ಮೊಸರನ್ನ ಮಹಿಮೆ, ಇನ್ಮುಂದೆ ಸಿಂಗಾಪುರದಲ್ಲೂ ಭಾರತದ ಸಾಂಪ್ರದಾಯಿಕ ಆಹಾರ ತಿನ್ಬೋದು

ಸಿಂಪಲ್ ಆಗಿ, ಈಝಿಯಾಗಿ ತಯಾರಿಸೋ ರೆಸಿಪಿಗಳಲ್ಲೊಂದು ಮೊಸರನ್ನ. ತಿನ್ನೋಕು ಟೇಸ್ಟೀ ಆರೋಗ್ಯ (Health)ಕ್ಕೂ ಬೆಸ್ಟ್‌. ಭಾರತದ ಸಾಂಪ್ರದಾಯಿಕ ಆಹಾರಗಳಲ್ಲಿ ಒಂದಾದ ಮೊಸರನ್ನ ಸದ್ಯ ಸಿಂಗಾಪುರ (Singapore)ದಲ್ಲೂ ಸಖತ್‌ ಫೇಮಸ್. ಅರೆ, ಎಲ್ಲಿಯ ಸಿಂಗಾಪುರ, ಎಲ್ಲಿಯ ಮೊಸರನ್ನ (Curd Rice) ಅಂತೀರಾ. ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ. 

Yommies Rice Ex Yogurt, Now Curd Rice Available In Singapore Also Vin

ಊಟ ಎಂದು ಬಂದಾಗ ಕಂಪ್ಲೀಟ್(Complete) ಅಗುವುದು ಮೊಸರನ್ನದಿಂದ ಅಲ್ವೆ. ಎಷ್ಟೇ ಹೊಟ್ಟೆ ಫುಲ್ ಆದರೂ ಮೊಸರ ತಿನ್ನದೆ ಎದ್ದೇಳುವುದಿಲ್ಲ. ಬೇಸಿಗೆಯಲ್ಲಂತೂ ಮಜ್ಜಿಗೆ, ಮೊಸರು(Curd) ಬೇಕೆ ಬೇಕು. ಕೆನೆಭರಿತ ಹಾಲಿನೊಂದಿಗೆ ಹೆಪ್ಪಿಗಿಟ್ಟರೆ ಬೆಳಗ್ಗೆ ದಪ್ಪನೆಯದಾಗಿ ಮೊಸರು ರೆಡಿಯಾಗಿರುತ್ತದೆ. ಅದನ್ನು ಕೇಕ್(Cake) ರೀತಿ ಕಟ್ ಮಾಡಬೇಕಾಗುತ್ತೆ.  ಅನ್ನದೊಂದಿಗೆ ತಿಂದರೆ ಹೊಟ್ಟೆಗೆ ತೃಪ್ತಿಯ ಭಾವ ಮೂಡುತ್ತೆ. ಬಿಸಿಲಿನಿಂದ ಬಂದವರಿಗೆ ಒಂದು ಲೋಟ ಮಜ್ಜಿಗೆ ಕೊಟ್ಟರೆ ಹಾಯ್! ಎನಿಸುತ್ತೆ. ಯಾವ ತಂಪು ಪಾನಿಯವೂ ಇದರ ಮುಂದೆ ಸಮವಲ್ಲ.

