ಬೇಸಿಗೆಯಲ್ಲಿ ತೂಕ ಇಳಿಸಿಕೊಳ್ಳೋದು ತುಂಬಾ ಈಝಿ, ಸಿಂಪಲ್ ಟಿಪ್ಸ್ ಫಾಲೋ ಮಾಡಿ

ತೂಕ ಇಳಿಸಿಕೊಳ್ಳೋಕೆ ಎಲ್ರೂ ಹರಸಾಹಸ ಪಡ್ತಿರ್ತಾರೆ. ಅದ್ರಲ್ಲೂ ಈ ಸೆಖೆಯಲ್ಲಿ ವರ್ಕೌಟ್ ಮಾಡಿ ತೂಕ ಇಳಿಸಿಕೊಳ್ಳೋದು ಕಷ್ಟವೇ ಸರಿ.ಬೇಸಿಗೆಯಲ್ಲಿ ತೂಕ ಇಳಿಸಿಕೊಳ್ಳಬೇಕು ಅಂದ್ರೆ ಬೆಳಗ್ಗಿನ ದಿನಚರಿ ಸರಿಯಾಗಿರಬೇಕು. ಫಿಟ್ ಮತ್ತು ಟೋನ್ ಬಾಡಿಗಾಗಿ ದೈನಂದಿನ ದಿನಚರಿಯಲ್ಲಿ ಸೇರಿಸಬೇಕಾದ ಕೆಲವು ಆರೋಗ್ಯಕರ ಅಭ್ಯಾಸಗಳು ಇಲ್ಲಿವೆ.

Easy And Effective Ways To Accelerate Weight Loss In Summers Vin

ಇತ್ತೀಚಿನ ವರ್ಷಗಳಲ್ಲಿ ತೂಕ ಹೆಚ್ಚಳ ಅನ್ನೋದು ಜನರ ಮುಖ್ಯ ಆರೋಗ್ಯ ಸಮಸ್ಯೆಗಳಲ್ಲಿ ಒಂದಾಗಿದೆ. ಒತ್ತಡದ ಜೀವನಶೈಲಿ ಹಾಗೂ ಕಳಪೆ ಆಹಾರಪದ್ಧತಿಯಿಂದ ಸುಲಭವಾಗಿ ವೈಟ್ ಗೈನ್ ಆಗುತ್ತದೆ. ಆ ಹೆಚ್ಚುವರಿ ಪೌಂಡ್‌ಗಳನ್ನು ಹೊರಹಾಕಲು ಜನರು ಜಿಮ್‌, ವರ್ಕೌಟ್‌, ಡಯೆಟ್‌ ಎಂದು ವಿವಿಧ ಚಟುವಟಿಕೆಗಳನ್ನು ಪ್ರಯತ್ನಿಸುತ್ತಾರೆ. ಸಮತೋಲಿತ ಆಹಾರ ಮತ್ತು ಜೀವನಶೈಲಿ, ನಿಯಮಿತ ವ್ಯಾಯಾಮದ ಜೊತೆಗೆ ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ. ತೂಕವನ್ನು ಕಡಿಮೆ ಮಾಡುವ ಜನರು ನೆನಪಿನಲ್ಲಿಟ್ಟುಕೊಳ್ಳಬೇಕಾದ ಅತ್ಯಂತ ನಿರ್ಣಾಯಕ ವಿಷಯವೆಂದರೆ ಬೆಳಗ್ಗಿನ ದಿನಚರಿ. 

ಅದರಲ್ಲೂ ಬೇಸಿಗೆಯಲ್ಲಿ ತೂಕ ಇಳಿಸಿಕೊಳ್ಳಬೇಕು ಅಂದ್ರೆ ಬೆಳಗ್ಗಿನ ದಿನಚರಿ ಸರಿಯಾಗಿರಬೇಕು. ಫಿಟ್ ಮತ್ತು ಟೋನ್ ಬಾಡಿಗಾಗಿ ದೈನಂದಿನ ದಿನಚರಿಯಲ್ಲಿ ಸೇರಿಸಬೇಕಾದ ಕೆಲವು ಆರೋಗ್ಯಕರ ಅಭ್ಯಾಸಗಳು ಇಲ್ಲಿವೆ.

ಬೇಸಿಗೆಯಲ್ಲಿ ಐಸ್ ವಾಟರ್ ಕುಡಿಬೇಡಿ ಅನ್ನೋದ್ಯಾಕೆ? ಹಿಂದಿರೋ ಕಾರಣನೂ ತಿಳ್ಕೊಳ್ಳಿ

ಬೆಚ್ಚಗಿನ ನೀರು
ಬೆಚ್ಚಗಿನ ನೀರು ಕುಡಿಯುವ ಮೂಲಕ ದಿನವನ್ನು ಆರಂಭಿಸಿ. ಇದು ಚಯಾಪಚಯವನ್ನು ಹೆಚ್ಚಿಸುತ್ತದೆ ಮತ್ತು ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ. ಮಾತ್ರವಲ್ಲ ಜೀರ್ಣಾಂಗ ವ್ಯವಸ್ಥೆಯನ್ನು ಉತ್ತೇಜಿಸುತ್ತದೆ ಮತ್ತು ಆರೋಗ್ಯಕರ ಕರುಳಿನ ಚಲನೆಯನ್ನು ಉತ್ತೇಜಿಸುತ್ತದೆ. ಪ್ರಚೋದಿತ ಚಯಾಪಚಯವು ದೇಹದಾದ್ಯಂತ ಕೊಬ್ಬನ್ನು ಸುಡುವುದನ್ನು ಸುಲಭವಾಗಿಸುತ್ತದೆ. ಇದು ತ್ವರಿತವಾಗಿ ತೂಕವನ್ನು ಕಳೆದುಕೊಳ್ಳಲು ಅನುವು ಮಾಡಿಕೊಡುತ್ತದೆ.

