Health Tips : ಜೀರ್ಣಕ್ರಿಯೆ ಸರಿಯಾಗ್ಬೇಕೆಂದ್ರೆ ಊಟದ ನಂತ್ರ ವ್ಯಾಯಾಮವಿರಲಿ
ಹೊಟ್ಟೆ ತುಂಬಿದ ತಕ್ಷಣ ನಿದ್ರೆ ಬರೋದು ಸಹಜ. ಅನೇಕರು ಊಟವಾದ್ಮೇಲೆ ಮಲಗ್ತಾರೆ. ಮತ್ತೆ ಕೆಲವರು ಕುಳಿತುಕೊಳ್ತಾರೆ. ಇದ್ರಿಂದ ಜೀರ್ಣಕ್ರಿಯೆ ಸರಿಯಾಗಿ ಆಗೋದಿಲ್ಲ. ಊಟವಾದ್ಮೇಲೆ ನಿಮ್ಮದಲ್ಲ ಎನ್ನುತ್ತ 10 ನಿಮಿಷ ವ್ಯಾಯಾಮಕ್ಕೆ ಮೀಸಲಿಟ್ಟು ನೋಡಿ.
ಇಂದಿನ ಬಿಡುವಿಲ್ಲದ ಜೀವನ ಶೈಲಿಯಲ್ಲಿ (Lifestyle ) ಪ್ರತಿಯೊಬ್ಬರೂ ತುಂಬಾ ಬ್ಯುಸಿ (Busy) ಯಾಗಿರ್ತಾರೆ. ಸರಿಯಾಗಿ ಆಹಾರ (Food) ಸೇವನೆ ಮಾಡಲೂ ಸಮಯ ಸಿಗೋದಿಲ್ಲ. ಯಾವಾಗ್ಲೋ ಏಳು, ಇನ್ಯಾವಾಗ್ಲೋ ತಿನ್ನು, ಮತ್ತ್ಯಾವಾಗ್ಲೋ ಮಲಗು ಎನ್ನುವ ಪದ್ಧತಿ ಅನುಸರಿಸ್ತಾರೆ. ಇದ್ರಿಂದಾಗಿ ಅವರ ಆರೋಗ್ಯ ಹಾಳಾಗುತ್ತದೆ. ಆರೋಗ್ಯಕರ ದೇಹಕ್ಕೆ ಸರಿಯಾದ ಸಮಯದಲ್ಲಿ ಆಹಾರ ಸೇವನೆ ಜೊತೆ ನಿದ್ರೆ (Sleep), ವ್ಯಾಯಾಮ (Exercise) ಕೂಡ ಬಹಳ ಮುಖ್ಯ. ಅನೇಕ ಜನರು ಊಟ (Meals) ಮಾಡಿದ ತಕ್ಷಣ ಕುಳಿತುಕೊಳ್ಳುತ್ತಾರೆ ಅಥವಾ ನಿದ್ರೆ ಮಾಡ್ತಾರೆ. ಇದರಿಂದ ಆಹಾರ ಜೀರ್ಣವಾಗುವುದಿಲ್ಲ. ಇದು ಜೀರ್ಣಾಂಗ ವ್ಯವಸ್ಥೆ (Digestive System) ಯ ಮೇಲೂ ಪರಿಣಾಮ ಬೀರಲು ಪ್ರಾರಂಭಿಸುತ್ತದೆ. ನೀವು ಆರೋಗ್ಯವಾಗಿರಲು ಬಯಸಿದ್ದರೆ ಆಹಾರವನ್ನು ಸೇವಿಸಿದ 15-20 ನಿಮಿಷಗಳವರೆಗೆ ಕುಳಿತುಕೊಳ್ಳಬೇಡಿ ಹಾಗೆ ಮಲಗಬೇಡಿ. ಮನೆಯಲ್ಲಿಯೇ ನಡೆದಾಡಿ. ಇಲ್ಲವೆ ಲಘು ವ್ಯಾಯಾಮ ಮಾಡಬಹುದು. ಇದರಿಂದ ನಿಮ್ಮ ಆಹಾರ ಜೀರ್ಣವಾಗುತ್ತದೆ. ಊಟದ ನಂತ್ರ ಮಾಡಬಹುದಾದ ವ್ಯಾಯಾಮಗಳು ಯಾವುವು ಎಂಬುದನ್ನು ನಾವಿಂದು ಹೇಳ್ತೇವೆ.
