ಪಟಾಕಿ ವಿಷಕಾರಿ ಹೊಗೆ ಉಸಿರಾಟದ ಸಮಸ್ಯೆಯ ಅಪಾಯ ಹೆಚ್ಚಿಸುತ್ತೆ ಎಚ್ಚರ..!
ದೀಪಾವಳಿ ಹಬ್ಬಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ. ಎಲ್ಲರೂ ಹೊಸ ಡ್ರೆಸ್, ಸಿಹಿತಿಂಡಿಗಳನ್ನು ಸಿದ್ಧಪಡಿಸಿ, ಮನೆಯನ್ನು ಅಲಂಕರಿಸಿ ಹಬ್ಬಕ್ಕೆ ಕಾಯುತ್ತಿದ್ದಾರೆ. ಇನ್ನು ಕೆಲವರು ಪಟಾಕಿ ಹೊಡೆಯೋಕಾಗಿ ಕಾತುರದಿಂದ ವೈಟ್ ಮಾಡುತ್ತಿದ್ದಾರೆ. ಆದ್ರೆ ಪಟಾಕಿ ಹೊಗೆಯಿಂದ ಆರೋಗ್ಯಕ್ಕೆ ಸಿಕ್ಕಾಪಟ್ಟೆ ತೊಂದ್ರೆಯಿದೆ ಎಚ್ಚರವಿರಲಿ.
ವಿಶ್ವಾದ್ಯಂತ ಹಿಂದೂಗಳು ಆಚರಿಸುವ ಅತಿದೊಡ್ಡ ಹಬ್ಬ ದೀಪಾವಳಿ. ಈ ಬೆಳಕಿನ ಹಬ್ಬಕ್ಕಾಗಿ ಜನರು ಹಲವು ತಿಂಗಳಿನಿಂದ ಕಾಯುತ್ತಾರೆ. ಹೊಸ ಬಟ್ಟೆಯನ್ನು ಖರೀದಿಸಿ, ಮನೆಯನ್ನು ಫುಲ್ ಕ್ಲೀನ್ ಮಾಡಿ ಅಲಂಕರಿಸಿ, ಮನೆಯಲ್ಲೇ ಸ್ವೀಟ್ಸ್‌ಗಳನ್ನು ತಯಾರಿಸಿ ಸಿದ್ಧಗೊಳ್ಳುತ್ತಾರೆ. ದೀಪಾವಳಿ ಹಬ್ಬ ಅಂದ್ರೆ ಹೇಳಿ ಕೇಳಿ ಬೆಳಿಕಿನ ಹಬ್ಬ, ಮನೆ ತುಂಬಾ ಹಣತೆಯನ್ನು ಹಚ್ಚಿಡುವುದರ ಜೊತೆಗೆ ಪಟಾಕಿ ಸದ್ದು ಕೂಡಾ ಜೋರಾಗಿಯೇ ಇರುತ್ತೆ. ಆದ್ರೆ ಬಣ್ಣ ಬಣ್ಣದ ಪಟಾಕಿ ಹಚ್ಚೋದೇನೂ ಸರಿ. ಆದ್ರೆ ಇದ್ರಿಂದ ಆರೋಗ್ಯಕ್ಕೆಷ್ಟು ತೊಂದ್ರೆಯಿದೆ ಗೊತ್ತಿದ್ಯಾ ?
ದೀಪಾವಳಿ ಹಬ್ಬದ ಸಂಭ್ರಮ ಎಷ್ಟಿರುತ್ತದೆಯೋ ಪಟಾಕಿಗಳಿಂದಾಗಿ ಅಷ್ಟೇ ಭಯ ಕೂಡಾ ಆವರಿಸುತ್ತದೆ. ಮಾತ್ರವಲ್ಲ ಸಾಕಷ್ಟು ಮಾಲಿನ್ಯವನ್ನು ಉಂಟು ಮಾಡುವ ಪಟಾಕಿಗಳು ಆರೊಗ್ಯಕ್ಕೂ ಹಾನಿಯನ್ನುಂಟು ಮಾಡುತ್ತವೆ. ಪಟಾಕಿಯ ಸದ್ದು, ಹೊಗೆ ಎಲ್ಲವೂ ಪರಿಸರಕ್ಕೆ (Environment) ಜೊತೆಗ ಮನುಷ್ಯನ ಆರೋಗ್ಯಕ್ಕೂ ಸಿಕ್ಕಾಪಟ್ಟೆ ಡೇಂಜರ್. ಈಗಾಗಲೇ ಅನಾರೋಗ್ಯದಿಂದ ಬಳಲುತ್ತಿರುವವರು, ಉಸಿರಾಟದ ಸಮಸ್ಯೆ (Respiratory Rroblems) ಎದುರಿಸುತ್ತರುವವರಿಗೆ ಇನ್ನಷ್ಟು ಅನಾರೋಗ್ಯ ಕಾಡುವ ಸಮಯ.