ಮೊಸರನ್ನ (Curd Rice) ನಮ್ಮ ಸಾಂಪ್ರದಾಯಿಕ(Traditional) ಆಹಾರಗಳಲ್ಲೊಂದು. ಬೇಸಿಗೆಯಲ್ಲಿ ಇದನ್ನು ತಿಂದರೆ ಹೊಟ್ಟೆಗೆ ತಂಪು ನೀಡುತ್ತದೆ ಜೊತೆಗೆ ಶಕ್ತಿ ನೀಡುತ್ತದೆ. ಆರೋಗ್ಯಕ್ಕೂ ಉತ್ತಮವಾಗಿದ್ದು, ಬೇಸಿಗೆಯಲ್ಲಿ ದೇಹದ ಉಷ್ಣವನ್ನು(Heat) ನಿಯಂತ್ರಿಸುತ್ತದೆ. ಇದರಲ್ಲಿ ಪ್ರೋಟೀನ್(Protein), ಫೈಬರ್(Fiber), ಆಯಂಟಿ ಆಕ್ಸಿಡೆಂಟ್(Antioxidant), ನ್ಯೂಟ್ರೀಷನ್(Nutrition) ಹೆಚ್ಚಿನ ಪ್ರಮಾಣದಲ್ಲಿದೆ. ಮೊಸರನ್ನದ ಗುಣಗಳನ್ನು ತಿಳಿದವರು ಮೂರೂ ಹೊತ್ತು ಇದನ್ನು ತಿನ್ನೋದಕ್ಕೂ ಹಿಂಜರಿಯೋದಿಲ್ಲ. ಅದ್ರಲ್ಲೂ ಭಾರತದಲ್ಲಿ ಯಾವುದೆ ಸಮಾರಂಭಗಳಲ್ಲಿ ಊಟದ ಜೊತೆ ಹೆಚ್ಚಾಗಿ ಮೊಸರನ್ನದ ಜೊತೆ ಇದ್ದೇ ಇರುತ್ತದೆ. ಆದ್ರೆ ಸಿಂಗಾಪುರದಲ್ಲೂ ಮೊಸರನ್ನ ಸಿಕ್ಕಾಪಟ್ಟೆ ಫೇಮಸ್ ಅಂದ್ರೆ ನೀವು ನಂಬ್ತೀರಾ ? ಅರೆ, ಎಲ್ಲಿಯ ಹೈ ಫೈ ಸಿಟಿ ಸಿಂಗಾಪುರ, ಎಲ್ಲಿಯ ಮೊಸರನ್ನ ಅಂತೀರಾ. ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ. 

ಹೊಟ್ಟೆ ಕೆಟ್ಟಿದ್ಯಾ? ಸರಿಯಾಗಿರಬೇಕೆಂದರೆ ಈ ಫುಡ್ ಮಿಸ್ ಮಾಡ್ಬೇಡಿ!

ಆಯಾ ದೇಶದಲ್ಲಿ ಸಾಮಾನ್ಯವಾಗಿ ಅಲ್ಲೇ ಆರಂಭಗೊಂಡಿರುವ ಫುಡ್ ಫೇಮಸ್ ಆಗಿರುತ್ತೆ. ಅದು ಬಿಟ್ಟು ಒಂದೂರಿನ ಫುಡ್ ಇನ್ನೊಂದೆಡೆ ಫೇಮಸ್ ಆಗೋದು ತುಂಬಾ ಅಪರೂಪ. ಆದ್ರೆ ಭಾರತದ ಆಹಾರ ಮೊಸರನ್ನ ಸಿಂಗಾಪುರದಲ್ಲಿ ಸಿಕ್ಕಾಪಟ್ಟೆ ಫೇಮಸ್ ಆಗಿದೆ. ಆರೋಗ್ಯಕ್ಕೆ ಉತ್ತಮವಾಗಿರುವ ಮೊಸರನ್ನವನ್ನು ಇಲ್ಲಿ ಎಲ್ಲರೂ ಇಷ್ಟಪಟ್ಟು ತಿನ್ತಿದ್ದಾರೆ. ಹೌದು ಸಿಂಗಾಪುರದಲ್ಲಿ 'ಯೋಮೀಸ್ ರೈಸ್ ಎಕ್ಸ್ ಯೋಗರ್ಟ್‌' ಎಂಬಲ್ಲಿ ಸ್ಪೆಷಲ್‌ ಆಗಿ ಮೊಸರನ್ನವನ್ನೇ ನೀಡಲಾಗುತ್ತೆ. ಪ್ರತಿದಿನ ಇಲ್ಲಿ ನೂರಾರು ಮಂದಿ ಆಗಮಿಸಿ ಮೊಸರನ್ನವನ್ನು ಸವಿದು ಹೋಗ್ತಾರೆ.

