Asianet Suvarna News Asianet Suvarna News

Health Tips: ವಾಯುಮಾಲಿನ್ಯದಿಂದ ಧೂಮಪಾನದಷ್ಟೇ ಅಪಾಯ ! ಆರೋಗ್ಯವಾಗಿರಲು ಹೀಗೆ ಮಾಡಿ

ತಿನ್ನೋಕೆ ಆಹಾರ (Food) ಇದೆಯೋ, ಇಲ್ಲವೋ ಆದರೆ ಉಸಿರಾಡೋಕೆ ಶುದ್ಧ ಗಾಳಿಯಂತೂ ಬೇಕೇ ಬೇಕು. ಆದರೆ, ಇತ್ತೀಚಿನ ದಿನಗಳಲ್ಲಿ ವಾಹನಗಳ ಓಡಾಟ, ಕಾರ್ಖಾನೆ ಮೊದಲಾದವುಗಳಿಂದ ವಾಯುಮಾಲಿನ್ಯ (Air Pollution_ ಅಂತೂ ಸಿಕ್ಕಾಪಟ್ಟೆ ಹೆಚ್ಚಾಗ್ತಿದೆ. ಹೀಗಿದ್ದಾಗ ಆರೋಗ್ಯ (Health)ವಾಗಿರಲು ಏನು ಮಾಡಬೇಕು. ಇಲ್ಲಿದೆ ಕೆಲವೊಂದು ಟಿಪ್ಸ್.

Follow These Tips To Avoid Health Risks From Air Pollution
Author
Bengaluru, First Published Feb 10, 2022, 9:56 AM IST | Last Updated Feb 10, 2022, 9:56 AM IST

ಕಾಲ ಬದಲಾಗುವ ಹಾಗೆಯೇ ಮನುಷ್ಯ ಹೊಸ ಹೊಸ ಕಾಯಿಲೆಗಳಿಗೆ ಹೆದರುವ ಹಾಗೆಯೇ ಬದಲಾಗುವ ವಾತಾವಣರಕ್ಕೂ ಬೇಕಾಬಿಟ್ಟಿ ವಾಹನಗಳ ಓಡಾಟ, ಗಣಿಗಾರಿಕೆ, ಎಲ್ಲೆಡೆ ಕಾರ್ಖಾನೆಗಳು, ಮನೆಯನ್ನೇ ಕೆಡವಿ ಕಾಂಕ್ರೀಟ್ ಬಿಲ್ಡಿಂಗ್‌ಗಳನ್ನು ನಿರ್ಮಿಸಿದ ಕಾರಣ ವಾಯಮಾಲಿನ್ಯ  (Air Pollution) ವಿಪರೀತವಾಗುತ್ತಿದೆ. ಇದರಿಂದಲೇ ಅಸ್ತಮಾ, ಕೆಮ್ಮು, ಜ್ವರ, ಶ್ವಾಸಕೋಶದ ಸಮಸ್ಯೆಗಳು ಸೇರಿದಂತೆ ಹಲವು ಉಸಿರಾಟದ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿದೆ.

ವಾಯು ಮಾಲಿನ್ಯವು ಪರಿಸರದ ಹೊರತಾಗಿ ಆರೋಗ್ಯ (Health)ಕ್ಕೆ ದೊಡ್ಡ ಅಪಾಯವನ್ನುಂಟು ಮಾಡುತ್ತಿದೆ. ಮನೆಯ ಹೊರಗಿನ ಹಾಗೂ ಮನೆಯೊಳಗಿನ ವಾಯು ಮಾಲಿನ್ಯದ ಪರಿಣಾಮಗಳು ಭಾರತದಲ್ಲಿ ಪ್ರತಿ ವರ್ಷ ಲಕ್ಷಾಂತರ ಅಕಾಲಿಕ ಮರಣಗಳಿಗೆ ಕಾರಣವಾಗುತ್ತವೆ. ವಾಯು ಮಾಲಿನ್ಯವು ಪಾರ್ಶ್ವವಾಯು, ಹೃದ್ರೋಗ, ದೀರ್ಘಕಾಲದ ಪ್ರತಿರೋಧಕ ಶ್ವಾಸಕೋಶದ ಕಾಯಿಲೆ, ಶ್ವಾಸಕೋಶದ ಕ್ಯಾನ್ಸರ್ ಮತ್ತು ತೀವ್ರವಾದ ಉಸಿರಾಟದ ಸೋಂಕಿನಿಂದ ಮರಣದ ಅಪಾಯ (Danger)ವನ್ನು ಹೆಚ್ಚಿಸುತ್ತದೆ. ವಾಯು ಮಾಲಿನ್ಯಕ್ಕೆ ನಿರಂತರವಾಗಿ ಒಡ್ಡಿಕೊಳ್ಳುವುದರಿಂದ ಅನೇಕ ಆರೋಗ್ಯ ಅಪಾಯಗಳನ್ನು ಉಂಟುಮಾಡಬಹುದು, ವಿಶೇಷವಾಗಿ ದೀರ್ಘಾವಧಿಯವರೆಗೆ. ಅತ್ಯಂತ ಹಾನಿಕಾರಕವಾದ ಪಿಎಂಟು.5 ಎಂಬ ಕಣವು ಶ್ವಾಸಕೋಶದಲ್ಲಿ ಆಳವಾಗಿ ಬೇರೂರಬಲ್ಲದು. 

