Weight Loss: ಜಿಮ್‌ಗೆ ಹೋಗೋದೇನೂ ಬೇಡ, ಮನೆಯಲ್ಲೇ ಹೀಗೆ ತೂಕ ಇಳಿಸ್ಕೊಳ್ಳಿ
ತೂಕ ಇಳಿಸಿಕೊಳ್ಳೋದು ಸುಲಭದ ಕೆಲಸವಲ್ಲ. ಆದ್ರೆ ತೂಕ ಇಳಿಸಿಕೊಳ್ಳುವ ಮನಸ್ಸಿದ್ದರೂ ಸಮಯ ಸಿಗೋದಿಲ್ಲ ಎನ್ನುವವರೇ ಹೆಚ್ಚು. ಅಂಥವರು ಮನೆಯಲ್ಲೇ ಕೆಲ ವ್ಯಾಯಾಮ ಮಾಡಿ, ಸುಲಭವಾಗಿ ವೇಟ್ ಲಾಸ್ ಮಾಡಿಕೊಳ್ಳಬಹುದು.
ಒಂದ್ಕಡೆ ಕೆಲಸ (Work) ದ ಒತ್ತಡ. ಮತ್ತೊಂದು ಕಡೆ ತೂಕ (Weight ) ಹೆಚ್ಚಾಗ್ತಿದೆ ಎನ್ನುವ ಚಿಂತೆ. ಇನ್ನೊಂದು ಕಡೆ ಚಿಂತೆ, ಒತ್ತಡಕ್ಕೆ ಮತ್ತಷ್ಟು ಹೆಚ್ಚಾಗ್ತಿರುವ ಬೊಜ್ಜು (Obesity). ಇವೆಲ್ಲವಕ್ಕೂ ಪರಿಹಾರ ವ್ಯಾಯಾಮ (Exercise ) ಮತ್ತು ಯೋಗ (Yoga). ಅನೇಕರಿಗೆ ಇದು ತಿಳಿದಿದೆ. ಆದ್ರೆ ವ್ಯಾಯಾಮ, ಯೋಗ ಮಾಡಲು ಸಮಯ ಸಿಗ್ತಿಲ್ಲ. ಜಿಮ್ ಅಥವಾ ಯೋಗ ಕ್ಲಾಸ್ ಗಳಿಗೆ ಹೋಗಲು ಸಾಧ್ಯವಾಗ್ತಿಲ್ಲ. ವಾಕಿಂಗ್ (Walking) ಕನಸಿನ ಮಾತು. ಇನ್ನು ಆಹಾರ (Food) ದಲ್ಲಿ ನಿಯಂತ್ರಣವೂ ಕಷ್ಟ ಎನ್ನುವವರಿದ್ದಾರೆ. ಕೆಲವೇ ಕೆಲವು ಸಮಯದಲ್ಲಿ ವ್ಯಾಯಾಮ ಮಾಡಿ, ಅತಿ ಬೇಗ ತೂಕ ಇಳಿಸಿಕೊಳ್ಳುವುದು ಹೇಗೆ ಎಂದು ಅವರು ಹುಡುಕಾಡ್ತಾರೆ. ಕಡಿಮೆ ಸಮಯದಲ್ಲಿ ತೂಕ ಇಳಿಸಿಕೊಳ್ಳಬಹುದು. ಆದ್ರೆ ಪ್ರತಿ ದಿನ ಒಂದಿಷ್ಟು ಸಮಯ ವ್ಯಾಯಾಮ ಮಾಡಲೇಬೇಕಾಗುತ್ತದೆ. ಕಡಿಮೆ ಸಮಯದಲ್ಲಿ ತೂಕ ಇಳಿಯಬೇಕು ಎನ್ನುವವರಲ್ಲಿ ನೀವು ಒಬ್ಬರಾಗಿದ್ದರೆ ನಿಮಗೊಂದಿಷ್ಟು ಟಿಪ್ಸ್ ಇದೆ. ದಿನದಲ್ಲಿ ಕೆಲವೇ ಕೆಲವು ನಿಮಿಷಗಳ ಕಾಲ ವ್ಯಾಯಾಮ ಮಾಡಿ ನೀವು ಕೂಡ ತೂಕ ಇಳಿಸಿಕೊಳ್ಳಬಹುದು. ಇಂದು ಬೇಗ ತೂಕ ಇಳಿಯಬಹುದಾದ ವ್ಯಾಯಾಮದ ಬಗ್ಗೆ ನಾವು ಮಾಹಿತಿ ನೀಡ್ತೇವೆ.
ಮನೆಯಲ್ಲೇ ಸುಲಭವಾಗಿ ತೂಕ ಇಳಿಸಲು ಟಿಪ್ಸ್ :
ಸ್ಕ್ವಾಟ್ ಆಂಕಲ್ ಟಚ್ ( Squat Ankle Touch ) : ಸ್ಕ್ವಾಟ್ ಆಂಕಲ್ ಟಚ್ ಇದು ನಿಮ್ಮ ತೂಕ ಇಳಿಸಲು ನೆರವಾಗುತ್ತದೆ. ಇದನ್ನು ಮಾಡುವುದು ಕೂಡ ಸುಲಭ. ಮೊದಲು ನೇರವಾಗಿ ನಿಂತುಕೊಳ್ಳಿ. ಎರಡೂ ಕಾಲುಗಳ ಮಧ್ಯೆ ಅಂತರವಿರಲಿ. ಮೊಣಕಾಲನ್ನು ಬಾಗಿಸಿ ನಿಮ್ಮ ಬಲಗಾಲನ್ನು ಮೇಲಕ್ಕೆ ಎತ್ತಿ. ಎಡಗೈನಲ್ಲಿ ಬಲಗಾಲಿನ ತುದಿಯನ್ನು ಟಚ್ ಮಾಡಿ. ಇದನ್ನು ಇನ್ನೊಂದು ಕಾಲಿಗೂ ಮಾಡಿ. ಹೀಗೆ 10 ಬಾರಿ ಕಾಲುಗಳನ್ನು ಟಚ್ ಮಾಡ್ಬೇಕು.
