Asianet Suvarna News Asianet Suvarna News

Health Tips : ಗ್ಯಾಸ್ ಹೆಚ್ಚಾಗಿ ಹೊಟ್ಟೆ ಊದಿಕೊಳ್ಳೋಕೆ ಇಲ್ಲಿದೆ ಕಾರಣ

ಗ್ಯಾಸ್. ಸದ್ಯ ಬಹುತೇಕರನ್ನು ಕಾಡ್ತಿರುವ ದೊಡ್ಡ ಸಮಸ್ಯೆಯಿದು. ರಾತ್ರಿಯಾಗ್ತಿದ್ದಂತೆ ಅನೇಕರ ಹೊಟ್ಟೆ ಊದಿಕೊಳ್ಳುತ್ತದೆ. ಗ್ಯಾಸ್ ನಿಂದ ನಿದ್ರೆ ಕಳೆದುಕೊಳ್ಳುವವರಿದ್ದಾರೆ. ಎದೆ,ಬೆನ್ನಿನ ನೋವಿಗೆ ಕಾರಣವಾಗುವ ಈ ಗ್ಯಾಸ್ ನಿಂದ ಮುಕ್ತಿ ಸಿಗಬೇಕೆಂದ್ರೆ ಏನು ಮಾಡ್ಬೇಕು ಗೊತ್ತಾ?  
 

Foods To Avoid If You Have Gas Problem In The Stomach Bloating
Author
Bangalore, First Published Apr 9, 2022, 4:26 PM IST

ಹೊಟ್ಟೆ (Stomach) ಯಲ್ಲಿ ಗ್ಯಾಸ್ (Gas) ಉತ್ಪತ್ತಿಯಾಗುವುದು ಸಾಮಾನ್ಯ ಸಂಗತಿ. ನಮ್ಮ ಜೀರ್ಣಾಂಗದಲ್ಲಿ ಗಾಳಿ (Air) ತುಂಬಿದಾಗ, ಗ್ಯಾಸ್ ರೂಪುಗೊಳ್ಳಲು ಪ್ರಾರಂಭಿಸುತ್ತದೆ. ಹೊಟ್ಟೆಯಲ್ಲಿ ಗ್ಯಾಸ್ ತುಂಬುತ್ತಿದ್ದಂತೆ ಹೊಟ್ಟೆ ಊದಿಕೊಳ್ಳಲು ಶುರುವಾಗುತ್ತದೆ. ಇದ್ರಿಂದ ನಿಮಗೆ ಅನೇಕ ಸಮಸ್ಯೆಗಳು ಎದುರಾಗುತ್ತವೆ. ಅನೇಕ ಬಾರಿ ಹೊಟ್ಟೆಯನ್ನು ತುಂಬಿಕೊಂಡಿರುವ ಗ್ಯಾಸನ್ನು ಹೊರ ಹಾಕಲು ಸಾಧ್ಯವಾಗುವುದಿಲ್ಲ. ಇದು ನಮ್ಮ ಎದೆ ಹಾಗೂ ಬೆನ್ನಿನ ಮೇಲೆ ಪರಿಣಾಮ ಬೀರುತ್ತದೆ. ಯಾರ ಜೀರ್ಣಾಂಗ ವ್ಯವಸ್ಥೆ ಸರಿಯಾಗಿಲ್ಲವೋ ಅವರಿಗೆ ಮಾತ್ರ ಈ ಗ್ಯಾಸಿನ ಸಮಸ್ಯೆ, ಹೊಟ್ಟೆ ಊದಿಕೊಳ್ಳುವ ಸಮಸ್ಯೆ ಕಾಡುತ್ತದೆ ಎನ್ನಲು ಸಾಧ್ಯವಿಲ್ಲ. ಜೀರ್ಣಾಂಗ ವ್ಯವಸ್ಥೆ ಸರಿಯಾಗಿರುವವರಿಗೂ ಗ್ಯಾಸ್ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಹೊಟ್ಟೆಯಲ್ಲಿ ಗ್ಯಾಸ್ ತುಂಬಲು ಅನೇಕ ಕಾರಣಗಳಿವೆ. ಇಂದು ನಾವು ಹೊಟ್ಟೆಯಲ್ಲಿ ಗ್ಯಾಸ್ ತುಂಬಿ, ಹೊಟ್ಟೆ ಊದಿಕೊಳ್ಳುವ ಜೊತೆಗೆ ಎದೆ, ಬೆನ್ನು ನೋವನ್ನು ಅನುಭವಿಸುವ ಜನರಿಗೆ ಈ ಗ್ಯಾಸ್ ಕಾಡಲು ಕಾರಣವೇನು ಎಂಬುದನ್ನು ಹೇಳ್ತೇವೆ. ಕಾರಣಗಳು ಆಶ್ಚರ್ಯ ಹುಟ್ಟಿಸುವಂತಿವೆ. ಇದ್ರಿಂದಲೂ ಗ್ಯಾಸ್ ಆಗುತ್ತಾ ಎಂಬ ಪ್ರಶ್ನೆ ನಿಮ್ಮನ್ನು ಕಾಡಬಹುದು.