ದೀಪಾವಳಿಯಂದು ಇವುಗಳನ್ನು ನೋಡಿದ್ರೆ ಹಣೆಬರಹವೇ ಬದಲಾಗುತ್ತೆ!
ಪಟಾಕಿಯಿಂದ ಮಾಲಿನ್ಯದ ಜೊತೆಗೆ ಆರೋಗ್ಯ ಕೆಡುತ್ತೆ
ಪಟಾಕಿಗಳು ಬಹಳಷ್ಟು ಮಾಲಿನ್ಯಕ್ಕೆ (Pollution) ಕಾರಣವಾಗುತ್ತದೆ. ಪಟಾಕಿಗಳು (Crackers) ಹೊರಸೂಸುವ ವಿಷಕಾರಿ ಹೊಗೆಯು ಕೋವಿಡ್ ಸೋಂಕಿತರಿಗೆ ಅಥವಾ ಅದಕ್ಕೆ ಗುರಿಯಾಗುವವರಿಗೆ ಅಪಾಯ (Danger)ವನ್ನು ಹೆಚ್ಚಿಸುತ್ತದೆ. ಇದು ಆಸ್ತಮಾ, ದೀರ್ಘಕಾಲದ ಶ್ವಾಸಕೋಶದ ಅಸ್ವಸ್ಥತೆಗಳು, ಕೆಮ್ಮುವಿಕೆ (Cpugh), ಉಬ್ಬಸ, ಎದೆ ಬಿಗಿತ ಮತ್ತು ಇತರ ಉಸಿರಾಟದ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಸಮಸ್ಯೆಗಳನ್ನು ಉಂಟುಮಾಡಬಹುದು ಎಂದು ವೈದ್ಯರು ಎಚ್ಚರಿಸಿದ್ದಾರೆ. ಹಾಗಂತ ಪಟಾಕಿ ಹೊಡೀಬೇಡಿ ಅಂದ್ರೆ ಯಾರ್ ಹೇಳ್ತಾರೆ. ಬೀದಿ ಬೀದಿಯಲ್ಲಿ ಸದ್ದು, ಹೊಗೆ ಆವರಿಸಿರುತ್ತದೆ. ಹಾಗಿದ್ರೆ ದೀಪಾವಳಿ ಸಮಯದಲ್ಲಿ ಆರೋಗ್ಯ (Health) ಕಾಪಾಡಲು ಏನು ಮಾಡಬಹುದು. ತಜ್ಞರು ಏನಂತಾರೆ ನೋಡೋಣ.
ದೀಪಾವಳಿ ಸಮಯದಲ್ಲಿ ಶ್ವಾಸಕೋಶ ರಕ್ಷಿಸಲು ನೀವೇನು ಮಾಡಬೇಕು ?