ಹಿಂದೆ – ಮುಂದೆ ಬಾಗುವುದು : ಮೊದಲು ನೇರವಾಗಿ ನಿಂತುಕೊಳ್ಳಿ. ನಂತ್ರ ಹೊಟ್ಟೆಯನ್ನು ಒಳಗೆ ಎಳೆದುಕೊಳ್ತಾ ಕೈಗಳನ್ನು ಮೇಲಕ್ಕೆ ಎತ್ತಿ, ಬೆನ್ನನ್ನು ಸ್ವಲ್ಪ ಬಾಗಿಸಿ. ಈಗ ಮುಂದೆ ಬಾಗುತ್ತ ಕೈಗಳನ್ನು ಕಾಲಿನ ಪಕ್ಕದಿಂದ ಹಿಂದೆ ತೆಗೆದುಕೊಂಡು ಹೋಗಿ. ಇದನ್ನು 10 ರಿಂದ 15 ಬಾರಿ ಮಾಡ್ಬೇಕು.
YOGA AND HEALTH: ಲೈಂಗಿಕ ಜೀವನ ಚೆನ್ನಾಗಿ ಇರ್ಬೇಕಂದ್ರೆ ಪ್ರತಿ ದಿನ ಮಾಡಿ ಈ ಯೋಗ
ಚದುರಂಗ ದಂಡಾಸನದಲ್ಲಿ ಜಂಪಿಂಗ್ : ಮೊದಲು ಯೋಗಾಸನದ ಚದುರಂಗ ದಂಡಾಸನ ಸ್ಥಿತಿಗೆ ಹೋಗ್ಬೇಕು. ನಂತ್ರ ಹಿಂದಿರುವ ಎರಡೂ ಕಾಲುಗಳನ್ನು ಜಂಪ್ ಮಾಡ್ತಾ ಎರಡೂ ಪಾದಗಳ ಮಧ್ಯೆ ತರಬೇಕು. ನಂತ್ರ ಕಾಲುಗಳನ್ನು ಹಿಂದಕ್ಕೆ ತೆಗೆದುಕೊಂಡು ಹೋಗ್ಬೇಕು. ಈ ಜಂಪಿಂಗ್ (Jumping ) ಅನ್ನು 10 ಬಾರಿ ರಿಪಿಟ್ ಮಾಡ್ಬೇಕು.
ಸ್ಕಿಪ್ಪಿಂಗ್ (Skipping) : ಸ್ಕಿಪ್ಪಿಂಗ್ ತೂಕ ಇಳಿಸಿಕೊಳ್ಳಲು ಅತ್ಯುತ್ತಮ ವ್ಯಾಯಾಮವಾಗಿದೆ. ಇದನ್ನು ನೀವು ಬೆಳಿಗ್ಗೆ ಮತ್ತು ಸಂಜೆ 10 ನಿಮಿಷಗಳ ಕಾಲ ಮಾಡಿದ್ರೆ ಸಾಕು. ಸ್ಕಿಪ್ಪಿಂಗ್ ನಲ್ಲಿ ಅನೇಕ ವಿಧಾನಗಳಿವೆ. ಬೇರೆ ಬೇರೆ ವ್ಯಾಯಾಮಗಳನ್ನು ಮಾಡಿ ಅತಿ ಬೇಗ ತೂಕ ಇಳಿಸಿಕೊಳ್ಳಬಹುದು.
ಪ್ರತಿದಿನ ಒಂದು ನಿಮಿಷ ಈ ಆಸನ ಮಾಡಿದ್ರೆ ಸಾಕು, ಬೊಜ್ಜು ಕರಗಿ ಹೊಟ್ಟೆ ಫ್ಲ್ಯಾಟ್ ಆಗುತ್ತೆ
ಪುಶ್ ಅಪ್ ಆರ್ಮ್ ಥ್ರೂ (Push Up Arm Through) : ಪುಶ್ ಅಪ್ ಆರ್ಮ್ ಥ್ರೂ ಕೂಡ ನಿಮಗೆ ತೂಕ ಇಳಿಸಲು ನೆರವಾಗುತ್ತದೆ. ಪುಶ್ ಅಪ್ ಭಂಗಿಗೆ ಬನ್ನಿ. ನಂತ್ರ ಒಂದು ಕೈಯನ್ನು ಬಗ್ಗಿಸಿ,ದೇಹವನ್ನು ಕೆಳಗೆ ತೆಗೆದುಕೊಂಡು ಹೋಗಿ. ಆದ್ರೆ ದೇಹ ನೆಲಕ್ಕೆ ತಾಗಬಾರದು. ಕೈ ಸಹಾಯದಿಂದ ಮೇಲೆ ಬನ್ನಿ. ಹೀಗೆ ಇನ್ನೊಂದು ಕೈನಲ್ಲೂ ಮಾಡಬೇಕು. ಈ ವ್ಯಾಯಾಮವನ್ನು ದಿನಕ್ಕೆ 10 ಬಾರಿ ಮಾಡುವುದರಿಂದ ನಿಮ್ಮ ತೂಕ ಕಡಿಮೆಯಾಗುತ್ತದೆ.