ಇದಕ್ಕಿಂತ ಮೊದಲು ಊಟ ಮಾಡಿದ ನಂತರ ನಾನು ವ್ಯಾಯಾಮ ಮಾಡಬಹುದೇ ಎಂಬ ಪ್ರಶ್ನೆಗೆ ಉತ್ತರ ಪಡೆಯುವುದು ಮುಖ್ಯ. ಆಹಾರ ಸೇವಿಸಿದ ನಂತರ ಆಹಾರವನ್ನು ಜೀರ್ಣಿಸಿಕೊಳ್ಳುವುದು ಸಹ ಬಹಳ ಮುಖ್ಯ. ಆಹಾರ ಜೀರ್ಣವಾಗ್ಬೇಕೆಂದ್ರೆ ನೀವು ವ್ಯಾಯಾಮ ಮಾಡಬಹುದು. ಆದರೆ ತಿಂದ ನಂತರ ಯಾವಾಗಲೂ ಲಘು ವ್ಯಾಯಾಮ ಮಾಡಬೇಕು. ವ್ಯಾಯಾಮದಿಂದ ನಿಮ್ಮ ಆಹಾರವು ತುಂಬಾ ಸುಲಭವಾಗಿ ಜೀರ್ಣವಾಗುತ್ತದೆ. ಇದಲ್ಲದೆ ಗ್ಯಾಸ್, ಅಜೀರ್ಣ ಮತ್ತು ಮಲಬದ್ಧತೆಯಂತಹ ಸಮಸ್ಯೆಗಳೂ ಇರುವುದಿಲ್ಲ.
ಊಟದ ನಂತ್ರ ಯಾವ ವ್ಯಾಯಾಮಗಳನ್ನು ಮಾಡಬೇಕು?
ಸುಖಾಸನ : ನೀವು ಸುಖಾಸನದಲ್ಲಿ ಕುಳಿತು ಆಹಾರವನ್ನು ಜೀರ್ಣಿಸಿಕೊಳ್ಳಬಹುದು. ತಿಂದ ನಂತರ ನೀವು 5-10 ನಿಮಿಷಗಳ ಕಾಲ ಸುಖಾಸನದಲ್ಲಿ ಕುಳಿತು ನಂತರ ನಡೆಯಿರಿ. ಹೀಗೆ ಮಾಡುವುದರಿಂದ ನಿಮ್ಮ ದೇಹದಲ್ಲಿ ಶಕ್ತಿಯ ಮಟ್ಟ ಹೆಚ್ಚುತ್ತದೆ. ಸುಖಾಸನದಲ್ಲಿ ಕುಳಿತುಕೊಳ್ಳುವುದರಿಂದ ಹೊಟ್ಟೆಯ ಸಮಸ್ಯೆಗಳು ಬರುವುದಿಲ್ಲ.
ಮೊಸರನ್ನ ಮಹಿಮೆ, ಇನ್ಮುಂದೆ ಸಿಂಗಾಪುರದಲ್ಲೂ ಭಾರತದ ಸಾಂಪ್ರದಾಯಿಕ ಆಹಾರ ತಿನ್ಬೋದು
ವಾಕಿಂಗ್ : ಊಟ ಮಾಡಿದ ನಂತರ ನಡೆಯಬೇಕು. ವಾಕಿಂಗ್ ನಿಮ್ಮ ದೇಹವನ್ನು ದೈಹಿಕವಾಗಿ ಕ್ರಿಯಾಶೀಲವಾಗಿರಿಸುತ್ತದೆ. ಅದಕ್ಕಾಗಿಯೇ ತಜ್ಞರು ಆಹಾರ ಸೇವಿಸಿದ ನಂತರ ವಾಕಿಂಗ್ ಮಾಡಲು ಶಿಫಾರಸು ಮಾಡುತ್ತಾರೆ. ಇದರಿಂದಾಗಿ ನಿಮ್ಮ ಆಹಾರವೂ ಸುಲಭವಾಗಿ ಜೀರ್ಣವಾಗುತ್ತದೆ ಮತ್ತು ಜೀರ್ಣಾಂಗ ವ್ಯವಸ್ಥೆಯ ಮೇಲೆ ಹೆಚ್ಚಿನ ಒತ್ತಡ ಇರುವುದಿಲ್ಲ. ತಿಂದ ನಂತರ ವಾಕಿಂಗ್ ಮಾಡಿದ್ರೆ ಗ್ಯಾಸ್, ಅಜೀರ್ಣ ಮತ್ತು ಮಲಬದ್ಧತೆಯಂತಹ ಸಮಸ್ಯೆಗಳೂ ದೂರವಾಗುತ್ತವೆ. ಆಹಾರವನ್ನು ಸೇವಿಸಿದ ನಂತರ ನೀವು 15-20 ನಿಮಿಷಗಳ ಕಾಲ ನಡೆಯಬಹುದು.
