ಹಳದಿ ಹಲ್ಲನ್ನು ಬೆಳ್ಳಗಾಗಿಸಿ ಆಕರ್ಷಕ ನಗು ನಿಮ್ಮದಾಗಿಸಲು ಈ ಪುಡಿ ಬಳಸಿ

ಹಲ್ಲುಗಳ ರಕ್ಷಣೆಗಾಗಿ ಮನೆಮದ್ದು: ಹಲ್ಲುಗಳ ಹಳದಿ ಬಣ್ಣವನ್ನು ಹೋಗಲಾಡಿಸಲು ಮತ್ತು ಕುಳಿಗಳನ್ನು ತಪ್ಪಿಸಲು ಈ ಸುಲಭವಾದ ಮನೆಮದ್ದುಗಳನ್ನು ಬಳಸಿ. 

Get Rid of Yellow Teeth with Baking Soda

ಸದಾ ನಗುತ್ತಿದ್ದರೆ ಮನಸ್ಸು ಶಾಂತವಾಗಿರುತ್ತದೆ. ಆರೋಗ್ಯವೂ ಚೆನ್ನಾಗಿರುತ್ತದೆ. ಆದರೆ ಹಳದಿ ಹಲ್ಲುಗಳಿದ್ದರೆ ನಗುವುದಕ್ಕೆ ಸಂಕೋಚ. ಹಲ್ಲುಗಳು ಹಳದಿಯಾಗಿದ್ದರೆ ನಿಮ್ಮ ನಗು ಮಂಕಾಗುತ್ತದೆ. ಹಲ್ಲುಗಳ ಮೇಲಿನ ಹಳದಿ ಬಣ್ಣವನ್ನು ತೆಗೆದುಹಾಕಲು ಜನರು ಬೆಳಗೊಮ್ಮೆ ರಾತ್ರಿ ಮಲಗುವುದಕ್ಕೆ ಮೊದಲೊಮ್ಮೆ ಅಂತ ಎರಡೆರಡು ಬಾರಿ ಬ್ರಷ್ ಮಾಡುತ್ತಾರೆ, ಆದರೂ ಹಲ್ಲುಗಳು ಸ್ವಚ್ಛವಾಗಿ ಕಾಣುವುದಿಲ್ಲ. ಹಲ್ಲುಗಳ ಹೊರ ಪದರದಲ್ಲಿ ಆಹಾರವು ಸಂಗ್ರಹವಾಗುತ್ತಲೇ ಇರುತ್ತದೆ ಇದರಿಂದ ಬಿಳಿ ಬಣ್ಣದ ಹಿಟ್ಟಿನಂತಹ ತುಣುಕು ಹಲ್ಲುಗಳಲ್ಲಿ ಸಂಗ್ರಹವಾಗುತ್ತದೆ. ಕಾಫಿ, ಚಹಾ, ಸೋಡಾ ಮುಂತಾದ ಬಣ್ಣದ ವಸ್ತುಗಳು ಹಲ್ಲುಗಳಲ್ಲಿ ಹಳದಿ ಬಣ್ಣವನ್ನು ಹೆಚ್ಚಿಸುತ್ತವೆ. ಹಲ್ಲುಗಳನ್ನು ಸ್ವಚ್ಛಗೊಳಿಸದಿದ್ದರೆ, ಕ್ರಮೇಣ ಹಿಟ್ಟಿನಂತಹ ಫ್ಲೇಕ್ ಗಟ್ಟಿಯಾಗಿ ಹಲ್ಲುಗಳನ್ನು ದುರ್ಬಲಗೊಳಿಸುವುದಲ್ಲದೇ ಹುಳುಕು ಹಲ್ಲಿಗೆ ಕಾರಣವಾಗುತ್ತದೆ.

ಕೆಲವು ಜನರ ಹಲ್ಲುಗಳಲ್ಲಿ ಹಳದಿ ಅಥವಾ ಕಂದು ಬಣ್ಣದ ಕಲೆಗಳ ಸಮಸ್ಯೆಯೂ ಇರುತ್ತದೆ, ಇದು ಹಲ್ಲು ಮುರಿಯುವ ಸಂಕೇತವೆಂದು ದಂತವೈದ್ಯರು ಪರಿಗಣಿಸುತ್ತಾರೆ. ಆದರೆ ಇದರ ಬಗ್ಗೆ ಪ್ರಾರಂಭದಿಂದಲೇ ಕಾಳಜಿ ವಹಿಸಿದರೆ, ಹಲ್ಲುಗಳಲ್ಲಿ ಹುಳುಕು ಆಗುವುದನ್ನು ತಪ್ಪಿಸಬಹುದು. ಹಲ್ಲುಗಳ ಹಳದಿ ಬಣ್ಣವನ್ನು ತೆಗೆದುಹಾಕಲು ಮತ್ತು ಹುಳುಕು ಹಲ್ಲನ್ನು ತಪ್ಪಿಸಲು, ಆಯುರ್ವೇದ ವೈದ್ಯರಾದ ಸಲೀಂ ಜೈದಿ ಎಂಬುವವರು ಮನೆಮದ್ದನ್ನು ತಿಳಿಸಿದ್ದಾರೆ. ಅದೇನು ಅಂತ ನೋಡೋಣ