Nitrogen Dioxideನಿಂದ ಮಕ್ಕಳಲ್ಲಿ ಹೆಚ್ತಿದೆ ಅಸ್ತಮಾ

ಮಾಹಿಮ್‌ನ ಎಸ್‌ಎಲ್ ರಹೇಜಾ ಆಸ್ಪತ್ರೆಯ ಹಿರಿಯ ಸಲಹೆಗಾರ, ಇಂಟರ್ನಲ್ ಮೆಡಿಸಿನ್ ಡಾ.ಪರಿತೋಷ್ ಬಾಘೆಲ್, ವಾಯು ಮಾಲಿನ್ಯದ ಹಾನಿಕಾರಕ ಪರಿಣಾಮಗಳಿಂದ ನಮ್ಮನ್ನು ತಡೆಯಲು ಕೆಲವು ಸಲಹೆಗಳನ್ನು ನೀಡಿದ್ದಾರೆ.

ಸಾಧ್ಯವಾದಷ್ಟು ಮನೆಯೊಳಗೆ ಇರಿ
ಕೊರೋನಾ ಕಾಲಾನಂತರ ಲಾಕ್‌ಡೌನ್, ಕರ್ಫ್ಯೂ ಬಳಿಕ ಜನರು ಹೆಚ್ಚಾಗಿ ಮನೆಯಲ್ಲೇ ಇರುವುದನ್ನು ರೂಢಿ ಮಾಡಿಕೊಂಡಿದ್ದಾರೆ. ಹಾಗಂತ ಮನೆಯೊಳದೇ ದೀರ್ಘಕಾಲ ಕುಳಿತಿರಲಾಗುವುದಿಲ್ಲ. ಹೀಗಾಗಿ ಮನೆಯಿಂದ ಹೊರಬರುವ ಪರಿಸ್ಥಿತಿಗಳಲ್ಲಿ ಬಟ್ಟೆಯ ಮಾಸ್ಕ್ ಬದಲಿಗೆ N95 ಮಾಸ್ಕ್‌ಗಳನ್ನು ಧರಿಸಿ. ಇದು ಸೋಂಕಿನಿಂದ ಮಾತ್ರವಲ್ಲ ಕಲುಷಿತ ವಾತಾವರಣದಿಂದಲೂ ನಮ್ಮನ್ನು ರಕ್ಷಿಸುತ್ತದೆ. ಧೂಳು, ಹೊಗೆ ಮೊದಲಾದವುಗಳಿಂದ ತಕ್ಕಮಟ್ಟಿಗೆ ರಕ್ಷಣೆ ನೀಡುತ್ತದೆ. 

ಹೊರಾಂಗಣದಲ್ಲಿ ವ್ಯಾಯಾಮ ಮಾಡುವುದನ್ನು ತಪ್ಪಿಸಿ 
ವಾಯುಮಾಲಿನ್ಯದಿಂದ ದೂರವಿರಲು ಹೊರಾಂಗಣದಲ್ಲಿ ವ್ಯಾಯಾಮ ಮಾಡುವುದನ್ನು ತಪ್ಪಿಸಿ. ವಿಶೇಷವಾಗಿ ವಯಸ್ಸಾದವರು ಹೊರಾಂಗಣ ವ್ಯಾಯಾಮವನ್ನು ಸಂಪೂರ್ಣ ಕಡಿಮೆ ಮಾಡಿ. ಕಾರ್ಖಾನೆಯಿರುವ, ಭಾರೀ ಹೊಗೆ ಇರುವ ಪ್ರದೇಶಗಳಲ್ಲಿ ಓಡಾಡಬೇಡಿ. ಮನೆಯ ಒಳಗಡೆ ಏರ್ ಪ್ಯೂರಿಫೈಯರ್‌ಗಳನ್ನು ಬಳಸಿ, ಸಾಧ್ಯವಾದರೆ, ಗಾಳಿಯನ್ನು ಸ್ವಚ್ಛವಾಗಿಡಲು ಮತ್ತು ನಿಯಮಿತ ಮಧ್ಯಂತರದಲ್ಲಿ ಫಿಲ್ಟರ್‌ಗಳನ್ನು ಬದಲಾಯಿಸಿ.