ಪ್ರೋಟೀನ್ ಭರಿತ ಉಪಾಹಾರ
ಪ್ರೋಟೀನ್ ಭರಿತ ಉಪಾಹಾರವು ತೂಕವನ್ನು ಕಡಿಮೆ ಮಾಡಲು ಮತ್ತು ದೇಹವನ್ನು ಟೋನ್ ಮಾಡಲು ಅತ್ಯಂತ ಪರಿಣಾಮಕಾರಿ ಮಾರ್ಗಗಳಲ್ಲಿ ಒಂದಾಗಿದೆ. ಆಹಾರದಲ್ಲಿ ಹೆಚ್ಚುವರಿ ಪ್ರೋಟೀನ್‌ನ್ನು ಸೇರಿಸುವುದು ಹಸಿವನ್ನು ನಿಯಂತ್ರಿಸಲು ಮತ್ತು ಅತಿಯಾಗಿ ತಿನ್ನುವುದನ್ನು ತಪ್ಪಿಸಲು ಸಹಾಯ ಮಾಡುತ್ತದೆ. ಮೊಟ್ಟೆಗಳು, ಓಟ್ಸ್, ಸೀ ಫುಡ್, ಡೈರಿ ಉತ್ಪನ್ನಗಳು, ಕಾಳುಗಳು, ಡ್ರೈ ಫ್ರೂಟ್ಸ್ ಮೊದಲಾದವುಗಳನ್ನು ಬ್ರೇಕ್‌ಫಾಸ್ಟ್‌ಗೆ ತಿನ್ನಬಹುದು.

ಬೇಸಿಗೆಯಲ್ಲಿ ಎಸಿ ಇಲ್ಲದೆಯೂ ಕೂಲ್ ಆಗಿರೋದು ಹೇಗೆ?

ಮಧ್ಯಮ ವ್ಯಾಯಾಮ
ತೂಕವನ್ನು ಕಡಿಮೆ ಮಾಡುವಾಗ, ದೈಹಿಕ ಚಟುವಟಿಕೆಯು ಅಗತ್ಯವಾಗಿದೆ. ಇದು ದೇಹದಲ್ಲಿರುವ ಹೆಚ್ಚುವರಿ ಕ್ಯಾಲೋರಿಗಳನ್ನು ಸುಲಭವಾಗಿ ಸುಡುತ್ತದೆ. ದೈಹಿಕ ಚಟುವಟಿಕೆಯ ಮೂಲಕ ಕ್ಯಾಲೊರಿಗಳನ್ನು ಕಡಿಮೆ ಮಾಡುವುದರಿಂದ ಸುಲಭವಾಗಿ ವೈಟ್ ಲಾಸ್ ಮಾಡಿಕೊಳ್ಳಬಹುದು.

ಗ್ರೀನ್ ಟೀ
ಹಸಿರು ಚಹಾವು ಕೆಫೀನ್‌ನಂತಹ ಜೈವಿಕ ಸಕ್ರಿಯ ರಾಸಾಯನಿಕಗಳನ್ನು ಒಳಗೊಂಡಿರುತ್ತದೆ, ಇದು ಚಯಾಪಚಯ ಕ್ರಿಯೆಯ ಮೇಲೆ ಪ್ರಬಲ ಪರಿಣಾಮ ಬೀರುತ್ತದೆ. ಹಸಿರು ಚಹಾವು ಚಯಾಪಚಯವನ್ನು ವರ್ಧಿಸುತ್ತದೆ ಮತ್ತು ಪ್ರತಿದಿನ 3-4 ಪ್ರತಿಶತ ಹೆಚ್ಚು ಕ್ಯಾಲೊರಿಗಳನ್ನು ಬರ್ನ್ ಮಾಡಲು ಸಹಾಯ ಮಾಡುತ್ತದೆ.

ಧ್ಯಾನ
ಧ್ಯಾನವು ಮಾನಸಿಕ ತರಬೇತಿಯ ವ್ಯಾಯಾಮವಾಗಿದ್ದು, ಇದು ವಿಪರೀತ ಆಲೋಚನೆಗಳು ಮತ್ತು ಆತಂಕವನ್ನು ನಿವಾರಿಸಲು ಸಹಾಯ ಮಾಡುತ್ತದೆ. ಮನಸ್ಸಿನ ಧ್ಯಾನವು ಉತ್ತಮ ನಿದ್ರೆಯನ್ನು ಉತ್ತೇಜಿಸುತ್ತದೆ. ಹೆಚ್ಚು ಒತ್ತಡವಿಲ್ಲದಿದ್ದಾಗ ಸುಲಭವಾಗಿ ತೂಕ ಇಳಿಕೆಯಾಗುತ್ತದೆ.

Latest Videos
Follow Us:
Download App:
  • android
  • ios