ಬೇಕಿಂಗ್ ಸೋಡಾ
ಬೇಕಿಂಗ್ ಸೋಡಾದ ಕ್ಷಾರೀಯ ಗುಣವು ಹಲ್ಲುಗಳ ಆಮ್ಲೀಯತೆಯನ್ನು ತಟಸ್ಥಗೊಳಿಸಲು ಸಹಾಯ ಮಾಡುತ್ತದೆ. ಇದರಿಂದ ಹಲ್ಲುಗಳಲ್ಲಿ ಅಂಟು ಸಂಗ್ರಹವಾಗುವ ಸಮಸ್ಯೆ ಇರುವುದಿಲ್ಲ. ಪ್ಲೇಕ್ ಸಂಗ್ರಹವಾಗದ ಕಾರಣ, ಹಲ್ಲುಗಳಲ್ಲಿ ಹುಳುಕು ಉಂಟಾಗುವ ಸಮಸ್ಯೆ ಇರುವುದಿಲ್ಲ.

ಹಲ್ಲಿನ ಹುಳುಕು ತಡೆಯುತ್ತದೆ
ಬೇಕಿಂಗ್ ಸೋಡಾ ಹಲ್ಲಿನಲ್ಲಿ ಅಂಟಿನ ರಚನೆಯನ್ನು ತಡೆಯುವುದು ಮಾತ್ರವಲ್ಲದೆ, ಭವಿಷ್ಯದಲ್ಲಿ ಸಂಭವಿಸಬಹುದಾದ ಹಲ್ಲಿನ ಹುಳುಕಿನಿಂದ ರಕ್ಷಿಸುತ್ತದೆ. ಪ್ರತಿದಿನ ಹಲ್ಲುಗಳಿಗೆ ಬೇಕಿಂಗ್ ಸೋಡಾದಿಂದ ಮಸಾಜ್ ಮಾಡಿದರೆ, ಭವಿಷ್ಯದಲ್ಲಿ ಕುಳಿಗಳ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.

ಮೌಖಿಕ ನೈರ್ಮಲ್ಯ
ಬೇಕಿಂಗ್ ಸೋಡಾವು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ, ಇದು ಮೌಖಿಕ ನೈರ್ಮಲ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿಯೂ ಹಲ್ಲಿನ ಕುಳಿಗಳ ಸಮಸ್ಯೆ ಹೆಚ್ಚುತ್ತಿದೆ. ಅಂತಹ ಪರಿಸ್ಥಿತಿಯಲ್ಲಿ, ಒಂದು ಚಿಟಿಕೆ ಬೇಕಿಂಗ್ ಸೋಡಾವನ್ನು ಬಳಸುವುದರಿಂದ ಹಲ್ಲುಗಳ ಹಳದಿ ಬಣ್ಣವನ್ನು ತೆಗೆದುಹಾಕಬಹುದು ಮತ್ತು ಹಲ್ಲುಗಳನ್ನು ಬಲವಾಗಿಡಬಹುದು.

ಬೇಕಿಂಗ್ ಸೋಡಾವನ್ನು ಹೇಗೆ ಬಳಸುವುದು?
ಒಂದು ಚಮಚ ಬೇಕಿಂಗ್ ಸೋಡಾ ತೆಗೆದುಕೊಂಡು ಅದಕ್ಕೆ ಸ್ವಲ್ಪ ನೀರು ಸೇರಿಸಿ. ಪೇಸ್ಟ್ ಆದ ನಂತರ, ಅದನ್ನು ನಿಮ್ಮ ಬ್ರಷ್‌ಗೆ ಹಚ್ಚಿ ಹಲ್ಲುಗಳನ್ನು ಸ್ವಚ್ಛಗೊಳಿಸಿ. ಇದನ್ನು ವಾರಕ್ಕೆ ಒಂದು ಅಥವಾ ಎರಡು ಬಾರಿ ಮಾಡಬಹುದು. ಬೇಕಾದರೆ ಬೇಕಿಂಗ್ ಸೋಡಾ ಮೌತ್ ವಾಶ್ ಕೂಡ ತಯಾರಿಸಬಹುದು. ಅರ್ಧ ಗ್ಲಾಸ್ ನೀರಿಗೆ ಒಂದು ಚಮಚ ಬೇಕಿಂಗ್ ಸೋಡಾ ಸೇರಿಸಿ. ಬ್ರಷ್ ಮಾಡಿದ ನಂತರ, ಬೇಕಿಂಗ್ ಸೋಡಾ ಮೌತ್ ವಾಶ್‌ನಿಂದ ಬಾಯಿ ಮುಕ್ಕಳಿಸಿ. ಇದರಿಂದ ಸ್ವಲ್ಪ ಸಮಯದ ನಂತರ ನಿಮಗೆ ಪ್ರಯೋಜನಗಳು ಕಾಣಲು ಪ್ರಾರಂಭಿಸುತ್ತವೆ.

Latest Videos
Follow Us:
Download App:
  • android
  • ios