ಮನೆಯಿಂದ ಹೊರ ಹೋಗದಿರಿ: ದೀಪಾವಳಿಯಿಂದ ಇಷ್ಟೆಲ್ಲಾ ತೊಂದ್ರೆಯಿದೆ ಅಂತ ಗೊತ್ತಿದ್ರೂ ಪಟಾಕಿ ಹೊಡೆಯುವವರು ಮಾತ್ರ ಈ ಸಂಭ್ರಮವನ್ನು ಮಿಸ್ ಮಾಡಲ್ಲ. ರಾಶಿ ರಾಶಿ ಪಟಾಕಿಯನ್ನು ಗುಡ್ಡೆ ಹಾಕಿ ಒಡೀತಾರೆ. ಹೀಗಾಗಿ ಆದಷ್ಟು ಮನೆ(Home)ಯಿಂದ ಹೊರ ಹೋಗುವುದನ್ನು ತಪ್ಪಿಸಿ. ಹೀಗೆ ಮಾಡುವುದರಿಂದ ನೀವು ಹೊಗೆಯಿಂದ ದೂರವಿದ್ದು ಆರೋಗ್ಯ ಸಮಸ್ಯೆ ಬರದಂತೆ ನೋಡಿಕೊಳ್ಳಬಹುದು. ಉಸಿರಾಟದ ಸಮಸ್ಯೆ ಇರುವವರು ಪಟಾಕಿ ಸಿಡಿಸುವ ಸ್ಥಳಗಳನ್ನು ತಪ್ಪಿಸಿ, ಕಾರಣ ಇದು ಹಾನಿಕಾರಕ ರಾಸಾಯನಿಕಗಳನ್ನು ಹೊರಸೂಸುತ್ತದೆ. ಹೊರಗೆ ಹೋಗುವಾಗ ಫೇಸ್ ಮಾಸ್ಕ್ ಧರಿಸಿ. ಉಸಿರಾಟ ವ್ಯವಸ್ಥೆಗೆ ಹೊಗೆ ಬರದಂತೆ ತಡೆಯುವ ಮಾಲಿನ್ಯ-ವಿರೋಧಿ ಫೇಸ್ ಮಾಸ್ಕ್ ಅನ್ನು ಆರಿಸಿಕೊಳ್ಳಿ. ತುಂಬಾ ಉಸಿರುಗಟ್ಟಿಸುವುದನ್ನು ತಪ್ಪಿಸಲು ಸಾಧ್ಯವಾದರೆ, ಹವಾನಿಯಂತ್ರಣದೊಂದಿಗೆ ಮನೆಯೊಳಗೆ ಇರಲು ಪ್ರಯತ್ನಿಸಿ.
ಹಬ್ಬಕ್ಕೆ ಸೀರೆ ರೆಡಿ ಓಕೆ, ಸ್ಕಿನ್ ಕೇರ್ ಮಾಡಿಕೊಳ್ಳೋದನ್ನು ಮರೆತ್ ಬಿಟ್ರಾ
ಪರಿಸರ ಸ್ನೇಹಿ ದೀಪ ಆಯ್ಕೆ ಮಾಡಿ: ಮನೆಯೊಳಗೆ ಮೇಣದಬತ್ತಿಗಳನ್ನು ಬೆಳಗಿಸುವುದನ್ನು ಮತ್ತು ಪಟಾಕಿ ಹಚ್ಚುವುದನ್ನು ತಪ್ಪಿಸಿ. ಇದು ಒಳಾಂಗಣ ಮಾಲಿನ್ಯವನ್ನು ನಿಯಂತ್ರಣದಲ್ಲಿಡುತ್ತದೆ. ಇದಕ್ಕೆ ಬದಲಾಗಿ ನೀವು ಎಲ್‌ಇಡಿ ದೀಪ ಅಥವಾ ಟೆರಾಕೋಟಾ ದೀಪ ಬೆಳಗಿಸಬಹುದು. ಏಕೆಂದರೆ ಅವು ಪರಿಸರಕ್ಕೆ ಉತ್ತಮವಾದ ಆಯ್ಕೆಗಳಾಗಿವೆ. ಆದರೆ, ಅತಿಯಾದ ಬೆಳಕು ಪರಿಸರ ಮಾಲಿನ್ಯಕ್ಕೆ ಕಾರಣವಾಗಬಹು.
ಏರ್ ಪ್ಯೂರಿಫೈಯರ್ ಬಳಸಿ: ಏರ್ ಪ್ಯೂರಿಫೈಯರ್‌ಗಳು ಇದ್ದರೆ ದೀಪಾವಳಿ ಸಮಯದಲ್ಲಿ ಕಡ್ಡಾಯವಾಗಿ ಬಳಸಿ. ಇದು ಪ್ರಸ್ತುತ ಸಂದರ್ಭಗಳಲ್ಲಿ ಬಹಳ ಉಪಯುಕ್ತವಾಗಿದೆ. ಏರ್ ಪ್ಯೂರಿಫೈಯರ್‌ಗಳು ಒಳಾಂಗಣ ಗಾಳಿಯಿಂದ (Air) ಮಾಲಿನ್ಯಕಾರಕಗಳು, ವಿಷಗಳು ಮತ್ತು ಅಲರ್ಜಿಗಳನ್ನು ಫಿಲ್ಟರ್ ಮಾಡುತ್ತವೆ. ಹೀಗಾಗಿ ಉಸಿರಾಟದ ಮೂಲಕ ಹೆಚ್ಚು ರಾಸಾಯನಿಕ ದೇಹ ಸೇರುವ ಭಯವಿಲ್ಲ.
