Health Tips: ಫೋನ್ ಬ್ಯಾಟರಿ ಮೇಲೆ ಸದಾ ಕಣ್ಣಿರುತ್ತಾ? ಹಾಗಿದ್ರೆ ನಿಮಗೂ ಕಾಡ್ತಿರಬಹುದು ಈ ಖಾಯಿಲೆ

ಸ್ಮಾರ್ಟ್‌ಫೋನ್‌f ದೂ ರದೂರದಲ್ಲಿರುವವರನ್ನು ಹತ್ತಿರ ತಂದಿದೆ. ನಮ್ಮ ಅನೇಕ ಅಗತ್ಯಗಳನ್ನು ಪೂರೈಸುತ್ತಿದೆ. ಆದ್ರೆ ಇದ್ರ ಅತಿಯಾದ ಬಳಕೆಯಿಂದ ಲಾಭಕ್ಕಿಂತ ನಷ್ಟವೇ ಹೆಚ್ಚು. ಅನೇಕರ ಮಾನಸಿಕ ಖಾಯಿಲೆಗೆ ಸ್ಮಾರ್ಟ್‌ ಫೋನ್‌ ಕಾರಣವಾಗಿದೆ. 
 

Every Three Out Of Four Indians Is Victim Of Nomophobia

ಸ್ಮಾರ್ಟ್‌ ಫೋನ್‌ ಈಗಿನ ದಿನಗಳಲ್ಲಿ ಎಲ್ಲರ ಅಗತ್ಯಗಳಲ್ಲಿ ಒಂದಾಗಿದೆ. ಸ್ಮಾರ್ಟ್‌ ಫೋನ್‌ ಇಲ್ಲದೆ ಒಂದು ಗಂಟೆ ಇರೋದು ಕಷ್ಟ ಎನ್ನುವ ಜನರು, 10 ನಿಮಿಷಕ್ಕೊಮ್ಮೆ ಸಾಮಾಜಿಕ ಜಾಲತಾಣವನ್ನು ಸರ್ಚ್ ಮಾಡ್ತಿರುತ್ತಾರೆ. ಬೆಳಿಗ್ಗೆ ಎದ್ದ ತಕ್ಷಣ ಕೈ ಸೇರುವ ಮೊಬೈಲ್ ರಾತ್ರಿ ಮಲಗುವವರೆಗೂ ಕೈನಲ್ಲಿಯೇ ಇರುತ್ತದೆ. ಫೋನ್ ಕರೆಗಿಂತ ಈಗ ವಾಟ್ಸ್ ಅಪ್ ಚಾಟ್ ಹೆಚ್ಚಾಗಿದೆ. ಇನ್ಸ್ಟಾಗ್ರಾಮ್, ಫೇಸ್ಬುಕ್ ಹೀಗೆ ಸಾಮಾಜಿಕ ಜಾಲತಾಣದಲ್ಲಿ ಬ್ಯುಸಿಯಾಗಿರುವ ಜನರು ಸಮಯ ಸಿಕ್ಕಾಗ ಗೇಮ್ ಆಡ್ತಾರೆ. ತಡರಾತ್ರಿಯಾದ್ರೂ ಕೈನಲ್ಲಿರುವ ಮೊಬೈಲ್ ಬಿಡುವ ಮನಸ್ಸು ಜನರಿಗೆ ಬರೋದಿಲ್ಲ. ಅತಿಯಾದ ಮೊಬೈಲ್ ಬಳಕೆಯಿಂದ ಕಣ್ಣು ಕಳೆದುಕೊಳ್ಳುವವರ ಸಂಖ್ಯೆ ಹೆಚ್ಚಾಗಿದೆ.