ಹೊಟ್ಟೆಯಲ್ಲಿ ಗ್ಯಾಸ್ ತುಂಬಲು ಇವು ಕಾರಣ :

ಕೆಲವು ತರಕಾರಿಗಳು : ಹೊಟ್ಟೆಯ ಗ್ಯಾಸ್ ಹಾಗೂ ನೀವು ಸೇವನೆ ಮಾಡುವ ಆಹಾರಕ್ಕೆ ಆಳವಾದ ಸಂಬಂಧವಿದೆ. ನಿಮ್ಮ ಡಯಟ್ ಮೇಲೆ ನಿಮ್ಮ ಆರೋಗ್ಯ ನಿಂತಿದೆ. ತರಕಾರಿಗಳು ಆರೋಗ್ಯಕ್ಕೆ ಒಳ್ಳೆಯದು. ತರಕಾರಿ ಸೇವನೆ ಮಾಡುವಂತೆ ವೈದ್ಯರು ಸಲಹೆ ನೀಡ್ತಾರೆ. ಆದ್ರೆ ಕೆಲ ತರಕಾರಿಗಳು ನಮ್ಮ ಹೊಟ್ಟೆಯಲ್ಲಿ ಗ್ಯಾಸ್ ಉತ್ಪತ್ತಿ ಮಾಡುತ್ತವೆ. ಕೆಲ ತರಕಾರಿಗಳು ಬಹುಬೇಗ ಜೀರ್ಣವಾಗುವುದಿಲ್ಲ. ಕಾರ್ಬೋಹೈಡ್ರೇಟ್‌ಗಳು ಹೆಚ್ಚಿರುವ ಆಹಾರಗಳು ಬೇಗ ಜೀರ್ಣವಾಗುವುದಿಲ್ಲ. ಈ ತರಕಾರಿಗಳು  ನಿಮ್ಮ ಹೊಟ್ಟೆಯನ್ನು ತಲುಪಿದಾಗ, ದೊಡ್ಡ ಕರುಳಿನಲ್ಲಿರುವ ಬ್ಯಾಕ್ಟೀರಿಯಾಗಳು ಅದನ್ನು ಒಡೆಯುತ್ತವೆ. ಇದರಿಂದಾಗಿ ಅನಿಲವು ರೂಪುಗೊಳ್ಳುತ್ತದೆ.

Women Health : ಹೆರಿಗೆ ಸಂದರ್ಭದಲ್ಲಿ ಏಕೆ ಬಳಸ್ತಾರೆ ಐವಿ?

ಕೊಬ್ಬಿನ ಆಹಾರಗಳ ಸೇವನೆ : ಅತಿ ಹೆಚ್ಚು ಕೊಬ್ಬಿರುವ ಆಹಾರಗಳನ್ನು ಸೇವನೆ ಮಾಡುವುದ್ರಿಂದ ಹೊಟ್ಟೆಯಲ್ಲಿ ಗ್ಯಾಸ್ ಉತ್ಪತ್ತಿಯಾಗಲು ಶುರುವಾಗುತ್ತದೆ. ಈ ಆಹಾರಗಳ ಅಧಿಕ ಸೇವನೆಯಿಂದ ಹೊಟ್ಟೆ ಊದಿಕೊಳ್ಳುತ್ತದೆ. ಹೊಟ್ಟೆಯಲ್ಲಿ ಗ್ಯಾಸ್ ಹೆಚ್ಚಿನ ಪ್ರಮಾಣದಲ್ಲಿ ಉತ್ಪತ್ತಿಯಾಗುತ್ತದೆ. ಕೊಬ್ಬಿನ ಆಹಾರ ಸೇವನೆ ಮಾಡುವುದ್ರಿಂದ ಹೈಡ್ರೋಜನ್, ಕಾರ್ಬನ್ ಡೈಆಕ್ಸೈಡ್ ಮತ್ತು ಮೀಥೇನ್ ಅನಿಲ ರಚನೆಯಾಗುತ್ತದೆ.  ನಿಮಗೆ ಐಬಿಎಸ್ ಸಮಸ್ಯೆಯಿದ್ದರೆ ಗ್ಯಾಸ್ ಸಮಸ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ.