ವಜ್ರಾಸನ : ಆಹಾರವನ್ನು ಸೇವಿಸಿದ ನಂತರ ನೀವು ವಜ್ರಾಸನ ಭಂಗಿಯಲ್ಲಿ ಕುಳಿತುಕೊಳ್ಳಬೇಕು. ಈ ಭಂಗಿಯಲ್ಲಿ ಕುಳಿತರೆ ಆಹಾರ ಸುಲಭವಾಗಿ ಜೀರ್ಣವಾಗುತ್ತದೆ. ಆಹಾರವನ್ನು ಸೇವಿಸಿದ ನಂತರ ಇದು ಉತ್ತಮ ವ್ಯಾಯಾಮವೆಂದು ಪರಿಗಣಿಸಲಾಗಿದೆ. ಈ ಭಂಗಿಯು ನಿಮ್ಮ ದೇಹದ ಮೇಲ್ಭಾಗ ಮತ್ತು ಕಿಬ್ಬೊಟ್ಟೆಯ ಸ್ನಾಯುಗಳನ್ನು ವಿಸ್ತರಿಸುತ್ತದೆ. ಈ ವ್ಯಾಯಾಮ ನಿಮ್ಮ ಆಹಾರವನ್ನು ಸುಲಭವಾಗಿ ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ. ಊಟವಾದ್ಮೇಲೆ ನೀವು 15-20 ನಿಮಿಷಗಳ ಕಾಲ ಈ ಭಂಗಿಯಲ್ಲಿ ಕುಳಿತುಕೊಳ್ಳಬೇಕು. ಆಗ ಮಾತ್ರ ಅದರ ಪರಿಣಾಮವನ್ನು ನೀವು ನೋಡ್ಬಹುದು.
ಅನ್ನ ಬಿಟ್ಟು ಚಪಾತಿ ತಿನ್ತಿದ್ರೂ ಸಣ್ಣಗಾಗ್ತಿಲ್ವಾ ? ಹಿಟ್ಟನ್ನು ಹೀಗೆ ತಯಾರಿಸಿ, ಒಂದೇ ವಾರದಲ್ಲಿ ತೂಕ ಇಳಿಯುತ್ತೆ
ಕೋರ್ ವ್ಯಾಯಾಮಗಳು : ಅನೇಕರು ಊಟವಾದ್ಮೇಲೆ ಉಬ್ಬರದ ಸಮಸ್ಯೆ ಕಾಡುತ್ತದೆ ಎಂದು ದೂರುತ್ತಾರೆ. ಇನ್ನು ಕೆಲವರಿಗೆ ಹೊಟ್ಟೆ ನೋವು ಕಾಣಿಸಿಕೊಳ್ಳುತ್ತದೆ. ತಜ್ಞರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯುವ ಜೊತೆಗೆ ನೀವು ಕೋರ್ ವ್ಯಾಯಾಮಗಳನ್ನು ಮಾಡಬಹುದು. ಈ ವ್ಯಾಯಾಮವನ್ನು ಮಾಡುವುದರಿಂದ ನಿಮ್ಮ ಸ್ನಾಯುಗಳು ಬಲಗೊಳ್ಳುತ್ತವೆ ಮತ್ತು ಮಲ ವಿಸರ್ಜನೆ ನಿಮಗೆ ಸುಲಭವಾಗುತ್ತದೆ.