ಸ್ಮಾರ್ಟ್ ಫೋನ್ ಬಳಕೆಯಿಂದ ಹಲವಾರು ರೋಗಗಳು ಮೈಗಂಟಿಕೊಳ್ತಿವೆ. ದಿನದಲ್ಲಿ 18 ಗಂಟೆಗಿಂತಲೂ ಹೆಚ್ಚು ಮೊಬೈಲ್ ಬಳಸುವವರು ಬೆನ್ನುಹುರಿಯ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಬರೀ ನೋವು, ದೃಷ್ಟಿ ಕಳೆದುಕೊಳ್ಳೋದು ಮಾತ್ರವಲ್ಲ ಮಾನಸಿಕ ಸಮಸ್ಯೆ ಕೂಡ ಜನರನ್ನು ಅಂಟಿಕೊಂಡಿದೆ. ಸ್ಮಾರ್ಟ್‌ಫೋನ್ ಚಟದಿಂದ ಜನರು ನೋಮೋಫೋಬಿಯಾ ಎಂಬ ಕಾಯಿಲೆಗೂ ಬಲಿಯಾಗ್ತಿದ್ದಾರೆ. ಭಾರತದಲ್ಲಿ 4 ಜನರಲ್ಲಿ 3 ಜನರು ನೋಮೋಫೋಬಿಯಾದಿಂದ ಬಳಲುತ್ತಿದ್ದಾರೆ ಎಂದು ವರದಿ ಹೇಳಿದೆ. ನಾವಿಂದು ನೋಮೋಫೋಬಿಯಾದ ಲಕ್ಷಣ ಹಾಗೂ ಅದ್ರಿಂದಾಗುವ ನಷ್ಟದ ಬಗ್ಗೆ ನಿಮಗೆ ಹೇಳ್ತೇವೆ.

HEALTH TIPS : ಮೂಲವ್ಯಾಧಿ ಸಮಸ್ಯೆಗೆ ಈ ಫೈಬರ್ ಆಹಾರ ಬೆಸ್ಟ್ ಪರಿಹಾರ

ನೋಮೋಫೋಬಿಯಾ (nomophobia) ಅಂದ್ರೇನು? : ಸ್ಮಾರ್ಟ್ಫೋನ್ ನಿಂದ ಬೇರ್ಪಡುವ ಭಯವನ್ನು ನೋಮೋಫೋಬಿಯಾ ಎಂದು ಕರೆಯಲಾಗುತ್ತದೆ. ಈ ಖಾಯಿಲೆ (Disease) ಯಿಂದ ಬಳಲುವ ಜನರಿಗೆ ಸ್ಮಾರ್ಟ್ಫೋನ್ ನಿಂದ ಬೇರ್ಪಡಿಸುವ ಭಯ ಸಾರ್ವಕಾಲಿಕವಾಗಿ ಕಾಡುತ್ತದೆ. ಸ್ಮಾರ್ಟ್ಫೋನ್ (Smartphone) ಬ್ಯಾಟರಿ ಶೇಕಡಾ 50ಕ್ಕಿಂತ ಕಡಿಮೆಯಾದ್ರೆ ಜನರು ಚಿಂತೆಗೊಳಗಾಗ್ತಾರೆ. 10ರಲ್ಲಿ 9 ಮಂದಿ ಸ್ಮಾರ್ಟ್ಫೋನ್ ಚಾರ್ಜ್ ಕಡಿಮೆಯಾಗ್ತಿದ್ದರೆ ಭಯಗೊಳ್ತಾರೆ ಎಂದು ಅಧ್ಯಯನ ಹೇಳಿದೆ. 

ನೋಮೋಫೋಬಿಯಾದ ನಿಜವಾದ ಅರ್ಥವೇನೆಂದರೆ ಮೊಬೈಲ್ ಫೋನ್ ಇಲ್ಲದಿರುವ ಫೋಬಿಯಾ. ಅಂದರೆ ಮೊಬೈಲ್ ಫೋನ್ ನಿಂದ ಬೇರ್ಪಡುವ ಭಯ. ಓಪ್ಪೊ (Oppo) ನಡೆಸಿದ ಸಮೀಕ್ಷೆಯ ಪ್ರಕಾರ ಮೊಬೈಲ್ ಫೋನ್‌ಗಳನ್ನು ಕಳೆದುಕೊಳ್ಳುವ ಭಯವು ಜನರಲ್ಲಿ ವೇಗವಾಗಿ ಹೆಚ್ಚುತ್ತಿದೆ. ಈ ಭಯವನ್ನು ನೋಮೋಫೋಬಿಯಾ ಎಂದು ಕರೆಯಲಾಗುತ್ತದೆ. ಈ ಪರಿಸ್ಥಿತಿಯಲ್ಲಿ, ವ್ಯಕ್ತಿಯು ತನ್ನ ಫೋನ್‌ನ ಬ್ಯಾಟರಿ (Battery) ಖಾಲಿಯಾಗಬಹುದೆಂದು ಹೆದರುತ್ತಾನೆ. ಅವನ ಫೋನ್ ಎಲ್ಲೋ ಕಳೆದು ಹೋದ್ರೆ ಎಂಬ ಚಿಂತೆಯಲ್ಲಿ ಇರುತ್ತಾನೆ. ಪ್ರಪಂಚದಾದ್ಯಂತ ಸುಮಾರು ಶೇಕಡಾ 84 ರಷ್ಟು ಜನರಲ್ಲಿ ನೋಮೋಫೋಬಿಯಾ ಸಮಸ್ಯೆ ಇದೆ ಎಂದು ಸಮೀಕ್ಷೆಯಲ್ಲಿ ಹೇಳಲಾಗಿದೆ.

