ. ಹೊಟ್ಟೆಯ ಹುಣ್ಣು(Ulcer), ಅಜೀರ್ಣ ಮತ್ತು ಹೊಟ್ಟೆಯ ಸೋಂಕುಗಳಿಗೆ ತಾಮ್ರವು ಅತ್ಯುತ್ತಮ ಪರಿಹಾರವಾಗಿದೆ. 

ಒಳ್ಳೇದು ಅಂತ ನೀರನ್ನು ಬೇಕಾಬಿಟ್ಟಿ ಕುಡಿದರೆ ಅನಾರೋಗ್ಯ ಕಾಡಬಹುದು!

6. ತೂಕ ಕಡಿಮೆ
ತಾಮ್ರವು ದೇಹದಲ್ಲಿನ ಹೆಚ್ಚುವರಿ ಕೊಬ್ಬಿನ ನಿಕ್ಷೇಪಗಳನ್ನು ಕರಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಹಾಗೂ ತೂಕ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ವ್ಯಕ್ತಿಯ ವಿಶ್ರಾಂತಿ ಪಡೆಯುತ್ತಿರುವಾಗಲೂ ಕೊಬ್ಬನ್ನು(Fat) ಕರಗಿಸುವ ಪರಿಸ್ಥಿತಿಯಲ್ಲಿ ದೇಹವನ್ನು ಇರಿಸುತ್ತದೆ. 

7.ಮೆದುಳಿನ ದಕ್ಷತೆಯನ್ನು ಸುಧಾರಿಸುತ್ತದೆ
ಮಾನವನ ಮೆದುಳು ವಿದ್ಯುತ್ ಪ್ರಚೋದನೆಗಳ ಮೂಲಕ ದೇಹದ ಉಳಿದ ಭಾಗಗಳೊಂದಿಗೆ ಸಂವಹನ ನಡೆಸುತ್ತದೆ. ತಾಮ್ರವು ಈ ಪ್ರಚೋದನೆಗಳನ್ನು ನಡೆಸುವ ಮೂಲಕ ಪರಸ್ಪರ ಸಂವಹನ ನಡೆಸಲು ಜೀವಕೋಶಗಳಿಗೆ ಸಹಾಯ ಮಾಡುತ್ತದೆ. ಮೆದುಳು ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ.

Latest Videos
Follow Us:
Download App:
  • android
  • ios