ವೈದ್ಯಕೀಯ ಕಿಟ್ ಜೊತೆಯಲ್ಲೇ ಇಟ್ಟುಕೊಳ್ಳಿ: ದೀಪಾವಳಿಯ ಸಮಯದಲ್ಲಿ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವವರು ವೈದ್ಯಕೀಯ ಕಿಟ್ ಜೊತೆಗೇ ಇಟ್ಟುಕೊಳ್ಳುವುದು ಮುಖ್ಯ. ತುರ್ತು ಔಷಧಿಗಳು, ನೆಬ್ಯುಲೈಜರ್‌ಗಳು ಮತ್ತು ಇತರ ವೈದ್ಯಕೀಯ ಕಿಟ್‌ಗಳನ್ನು ಸದಾ ಜೊತೆಯಲ್ಲೇ ಇಟ್ಟುಕೊಳ್ಳಿ. ಯಾವುದೇ ರೀತಿಯ ಸಮಸ್ಯೆ ಎದುರಾದರೆ ಕೂಡಲೇ ಔಷಧಿಯನ್ನು ತೆಗೆದುಕೊಳ್ಳುವುದನ್ನು ಖಚಿತಪಡಿಸಿಕೊಳ್ಳಿ. ನೀವು ಆಸ್ತಮಾ ಅಥವಾ ಉಸಿರಾಟದ ಕಾಯಿಲೆಯಿಂದ ಬಳಲುತ್ತಿದ್ದರೆ ನಿಮ್ಮೊಂದಿಗೆ ಇನ್ಹೇಲರ್ ಅನ್ನು ಇಟ್ಟುಕೊಳ್ಳಿ.
ಹಬ್ಬಕ್ಕೆ 'ಕಾಂತಾರ' ಚೆಲುವೆಯ ಸ್ಟೈಲಿಶ್ ಲುಕ್ ಫಾಲೋ ಮಾಡಿ
ವ್ಯಾಯಾಮ ಮಾಡಬೇಡಿ: ದೀಪಾವಳಿಯ ಸಮಯದಲ್ಲಿ ವ್ಯಾಯಾಮ (Exercise)ವನ್ನು ತಪ್ಪಿಸಬೇಕು, ಏಕೆಂದರೆ ಈ ಸಮಯದಲ್ಲಿ ಆಳವಾಗಿ ಉಸಿರಾಡಿದರೆ ಧೂಳಿನ ಗಾಳಿಯಿಂದ ಶ್ವಾಸಕೋಶದ ಸೋಂಕಿಗೆ ಕಾರಣವಾಗಬಹುದು.
ಆಹಾರದ ಬಗ್ಗೆ ಕಾಳಜಿವಹಿಸಿ: ಸಾಕಷ್ಟು ಹಣ್ಣುಗಳು (Fruits) ಮತ್ತು ತರಕಾರಿಗಳನ್ನು (Vegetables) ಒಳಗೊಂಡಿರುವ ಪೌಷ್ಟಿಕ ಆಹಾರವನ್ನು ಸೇವಿಸಿ. ಇದು ನಿಮ್ಮ ಒಟ್ಟಾರೆ ಆರೋಗ್ಯವನ್ನು ಸುಧಾರಿಸಬಹುದು. ಹೈಪರ್ ಆಸಿಡಿಟಿಯನ್ನು ತಡೆಯಲು ಮತ್ತು ಹೈಡ್ರೇಟ್ ಆಗಿರಲು ಸಾಕಷ್ಟು ನೀರು ಕುಡಿಯಿರಿ. ನಿರಂತರ ಕೆಮ್ಮು, ಉಬ್ಬಸ ಅಥವಾ ಉಸಿರಾಟದ ತೊಂದರೆಯಿಂದ ಬಳಲುತ್ತಿರುವವರು ವೈದ್ಯರನ್ನು ಸಂಪರ್ಕಿಸಬೇಕು ಮತ್ತು ಇತರ ಕುಟುಂಬ ಸದಸ್ಯರೊಂದಿಗೆ ಸಂಪರ್ಕಕ್ಕೆ ಬರುವುದನ್ನು ತಪ್ಪಿಸಬೇಕು.