ವರ್ಕ್ ಫ್ರಮ್ ಹೋಮ್ ಇದ್ದವರು ಫಿಸಿಕಲ್ ಆಕ್ಟಿವಿಟಿ ಮಾಡ್ಲೇಬೇಕಾ?

ಬ್ಯಾಟರಿ ಮತ್ತು ಚಾರ್ಜಿಂಗ್  ನೋಮೋಫೋಬಿಯಾಕ್ಕೆ ಪ್ರಮುಖ ಕಾರಣಗಳಲ್ಲಿ ಒಂದು ಎಂದು ಮಾರುಕಟ್ಟೆ ಸಂಶೋಧನಾ ಸಂಸ್ಥೆ ಕೌಂಟರ್‌ಪಾಯಿಂಟ್‌ನ ವರದಿಯಲ್ಲಿ ಹೇಳಲಾಗಿದೆ. ಶೇಕಡಾ 65 ರಷ್ಟು ಬಳಕೆದಾರರು ಬ್ಯಾಟರಿ ಖಾಲಿಯಾದ್ರೆ ಎಂಬ ಭಾವನಾತ್ಮಕ ಸಮಸ್ಯೆಗಳನ್ನು ಎದುರಿಸುತ್ತಾರೆ. ಬ್ಯಾಟರಿ ಮಿತಿ ತಮ್ಮಲ್ಲಿ ಆತಂಕ ಸೃಷ್ಟಿಸುತ್ತದೆ ಎಂದು ಶೇಕಡಾ 28ರಷ್ಟು ಬಳಕೆದಾರರು ಸಮೀಕ್ಷೆಯಲ್ಲಿ ಹೇಳಿದ್ದಾರೆ. ಬ್ಯಾಟರಿ ಡ್ರೈನ್‌ನಿಂದ ಬಳಕೆದಾರರು ಆತಂಕ, ಹೆದರಿಕೆ, ಬೆವರುವಿಕೆ, ಕೋಪವನ್ನು ಎದುರಿಸುತ್ತಾರೆ ಎಂದು ಸಮೀಕ್ಷಾ ವರದಿ ಹೇಳಿದೆ. 

ಸಮೀಕ್ಷೆಯಲ್ಲಿ ಸ್ಮಾರ್ಟ್ಫೋನ್ ಗೆ ಸಂಬಂಧಿಸಿದ ಇನ್ನೂ ಕೆಲ ವಿಷ್ಯವನ್ನು ಪತ್ತೆ ಮಾಡಲಾಗಿದೆ. ಶೇಕಡಾ 87 ರಷ್ಟು ಜನರು ಬ್ಯಾಟರಿ ಚಾರ್ಜ್ ಮಾಡುವಾಗ ಸ್ಮಾರ್ಟ್‌ಫೋನ್ ಬಳಸುತ್ತಾರೆ. ಬ್ಯಾಟರಿ ಉಳಿಸಲು ಶೇಕಡಾ 92ರಷ್ಟು ಜನರು ಬ್ಯಾಟರಿ ಸೇವರ್ ಮೋಡ್ ಬಳಸುತ್ತಾರೆ. ದಿನಕ್ಕೆ ಎರಡು ಬಾರಿ ಸ್ಮಾರ್ಟ್‌ಫೋನ್ ಚಾರ್ಜ್ ಮಾಡುವ ಕೆಲವು ಬಳಕೆದಾರರಿದ್ದಾರೆ. ದಿನದ ಆರಂಭದಲ್ಲಿ ಒಮ್ಮೆ ಹಾಗೂ ದಿನದ ಅಂತ್ಯದಲ್ಲಿ ಒಮ್ಮೆ ಸ್ಮಾರ್ಟ್ಫೋನ್ ನೋಡದೆ ಹೋದ್ರೆ ನಿದ್ರೆ ಬರೋದಿಲ್ಲ, ಮನಸ್ಸಿಗೆ ಸಮಾಧಾನವಿಲ್ಲವೆಂದು ಅವರು ಸಮೀಕ್ಷೆಯಲ್ಲಿ ಹೇಳಿದಾರೆ.

Latest Videos
Follow Us:
Download App:
  • android
  • ios