ತನು ಎಂಬವರು ಸಿಂಗಾಪುರದಲ್ಲಿರುವ ಮೊಸರನ್ನದ ಸ್ಪೆಷಲ್ ರೆಸ್ಟೋರೆಂಟ್ ಪೋಟೋವನ್ನು ಟ್ವಿಟರ್‌ನಲ್ಲಿ ಶೇರ್‌ ಮಾಡಿದ್ದಾರೆ. ಇದಕ್ಕೆ ನೆಟ್ಟಿಗರು ಸಹ ಬಹಳ ಖುಷಿಯಿಂದ ಕಾಮೆಂಟ್ ಮಾಡಿದ್ದಾರೆ. ವಿದೇಶದಲ್ಲಿಯೂ ಭಾರತೀಯ ಮೊಸರನ್ನವನ್ನು ನೋಡಲು ಖುಷಿಯಾಗುತ್ತಿದೆ ಎಂದಿದ್ದಾರೆ. ಇನ್ನೊಬ್ಬ ಬಳಕೆದಾರರು ಥಾಯ್ಲೆಂಡ್‌ನಲ್ಲಿಯೂ ಮೊಸರನ್ನದ ಸ್ಪೆಷಲ್ ರೆಸ್ಟೋರೆಂಟ್ ಇದ್ದು, ಇದಕ್ಕೆ ಅಂಕಲ್ ಸ್ಯಾಮ್ಸ್ ಯೋಗರ್ಟ್ ರೈಸ್ ಎಂದು ಹೆಸರಿಡಲಾಗಿದೆ ಎಂದು ತಿಳಿಸಿದ್ದಾರೆ.

Food Tips: ಮಜ್ಜಿಗೆ ಊಟಾನೋ, ಮೊಸರನ್ನವೋ ಆರೋಗ್ಯಕ್ಕೆ ಯಾವುದು ಬೆಸ್ಟ್?

ಮೊಸರನ್ನವನ್ನು ತಯಾರಿಸುವುದು ಹೇಗೆ ?
ಮೊಸರನ್ನವನ್ನು ತಯಾರಿಸಲು ಮೊದಲಿಗೆ 1 ಕಪ್ ಅನ್ನವನ್ನು ತೆಗೆದುಕೊಳ್ಳಿ. ಮೊದಲಿಗೆ ಬಾಣಲೆಯಲ್ಲಿ 2 ಚಮಚ ತೆಂಗಿನ ಎಣ್ಣೆಯನ್ನು ಬಿಸಿ ಮಾಡಿ. ಇದಕ್ಕೆ  ½ ಟೀಸ್ಪೂನ್ ಸಾಸಿವೆ, ಸ್ಪಲ್ಪ ಕರಿಬೇವಿನ ಸೊಪ್ಪು, 1 ಒಣ ಮೆಣಸಿನಕಾಯಿ, ½ ಟೀ ಸ್ಪೂನ್ ಚನ್ನಾ ದಾಲ್, ½ ಟೀ ಸ್ಪೂನ್ ಉದ್ದಿನ ಬೇಳೆ ಸೇರಿಸಿ ಮತ್ತು ಅವುಗಳನ್ನು ಎರಡು ನಿಮಿಷಗಳ ಕಾಲ ಸಿಡಿಯಲು ಬಿಡಿ. ಈಗ ಉಳಿದ ಅನ್ನವನ್ನು ಬಾಣಲೆಗೆ ಹಾಕಿ ಮಿಕ್ಸ್ ಮಾಡಿ. ಉರಿಯನ್ನು ಆಫ್ ಮಾಡಿ ಮತ್ತು ಅದಕ್ಕೆ ಸುಮಾರು ½ ಕಪ್ ಮೊಸರು ಸೇರಿಸಿ. ದಾಳಿಂಬೆ ಬೀಜಗಳಿಂದ ಅಲಂಕರಿಸಿ, ಚೆನ್ನಾಗಿ ಮಿಶ್ರಣ ಮಾಡಿ ಮತ್ತು ಬೆಚ್ಚಗೆ ಬಡಿಸಿ.

ಮೊಸರನ್ನ ಯಾವಾಗ ಸೇವಿಸಬೇಕು ?
ರಾತ್ರಿಗಿಂತ(Night) ಹಗಲಲ್ಲಿ(Day) ಮೊಸರನ್ನ ಸೇವಿಸುವುದು ಆರೋಗ್ಯಕ್ಕೆ ಉತ್ತಮ ಎಂದು ಆಯುರ್ವೇದದಲ್ಲಿ (Ayurveda) ತಿಳಿಸಲಾಗಿದೆ. ಶೀತ(Cold), ಕಫದ ಕೆಮ್ಮು(Cough) ಇರುವವರು ರಾತ್ರಿ ವೇಳೆ ಮೊಸರನ್ನ ತಿನ್ನಲೇಬಾರದು. ಇದರಲ್ಲಿ ಜಿಡ್ಡಿನಾಂಶ ಹೆಚ್ಚಿರುವುದರಿಂದ ಕೆಮ್ಮು ಹೆಚ್ಚಾಗುವುದು ತಡೆಯಬಹುದಾಗಿದೆ. 

Latest Videos
Follow Us:
Download App:
  • android
  • ios