ಶ್ವಾಸಕೋಶ ಸ್ವಚ್ಛಗೊಳಿಸುವ ಬೆಸ್ಟ್ ಮೂರು ಆಹಾರಗಳಿವು

ಮನೆಯೊಳಗಡೆ ಗಿಡಗಳನ್ನು ಬೆಳೆಸಿ
ಮನೆಯ ಒಳಾಂಗಣದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಗಿಡಗಳನ್ನು ಬೆಳೆಸಿ. ಇದು ವಾತಾವರಣದಿಂದ ಧೂಳಿನಂಶವನ್ನು ತೊಡೆದು ಹಾಕಿ ಗಾಳಿಯನ್ನು ಸ್ವಚ್ಛವಾಗಿಡುತ್ತದೆ. ಪೀಸ್ ಲಿಲಿ, ಅಲೋವೆರಾ, ಸ್ಪೈಡರ್ ಪ್ಲಾಂಟ್ ನಂತಹ ಸಸ್ಯ ಸಸಿಗಳು ನೈಸರ್ಗಿಕ ಗಾಳಿ ಶುದ್ಧಿಕಾರಕಗಳಾಗಿ ಕಾರ್ಯನಿರ್ವಹಿಸುತ್ತವೆ, ಇದು ಒಳಾಂಗಣದಲ್ಲಿ ಶುದ್ಧ ಗಾಳಿ (Clean Air)ಯನ್ನು ಉಸಿರಾಡಲು ನಿಮಗೆ ಸಹಾಯ ಮಾಡುತ್ತದೆ.

ಒಳಾಂಗಣದಲ್ಲಿ ಧೂಮಪಾನ ಮಾಡಬೇಡಿ
ಧೂಮಪಾನ (Smoking) ಆರೋಗ್ಯಕ್ಕೆ ಹಾನಿಕಾರಕ ಅನ್ನೋದು ಎಲ್ಲರಿಗೂ ಗೊತ್ತು. ಹೀಗಿದ್ದೂ ಧೂಮಪಾನ ಮಾಡೋದನ್ನು ನಿಲ್ಲಿಸೋರು ಕಡಿಮೆ. ಧೂಮಪಾನ ಮಾಡದೇ ಇರುವುದರಿಂದ ಹಲವು ಆರೋಗ್ಯ ಸಮಸ್ಯೆಗಳಿಂದ ದೂರವಿರಬಹುದು. ಧೂಮಪಾನದಿಂದ ದೂರವಿರಿ ಮತ್ತು ಇತರರು ಸಹ ಧೂಮಪಾನ ಮಾಡದಂತೆ ಪ್ರೋತ್ಸಾಹಿಸಿ. ಧೂಮಪಾನ ಮಾಡುವುದೇ ಆದರೂ ಯಾವುದೇ ಕಾರಣಕ್ಕೂ ಮನೆಯ ಒಳಾಂಗಣದಲ್ಲಿ ಮಾಡಬೇಡಿ.

ಹಣ್ಣು, ತರಕಾರಿಗಳನ್ನು ಹೆಚ್ಚು ತಿನ್ನಿ
ವಾಯುಮಾಲಿನ್ಯದಿಂದ ದೂರವಿರಲು ಯಾವಾಗಲೂ ಹೈಡ್ರೇಟೆಡ್ ಆಗಿರಿ. ಹೆಚ್ಚು ಹೆಚ್ಚು ನೀರು (Water) ಕುಡಿಯಿರಿ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಹಣ್ಣುಗಳು, ತರಕಾರಿಗಳು ಮತ್ತು ದ್ವಿದಳ ಧಾನ್ಯಗಳನ್ನು ಆಹಾರದಲ್ಲಿ ಹೆಚ್ಚೆಚ್ಚು ಬಳಸಿ. ಅದರಲ್ಲೂ ವಿಟಮಿನ್ ಸಿ,ಇ ಮತ್ತು ಒಮೆಗಾ 3, ಬೀಟಾ ಕ್ಯಾರೊಟಿನ್ ಇರುವ ಹಣ್ಣು, ಸೊಪ್ಪು ತರಕಾರಿಗಳನ್ನು ಹೆಚ್ಚು ತಿನ್ನಿ. ಇದು ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. 

Latest Videos
Follow Us:
Download App:
  • android
  • ios