ಆಹಾರದ ಜೊತೆ ನೀರು ಸೇವನೆ : ಆಹಾರದ ಅರ್ಧ ಗಂಟೆ ಮೊದಲು ಹಾಗೂ ಆಹಾರದ ಅರ್ಧ ಗಂಟೆ ನಂತ್ರ ನೀರನ್ನು ಸೇವನೆ ಮಾಡ್ಬೇಕು. ಅನೇಕರು ಆಹಾರದ ಜೊತೆಯೇ ನೀರು ಕುಡಿಯುತ್ತಾರೆ. ಹೀಗೆ ಮಾಡುವುದ್ರಿಂದ ಗಾಳಿ ಕೂಡ ನಿಮ್ಮ ದೇಹದೊಳಗೆ ಹೋಗುತ್ತದೆ. ಅದು ನಿಮ್ಮ ಜೀರ್ಣಕ್ರಿಯೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.  ಈ ಕಾರಣದಿಂದಾಗಿ ಹೊಟ್ಟೆ ಉಬ್ಬುವುದು ಮತ್ತು ಗ್ಯಾಸ್ ಉತ್ಪತ್ತಿಯಾಗುವ ಸಮಸ್ಯೆಯನ್ನು ಎದುರಿಸಬೇಕಾಗಬಹುದು. ನೀರಿಲ್ಲದೆ ಆಹಾರ ಹೊರಗೆ ಹೋಗುವುದಿಲ್ಲ ಎನ್ನುವವರು ಸ್ವಲ್ಪ ಪ್ರಮಾಣದಲ್ಲಿ ನೀರಿನ ಸೇವನೆ ಮಾಡಿ.

ವ್ಯಾಯಾಮ : ವ್ಯಾಯಾಮ ಮಾಡುವಾಗ ಬೇವರು ಬರುತ್ತದೆ. ಬೆವರುವಾಗ ಸೋಡಿಯಂ ದೇಹದಿಂದ ಬಿಡುಗಡೆಯಾಗುತ್ತದೆ. ಇದು ಕೂಡ ಹೊಟ್ಟೆ ಉಬ್ಬರಕ್ಕೆ ಕಾರಣವಾಗುತ್ತದೆ. ಆದಷ್ಟು ಹೆಚ್ಚಿನ ಪ್ರಮಾಣದಲ್ಲಿ ನೀರಿನ ಸೇವನೆ ಮಾಡಿ. ಆದ್ರೆ ವ್ಯಾಯಾಮ ಮಾಡುವಾಗ ಅಧಿಕ ಪ್ರಮಾಣದಲ್ಲಿ ನೀರನ್ನು ಕುಡಿಯಬೇಡಿ.

ಎಷ್ಟು ವರ್ಕೌಟ್ ಮಾಡಿದ್ರೂ ಬಾಡಿ ಬರ್ತಿಲ್ವಾ ? ವ್ಯಾಯಾಮದ ನಂತರ ಏನ್‌ ತಿನ್ಬೇಕು ತಿಳ್ಕೊಳ್ಳಿ

ಕೆಮ್ಮಿನ ಔಷಧಿ :  ಕೆಮ್ಮು ಔಷಧಿ ಕೆಮ್ಮನ್ನು ಕಡಿಮೆ ಮಾಡುತ್ತದೆ. ಆದ್ರೆ ಇದು ನಿಮ್ಮ ಹೊಟ್ಟೆ ಉಬ್ಬರಕ್ಕೆ ಕಾರಣವಾಗುತ್ತದೆ. 

ಹಣ್ಣಿನ ಜ್ಯೂಸ್ : ಕೆಲವು ಹಣ್ಣಿನ ರಸಗಳು ಕಾರ್ಬೋಹೈಡ್ರೇಟ್‌ಗಳು ಮತ್ತು ಸಕ್ಕರೆಯನ್ನು ಉತ್ಪಾದಿಸುತ್ತವೆ. ಇದು ಗ್ಯಾಸ್ ತುಂಬಿ ಹೊಟ್ಟೆ ಊದಿಕೊಳ್ಳಲು ಕಾರಣವಾಗುತ್ತದೆ. ಅಂಥ ಸಂದರ್ಭದಲ್ಲಿ ಜ್ಯೂಸಿನ ಬದಲು ಹಣ್ಣಿನ ಸೇವನೆ ಮಾಡಿ.

ಗಾಳಿ : ಆಹಾರವನ್ನು ನುಂಗಿದಾಗ ಗಾಳಿ ದೇಹ ಸೇರುತ್ತದೆ. ಈ ಗಾಳಿಯು ಸಾಮಾನ್ಯವಾಗಿ ಸಣ್ಣ ಕರುಳಿನ ಮೂಲಕ ದೇಹದಿಂದ ಹೊರ ಹೋಗುತ್ತದೆ. ಉಳಿದ ಗಾಳಿ ಗುದನಾಳದ ಮೂಲಕ ಹೊರಗೆ ಹೋಗುತ್ತದೆ. ಆದ್ರೆ ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಯಿದ್ದರೆ ಗ್ಯಾಸ್ ಸಮಸ್ಯೆ ಹೆಚ್ಚಾಗುತ್ತದೆ. ಧೂಮಪಾನ ಮಾಡ್ತಿದ್ದರೆ ಹಾಗೆ ಗಡಿಬಿಡಿಯಲ್ಲಿ ಆಹಾರ ಸೇವನೆ ಮಾಡಿದ್ರೂ ಗ್ಯಾಸ್ ಉತ್ಪತ್ತಿಯಾಗುತ್ತದೆ.
 

Follow Us:
Download App:
  • android
  • ios